Karnataka News Highlights Updates: ಪ್ರಜಾಧ್ವನಿ ಕಾರ್ಯಕ್ರಮಕ್ಕೂ ಮುಂಚೆ ಆಕಾಂಕ್ಷಿಗಳ ಮಧ್ಯೆ ಕಿತ್ತಾಟ
Karnataka Assembly Elections 2023 Live News Updates: ಇಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ನಡೆಸುತ್ತಿದ್ದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಸಿಎಲ್ಪಿ ನಾಯಕ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ.

ಮುಂಬರುವ ಕರ್ನಾಟಕ ವಿಧಾನ ಸಭಾ ಚುನಾವಣೆಗೆ ದಿನಾಂಕ ಘೋಷಣೆಗೂ ಮುನ್ನವೇ ರಾಜಕೀಯ ವಲಯದಲ್ಲಿ ಜಿದ್ದಾ ಜಿದ್ದಿನ ಫೈಟ್ ಜೋರಾಗಿದೆ. ಇಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ನಡೆಸುತ್ತಿದ್ದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಸಿಎಲ್ಪಿ ನಾಯಕ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ. ಮತ್ತೊಂದೆಡೆ ಬೆಳಗ್ಗೆ 11.30ಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಇದರೆಲ್ಲದರ ನಡುವೆ ಬಳ್ಳಾರಿಯಲ್ಲಿ ಭಾವ-ನಾದಿನಿ ನಡುವೆ ಫೈಟ್ ಶುರುವಾಗಿದೆ. ಜನಾರ್ದನ ರೆಡ್ಡಿ ತನ್ನ ಅಣ್ಣನ ವಿರುದ್ಧವೇ ಪತ್ನಿ ಅರುಣಾ ಲಕ್ಷ್ಮೀಯವರನ್ನು ಸ್ಪರ್ಧೆಗೆ ಇಳಿಸಿದ್ದು ಸಂಚಲನ ಮೂಡಿಸಿದೆ. ರಾಜಕೀಯ ವಲಯದಲ್ಲಾಗುತ್ತಿರುವ ಮತ್ತಷ್ಟು ಕ್ಷಣ ಕ್ಷಣದ ಮಾಹಿತಿಗಾಗಿ ಲೈವ್ ಫಾಲೋ ಮಾಡಿ.
LIVE NEWS & UPDATES
-
Karnataka News Live Updates: ಜನರ ಅಭಿಪ್ರಾಯ ಪಡೆದು ಯಾವ ಪಕ್ಷ ಸೇರಬೇಕೆಂದು ತೀರ್ಮಾನ: ಎ.ಮಂಜು
ಹಾಸನ: ಜನರ ಅಭಿಪ್ರಾಯ ಪಡೆದು ಯಾವ ಪಕ್ಷ ಸೇರಬೇಕೆಂದು ತೀರ್ಮಾನ ಮಾಡುತ್ತೇನೆ ಎಂದು ಜಿಲ್ಲೆಯ ಅರಕಲಗೂಡಿನಲ್ಲಿ ಮಾಜಿ ಸಚಿವ ಎ.ಮಂಜು ಹೇಳಿದರು. ಕೆಲ ವಿಚಾರಗಳ ಬಗ್ಗೆ ಕಾಂಗ್ರೆಸ್, ಬಿಜೆಪಿಯಲ್ಲಿ ವಿರೋಧ ಮಾಡಿದ್ದೇನೆ. ನನ್ನದು ವಿಷಯಾಧಾರಿತ ವಿರೋಧ, ವೈಯಕ್ತಿಕ ವಿರೋಧ ಅಲ್ಲ. ಎಲ್ಲೇ ಇದ್ದರೂ ನಾನು ಮಂಜುನೇ ಅಲ್ವಾ?, ಬದಲಾವಣೆ ಸಾಧ್ಯವಿಲ್ಲ. ನನಗೆ ಜನರ ಅವಶ್ಯಕತೆ ಇದೆ. ಅವರು ಹೇಳಿದಂತೆ ಮುಂದುವರಿಯುವೆ. 2023ರ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದು ನಿಶ್ಚಿತ. ಜನರು ಅಶೀರ್ವಾದ ಮಾಡಿದ್ರೆ ಶಾಸಕನಾಗುತ್ತೇನೆ ಎಂದು ಹೇಳಿದರು.
-
Karnataka News Live Updates: ಬಸವಕಲ್ಯಾಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ನಡುವೆ ಗಲಾಟೆ
ಬೀದರ್: ಬಸವಕಲ್ಯಾಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ನಡುವೆ ಗಲಾಟೆ ನಡೆದಿದ್ದು, ವಿಜಯ್ಸಿಂಗ್ ಹಾಗೂ ಆನಂದ ದೇವಪ್ಪ ನಡುವೆ ಮಾತಿನ ಚಕಮಕಿ ನಡೆದಿದೆ. ನಾಳಿನ ‘ಕೈ’ ಸಮಾವೇಶಕ್ಕೆ ಜನರನ್ನು ಸೇರಿಸುವ ವಿಚಾರಕ್ಕೆ ಗಲಾಟೆ ನಡೆದಿದೆ ಎನ್ನಲಾಗುತ್ತಿದೆ. ಕೈಕೈ ಮಿಲಾಯಿಸುವ ಹಂತಕ್ಕೆ ಇಬ್ಬರು ಆಕಾಂಕ್ಷಿಗಳ ಕಿತ್ತಾಟ ತಲುಪಿದ್ದು, ಕೂಡಲೇ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು.
-
-
Karnataka News Live Updates: ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ವಿಚಾರ: ಕುರುಬ ಸಮುದಾಯ ಮುಖಂಡರಿಂದ ಸಭೆ
ಕೋಲಾರ: ಜಿಲ್ಲೆಯಲ್ಲಿ ಸಿದ್ದರಾಮಯ್ಯ ಸ್ಪರ್ಧೆ ವಿಚಾರವಾಗಿ ಖಾಸಗಿ ಹೋಟೆಲ್‌ನಲ್ಲಿ ಕುರುಬ ಸಮುದಾಯದ ಮುಖಂಡರ ಸಭೆ ಮಾಡಲಾಯಿತು. ಕಾವೇರಿ ನಿಗಮದ ಮಾಜಿ ಮುಖ್ಯ ಎಂಜಿನಿಯರ್ ಚಿಕ್ಕರಾಯಪ್ಪ ನೇತೃತ್ವದಲ್ಲಿ ನಡೆದ ಸಭೆ ನಡೆಯಿತು. ಸಿದ್ದರಾಮಯ್ಯ ಅವರನ್ನು ಕರೆಸಿ ಕುರುಬ ಸಮುದಾಯದಿಂದ ದೊಡ್ಡ ಸಭೆ ಮಾಡಲು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಸಿದ್ದರಾಮಯ್ಯ ಪರವಾಗಿ ಸಮುದಾಯ ನಿಲ್ಲುವ ಸಲುವಾಗಿ ಸಮುದಾಯವನ್ನು ಒಂದುಗೂಡಿಸಲು ಮುಂದಾದ ಮುಖಂಡರು.
