AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದ ಹೊಸ ಮದ್ಯ ತೆರಿಗೆ ನೀತಿಯಿಂದ ಆದಾಯಕ್ಕೆ ಹೊಡೆತ? ಸಿಐಎಬಿಸಿಯಿಂದ ಸರ್ಕಾರಕ್ಕೆ ಎಚ್ಚರಿಕೆ

ಕರ್ನಾಟಕದ ಹೊಸ ಮದ್ಯ ತೆರಿಗೆ ನೀತಿಯಿಂದ ಬಿಯರ್ ಮಾರಾಟ ಹೆಚ್ಚಿದ್ದರೂ, ಸರ್ಕಾರದ ಆದಾಯಕ್ಕೆ ಪ್ರಮುಖ ಕೊಡುಗೆ ನೀಡುತ್ತಿರುವ ಐಎಂಎಲ್ ಮದ್ಯದ ಮೇಲೆ ತೆರಿಗೆ ಹೊರೆ ಹೆಚ್ಚಾಗಿದೆ. ಹೀಗಾಗಿ ತೆರಿಗೆ ನೀತಿ ಮರುಪರಿಶೀಲಿಸುವಂತೆ ಉದ್ಯಮ ಸಂಘಟನೆಗಳು ಒತ್ತಾಯಿಸಿವೆ. ತಯಾರಕರು ಈ ಹೆಚ್ಚುವರಿ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸಿದರೆ, ಅದೇ ಪ್ರಮಾಣದ ಮದ್ಯ ಖರೀದಿಸಲು ಗ್ರಾಹಕರು ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ ಎಂದಿವೆ.

ಕರ್ನಾಟಕದ ಹೊಸ ಮದ್ಯ ತೆರಿಗೆ ನೀತಿಯಿಂದ ಆದಾಯಕ್ಕೆ ಹೊಡೆತ? ಸಿಐಎಬಿಸಿಯಿಂದ ಸರ್ಕಾರಕ್ಕೆ ಎಚ್ಚರಿಕೆ
ಸಾಂದರ್ಭಿಕ ಚಿತ್ರImage Credit source: Getty Images
ಪ್ರಸನ್ನ ಹೆಗಡೆ
|

Updated on: Oct 09, 2026 | 5:44 PM

Share

ಬೆಂಗಳೂರು, ಅಕ್ಟೋಬರ್​​ 09: ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ತೆರಿಗೆ ವಿಧಿಸುವ ವ್ಯವಸ್ಥೆ ಕರ್ನಾಟಕದಲ್ಲಿ ಜಾರಿಗೆ ಬಂದು ಐದು ತಿಂಗಳುಗಳು ಕಳೆದಿದ್ದು, ಈ ಹೊಸ ನೀತಿಯಿಂದ ಮದ್ಯ ಮಾರಾಟದ ಮೇಲೆ ಉಂಟಾಗಿರುವ ಪರಿಣಾಮಗಳ ಬಗ್ಗೆ ಹಲವು ಪ್ರಶ್ನೆಗಳೀಗ ಹುಟ್ಟುಕೊಂಡಿವೆ. ಬಿಯರ್ ಮಾರಾಟದಲ್ಲಿ ಭಾರಿ ಏರಿಕೆ ಹಾಗೂ ಭಾರತೀಯ ನಿರ್ಮಿತ ಮದ್ಯದ (ಐಎಂಎಲ್) ಮಾರಾಟದಲ್ಲಿ ಮಂದಗತಿ ಕಂಡುಬಂದಿರೋದೆ ಇದಕ್ಕೆ ಪ್ರಮುಖ ಕಾರಣವಾಗಿದೆ.

ಮದ್ಯ ತಯಾರಕರನ್ನು ಪ್ರತಿನಿಧಿಸುವ ಉದ್ಯಮ ಸಂಘಟನೆಯಾದ ಕಾನ್ಫೆಡರೇಶನ್ ಆಫ್ ಇಂಡಿಯನ್ ಆಲ್ಕೊಹಾಲಿಕ್ ಬೆವರೇಜ್ ಕಂಪನೀಸ್ (ಸಿಐಎಬಿಸಿ), ರಾಜ್ಯ ಸರ್ಕಾರ ತನ್ನ ತೆರಿಗೆ ನೀತಿಯನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದೆ. ಬಿಯರ್ ಮಾರಾಟದಲ್ಲಿ ಭಾರಿ ಏರಿಕೆ ಕಂಡುಬಂದಿದ್ದರೂ, ಅಬಕಾರಿ ಆದಾಯದಲ್ಲಿನ ಹೆಚ್ಚಳಕ್ಕೆ ಭಾರತೀಯ ನಿರ್ಮಿತ ಮದ್ಯವೇ ಪ್ರಮುಖ ಕಾರಣವಾಗಿದೆ ಎಂದು ಅದು ವಾದಿಸಿದೆ. ಹೀಗಾಗಿ ಕರ್ನಾಟಕದ ಹೊಸ ತೆರಿಗೆ ವ್ಯವಸ್ಥೆಯು ಸರ್ಕಾರ ನಿರೀಕ್ಷಿಸಿದ ಫಲಿತಾಂಶಗಳನ್ನು ನೀಡುತ್ತಿದೆಯೇ ಮತ್ತು ಹೆಚ್ಚಿದ ತೆರಿಗೆಯ ಹೊರೆ ಯಾರ ಮೇಲೆ ಬೀಳುತ್ತಿದೆ ಎಂಬುದು ಈಗ ಚರ್ಚೆಯ ಕೇಂದ್ರಬಿಂದುವಾಗಿದೆ.

