ಓಕಳಿಪುರಂ ರೈಲ್ವೆ ಹಳಿ ಬಳಿ ಸುರಂಗ ನಿರ್ಮಾಣಕ್ಕೆ ಅನುಮತಿಯಿಲ್ಲದೆ ಜಿಲೆಟಿನ್ ಬಳಸುತ್ತಿರುವ ಬಿಬಿಎಂಪಿ

ಬೆಂಗಳೂರಿನ ಓಕಳಿಪುರಂ ಬಳಿ ಕಾಮಗಾರಿ ನಡೆಯುತ್ತಿದ್ದು 45 ಅಡಿ ಉದ್ದದ ಪೈಪ್ ಅಳವಡಿಕೆಗಾಗಿ ಸುರಂಗ ನಿರ್ಮಾಣ ಮಾಡಲಾಗಿದೆ. ನೆಲದ ಅಡಿಯಿಂದ ಸುರಂಗ ಮಾರ್ಗ ಹಾದುಹೋಗಿದೆ. ಬೆಂಗಳೂರು-ಚೆನ್ನೈ ರೈಲ್ವೆ ಮಾರ್ಗದ ಕೆಳಗೆ ಸುರಂಗ ನಿರ್ಮಾಣ ಮಾಡಲಾಗುತ್ತಿದೆ.

ಓಕಳಿಪುರಂ ರೈಲ್ವೆ ಹಳಿ ಬಳಿ ಸುರಂಗ ನಿರ್ಮಾಣಕ್ಕೆ ಅನುಮತಿಯಿಲ್ಲದೆ ಜಿಲೆಟಿನ್ ಬಳಸುತ್ತಿರುವ ಬಿಬಿಎಂಪಿ
ಓಕಳಿಪುರಂ ಬಳಿ ನಡೆಯುತ್ತಿರುವ ಕಾಮಗಾರಿ
TV9kannada Web Team

| Edited By: Ayesha Banu

Jul 01, 2022 | 4:48 PM

ಬೆಂಗಳೂರು: ಅನುಮತಿ ಇಲ್ಲದೆ ರೈಲ್ವೆ ಹಳಿ(Railway Track) ಕೆಳಗೆ ಸ್ಫೋಟಕ ಜಿಲೆಟಿನ್(Gelatin)  ಬಳಕೆ ಮಾಡಲಾಗಿದ್ದು ಬಿಬಿಎಂಪಿ(BBMP) ಕಾರ್ಯದಿಂದ ಸಾವಿರಾರು ಜನರ ಜೀವಕ್ಕೆ ಕುತ್ತು ಎದುರಾಗಿದೆ. ಬಿಬಿಎಂಪಿ ಕಾರ್ಯಕ್ಕೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.

ಬೆಂಗಳೂರಿನ ಓಕಳಿಪುರಂ ಬಳಿ ಕಾಮಗಾರಿ ನಡೆಯುತ್ತಿದ್ದು 45 ಅಡಿ ಉದ್ದದ ಪೈಪ್ ಅಳವಡಿಕೆಗಾಗಿ ಸುರಂಗ ನಿರ್ಮಾಣ ಮಾಡಲಾಗಿದೆ. ನೆಲದ ಅಡಿಯಿಂದ ಸುರಂಗ ಮಾರ್ಗ ಹಾದುಹೋಗಿದೆ. ಬೆಂಗಳೂರು-ಚೆನ್ನೈ ರೈಲ್ವೆ ಮಾರ್ಗದ ಕೆಳಗೆ ಸುರಂಗ ನಿರ್ಮಾಣ ಮಾಡಲಾಗುತ್ತಿದೆ. ಕಲ್ಲುಗಳನ್ನು ಸ್ಫೋಟಿಸಲು ಬಿಬಿಎಂಪಿ ಜಿಲೆಟಿನ್ ಬಳಸುತ್ತಿದೆ. ರೈಲ್ವೆ ಇಲಾಖೆ ಅನುಮತಿ ಪಡೆಯದೆ BBMP ಸುರಂಗ ನಿರ್ಮಾಣಕ್ಕಾಗಿ ಜಿಲೆಟಿನ್ ಬಳಕೆ ಮಾಡುತ್ತಿದೆ. ಜಿಲೆಟಿನ್ ಬಳಕೆಯಿಂದಾಗಿ ರೈಲ್ವೆ ಹಳಿಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಇದರಿಂದ ಜನರ ಜೀವಕ್ಕೆ ಕುತ್ತು ತರುವ ಕೆಲಸ ಮಾಡ್ತಿದೆಯಾ ಬಿಬಿಎಂಪಿ? ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ರಸ್ತೆ ದಾಟುವಾಗ ಸಂಭವಿಸಿದ ಅಪಘಾತಗಳಲ್ಲಿ ಕಳೆದ 4 ವರ್ಷಗಳಲ್ಲಿ ಪ್ರಾಣ ಕಳೆದುಕೊಂಡಿದ್ದು 500 ಪಾದಚಾರಿಗಳು