-
Karnataka News Live Updates: ಚುನಾವಣೆ ದೃಷ್ಟಿಯಿಂದ ಕೇಂದ್ರ ಸಚಿವ ಅಮಿತ್ ಶಾ ಬರ್ತಿರೋದಲ್ಲ
ಮಂಗಳೂರು: ಚುನಾವಣೆ ದೃಷ್ಟಿಯಿಂದ ಕೇಂದ್ರ ಸಚಿವ ಅಮಿತ್ ಶಾ ಬರ್ತಿರೋದಲ್ಲ. ಆದ್ರೆ ಬಿಜೆಪಿಯಿಂದ ಸ್ವಾಗತಿಸಿ ಚುನಾವಣೆ ಲಾಭ ಪಡೆದುಕೊಳ್ಳುತ್ತೇವೆ ಎಂದು ಮಂಗಳೂರಿನಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಹೇಳಿದರು. ಕ್ಯಾಂಪ್ಕೋ ಸಂಸ್ಥೆಯ 50ನೇ ವರ್ಷದ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ. ಸಚಿವರಾದ ಕಾರಣ ಈ ರೀತಿಯ ಕಾರ್ಯಕ್ರಮಗಳಲ್ಲಿ ಭಾಗಿ ಸಹಜ. ಅಮಿತ್ ಶಾ ಈಶ್ವರಮಂಗಳದ ಆಂಜನೇಯ ದೇಗುಲಕ್ಕೆ ಭೇಟಿ ನೀಡ್ತಾರೆ. ಅಲ್ಲಿ ಅಮಿತ್ ಶಾ ಭಾರತ ಮಾತಾ ಮಂದಿರದ ಉದ್ಘಾಟನೆ ಮಾಡಲಿದ್ದಾರೆ ಎಂದು ಟಿವಿ9ಗೆ ನಳಿನ್ ಕುಮಾರ್ ಕಟೀಲು ಹೇಳಿದರು.
-
Karnataka News Live Updates: ಫೆ.11ಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿಗೆ ಅಮಿತ್ ಶಾ ಭೇಟಿ ಹಿನ್ನೆಲೆ ಸಭೆ
ದಕ್ಷಿಣ ಕನ್ನಡ: ಫೆ.11ಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿಗೆ ಅಮಿತ್ ಶಾ ಭೇಟಿ ಹಿನ್ನೆಲೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪೂರ್ವಭಾವಿ ಸಭೆ ಮಾಡಲಾಯಿತು. ಸಂಸದ ನಳಿನ್ ಕುಮಾರ್ ಕಟೀಲು, ಡಿಸಿ ಎಂ.ಆರ್.ರವಿಕುಮಾರ್, ಜಿಲ್ಲೆಯ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಸಭೆಯಲ್ಲಿ ಭಾಗಿ. ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
-
-
Karnataka News Live Updates: ಚುನಾವಣಾ ಸಮಿತಿ ಹೊರಗಿಟ್ಟು ‘ಕೈ’ ನಾಯಕರ ಪ್ರತ್ಯೇಕ ಸಭೆ
ಬೆಂಗಳೂರು: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರವಾಗಿ ಚುನಾವಣಾ ಸಮಿತಿ ಹೊರಗಿಟ್ಟು ‘ಕೈ’ ನಾಯಕರ ಪ್ರತ್ಯೇಕ ಸಭೆ ಮಾಡಲಾಗುತ್ತಿದೆ. ದೇವನಹಳ್ಳಿ ಬಳಿಯ ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ, ಡಿಕೆಶಿ, ಮಾಜಿ ಸಿಎಂ ಸಿದ್ದರಾಮಯ್ಯ ಖಾಸಗಿ ಹೋಟೆಲ್‌ನಲ್ಲಿ ಪ್ರತ್ಯೇಕ ಚರ್ಚೆ ಮಾಡಲಾಗುತ್ತಿದೆ.
-
Karnataka News Live Updates: ಕೇಂದ್ರ ಸರ್ಕಾರದ ಬಜೆಟ್ ಬಗ್ಗೆ ಕುಮಾರಸ್ವಾಮಿ ವಾಗ್ದಾಳಿ
ಬೆಂಗಳೂರು: ಕೇಂದ್ರಸರ್ಕಾರದ ಬಜೆಟ್ ಮೂಗಿಗೆ ತುಪ್ಪ ಸವರಿದಂತಿದೆ ಎಂದು ಸರಣಿ ಟ್ವೀಟ್ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ಮಾಡಿದರು. ಆಯವ್ಯಯದ ಪ್ರತಿಯನ್ನು ನೋಡಿದರೆ ನಿರಾಸೆಯೇ ಮೂಡುತ್ತದೆ. ಈ ಬಜೆಟ್ ಉಳ್ಳವರಿಗೆ ಅನುಕೂಲ ಮಾಡಿಕೊಡಲು ಹೊರಟಿದೆ. ತೆರಿಗೆ ವಿನಾಯಿತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿರುವುದು ಬಿಟ್ಟರೆ GST ಹಾಗೂ ಪರೋಕ್ಷ ತೆರಿಗೆ ಇಳಿಸುವ ಬಗ್ಗೆ ಮೌನ ವಹಿಸಿದೆ. ರಾಜ್ಯದ ಪ್ರಮುಖ ಬೇಡಿಕೆಗಳ ಬಗ್ಗೆ ಪ್ರಸ್ತಾಪವೇ ಮಾಡಿಲ್ಲವೇಕೆ? ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಘೋಷಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿವರಗಳು ಅಸ್ಪಷ್ಟವಾಗಿದೆ ಎಂದು ಹೇಳಿದರು.
-
Karnataka News Live Updates: ಅತಂತ್ರ ಫಲಿತಾಂಶ ಬಂದ್ರೆ ರೆಡ್ಡಿ ಜತೆ ಮೈತ್ರಿ ಮಾಡ್ತೀರಾ
ವಿಜಯಪುರ: ಈ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳು ಬೆಳೆಯೋದು ಒಳ್ಳೆಯದು. ಎರಡೂ ರಾಷ್ಟ್ರೀಯ ಪಕ್ಷಗಳನ್ನು ರಾಜ್ಯದಿಂದ ಹೊರಗೆ ಕಳಿಸಬೇಕು. ಅತಂತ್ರ ಫಲಿತಾಂಶ ಬಂದ್ರೆ ರೆಡ್ಡಿ ಜತೆ ಮೈತ್ರಿ ಮಾಡ್ತೀರಾ ಎಂಬ ಪ್ರಶ್ನೆ ಮಾಡಿದರು. ಈ ಬಾರಿ ಅತಂತ್ರ ಫಲಿತಾಂಶ ಪ್ರಶ್ನೆಯೇ ಉದ್ಭವಿಸಿಲ್ಲ. ಯಾವುದೋ ಒಬ್ಬ ಅಭ್ಯರ್ಥಿ ಹಾಕಿ ಮತ ಹಾಕುತ್ತೇವೆ ಅಂತಿದ್ದಾರೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