ಇದನ್ನೂ ಓದಿ: ‘ಎಣ್ಣೆ’ ಪ್ರಿಯರ ಕಿಕ್ ಏರಿಸಿದ ಸರ್ಕಾರ! ಇನ್ನು ಶ್ರೀಮಂತರ ಮದ್ಯ ಅಗ್ಗ, ಬಡವರ ಮದಿರೆ ದುಬಾರಿ

ಕರ್ನಾಟಕದ ಹೊಸ ಮದ್ಯ ತೆರಿಗೆ ನೀತಿ ಏನು?

ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ಅಬಕಾರಿ ಸುಂಕ ವಿಧಿಸುವ ಆಲ್ಕೋಹಾಲ್-ಇನ್-ಬೆವರೇಜ್ (ಎಐಬಿ) ವ್ಯವಸ್ಥೆಯನ್ನು 2026ರ ಮೇ 11ರಂದು ಜಾರಿಗೆ ತಂದ ಭಾರತದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಹಿಂದಿನ ವ್ಯವಸ್ಥೆಯಲ್ಲಿ ಮದ್ಯದ ಪ್ರಮಾಣ ಮತ್ತು ಬೆಲೆ ವರ್ಗದ ಆಧಾರದ ಮೇಲೆ ತೆರಿಗೆ ವಿಧಿಸಲಾಗುತ್ತಿತ್ತು. ಹೊಸ ವ್ಯವಸ್ಥೆಯಲ್ಲಿ ಪಾನೀಯದಲ್ಲಿರುವ ಆಲ್ಕೋಹಾಲ್ ಪ್ರಮಾಣಕ್ಕೆ ಅನುಗುಣವಾಗಿ ಅಬಕಾರಿ ಸುಂಕ ನಿಗದಿಪಡಿಸಲಾಗುತ್ತದೆ. ಈ ಹೊಸ ನೀತಿಯ ಪರಿಣಾಮ ಕಡಿಮೆ ಬೆಲೆಯ ಮದ್ಯದ ಬ್ರ್ಯಾಂಡ್‌ಗಳಿಗೆ ಹೆಚ್ಚಿನ ತೆರಿಗೆ ವೆಚ್ಚ ಎದುರಾಗಿದ್ದರೆ, ಕೆಲವು ಪ್ರೀಮಿಯಂ ಮದ್ಯ ಮತ್ತು ಬಿಯರ್ ಬ್ರ್ಯಾಂಡ್‌ಗಳ ಬೆಲೆ ಇಳಿಕೆಯಾಗಿದೆ.

