2 PUC Exam Resheduled: ಪ.ಪೂ. ಶಿಕ್ಷಣ ಮಂಡಳಿಯಿಂದ ಪರಿಷ್ಕೃತ ವೇಳಾಪಟ್ಟಿ ಪ್ರಕಟ, ಏ. 22ರಿಂದ ಎಕ್ಸಾಂ ಶುರು

| Updated By: ಆಯೇಷಾ ಬಾನು

Updated on: Mar 02, 2022 | 7:59 PM

ದ್ವಿತೀಯ PU ಪರೀಕ್ಷೆ ಸಂದರ್ಭದಲ್ಲಿ JEE ಮುಖ್ಯ ಪರೀಕ್ಷೆ ಹಿನ್ನೆಲೆ ಪದವಿಪೂರ್ವ ಶಿಕ್ಷಣ ಮಂಡಳಿಯಿಂದ ಪರಿಷ್ಕೃತ ವೇಳಾಪಟ್ಟಿ ಪ್ರಕಟಗೊಂಡಿದೆ. ವೇಳಾಪಟ್ಟಿಯ ಬಗ್ಗೆ ಅಕ್ಷೇಪಣೆ ಸಲಿಸಲು ಮಾರ್ಚ್ 5 ಸಂಜೆ 5 ಗಂಟೆಯವರೆಗೆ ಕಾಲಾವಕಾಶ ನೀಡಲಾಗಿದೆ.

2 PUC Exam Resheduled: ಪ.ಪೂ. ಶಿಕ್ಷಣ ಮಂಡಳಿಯಿಂದ ಪರಿಷ್ಕೃತ ವೇಳಾಪಟ್ಟಿ ಪ್ರಕಟ, ಏ. 22ರಿಂದ ಎಕ್ಸಾಂ ಶುರು
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ದ್ವಿತೀಯ PU ಪರೀಕ್ಷೆ ಸಂದರ್ಭದಲ್ಲಿ JEE ಮುಖ್ಯ ಪರೀಕ್ಷೆ ಹಿನ್ನೆಲೆ ಪದವಿಪೂರ್ವ ಶಿಕ್ಷಣ ಮಂಡಳಿಯಿಂದ ಪರಿಷ್ಕೃತ ವೇಳಾಪಟ್ಟಿ ಪ್ರಕಟಗೊಂಡಿದೆ(2 PUC Exam Resheduled). ಏಪ್ರಿಲ್ 22ರಂದು ವ್ಯವಹಾರ ಅಧ್ಯಯನ ಪರೀಕ್ಷೆ. ಏಪ್ರಿಲ್ 23ರಂದು ಹಿಂದಿ ಪರೀಕ್ಷೆ, ಏಪ್ರಿಲ್ 25ರಂದು ಅರ್ಥಶಾಸ್ತ್ರ, ಏಪ್ರಿಲ್ 26ರಂದು ಮನಃಶಾಸ್ತ್ರ, ರಾಸಾಯನ ಶಾಸ್ತ್ರ ಪರೀಕ್ಷೆಗಳು ನಡೆಯಲಿವೆ.

ಈ ಹಿಂದೆ ಏಪ್ರಿಲ್ 16 ರಿಂದ ಮೇ 6ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿರುವ ಬಗ್ಗೆ ಪದವಿಪೂರ್ವ ಶಿಕ್ಷಣ ಮಂಡಳಿ ಘೋಷಣೆ ಮಾಡಿತ್ತು. ಆದ್ರೆ ದ್ವಿತೀಯ PU ಪರೀಕ್ಷೆ ಸಂದರ್ಭದಲ್ಲಿ JEE ಮುಖ್ಯ ಪರೀಕ್ಷೆ ಹಿನ್ನೆಲೆ ಪರಿಷ್ಕೃತ ವೇಳಾಪಟ್ಟಿ ಸಿದ್ಧ ಮಾಡಲಾಗಿದೆ. ಸದ್ಯ ಏಪ್ರಿಲ್ 22ರಿಂದ ಮೇ 11ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸುವುದಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ದಿನಾಂಕ ಘೋಷಿಸಿದೆ. ವೇಳಾಪಟ್ಟಿಯ ಬಗ್ಗೆ ಅಕ್ಷೇಪಣೆ ಸಲಿಸಲು ಮಾರ್ಚ್ 5 ಸಂಜೆ 5 ಗಂಟೆಯವರೆಗೆ ಕಾಲಾವಕಾಶ ನೀಡಲಾಗಿದೆ.