-
Karnataka News Live Updates: ರೈತರು, ಯುವಕರ ಸಮಸ್ಯೆ ಹೇಗೆ ಬಗೆಹರಿಸಬೇಕೆಂಬುದು ನನ್ನ ಚಿಂತೆ
ವಿಜಯಪುರ: ರೈತರು, ಯುವಕರ ಸಮಸ್ಯೆ ಹೇಗೆ ಬಗೆಹರಿಸಬೇಕೆಂಬುದು ನನ್ನ ಚಿಂತೆ. ಆದರೆ ಇವರೆಲ್ಲಾ ಸಿಡಿ ವಿಚಾರವನ್ನು ಇಟ್ಟುಕೊಂಡು ಹೊರಟ್ಟಿದ್ದಾರೆ. ನಾನು ಜನರ ಪರ ಧ್ವನಿ ಎತ್ತಿ ಹೋರಾಟ ಮಾಡುತ್ತೇನೆ. ಈ ಸಮಯದಲ್ಲಿ ಇದು ಸರಿನಾ ಅನ್ನೋದು ಜನರೇ ತೀರ್ಮಾನಿಸಲಿ ಎಂದು ಸಿಂದಗಿಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
-
Karnataka News Live Updates: ಸಿದ್ದರಾಮಯ್ಯ ಸ್ಪರ್ಧೆಗೆ 1 ಕೋಟಿ ಆಫರ್ ನೀಡಿದ ಅಭಿಮಾನಿ
ಚಿಕ್ಕಮಗಳೂರು: ಸಿದ್ದರಾಮಯ್ಯ ಸ್ಪರ್ಧೆಗೆ ಅಭಿಮಾನಿಗಳ ಆಫರ್ ಹೆಚ್ಚುತ್ತಿದೆ. ಕ್ಷೇತ್ರದಿಂದ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಆಹ್ವಾನ ನೀಡಲಾಗಿದೆ. ಸಿದ್ದರಾಮಯ್ಯ ಸ್ಪರ್ಧೆಗೆ 1 ಕೋಟಿ ಆಫರ್ ನೀಡಿದ ಅಭಿಮಾನಿ. ಸಿ.ಟಿ.ರವಿ ವಿರುದ್ಧ ಕಣಕ್ಕಿಳಿಯುವಂತೆ ಸಿದ್ದರಾಮಯ್ಯಗೆ ಆಹ್ವಾನ ನೀಡಲಾಗಿದೆ. ಚಿಕ್ಕಮಗಳೂರಿನಿಂದ ಸಿದ್ದರಾಮಯ್ಯ ಸ್ಪರ್ಧಿಸಿದರೆ ₹1 ಕೋಟಿ ನೀಡುವೆ ಎಂದು ತಾಲೂಕಿನ ಕೆಂಪನಹಳ್ಳಿ ನಿವಾಸಿ ಬಾಲಕೃಷ್ಣ ಹೇಳಿದ್ದಾರೆ,
-
Karnataka News Live Updates: ಹೆಚ್.ಡಿ.ದೇವೇಗೌಡರನ್ನು ಬೈಯ್ದಷ್ಟು ದೇವೇಗೌಡರ ಶಕ್ತಿ ಹೆಚ್ಚಾಗುತ್ತೆ
ಚಿಕ್ಕಬಳ್ಳಾಪುರ: ಹೆಚ್.ಡಿ.ದೇವೇಗೌಡರನ್ನು ಬೈಯ್ದಷ್ಟು ದೇವೇಗೌಡರ ಶಕ್ತಿ ಹೆಚ್ಚಾಗುತ್ತೆ ಎಂದು ಜಿಲ್ಲೆಯ ಬಾಗೇಪಲ್ಲಿಯಲ್ಲಿ H.D.ಕುಮಾರಸ್ವಾಮಿ ಹೇಳಿದರು. ಮಾಜಿ ಪ್ರಧಾನಿ ದೇವೇಗೌಡರು ಯಾರ ಬೆನ್ನಿಗೂ ಚೂರಿ ಹಾಕಿಲ್ಲ. ದೇವೇಗೌಡರ ಬೆನ್ನಿಗೆ ಚೂರಿ ಹಾಕಿದವರಿಗೆ ಜನರೇ ಬುದ್ಧಿ ಕಲಿಸಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಜತೆ ಇದ್ದಾಗ ಹೇಗೆ ಇದ್ದರು. ಬಿಟ್ಟಾಗ ಹೇಗೆ ಇದ್ದಾರೆ ಅನ್ನೋದು ಗೊತ್ತಿದೆ ಎಂದು ಕೃಷ್ಣ ಭೈರೇಗೌಡ, ಶ್ರೀನಿವಾಸಗೌಡಗೆ ಕುಮಾರಸ್ವಾಮಿ ಪರೋಕ್ಷವಾಗಿ ಟಾಂಗ್ ನೀಡಿದರು.
-
Karnataka News Live Updates: ವಿಧಾನಸೌಧದಲ್ಲಿ ಸಿಎಂ ಬೊಮ್ಮಾಯಿ ಸುದ್ದಿಗೋಷ್ಠಿ
ವಿಧಾನಸೌಧದಲ್ಲಿ ಸಿಎಂ ಬೊಮ್ಮಾಯಿ ಸುದ್ದಿಗೋಷ್ಠಿ ನಡೆಸುತ್ತಿದ್ದು ದೇಶದ ಆರ್ಥಿಕ ಸ್ಥಿತಿ ಪ್ರಗತಿ ಹೊಂದಿದ ದೇಶಕ್ಕೆ ಹೋಲಿಸಿದರೆ ಭಾರತ ಆರ್ಥಿಕವಾಗಿ ಪ್ರಗತಿ ಹೊಂದುತ್ತಿರುವುದು ಗೊತ್ತಾಗುತ್ತದೆ. ನಮ್ಮ ದೇಶದ ಹಣಕಾಸು ಪರಿಸ್ಥಿತಿ ಭದ್ರಬುನಾದಿ ಮೇಲಿದೆ. ಭಾರತದ ಜಿಡಿಪಿ ಆರೋಗ್ಯಕರವಾಗಿದೆ ಎಂದು ಅರ್ಥೈಸಿಕೊಳ್ಳಬೇಕು. ಭಾರತದ ಆರ್ಥಿಕ ಸ್ಥಿತಿ ಶೇಕಾಡ 6.8ರಷ್ಟಿದೆ. ಮೌಲಸೌಕರ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿದ್ದು ಸ್ವಾಗತ. ಕೇಂದ್ರ ಬಜೆಟ್ ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ಜನಜೀವನ್ ಮಿಷನ್ ಯೋಜನೆಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ಪ್ರತಿಮನೆಗೂ ಕುಡಿಯುವ ನೀರು ಪೂರೈಸಲು ಅನುಕೂಲವಾಗುತ್ತಿದೆ ಎಂದರು.
-
Karnataka News Live Updates: ಕಾಂಗ್ರೆಸ್ ಹಿರಿಯ ಮುಖಂಡ ಕೆಸಿ ಕೊಂಡಯ್ಯಗೆ ಷೋಕಾಸ್ ನೋಟಿಸ್
ಬಳ್ಳಾರಿ ವಿಚಾರಕ್ಕೆ ಸಂಬಂಧಿಸಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಕೆಸಿ ಕೊಂಡಯ್ಯಗೆ ಷೋಕಾಸ್ ನೋಟಿಸ್ ನೀಡಲಾಗಿದೆ. ಶಾಸಕ ಪಿಟಿ ಪರಮೇಶ್ವರ್ ನಾಯಕ್ ವಿರುದ್ದ ಕೆಸಿ ಕೊಂಡಯ್ಯ ಹೇಳಿಕೆ ನೀಡಿದ್ದರು. ಕೊಂಡಯ್ಯಗೆ 10 ದಿನಗಳ ಒಳಗೆ ಕಾರಣ ನೀಡಿ ಉತ್ತರ ಕೊಡುವಂತೆ ನೊಟೀಸ್ ನೀಡಲಾಗಿದೆ.
