AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ರಾಜ್ಯಸಭೆಯ ಮಾಜಿ ಸದಸ್ಯ ಉಬೇದುಲ್ಲಾ ಖಾನ್ ಆಜ್ಮಿ ಜೆಡಿಎಸ್ ಸೇರ್ಪಡೆ

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ನೇತೃತ್ವದಲ್ಲಿ ಇಂದು(ಮಾ.14) ರಾಜ್ಯಸಭೆಯ ಮಾಜಿ ಸದಸ್ಯ ಉಬೇದುಲ್ಲಾ ಖಾನ್ ಆಜ್ಮಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಬೆಂಗಳೂರು: ರಾಜ್ಯಸಭೆಯ ಮಾಜಿ ಸದಸ್ಯ ಉಬೇದುಲ್ಲಾ ಖಾನ್ ಆಜ್ಮಿ ಜೆಡಿಎಸ್ ಸೇರ್ಪಡೆ
ರಾಜ್ಯಸಭೆಯ ಮಾಜಿ ಸದಸ್ಯ ಉಬೇದುಲ್ಲಾ ಖಾನ್ ಆಜ್ಮಿ ಜೆಡಿಎಸ್ ಸೇರ್ಪಡೆ
ಕಿರಣ್ ಹನುಮಂತ್​ ಮಾದಾರ್
|

Updated on: Mar 14, 2023 | 12:20 PM

Share

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದ್ದು. ಪಕ್ಷ ಸೇರ್ಪಡೆ ಕಾರ್ಯ ಜೋರಾಗಿದೆ. ಅದರಂತೆ ಇದೀಗ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ(H. D. Deve Gowda) ಹಾಗೂ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ(C. M. Ibrahim) ನೇತೃತ್ವದಲ್ಲಿ ಇಂದು(ಮಾ.14) ಪದ್ಮನಾಭನಗರದ ದೇವೇಗೌಡರ ನಿವಾಸದಲ್ಲಿ ರಾಜ್ಯಸಭೆಯ ಮಾಜಿ ಸದಸ್ಯ ಉಬೇದುಲ್ಲಾ ಖಾನ್ ಆಜ್ಮಿ(Ubaidulla Khan Azmi) ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಇನ್ನು ಉಬೇದುಲ್ಲಾ ಖಾನ್ ಆಜ್ಮಿ ಜೆಡಿಎಸ್ ಸೇರ್ಪಡೆ ವಿಚಾರವಾಗಿ ಮಾತನಾಡಿದ ಜೆಡಿಎಸ್​ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಮುಸ್ಲಿಂ ಸಮುದಾಯದಲ್ಲಿ ತಮ್ಮದೇ ಆದ ಹೆಸರು ಮಾಡಿರುವವರು, ಸರ್ವ ಧರ್ಮ ಸಮನ್ವಯ ಮಾಡುವಲ್ಲಿ ಇವರು ಎತ್ತಿದ ಕೈ. ವಿಪಿ ಸಿಂಗ್, ಜಯಪ್ರಕಾಶ್ ನಾರಾಯಣ್ ಅವರ ಒಡನಾಡಿಯಾಗಿದ್ದವರು. ಇಂತಹ ಪ್ರಣಾಳಿಕೆಯನ್ನು ಹಿಂದೆ ಯಾವ ಸರ್ಕಾರ ಕೂಡ ಜನರ ಮುಂದೆ ಇಟ್ಟಿಲ್ಲ. ಕುಮಾರಸ್ವಾಮಿ ಅವರು ಜನರ ಮುಂದೆ ಇಂತಹ ಪ್ರಣಾಳಿಕೆ ಇಟ್ಟಿದ್ದಾರೆ. ಇದನ್ನು ಮೆಚ್ಚಿ ಅವರು ಬಂದಿದ್ದಾರೆ. ಮುಂದಿನ ತಿಂಗಳಿನಿಂದ ಅವರನ್ನು ರಾಜ್ಯ ಪ್ರವಾಸ ಮಾಡಿಸುತ್ತೇವೆ. ಅವರಷ್ಟೆ ಅಲ್ಲ ಅವರ ಟೀಂ ಕೂಡ ಬರಲಿದೆ. ಜೊತೆಗೆ ಅವರ ಸೇರ್ಪಡೆಯಿಂದ ನಮಗೆ ಒಂದು ಶಕ್ತಿ ಬಂದಿದೆ ಎಂದರು.

ಇದನ್ನೂ ಓದಿ:ಜೆಡಿಎಸ್​ ಭದ್ರಕೋಟೆಯಲ್ಲಿ ಮೋದಿ ಮೋಡಿ, ರೋಡ್‌ಶೋನಲ್ಲಿ ಪ್ರಧಾನಿ ಮೇಲೆ ಕೇಸರಿ ಹೂ ಮಳೆ, ಫೋಟೋಗಳಲ್ಲಿ ನೋಡಿ

ಇನ್ನು ಇದೇ ಸಂದರ್ಭದಲ್ಲಿ ರಾಮನಗರದಲ್ಲಿ ಡಿಕೆ ಸುರೇಶ್ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು ನಿಖಿಲ್ ಅವರು ರಾಮನಗರಕ್ಕೆ ಹೊಸಬರಲ್ಲ. ಅಲ್ಲಿಯೇ ಮನೆ ಇದೆ. ಅದೇ ಕ್ಷೇತ್ರದಲ್ಲಿ ತಿರುಗಾಡುತ್ತಾ ಇದ್ದಾರೆ. ಕಾಂಗ್ರೆಸ್​ನಿಂದ ಯಾರೇ ನಿಂತರೂ ಸ್ವಾಗತ. ಯಾವುದೇ ಹೆದರಿಕೆ, ಆತಂಕ ಇಲ್ಲ ಎಂದರು. ಜೊತೆಗೆ ಎಕ್ಸಪ್ರೆಸ್ ಹೈ ವೇ ಟೋಲ್ ಕಲೆಕ್ಷನ್ ಕುರಿತು ‘ಹಣ ಕಲೆಕ್ಷನ್ ಮಾಡ್ತೀವಿ ಅಂತಿದ್ದಾರೆ. ರಸ್ತೆ ಪೂರ್ತಿಯಾಗಿಲ್ಲ, ಅಂತಹದರಲ್ಲಿ ದುಡ್ಡು ಕಲೆಕ್ಟ್ ಮಾಡುತ್ತಿದ್ದಾರೆ. ವೈಜ್ಞಾನಿಕವಾಗಿ ರಸ್ತೆ ಮಾಡಿದ್ದೀರಾ, ಯಾರ ಅರ್ಜೆಂಟ್​ಗೆ ಹಣ ಕಲೆಕ್ಟ್ ಮಾಡ್ತಾ ಇದ್ದೀರಿ. ತಜ್ಞರ ಸಮಿತಿ ರಚನೆ ಮಾಡಿ, ಸರಿಪಡಿಸಿ ಆಮೇಲೆ ಹಣ ಕಲೆಕ್ಟ್ ಮಾಡಿ ಎಂದರು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?