ಬಿಯರ್ ಮಾರಾಟದಲ್ಲಿ ಶೇ. 50ರಷ್ಟು ಏರಿಕೆ

2026ರ ಜುಲೈನಿಂದ ಸೆಪ್ಟೆಂಬರ್‌ವರೆಗಿನ ಕರ್ನಾಟಕ ಸರ್ಕಾರದ ಮಾರಾಟದ ಅಂಕಿಅಂಶಗಳು ಬಿಯರ್ ಮತ್ತು ಭಾರತೀಯ ನಿರ್ಮಿತ ಮದ್ಯದ ಮಾರಾಟದಲ್ಲಿ ಗಮನಾರ್ಹ ವ್ಯತ್ಯಾಸವನ್ನು ತೋರಿಸಿವೆ. ಸಿಐಎಬಿಸಿ ಉಲ್ಲೇಖಿಸಿರುವ ಅಂಕಿಅಂಶಗಳ ಪ್ರಕಾರ, ಬಿಯರ್ ಮಾರಾಟದ ಪ್ರಮಾಣದಲ್ಲಿ ಸುಮಾರು ಶೇ. 50ರಷ್ಟು ಏರಿಕೆಯಾಗಿದೆ. ಆದರೆ, ಭಾರತೀಯ ನಿರ್ಮಿತ ಮದ್ಯದ (ಐಎಂಎಲ್) ಮಾರಾಟದಲ್ಲಿ ಕೇವಲ ಶೇ. 1.52ರಷ್ಟು ಹೆಚ್ಚಳವಾಗಿದೆ. ಐಎಂಎಲ್ ಮಾರಾಟದ ಪ್ರಮಾಣ ಕೇವಲ ಶೇ. 1.52ರಷ್ಟು ಹೆಚ್ಚಿದ್ದರೂ, ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಈ ವಿಭಾಗದಿಂದ ಬಂದ ಆದಾಯ 1,064.52 ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದೆ. ಇದಕ್ಕೆ ಹೋಲಿಸಿದರೆ, ಬಿಯರ್ ಮಾರಾಟದ ಪ್ರಮಾಣ ಸುಮಾರು ಶೇ. 50ರಷ್ಟು ಏರಿಕೆಯಾಗಿದ್ದರೂ, ಅದರ ಆದಾಯದಲ್ಲಿ 228.57 ಕೋಟಿ ರೂಪಾಯಿಗಳಷ್ಟು ಮಾತ್ರ ಹೆಚ್ಚಳವಾಗಿದೆ.

ಈ ತ್ರೈಮಾಸಿಕದಲ್ಲಿ ಕರ್ನಾಟಕದ ಒಟ್ಟು ಅಬಕಾರಿ ಆದಾಯ 1,291.94 ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದೆ. ಸಿಐಎಬಿಸಿಯ ವಿಶ್ಲೇಷಣೆಯ ಪ್ರಕಾರ, ಈ ಹೆಚ್ಚುವರಿ ಆದಾಯದಲ್ಲಿ ಐಎಂಎಲ್‌ನ ಪಾಲು ಸುಮಾರು ಶೇ. 82ರಷ್ಟಿದ್ದರೆ, ಬಿಯರ್‌ನ ಪಾಲು ಶೇ. 18ರಷ್ಟಿದೆ. ಮಾರಾಟದ ಪ್ರಮಾಣದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿರುವುದಕ್ಕಿಂತಲೂ, ಐಎಂಎಲ್ ಗ್ರಾಹಕರಿಂದ ಹೆಚ್ಚಿನ ತೆರಿಗೆ ಸಂಗ್ರಹವಾಗಿರುವುದೇ ಆದಾಯ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ ಎಂಬುದು ಉದ್ಯಮ ಸಂಘಟನೆಯ ವಾದವಾಗಿದೆ.

ಗ್ರಾಹಕರ ಮೇಲೆ ಯಾವ ರೀತಿಯ ಪರಿಣಾಮ?