-
Karnataka News Live Updates: ದೇವೇಗೌಡರು ಯಾರ ಬೆನ್ನಿಗೂ ಚೂರಿ ಹಾಕಿಲ್ಲ -ಹೆಚ್ಡಿಕೆ
ದೇವೇಗೌಡರನ್ನು ಬೈಯ್ದಷ್ಟು ದೇವೇಗೌಡರ ಶಕ್ತಿ ಹೆಚ್ಚಾಗುತ್ತೆ ಎಂದು ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಪಟ್ಟಣದಲ್ಲಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ದೇವೇಗೌಡರು ಯಾರ ಬೆನ್ನಿಗೂ ಚೂರಿ ಹಾಕಿಲ್ಲ. ದೇವೇಗೌಡರ ಬೆನ್ನಿಗೆ ಚೂರಿ ಹಾಕಿದವರಿಗೆ ಜನರೆ ಬುದ್ದಿ ಕಲಿಸಿದ್ದಾರೆ. ದೇವೇಗೌಡರಿಗೆ ಕೆಲವರು ಚೂರಿ ಹಾಕಿದಾಗ ರಾಜ್ಯದಲ್ಲಿ ಕೆಲವು ಘಟನೆಗಳು ನಡೆದು ಹೋಗಿವೆ. ದೇವೇಗೌಡರ ಜೊತೆ ಇದ್ದಾಗ ಹೇಗೆ ಇದ್ದರು. ಅವರನ್ನು ಬಿಟ್ಟಾಗ ಹೇಗೆ ಇದ್ದರು ಅನ್ನೊದು ಗೊತ್ತಿದೆ ಎಂದು ಪರೋಕ್ಷವಾಗಿ ಶಾಸಕ ಕೃಷ್ಣಬೈರೇಗೌಡ ಹಾಗೂ ಶ್ರೀನಿವಾಸಗೌಡಗೆ ಹೆಚ್ಡಿಕೆ ಟಾಂಗ್ ಕೊಟ್ಟಿದ್ದಾರೆ.
-
Karnataka News Live Updates:ಟಿಕೆಟ್ ಹಂಚಿಕೆ ಸಂಬಂಧ ರಾಜ್ಯ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ಆರಂಭ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿ ಟಿಕೆಟ್ ಹಂಚಿಕೆ ಸಂಬಂಧ ರಾಜ್ಯ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ಆರಂಭವಾಗಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು ಸಭೆಯಲ್ಲಿ ಸಿಎಲ್ಪಿ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಬಿ.ಕೆ.ಹರಿಪ್ರಸಾದ್, ಎಂ.ಬಿ.ಪಾಟೀಲ್, ಕೆ.ಹೆಚ್.ಮುನಿಯಪ್ಪ, ಜಾರ್ಜ್, ಡಾ.ಜಿ.ಪರಮೇಶ್ವರ್, ದಿನೇಶ್ ಗುಂಡೂರಾವ್, ಹೆಚ್.ಸಿ.ಮಹದೇವಪ್ಪ, ಶಾಮನೂರು ಶಿವಶಂಕರಪ್ಪ, ಅಲ್ಲಂ ವೀರಭದ್ರಪ್ಪ ಸೇರಿ ಹಲವರು ಭಾಗಿಯಾಗಿದ್ದಾರೆ. ಆಕಾಂಕ್ಷಿಗಳ ಪಟ್ಟಿ ಸಿದ್ಧಪಡಿಸಿ ಹೈಕಮಾಂಡ್‌ಗೆ ನಾಯಕರು ರವಾನಿಸಲಿದ್ದಾರೆ.
-
Karnataka News Live Updates: ಇಂದು ಸಚಿವ ಡಾ. ಅಶ್ವತ್ಥನಾರಾಯಣ 54ನೇ ಹುಟ್ಟುಹಬ್ಬ
ಇಂದು ಸಚಿವ ಡಾ. ಅಶ್ವತ್ಥನಾರಾಯಣ 54ನೇ ಹುಟ್ಟುಹಬ್ಬ ಹಿನ್ನೆಲೆ ಮಲ್ಲೇಶ್ವರಂ ಕ್ಷೇತ್ರದ ವಿವಿಧೆಡೆ ಸಚಿವರ ಹುಟ್ಟುಹಬ್ಬ ಆಚರಣೆ ಮಾಡಲಾಗಿದೆ. ಬೆಳಿಗ್ಗೆ 6 ಗಂಟೆಗೆ ಹುಟ್ಟುಹಬ್ಬದ ಆಚರಣೆ ಕಾರ್ಯಕ್ರಮಗಳು ಆರಂಭವಾಗಿವೆ. ಆರ್ ಎಂವಿ ಉದ್ಯಾನ, ಡಾ. ಶಿವಪ್ರಸಾದ್ ಉದ್ಯಾನ, ಸ್ಯಾಂಕಿ ಕೆರೆ, ಸುಬ್ರಹ್ಮಣ್ಯ ನಗರ, ಪ್ಯಾಲೇಸ್ ಗುಟ್ಟಹಳ್ಳಿ ಮತ್ತು ಮಲ್ಲೇಶ್ವರಂ 8ನೇ ಅಡ್ಡರಸ್ತೆಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸಚಿವ ಅಶ್ವಥ್ ನಾರಾಯಣ ಮಲ್ಲೇಶ್ವರಂ ಯತಿರಾಜ ಮಠಕ್ಕೆ ತೆರಳಿ ಸ್ವಾಮೀಜಿ ಆಶೀರ್ವಾದ ಪಡೆದಿದ್ದಾರೆ.
-
Karnataka News Live Updates: ಬಿಜೆಪಿ ನಾಯಕರು ಪ್ರಣಾಳಿಕೆಯಲ್ಲಿ ಹೇಳಿದ್ದನ್ನು ಈಡೇರಿಸಿಲ್ಲ -ಪ್ರಿಯಾಂಕ್ ಖರ್ಗೆ
ಬಿಜೆಪಿ ಅಂದ್ರೆ ಭಾರತೀಯ ಬಂಡಲ್ ಪಕ್ಷ ಎಂದು ಕಲಬುರಗಿಯಲ್ಲಿ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ನಾಯಕರು ಪ್ರಣಾಳಿಕೆಯಲ್ಲಿ ಹೇಳಿದ್ದನ್ನು ಈಡೇರಿಸಿಲ್ಲ. 600 ಭರವಸೆಗಳ ಪೈಕಿ ಕೇವಲ 51 ಭರವಸೆ ಈಡೇರಿಸಿದ್ದಾರೆ. ಗೋಶಾಲೆ ಆರಂಭಿಸಲು 40 ಕೋಟಿ ಹಣ ಸಂಗ್ರಹ ಮಾಡಿದ್ದಾರೆ. ರಾಜ್ಯ ಸರ್ಕಾರಿ ನೌಕರರಿಂದ 40 ಕೋಟಿ ಹಣ ಸಂಗ್ರಹಿಸಿದ್ದಾರೆ. ಒಬ್ಬ ಬಿಜೆಪಿ ನಾಯಕನೂ ಗೋವು ದತ್ತು ಪಡೆದಿಲ್ಲ, ಹಣ ನೀಡಿಲ್ಲ. ಬಿಜೆಪಿಯವರದ್ದು ಜನಸಂಕಲ್ಪ ಯಾತ್ರೆಯಲ್ಲ, ಜನದ್ರೋಹ ಯಾತ್ರೆ, ಬಿಜೆಪಿ ಜನಸಂಕಲ್ಪ ಯಾತ್ರೆ ಕೇವಲ ಕನಸಾಗಿಯೇ ಉಳಿಯುತ್ತದೆ. ರಾಜ್ಯದಲ್ಲಿ ಬಿಜೆಪಿ ನಾಯಕರ ಆಟ ನಡೆಯಲ್ಲ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
-
Karnataka News Live Updates: ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾಚ್ಯುಟಿ ಹಣ ನೀಡಲು ಸರ್ಕಾರ ಒಪ್ಪಿಗೆ
ಅಂಗನವಾಡಿ ಕಾರ್ಯಕರ್ತೆಯರ ಮತ್ತೊಂದು ಬೇಡಿಕೆಯನ್ನು ರಾಜ್ಯ ಸರ್ಕಾರ ಈಡೇರಿಸಿದೆ. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಗ್ರಾಚ್ಯುಟಿ ಹಣ ನೀಡಲು ಸರ್ಕಾರ ಒಪ್ಪಿಕೆ ನೀಡಿದೆ. ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರ ಭವಿಷ್ಯಕ್ಕಾಗಿ ಗ್ರ್ಯಾಚುಟಿ ಹಣ ನೀಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಕುರಿತು ಆರ್ಥಿಕ ಇಲಾಖೆ ಲಿಖಿತ ರೂಪದ ಆದೇಶ ಹೊರಡಿಸಿದೆ.