ಪದವಿಪೂರ್ವ ಶಿಕ್ಷಣ ಮಂಡಳಿಯಿಂದ ಪರಿಷ್ಕೃತ ವೇಳಾಪಟ್ಟಿ ಪ್ರಕಟ
ಏಪ್ರಿಲ್ 22ರಂದು ವ್ಯವಹಾರ ಅಧ್ಯಯನ ಪರೀಕ್ಷೆ
ಏಪ್ರಿಲ್ 23ರಂದು ಹಿಂದಿ ಪರೀಕ್ಷೆ, ಏಪ್ರಿಲ್ 25ರಂದು ಅರ್ಥಶಾಸ್ತ್ರ
ಏಪ್ರಿಲ್ 26ರಂದು ಮನಃಶಾಸ್ತ್ರ, ರಾಸಾಯನ ಶಾಸ್ತ್ರ ಪರೀಕ್ಷೆ
ಏಪ್ರಿಲ್ 27ರಂದು ತಮಿಳು, ತೆಲುಗು, ಮಲಯಾಳಂ, ಮರಾಠಿ
ಏಪ್ರಿಲ್ 27ರಂದು ಉರ್ದು, ಸಂಸ್ಕೃತ, ಫ್ರೆಂಚ್​
ಏಪ್ರಿಲ್ 28ರಂದು ಕನ್ನಡ, ಅರೇಬಿಕ್​ ಭಾಷಾ ಪರೀಕ್ಷೆ
ಏ.30ರಂದು ಸಮಾಜಶಾಸ್ತ್ರ, ಎಲೆಕ್ಟ್ರಾನಿಕ್ಸ್​, ಕಂಪ್ಯೂಟರ್ ಸೈನ್ಸ್​
ಮೇ 2ರಂದು ಭೂಗೋಳ ಶಾಸ್ತ್ರ, ಜೀವಶಾಸ್ತ್ರ ಪರೀಕ್ಷೆ
ಮೇ 4ರಂದು ಇಂಗ್ಲಿಷ್ ಭಾಷಾ ಪರೀಕ್ಷೆ
ಮೇ 5ರಂದು ಮಾಹಿತಿ ತಂತ್ರಜ್ಞಾನ ಪರೀಕ್ಷೆ
ಮೇ 6ರಂದು ಗಣಿತ, ಎಜುಕೇಷನ್, ಬೇಸಿಕ್ ಮ್ಯಾಥ್ಸ್​ ಪರೀಕ್ಷೆ
ಮೇ 7ರಂದು ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ
ಮೇ 7ರಂದು ಹೋಮ್ ಸೈನ್ಸ್​ ಪರೀಕ್ಷೆ
ಮೇ 9ರಂದು ಇತಿಹಾಸ, ಭೌತಶಾಸ್ತ್ರ ಪರೀಕ್ಷೆ
ಮೇ 10ರಂದು ರಾಜಕೀಯ ಶಾಸ್ತ್ರ, ಸಂಖ್ಯಾಶಾಸ್ತ್ರ ಪರೀಕ್ಷೆ

ಇದನ್ನೂ ಓದಿ: ನೀಟ್ ಪರೀಕ್ಷೆ ದೇಶದ ಉತ್ತಮ ವ್ಯವಸ್ಥೆ; ಎಲ್ಲರೂ ಡಾಕ್ಟರ್ ಆಗಲು ಸಾಧ್ಯವಿಲ್ಲ: ಸಚಿವ ಅಶ್ವತ್ಥ್ ನಾರಾಯಣ ಪ್ರತಿಕ್ರಿಯೆ

Published On - 7:46 pm, Wed, 2 March 22