ಪರಿಷ್ಕೃತ ತೆರಿಗೆ ವ್ಯವಸ್ಥೆಯಡಿ, ಕಡಿಮೆ ಬೆಲೆಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಭಾರತೀಯ ನಿರ್ಮಿತ ಮದ್ಯದ ಕೆಲವು ಉತ್ಪನ್ನಗಳ ಮೇಲೆ ಹೆಚ್ಚಿನ ತೆರಿಗೆ ಹೊರೆ ಬಿದ್ದಿದೆ. ತಯಾರಕರು ಈ ಹೆಚ್ಚುವರಿ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸಿದರೆ, ಅದೇ ಪ್ರಮಾಣದ ಮದ್ಯ ಖರೀದಿಸಲು ಗ್ರಾಹಕರು ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ. ಇನ್ನೊಂದೆಡೆ, ಪ್ರೀಮಿಯಂ ಮದ್ಯ ಖರೀದಿಸುವವರಿಗೆ ಕೆಲವು ಉತ್ಪನ್ನಗಳ ಬೆಲೆ ಇಳಿಕೆಯಿಂದ ಲಾಭವಾಗಬಹುದು. ಕೆಲವು ವಿಭಾಗಗಳಲ್ಲಿ ಬಿಯರ್ ಬೆಲೆಯೂ ಕಡಿಮೆಯಾಗಬಹುದು. ಆದರೆ, ಅಂತಿಮ ಬೆಲೆ ಬ್ರ್ಯಾಂಡ್ ಮತ್ತು ತಯಾರಕರು ಕೈಗೊಳ್ಳುವ ಬೆಲೆ ನಿಗದಿ ನಿರ್ಧಾರಗಳನ್ನು ಅವಲಂಬಿಸಿರುತ್ತದೆ. ಹೀಗಾಗಿ, ತೆರಿಗೆ ಬದಲಾವಣೆಯ ಪರಿಣಾಮ ಗ್ರಾಹಕರ ವಿವಿಧ ವರ್ಗಗಳ ಮೇಲೆ ವಿಭಿನ್ನವಾಗಿರಲಿದೆ ಎಂದು ಎನ್​​ಡಿಟಿವಿ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’
ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’
KPSC ಹಗರಣ: ಅಕ್ರಮದ ಹಣದಲ್ಲಿ ಆರೋಪಿಗಳಿಂದ ಪ್ಲೈಟ್ ಟಿಕೆಟ್​ ಬುಕ್ಕಿಂಗ್
KPSC ಹಗರಣ: ಅಕ್ರಮದ ಹಣದಲ್ಲಿ ಆರೋಪಿಗಳಿಂದ ಪ್ಲೈಟ್ ಟಿಕೆಟ್​ ಬುಕ್ಕಿಂಗ್
ಜಂಬೂಸವಾರಿ: ಮಹೇಂದ್ರ ಆನೆಯನ್ನು ಕ್ಯಾಪ್ಟನ್ ರೇಸ್​ನಿಂದ ಹೊರಗಿಟ್ಟಿದ್ದೇಕೆ?
ಜಂಬೂಸವಾರಿ: ಮಹೇಂದ್ರ ಆನೆಯನ್ನು ಕ್ಯಾಪ್ಟನ್ ರೇಸ್​ನಿಂದ ಹೊರಗಿಟ್ಟಿದ್ದೇಕೆ?
ಮೈಸೂರು ದಸರಾ 2026: ಗಜಪಡೆಗೆ ಸಿಡಿಮದ್ದು ತರಬೇತಿ
ಮೈಸೂರು ದಸರಾ 2026: ಗಜಪಡೆಗೆ ಸಿಡಿಮದ್ದು ತರಬೇತಿ
ದಾವಣಗೆರೆ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ಭ್ರೂಣ ಲಿಂಗ ಪತ್ತೆ ಶಂಕೆ
ದಾವಣಗೆರೆ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ಭ್ರೂಣ ಲಿಂಗ ಪತ್ತೆ ಶಂಕೆ
ಧರೆಗುರುಳಿದ ಬೃಹತ್ ಮರ, ಹೊಯ್ಸಳ ಪೊಲೀಸ್ ಕಾರು ಜಸ್ಟ್ ಮಿಸ್
ಧರೆಗುರುಳಿದ ಬೃಹತ್ ಮರ, ಹೊಯ್ಸಳ ಪೊಲೀಸ್ ಕಾರು ಜಸ್ಟ್ ಮಿಸ್
ಸ್ಟಿಂಗ್ ಆಪರೇಷನ್​​: ಪೆನ್‌ಡ್ರೈವ್​ ಪ್ರದರ್ಶಿಸಿ ಗಣಿಗ ರವಿ ಸ್ಫೋಟಕ ಆರೋಪ
ಸ್ಟಿಂಗ್ ಆಪರೇಷನ್​​: ಪೆನ್‌ಡ್ರೈವ್​ ಪ್ರದರ್ಶಿಸಿ ಗಣಿಗ ರವಿ ಸ್ಫೋಟಕ ಆರೋಪ
ಪಿಜಿಸಿಇಟಿ ಕೌನ್ಸಿಲಿಂಗ್ ವಿಳಂಬ: ಕೆಇಎ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ!
ಪಿಜಿಸಿಇಟಿ ಕೌನ್ಸಿಲಿಂಗ್ ವಿಳಂಬ: ಕೆಇಎ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ!
ಗಾನವಿ ಕೊಟ್ಟ ಕೌಂಟರ್​​ಗೆ ಸೈಲೆಂಟ್ ಆದ ತಾಂಡವ್ ರಾಮ್
ಗಾನವಿ ಕೊಟ್ಟ ಕೌಂಟರ್​​ಗೆ ಸೈಲೆಂಟ್ ಆದ ತಾಂಡವ್ ರಾಮ್
ಬೆಂಗಳೂರಿನಲ್ಲಿ ಭಕ್ತರ ಗಮನ ಸೆಳೆಯುತ್ತಿದೆ ಮಂತ್ರಾಲಯದ ಮಾದರಿಯ ಗಣೇಶ ಮಂಟಪ!
ಬೆಂಗಳೂರಿನಲ್ಲಿ ಭಕ್ತರ ಗಮನ ಸೆಳೆಯುತ್ತಿದೆ ಮಂತ್ರಾಲಯದ ಮಾದರಿಯ ಗಣೇಶ ಮಂಟಪ!