-
Karnataka News Live Updates: ಜಾರಕಿಹೊಳಿ ವಿರುದ್ದ ಕಾನೂನು ಕ್ರಮಕ್ಕೆ ಮುಂದಾದ ಕಾಂಗ್ರೆಸ್ ನಾಯಕರು
ರಮೇಶ್ ಜಾರಕಿಹೊಳಿಯಿಂದ ಡಿಕೆ ಶಿವಕುಮಾರ್ ವಿರುದ್ದ ಆರೋಪ ಹಿನ್ನೆಲೆ ಜಾರಕಿಹೊಳಿ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಡಿಕೆ ಶಿವಕುಮಾರ್ ಆಪ್ತರಿಂದ ಜಾರಕಿಹೊಳಿ ವಿರುದ್ದ ಕ್ರಮ ಜರುಗಿಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಈ ಬಗ್ಗೆ ಟ್ವೀಟ್ ಮೂಲಕ ಹಿರಿಯ ವಕೀಲ ಸಂಕೇತ್ ಏಣಗಿ ಸ್ಪಷ್ಟಪಡಿಸಿದ್ದಾರೆ.
KPCC ಅಧ್ಯಕ್ಷರಾದ ಶ್ರೀ ಡಿ. ಕೆ. ಶಿವಕುಮಾರ್ ವಿರುದ್ಧ ನಿರಂತರ ಮಿಥ್ಯಾಪವಾದ, ನಿಂದನೆ, ದೋಷಾರೋಪಣೆ ಹಾಗೂ ಅವರ ಪ್ರಸಿದ್ಧಿ ಘಾಸಿಗೊಳಿಸಲು ಸುಳ್ಳು ಹಾಗೂ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡುತ್ತಿರುವ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ಶೀಘ್ರವೇ ಮಾನನಷ್ಟ ಮೊಕದ್ದಮೆ ಸಹಿತ ಇನ್ನಿತರ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು.
– ಸಂಕೇತ ಏಣಗಿ
— Sanket Yenagi (@Sanket_Yenagi) February 2, 2023
-
Karnataka News Live Updates: ಅಸಮಧಾನಿತ ನಾಯಕರ ಸಮಾಧಾನಕ್ಕೆ ಮುಂದಾದ ಸುರ್ಜೆವಾಲಾ
ಕಾಂಗ್ರೆಸ್ನ ಕೆಲವು ಹಿರಿಯ ನಾಯಕರು ಪಕ್ಷದ ಮೇಲೆ ಅಸಮಧಾನರಾಗಿದ್ದು ಅವರನ್ನು ಸಮಧಾನಗೊಳಿಸುವ ಜವಾಬ್ದಾರಿಯನ್ನು ಸುರ್ಜೆವಾಲಾ ಹೊತ್ತಿದ್ದಾರೆ. ತಾವೇ ಸ್ವತಃ ಅಸಮಧಾನಿತ ನಾಯಕರ ಬೇಸರ ಶಮನಗೊಳಿಸಲು ಮುಂದಾಗಿದ್ದಾರೆ. ನಿನ್ನೆ ಪರಮೇಶ್ವರ್ ರನ್ನು ಇದೇ ಹೊಣೆಗಾರಿಕೆಯಿಂದ ಸುರ್ಜೆವಾಲಾ ಭೇಟಿ ಮಾಡಿದ್ದರು.
-
Karnataka News Live Updates: ಅಮಿತ್ ಶಾ ಭೇಟಿಗೂ ಮುನ್ನ ದೇವೇಂದ್ರ ಫಡ್ನವಿಸ್ ಭೇಟಿಗೆ ಮುಂದಾದ ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ ಡಿಕೆ ಶಿವಕುಮಾರ್ ವಿರುದ್ಧ ಆಡಿಯೋ ಬಾಂಬ್ ವಿಚಾರಕ್ಕೆ ಸಂಬಂಧಿಸಿ ಅಮಿತ್ ಶಾ ಭೇಟಿಗೂ ಮುನ್ನವೇ ರಾಜಕೀಯ ಗುರುವಿನ ಭೇಟಿಗೆ ರಮೇಶ್ ಜಾರಕಿಹೊಳಿ ಮುಂದಾಗಿದ್ದಾರೆ. ಮಹಾರಾಷ್ಟ್ರದ ಡಿಸಿಎಂ ದೇವೇಂದ್ರ ಫಡ್ನವಿಸ್ ಭೇಟಿಗೆ ಸಿದ್ದತೆ ಮಾಡಿಕೊಂಡಿದ್ದಾರೆ. ಫಡ್ನವಿಸ್ ಮೂಲಕ ಹೈಕಮಾಂಡ್‌ಗೆ ಮನವಿ ಮಾಡಲಿದ್ದಾರೆ. ದೇವೇಂದ್ರ ಫಡ್ನವಿಸ್ ಅವರನ್ನ ಭೇಟಿಯಾಗಿ ಪ್ರಕರಣದ ಕುರಿತು ವಿವರಿಸಿ ನಂತರ ಅಮಿತ್ ಶಾ ಭೇಟಿ ಮಾಡಲಿದ್ದಾರೆ.
-
Karnataka News Live Updates: ಸಿಡಿ ರಾಜಕಾರಣ ರಾಜ್ಯಕ್ಕೆ ಕಳಂಕ -ಕೆ.ಎಸ್.ಈಶ್ವರಪ್ಪ
ಸಿಡಿ ರಾಜಕಾರಣ ರಾಜ್ಯಕ್ಕೆ ಕಳಂಕ. ಡಿಕೆಶಿ ಸೇರಿ ಹಲವರ ಸಿಡಿ ಇದೆ ಅಂತಾ ಜಾರಕಿಹೊಳಿ ಹೇಳಿದ್ದಾರೆ. ಸಿಬಿಐ ಸಿಡಿ ಪ್ರಕರಣದ ತನಿಖೆ ನಡೆಸಲಿ ಎಂದು ಒತ್ತಾಯಿಸಿದ್ದಾರೆ. ಸಿಬಿಐ ತನಿಖೆಗೆ ವಹಿಸಬೇಕೆಂದು ನಾನು ಸಿಎಂಗೆ ಮನವಿ ಮಾಡ್ತೇನೆ. ಯಾರೆಲ್ಲ ತಪ್ಪಿತಸ್ಥರಿದ್ದಾರೋ ಅವರ ವಿರುದ್ಧ ಕ್ರಮ ಆಗಬೇಕು ಎಂದು ಶಿವಮೊಗ್ಗ ನಗರದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
-
Karnataka News Live Updates: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಎಲ್ಲರೂ ಕೆಲಸ ಮಾಡಬೇಕು -ಡಿಕೆಶಿ
ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಸವಾಲು, ಗೊಂದಲ ಇಲ್ಲ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಟಿಕೆಟ್ ಹಂಚಿಕೆ ಬಗ್ಗೆ ಚುನಾವಣಾ ಸಮಿತಿ ಸಭೆ ನಡೆಯುತ್ತಿದೆ. ಎಐಸಿಸಿ ಕಾರ್ಯದರ್ಶಿ, KPCC ಕಾರ್ಯಾಧ್ಯಕ್ಷರು ವರದಿ ಕೊಟ್ಟಿದ್ದಾರೆ. ದೆಹಲಿ ನಾಯಕರು, ನಾವು ಕೂಡ ಪ್ರತ್ಯೇಕ ಸರ್ವೆ ಮಾಡಿಸಿದ್ದೇವೆ. ಅದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಿರ್ಣಯ ಮಾಡುತ್ತೇವೆ. ಬಹುತೇಕ ಎಲ್ಲಾ ಶಾಸಕರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಅರ್ಜಿ ಹಾಕಿದ ಎಲ್ಲರಿಗೂ ಟಿಕೆಟ್ ನೀಡಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಎಲ್ಲರೂ ಕೆಲಸ ಮಾಡಬೇಕು. ಅಧಿಕಾರ ಬಂದ ಮೇಲೆ ಸ್ಥಾನಮಾನ ನೀಡುವುದು ಇದ್ದೇ ಇದೆ ಎಂದರು.