ಸ್ಫೋಟಕ ವಸ್ತುಗಳ ಬಳಕೆಗೆ ಅನುಮತಿ ನೀಡಿಲ್ಲ ಇನ್ನು ಘಟನೆ ಸಂಬಂಧ ರೈಲ್ವೆ ಇಲಾಖೆ ಹೆಚ್ಚುವರಿ ಮಂಡಲ ರೈಲ್ವೆ ವ್ಯವಸ್ಥಾಪಕರಾದ ಕುಸುಮಾ ಮಾತನಾಡಿದ್ದು, ಬಿಬಿಎಂಪಿಗೆ ಕಾಮಗಾರಿ ನಡೆಸಲು ಅನುಮತಿ ನೀಡಲಾಗಿದೆ. ಆದರೆ ಸ್ಫೋಟಕ ವಸ್ತುಗಳ ಬಳಕೆಗೆ ಅನುಮತಿ ನೀಡಿಲ್ಲ. ಕೂಡಲೇ ಅಧಿಕಾರಿಗಳನ್ನ ಸ್ಥಳಕ್ಕೆ ಕಳುಹಿಸಲಾಗುತ್ತದೆ ಎಂದರು.

ಬೆಂಗಳೂರಲ್ಲಿ ರಸ್ತೆ ದಾಟುವಾಗ ಸಂಭವಿಸಿದ ಅಪಘಾತಗಳಲ್ಲಿ ಕಳೆದ 4 ವರ್ಷಗಳಲ್ಲಿ ಪ್ರಾಣ ಕಳೆದುಕೊಂಡಿದ್ದು 500 ಪಾದಚಾರಿಗಳು ಬೆಂಗಳೂರಲ್ಲಿ ರಸ್ತೆ ದಾಟುವಾಗ ಮೈಯೆಲ್ಲಾ ಕಣ್ಣಾಗಿರಬೇಕು. ಒನ್ ವೇ ಆಗಿದ್ದರೂ ಎರಡೂ ಕಡೆ ನೋಡ್ಕೊಂಡು ರಸ್ತೆ ದಾಟಬೇಕು ಎಂಬುದು ಬೆಂಗಳೂರಿನವರಿಗೆ ಗೊತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಅಂದರೆ 2017 ರಿಂದ 2020 ರವರೆಗಿನ ರಸ್ತೆ ಅಪಘಾತಗಳ ವಿಶ್ಲೇಷಣೆ ಪ್ರಕಾರ ಬೆಂಗಳೂರಿನಲ್ಲಿ (Bengaluru) ರಸ್ತೆ ದಾಟಲು ಪ್ರಯತ್ನಿಸುವಾಗ 500 ಪಾದಚಾರಿಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದೆ. ಸಂಶೋಧನಾ ಸಂಸ್ಥೆಯಾದ ವರ್ಲ್ಡ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್ (WRI) ವಿಶ್ಲೇಷಿಸಿದ ಕ್ರ್ಯಾಶ್ ಡೇಟಾ ಪ್ರಕಾರ, ನಾಲ್ಕು ವರ್ಷಗಳಲ್ಲಿ ಒಟ್ಟು 907 ಪಾದಚಾರಿಗಳ (Pedestrian) ಸಾವು ಸಂಭವಿಸಿದೆ. ಅದರಲ್ಲಿ ಶೇ60 ಜನರು ರಸ್ತೆಗಳನ್ನು ದಾಟುವಾಗ ಸಂಭವಿಸಿದ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಹೆಚ್ಚಿನ ರಸ್ತೆಗಳಲ್ಲಿ ಪಾದಚಾರಿ ಮೂಲಸೌಕರ್ಯಗಳ ಕೊರತೆ, ವಿಶೇಷವಾಗಿ ಸುರಕ್ಷಿತ ಕ್ರಾಸಿಂಗ್ ಪಾದಚಾರಿಗಳ ಸಾವಿನ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಪ್ರಾಥಮಿಕ ಕಾರಣವೆಂದು ತಜ್ಞರು ಹೇಳಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಫೂಟ್‌ ಓವರ್‌ಬ್ರಿಡ್ಜ್‌ಗಳನ್ನು ನಿರ್ಮಿಸುವ ಬದಲು, ಸುರಕ್ಷಿತ ಅಟ್-ಗ್ರೇಡ್ ಕ್ರಾಸಿಂಗ್‌ಗಳು ಇರಬೇಕು ಎಂದು ಅವರು ಹೇಳುತ್ತಾರೆ. ಡಬ್ಲ್ಯುಆರ್‌ಐ ಎಫ್ಐಆರ್​​​ಗಳನ್ನು ಒಟ್ಟುಗೂಡಿಸಿ ಅಪಘಾತಗಳು ಸಂಭವಿಸಿದ ಕೆಲವು ಸ್ಥಳಗಳನ್ನು ಪರಿಶೀಲಿಸಿತು. ಪಾದಾಚಾರಿ ಸಾವು ಪ್ರಕರಣಗಳಲ್ಲಿ 60 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರೇ ಅತೀ ಹೆಚ್ಚು ಪ್ರಾಣ ಕಳೆದುಕೊಂಡಿರುವುದು.ಅಂದರೆ 185 ಹಿರಿಯ ನಾಗರಿಕರು ಸಾವಿಗೀಡಾಗಿದ್ದಾರೆ. 46 ಮತ್ತು 60 ವಯಸ್ಸಿನ ನಡುವೆ ಇರುವ 128 ಮಂದಿ ಇಂಥಾ ಅಪಘಾತಗಳಲ್ಲಿ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada