ಬಿಡಿಎ ಕಾರ್ಯದರ್ಶಿ ಹುದ್ದೆಗಾಗಿ KAS ಅಧಿಕಾರಿಗಳ ಫೈಟ್: ಸರ್ಕಾರ ವರ್ಗಾವಣೆ ಮಾಡಿದರೂ ಸೀಟ್ ಬಿಟ್ಟು ಕೊಡಲು ನಕಾರ

|

Updated on: Mar 14, 2023 | 1:10 PM

KAS ಅಧಿಕಾರಿ ಶಾಂತರಾಜು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಆದ್ರೆ ವರ್ಗಾವಣೆಯಾದ್ರೂ ಶಾಂತರಾಜು ಕಾರ್ಯದರ್ಶಿ ಹುದ್ದೆ ಬಿಟ್ಟುಕೊಟ್ಟಿಲ್ಲ.

ಬಿಡಿಎ ಕಾರ್ಯದರ್ಶಿ ಹುದ್ದೆಗಾಗಿ KAS ಅಧಿಕಾರಿಗಳ ಫೈಟ್: ಸರ್ಕಾರ ವರ್ಗಾವಣೆ ಮಾಡಿದರೂ ಸೀಟ್ ಬಿಟ್ಟು ಕೊಡಲು ನಕಾರ
ಬಿಡಿಎ
Follow us on

ಬೆಂಗಳೂರು: ಬಿಡಿಎ ಕಾರ್ಯದರ್ಶಿ ಹುದ್ದೆಗಾಗಿ ಇಬ್ಬರು KAS ಅಧಿಕಾರಿಗಳ ನಡುವೆ ಫೈಟ್ ಶುರುವಾಗಿದೆ. ಸರ್ಕಾರದ ಆದೇಶ ಇದ್ರೂ ಕಾರ್ಯದರ್ಶಿ ಹುದ್ದೆ ಬಿಟ್ಟುಕೊಡುವಲ್ಲಿ ತಕರಾರು ಎದುರಾಗಿದೆ. ತಮ್ಮ ಜಾಗಕ್ಕೆ ಇನ್ನೊಬ್ಬ ಅಧಿಕಾರಿಯನ್ನ ವರ್ಗಾವಣೆ ಮಾಡಿದ್ರು ಚಾರ್ಜ್ ಕೊಡಲು ಹಾಲಿ ಕಾರ್ಯದರ್ಶಿ ಮುಂದಾಗಿಲ್ಲ. ವರ್ಗಾವಣೆಯಾದ್ರು ಕಾರ್ಯದರ್ಶಿ ಹುದ್ದೆಯಲ್ಲಿಯೇ ಕೆಲಸ ಮುಂದುವರೆಸಿದ್ದಾರೆ. ಇದರಿಂದ ನೂತನ ಅಧಿಕಾರಿಗೆ ತಲೆ ನೋವು ಎದುರಾಗಿದೆ.

KAS ಅಧಿಕಾರಿ ಶಾಂತರಾಜು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಆದ್ರೆ ವರ್ಗಾವಣೆಯಾದ್ರೂ ಶಾಂತರಾಜು ಕಾರ್ಯದರ್ಶಿ ಹುದ್ದೆ ಬಿಟ್ಟುಕೊಟ್ಟಿಲ್ಲ. ಶಾಂತರಾಜು ಸ್ಥಾನಕ್ಕೆ ನೇಮಕವಾಗಿರುವ ಕೆಎಎಸ್ ಅಧಿಕಾರಿ ಶಿವಸ್ವಾಮಿ ಅಧಿಕಾರ ವಹಿಸಿಕೊಳ್ಳಲು ನಿನ್ನೆ ಬಿಡಿಎ ಕಚೇರಿಗೆ ಬಂದಿದ್ದಾರೆ. ಈ ವೇಳೆ KAS ಅಧಿಕಾರಿ ಶಾಂತರಾಜು ಬಿಡಿಎ ಕಾರ್ಯದರ್ಶಿ ಹುದ್ದೆ ಬಿಟ್ಟುಕೊಡದೆ ಸತಾಯಿಸಿದ್ದಾರೆ. ನಿನ್ನೆ ಇಡೀ ದಿನ ಶಿವಸ್ವಾಮಿ ಕಚೇರಿಯಲ್ಲೇ ಕಾದುಕುಳಿತಿದ್ದರು. ಸ್ವತ: ಮುಖ್ಯಮಂತ್ರಿಗಳ ಕಚೇರಿಯಿಂದಲೇ ಸ್ಪಷ್ಟನೆ ಸಿಕ್ಕದೆ. ಇಷ್ಟೆಲ್ಲಾ ಆದರೂ ಕಾರ್ಯದರ್ಶಿ ಹುದ್ದೆ ಬಿಡಲು ಶಾಂತರಾಜು ರೆಡಿ ಇಲ್ಲ. ಇದರಿಂದ ಶಿವಸ್ವಾಮಿ ಗೊಂದಲದಲ್ಲಿ ಬಿದ್ದಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:10 pm, Tue, 14 March 23