-
Karnataka News Live Updates: ಉಡುಪಿ ಕಾರ್ಕಳ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಹಾಕದಂತೆ ಶ್ರೀರಾಮಸೇನೆ ಪಟ್ಟು
ಉಡುಪಿ ಕಾರ್ಕಳ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಹಾಕದಂತೆ ಶ್ರೀರಾಮಸೇನೆ ಪಟ್ಟು ಹಿಡಿದೆದೆ. ರಾಯಚೂರು ನಗರದಲ್ಲಿ ಶ್ರೀರಾಮಸೇನೆ ಬಿಜೆಪಿಗೆ ಒತ್ತಾಯಿಸಿದೆ. ಕಾರ್ಕಳದಲ್ಲಿ ಶ್ರೀರಾಮಸೇನೆಯಿಂದ ಪ್ರಮೋದ್ ಮುತಾಲಿಕ್ ಸ್ಪರ್ಧೆ ಮಾಡುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಹಾಕದೇ ಇದ್ದರೇ ಮುತಾಲಿಕ್ ಗೆ ಗೆಲುವು ಖಚಿತ. ಹೀಗಾಗಿ ಕಾರ್ಕಳದಲ್ಲಿ ಬಿಜೆಪಿ ಅಭ್ಯರ್ಥಿ ಹಾಕದಂತೆ ಪಟ್ಟು ಹಿಡಿದಿದ್ದಾರೆ.
-
Karnataka News Live Updates: ದೆಹಲಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸುದ್ದಿಗೋಷ್ಠಿ
ಬಜೆಟ್ನಲ್ಲಿ ಕೃಷಿ ಸಾಲಕ್ಕಾಗಿ 23 ಲಕ್ಷ ಕೋಟಿ ಘೋಷಣೆ ಆಗಿದೆ. ಸಿರಿಧಾನ್ಯಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆ ಕಲ್ಪಿಸುವ ಉದ್ದೇಶವಿದೆ. ಭದ್ರಾ ಮೇಲ್ದಂಡೆ ಯೋಜನೆಗೆ $5,300 ಕೋಟಿ ಘೋಷಿಸಲಾಗಿದೆ. ಬಜೆಟ್ನಲ್ಲಿ ಕೃಷಿ ಇಲಾಖೆಗೆ 1.25 ಲಕ್ಷ ಕೋಟಿ ಘೋಷಣೆಯಾಗಿದೆ. ಎಲ್ಲಾ ರಾಜ್ಯಗಳ ಸಲಹೆ ಪಡೆದು ಅನುದಾನ ಬಳಕೆ ಮಾಡಲಾಗುವುದು ಎಂದು ನವದೆಹಲಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
-
Karnataka News Live Updates: ಲೋಕಸಭೆಯಲ್ಲಿ ಸದ್ದು ಮಾಡಲಿದೆ ಅದಾನಿ ಷೇರು ಕುಸಿತ
ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ವಿಪಕ್ಷ ನಾಯಕರ ಸಭೆ ನಡೆಯಲಿದ್ದು ಸಭೆಯಲ್ಲಿ ಡಿಎಂಕೆ, ಎಎಪಿ ಸೇರಿ ಹಲವು ವಿಪಕ್ಷ ನಾಯಕರು ಭಾಗಿಯಾಗಲಿದ್ದಾರೆ. ಅಧಿವೇಶನದಲ್ಲಿ ಅದಾನಿ ಷೇರು ಕುಸಿತದ ಬಗ್ಗೆ ಈಗಾಗಲೇ ಚರ್ಚೆಗೆ ಅವಕಾಶ ಕೋರಲಾಗಿದೆ. ವಿಪಕ್ಷಗಳು ಉಪರಾಷ್ಟ್ರಪತಿ ಧನ್ಕರ್ಗೆ ಮನವಿ ಮಾಡಿದ್ದಾರೆ. ಕೇಂದ್ರ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ತಂತ್ರ ಹೆಣೆದಿವೆ. ಈಗ ನಡೆಯಲಿರುವ ಸಭೆಯಲ್ಲಿ ತಂತ್ರಗಾರಿಕೆ ಕುರಿತು ವಿಪಕ್ಷ ನಾಯಕರು ಮಾತುಕತೆ ನಡೆಸಲಿದ್ದಾರೆ.
-
Karnataka News Live Updates: ಫೆ.11ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಅಮಿತ್ ಶಾ ಭೇಟಿ
ಫೆ.11ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಅಮಿತ್ ಶಾ ಭೇಟಿ ನೀಡಲಿದ್ದು ಸಹಕಾರಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವ ಹಿನ್ನೆಲೆ ಪುತ್ತೂರು ತೆಂಕಿಲ ವಿವೇಕಾನಂದ ಸಂಸ್ಥೆ ಮೈದಾನದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕ್ಯಾಂಪ್ಕೋ ಚಾಕೊಲೇಟ್ ಫ್ಯಾಕ್ಟರಿಗೂ ಅಮಿತ್ ಶಾ ಭೇಟಿ ನೀಡಲಿದ್ದಾರೆ.
-
Karnataka News Live Updates: ಶಿವಲಿಂಗೇಗೌಡ ಜೆಡಿಎಸ್ನಲ್ಲೇ ಉಳಿದರೆ ಸುಲಭವಾಗಿ ಗೆಲ್ಲುತ್ತಾರೆ -ಎಂಎಲ್ಸಿ ಸೂರಜ್
ಅರಸೀಕೆರೆ ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿ ಶಿವಲಿಂಗೇಗೌಡ ಜೆಡಿಎಸ್ನಲ್ಲೇ ಉಳಿದರೆ ಸುಲಭವಾಗಿ ಗೆಲ್ಲುತ್ತಾರೆ ಎಂದು ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಎಂಎಲ್ಸಿ ಸೂರಜ್ ಹೇಳಿಕೆ ನೀಡಿದ್ದಾರೆ. ಸಾಕಷ್ಟು ಬಾರಿ ಶಿವಲಿಂಗೇಗೌಡ ಮನವೊಲಿಸುವ ಪ್ರಯತ್ನ ಆಗಿದೆ. ಎಲ್ಲೂ ಕೂಡ ಶಾಸಕರ ಬಗ್ಗೆ ಯಾವುದೇ ರೀತಿಯ ಹೇಳಿಕೆ ಕೊಟ್ಟಿಲ್ಲ. ಶಿವಲಿಂಗೇಗೌಡರಿಗೆ ತೊಂದರೆ ಆಗುವ ರೀತಿಯಲ್ಲಿ ನಡೆದುಕೊಂಡಿಲ್ಲ. ಶಾಸಕ ಶಿವಲಿಂಗೇಗೌಡ ಜೆಡಿಎಸ್ ಪಕ್ಷದಲ್ಲೇ ಇರಲು ಬಯಸುತ್ತಿದ್ದಾರೆ. ಶಿವಲಿಂಗೇಗೌಡ ಜೆಡಿಎಸ್ ಪಕ್ಷಕ್ಕಾಗಿ ದುಡಿಯುತ್ತಾರೆಂಬ ನಂಬಿಕೆ ಇದೆ. ಶೀಘ್ರದಲ್ಲೇ ಹಾಸನ ಜಿಲ್ಲೆಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದರು.
-
Karnataka News Live Updates: ಗೌಡರ ಮನೆಯಲ್ಲಿ ಮುನಿಸು, ಕುಮಾರಸ್ವಾಮಿ ಹೇಳಿಕೆ ಬಗ್ಗೆ ನನಗೇನು ಗೊತ್ತಿಲ್ಲ ಎಂದ ರೇವಣ್ಣ
ಹಾಸನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಗ್ಗೆ ಹೆಚ್ಡಿಕೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಕುಮಾರಸ್ವಾಮಿ ಹೇಳಿಕೆ ಬಗ್ಗೆ ನನಗೇನು ಗೊತ್ತಿಲ್ಲ. ದೇವೇಗೌಡರು, ಹೆಚ್ಡಿಕೆ, ಇಬ್ರಾಹಿಂ ನಿರ್ಧಾರವೇ ಅಂತಿಮ. ಫೆ.4ರಂದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡ್ತೇವೆ ಎಂದು ಹೆಚ್ಡಿಕೆ ಹೇಳಿದ್ದಾರೆ ಎಂದರು.
-
Karnataka News Live Updates: ಫೆ.5ರಂದು ಸಿಎಂ ಬೊಮ್ಮಾಯಿ ದೆಹಲಿಗೆ ತೆರಳುವ ಸಾಧ್ಯತೆ
ಫೆ.5ರಂದು ಸಿಎಂ ಬೊಮ್ಮಾಯಿ ದೆಹಲಿಗೆ ತೆರಳುವ ಸಾಧ್ಯತೆ ಇದೆ. ಭದ್ರಾ ಮೇಲ್ದಂಡೆಗೆ ಬಜೆಟ್ನಲ್ಲಿ ಅನುದಾನ ಘೋಷಿಸಿದ ಹಿನ್ನೆಲೆ ಭಾನುವಾರ ಸಿಎಂ ಬೊಮ್ಮಾಯಿ ದೆಹಲಿಗೆ ತೆರಳಿ ಕೇಂದ್ರ ನಾಯಕರಿಗೆ ಧನ್ಯವಾದ ತಿಳಿಸಲಿದ್ದಾರೆ. ಸಚಿವೆ ನಿರ್ಮಲಾರನ್ನು ಸಿಎಂ ಬೊಮ್ಮಾಯಿ ಭೇಟಿಯಾಗಲಿದ್ದಾರೆ.
-
Karnataka News Live Updates: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಒತ್ತಡ
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಚಾಮುಂಡೇಶ್ವರಿ ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಸಿದ್ದರಾಮಯ್ಯಗೆ ಒತ್ತಡ ಹಾಕಿದ್ದಾರೆ. 60ಕ್ಕೂ ಹೆಚ್ಚು ಮುಖಂಡರು ಬೆಂಗಳೂರಿನ ನಿವಾಸದಲ್ಲಿ ಮನವಿ ಸಲ್ಲಿಸಿದ್ದಾರೆ. ಕಳೆದ ಬಾರಿಯಂತೆ ಆಗಲ್ಲ, ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಸ್ಪರ್ಧೆ ಮಾಡಿ. ಈ ಬಾರಿ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಸ್ಪರ್ಧೆ ಮಾಡಿ ಎಂದು ಮನವಿ ಸಲ್ಲಿಸಿದ್ದಾರೆ. ಯಾವುದೇ ಕಾರಣಕ್ಕೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲ್ಲ. ಈ ಹಿಂದೆ ನನ್ನನ್ನು ಗೆಲ್ಲಿಸಿದ್ದೀರಿ, ಅದಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಆದ್ರೆ ಯಾವುದೇ ಕಾರಣಕ್ಕೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಲ್ಲ ಎಂದು ಚಾಮುಂಡೇಶ್ವರಿ ಕ್ಷೇತ್ರದ ಮುಖಂಡರಿಗೆ ಸಿದ್ದರಾಮಯ್ಯ ತಿಳಿಸಿದ್ದಾರೆ.
-
Karnataka News Live Updates: ಸಿಎಂ ಬೊಮ್ಮಾಯಿ ಭೇಟಿಯಾದ ಪರಿಷತ್ ಸದಸ್ಯರ ನಿಯೋಗ
ಪರಿಷತ್ ಸದಸ್ಯರ ನಿಯೋಗ ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ಸಿಎಂ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿದ್ದಾರೆ. S.ರವಿ, ದಿನೇಶ್ ಗೂಳಿಗೌಡ, ಮಂಜುನಾಥ ಭಂಡಾರಿ ನೇತೃತ್ವದ ನಿಯೋಗ ಭೇಟಿ ನೀಡಿ ಅನುದಾನವನ್ನು ಹೆಚ್ಚಿಸುವಂತೆ ಸಿಎಂಗೆ ಪರಿಷತ್ ಸದಸ್ಯರು ಮನವಿ ಮಾಡಿದ್ದಾರೆ.
-
Karnataka News Live Updates: ‘ಕಚಡಾ ಅವನು, ಜನರು ಛೀ ಥೂ ಅಂತಾ ಉಗಿಯುತ್ತಿದ್ದಾರೆ’
ಡಿಕೆಶಿ ವಿರುದ್ಧ ರಮೇಶ್ ಜಾರಕಿಹೊಳಿ ಆಡಿಯೋ ಬಾಂಬ್ ವಿಚಾರಕ್ಕೆ ಸಂಬಂಧಿಸಿ ರಮೇಶ್ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್ MLC ಎಸ್.ರವಿ ವಾಗ್ದಾಳಿ ನಡೆಸಿದ್ದಾರೆ. ‘ಕಚಡಾ ಅವನು, ಜನರು ಛೀ ಥೂ ಅಂತಾ ಉಗಿಯುತ್ತಿದ್ದಾರೆ’ ಸರ್ಕಾರ ಬೀಳಿಸಿ ಮತ್ತೊಂದು ಪಕ್ಷವನ್ನು ಅಧಿಕಾರಕ್ಕೆ ತಂದವನು. ಅವನ ಹತ್ತಿರ ದಾಖಲೆ ಇದ್ದರೆ ತಲೆ ಮೇಲೆ ಹಾಕೊಳೋಕೆ ಹೇಳಿ. ರಮೇಶ್ ಜಾರಕಿಹೊಳಿ ಪ್ರತಿ ದಿನ ಒಂದೊಂದು ದಾಖಲೆ ಬಿಡಲಿ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಪರಿಷತ್ ಸದಸ್ಯ ಎಸ್.ರವಿ ವಾಗ್ದಾಳಿ ನಡೆಸಿದ್ದಾರೆ.
-
Karnataka News Live Updates: ಅಮಿತ್ ಶಾ ಭೇಟಿಗೆ ದೆಹಲಿಗೆ ಹಾರಲಿರುವ ರಮೇಶ್ ಜಾರಕಿಹೊಳಿ
ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿ ರಮೇಶ್ ಜಾರಕಿಹೊಳಿ ಇಂದು ಸಂಜೆ ಬೆಂಗಳೂರಿನಿಂದ ದೆಹಲಿಗೆ ತೆರಳಲಿದ್ದಾರೆ. ನಾಳೆ ಅಮಿತ್ ಶಾ ಭೇಟಿಯಾಗಲಿದ್ದಾರೆ. ಸಿಡಿ ಕೇಸ್ ಸಿಬಿಐಗೆ ವಹಿಸಲು ಮನವಿ ಮಾಡಲಿದ್ದಾರೆ.
-
Karnataka News Live Updates: ಹಾಲಿ ಸಚಿವನಿಗೆ ಮಾಜಿ ಸಚಿವರಿಂದ ಆತ್ಮೀಯ ಅಪ್ಪುಗೆ
ಮಾಜಿ ಸಚಿವ ಸಂತೋಷ ಲಾಡ್ ಅವರು ಸಚಿವ ಶ್ರೀರಾಮುಲು ಅಪ್ಪಿಕೊಂಡು ಪಪ್ಪಿ ಕೊಟ್ಟಿದ್ದಾರೆ. ಸಂಡೂರು ತಾಲೂಕಿನ ಬನ್ನಿಹಟ್ಟಿ ಜಾತ್ರೆ ವೇಳೆ ಆತ್ಮೀಯ ಸ್ನೇಹಿತರು ಅಪ್ಪಿಕೊಂಡು ಮುದ್ದಾಡಿದ್ದಾರೆ. ರಾಜಕೀಯ ಬದ್ದ ವೈರಿಗಳ ಆಲಿಂಗನ ಕಂಡು ಬಿಜೆಪಿ ,ಕಾಂಗ್ರೆಸ್ ಕಾರ್ಯಕರ್ತರು ಶಾಕ್ ಆದ್ರು.
-
Karnataka News Live Updates: ಜನಾರ್ದನ ರೆಡ್ಡಿಗೆ ನನ್ನ ಹಾಗೆಯೇ ತ್ಯಾಗದ ಮನೋಭಾವ ಇಲ್ಲ -ಸೋಮಶೇಖರ್ ರೆಡ್ಡಿ
ಬಳ್ಳಾರಿ ನಗರ ಕ್ಷೇತ್ರದಿಂದ ತಮ್ಮ ಪತ್ನಿ ಅರುಣಾ ಲಕ್ಷ್ಮೀ ಸ್ಪರ್ಧಿಸಲಿದ್ದಾರೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಘೋಷಿಸಿದ್ದಾರೆ. ಸದ್ಯ ಈ ಬಗ್ಗೆ ಜನಾರ್ದನ ರೆಡ್ಡಿ ಅವರ ಅಣ್ಣ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನಾದಿನಿ -ಭಾವನ ಮಧ್ಯೆ ಸ್ಪರ್ಧೆ ರಸವತ್ತಾಗಿರುತ್ತದೆ. ಒಳ್ಳೆಯ ಫೈಟ್ ಇದ್ದೇ ಇರುತ್ತದೆ. ನನ್ನ ಜೀವನದಲ್ಲಿ ತಟಸ್ಥ ಅನ್ನೋ ಪದವೇ ಇಲ್ಲ. ಜನಾರ್ದನ ರೆಡ್ಡಿಗೆ ನನ್ನ ಹಾಗೆಯೇ ತ್ಯಾಗದ ಮನೋಭಾವ ಇಲ್ಲ. ಬಳ್ಳಾರಿಯಲ್ಲಿ ನಾನು ನೂರಕ್ಕೆ ನೂರರಷ್ಟು ಬಿಜೆಪಿಯಿಂದ ಸ್ಪರ್ಧಿಸುವೆ. ಏಕೆಂದರೆ ನಗರದ ಅಭಿವೃದ್ಧಿ ನನ್ನ ಕನಸು. ಕೆಲ ಕಾರ್ಯಕರ್ತರು ಹಣದ ಆಸೆಗೆ ಹೊಸ ಪಕ್ಷಕ್ಕೆ ಹೋಗಬಹುದು. ನಮ್ಮ ಕಾರ್ಯಕರ್ತರು ನಮ್ಮ ಜೊತೆಗೆ ಇರುತ್ತಾರೆ. ಅರುಣಾ ಲಕ್ಷ್ಮೀ ಸ್ಪರ್ಧೆಯಿಂದ ನಮಗೆ ನಷ್ಟವಿಲ್ಲ, ಕಾಂಗ್ರೆಸ್ಗೆ ನಷ್ಟ. ಸಹೋದರನಿಗಾಗಿ 6 ತಿಂಗಳು ಜೈಲಿನಲ್ಲಿದ್ದೆ. ಆಗ ಅರುಣಾ ಲಕ್ಷ್ಮೀ ನನ್ನ ಋಣ ತೀರಿಸಲು ಆಗಲ್ಲ ಎಂದು ಹೇಳಿದ್ರು. ಅರುಣಾ ಲಕ್ಷ್ಮೀ ಸ್ಪರ್ಧೆ ತಪ್ಪು ಅನ್ನೋದು ಜನರೇ ಹೇಳುತ್ತಾರೆ ಎಂದು ಬಳ್ಳಾರಿಯಲ್ಲಿ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಅಸಮಾಧಾನ ಹೊರ ಹಾಕಿದ್ದಾರೆ.
ತಮ್ಮನಿಗೋಸ್ಕರ ಜೈಲಿನಲ್ಲಿದ್ದೆ, ಆಗ ನನ್ನ ಋಣ ತೀರಿಸಲು ಆಗಲ್ಲ ಎಂದಿದ್ರು ನಾದಿನಿ ಅರುಣಾ: ಪಕ್ಷೇತರವಾಗಿಯಾದ್ರೂ ಕಣಕ್ಕಿಳಿಯುವೆ -ಸೋಮಶೇಖರ್ ರೆಡ್ಡಿ ಘೋಷಣೆ#Bellary #SomashekarReddy #JanardhanReddy #KarnatakaAssemblyElections2023 https://t.co/TqAIqlcWcJ
— TV9 Kannada (@tv9kannada) February 2, 2023
-
Karnataka News Live Updates: ಬಿಜೆಪಿ ಟಿಕೆಟ್ ಗಾಗಿ ಪೊಲೀಸ್ ಇಲಾಖೆ ಹುದ್ದೆಗೆ ರಾಜೀನಾಮೆ
ಮುಂಬರುವ ವಿಧಾನಸಭಾ ಚುನಾವಣೆಗಾಗಿ ಬಿಜೆಪಿ ಟಿಕೆಟ್ ಪಡೆಯಲು ಪೊಲೀಸ್ ಅಧಿಕಾರಿ ಹುದ್ದೆಗೆ ಮಹೇಂದ್ರ ನಾಯಕ್ ರಾಜೀನಾಮೆ ನೀಡಿದ್ದಾರೆ. ನಾಗಠಾಣ ಎಸ್ಸಿ ಮೀಸಲು ಮತಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷೆಯಾಗಿರುವ ಪೊಲೀಸ್ ಅಧಿಕಾರಿ ಮಹೇಂದ್ರ ನಾಯಕ್, ಸದ್ಯ ಬಾಗಲಕೋಟೆ ಜಿಲ್ಲೆಯ ಲೋಕಾಯುಕ್ತದಲ್ಲಿ ಸಿಪಿಐ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
-
Karnataka News Live Updates: ಬೆಂಗಳೂರಿನಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ
ಇಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಸಿಎಲ್ಪಿ ನಾಯಕ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ. ಸಭೆಯಲ್ಲಿ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸುವ ಬಗ್ಗೆ ಸಮಾಲೋಚನೆ ನಡೆಸಲಾಗುತ್ತೆ.
Published On - Feb 02,2023 10:38 AM




