ಮರಳಿ ಗೂಡು ಸೇರಲು ಶಾಸಕ ಎಸ್ ಆರ್ ಶ್ರೀನಿವಾಸ್​ಗೆ ಆಫರ್ ಕೊಟ್ಟ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ

ಜೆಡಿಎಸ್​ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮರಳಿ ಗೂಡಿಗೆ (ಜೆಡಿಎಸ್​) ಪಕ್ಷಕ್ಕೆ ಬರುವಂತೆ ಗುಬ್ಬಿ ಕ್ಷೇತ್ರದ ಶಾಸಕ ಎಸ್​ ಆರ್​ ಶ್ರೀನಿವಾಸ್​ ಅವರಿಗೆ ಆಹ್ವಾನ ನೀಡಿದ್ದಾರೆ.

ಮರಳಿ ಗೂಡು ಸೇರಲು ಶಾಸಕ ಎಸ್ ಆರ್ ಶ್ರೀನಿವಾಸ್​ಗೆ ಆಫರ್ ಕೊಟ್ಟ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ
ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ
Follow us
|

Updated on:Mar 14, 2023 | 9:48 AM

ತುಮಕೂರು: ರಾಜಕಾರಣದಲ್ಲಿ ಒಂದು ಪಕ್ಷ ತೊರೆದು ಮತ್ತೊಂದು ಪಕ್ಷ ಸೇರ್ಪಡೆಯಾಗುವುದು ಸರ್ವೆ ಸಾಮಾನ್ಯವಾಗಿಬಿಟ್ಟಿದೆ. ರಾಜಕೀಯ ಪಕ್ಷಗಳು, ಪ್ರತಿಪಕ್ಷದಲ್ಲಿರುವ ಪ್ರಬಲ ನಾಯಕರನ್ನು ತಮ್ಮತ್ತ ಸೇರಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿರುತ್ತವೆ. ಚುನಾವಣೆ ಸಮಯದಲ್ಲಿ ಇದು ಸಹಜ ಎನ್ನುವಷ್ಟರ ಮಟ್ಟಿಗೆ ಪಕ್ಷಾಂತರ ನಡೆಯುತ್ತಿದೆ. ಕಳೆದ ವರ್ಷ ಜೆಡಿಎಸ್​ಗೆ (JDS) ರಾಜಿನಾಮೆ ನೀಡಿ, ಕಾಂಗ್ರೆಸ್​ನ (Congress) ಭಾರತ ಜೋಡೋ ಯಾತ್ರೆಯಲ್ಲಿ (Bharat Jodo Yatra) ಗುಬ್ಬಿ ಕ್ಷೇತ್ರದ ಶಾಸಕ ಎಸ್​. ಆರ್​ ಶ್ರೀನಿವಾಸ್ (SR Srinivas) ಕಾಣಿಸಿಕೊಂಡಿದ್ದರು. ಇದಾದ ನಂತರ​ ಮನವೊಲಿಕೆಗೆ ಜೆಡಿಎಸ್​ ನಾಯಕರು ಮುಂದಾಗಿದ್ದಾರೆ. ಈ ಹಿಂದೆ ಜೆಡಿಎಸ್​ ನಾಯಕ ಸಾ.ರಾ ಮಹೇಶ್​ ಮನವೊಲಿಕೆಗೆ ಪ್ರಯತ್ನಿಸಿದ್ದರೂ ಯಶಸ್ಸು ಕಂಡಿರಲಿಲ್ಲ. ಈಗ ಜೆಡಿಎಸ್​ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ಮರಳಿ ಗೂಡಿಗೆ (ಜೆಡಿಎಸ್​) ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ.

ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ, ಶಾಸಕಾಂಗ ಪಕ್ಷದ ನಾಯಕರು. ಶ್ರೀನಿವಾಸ್ ಅವರ ಬಗ್ಗೆ ಗೌರವವಿದೆ. ಎಲ್ಲಾರಿಗೂ ಕೈ ಮುಗಿದು ಒಳಗೆ ಬಾ, ಯಾತ್ರಿಕನೆ. ನಮಗೆ ಯಾರ ಬಗ್ಗೆನೂ ದ್ವೇಷವಿಲ್ಲ. ಒಂದು ಕಾಲದಲ್ಲಿ ನಮ್ಮ ಜೊತೆ ಚೆನ್ನಾಗಿ ಇದ್ದರು. ಕೃಷ್ಣನಿಗೂ ಅಪವಾದ ಬಂತು.. ಚೌತಿಯಲ್ಲಿ ಚಂದ್ರನನ್ನು ನೊಡದಹಾಗೆ. ದೇವರು ಅವರಿಗೆ ಒಳ್ಳೆ ಬುದ್ದಿ ಕೊಡ್ಲಿ, ಯೋಚನೆ ಮಾಡಿ. ಶ್ರೀನಿವಾಸ್ ಮಗ ಒಳ್ಳೆಯವನಿದ್ದಾನೆ,  ಧರ್ಮಪತ್ನಿ ಒಳ್ಳೆಯರಿದ್ದಾರೆ. ಮನೇಲಿ ಕುಳಿತು ವಿಚಾರ ಮಾಡಿ ಎಂದು ಹೇಳಿದ್ದಾರೆ.

ಜೆಡಿಎಸ್​ ಪಕ್ಷದ ವಿರುದ್ಧ ಅಸಮಾಧಾನ

ಗುಬ್ಬಿ ಕ್ಷೇತ್ರದ ಶಾಸಕ ಎಸ್​. ಆರ್​ ಶ್ರೀನಿವಾಸ್ ಜೆಡಿಎಸ್​ ಪಕ್ಷದ ಶಾಸಕರಾಗಿದ್ದು, ಸ್ವ ಪಕ್ಷದ ವಿರುದ್ಧವೇ ಬಂಡಯಾ ಎದ್ದಿದ್ದರು. ಈ ಹಿಂದೆ ರಾಜ್ಯ ಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ ಹಿನ್ನೆಲೆಯಲ್ಲಿ ಎಸ್ ಆರ್ ಶ್ರೀನಿವಾಸ್ ಅವರನ್ನು ಅಮಾನತು ಮಾಡಲಾಗಿತ್ತು. ಇದಾದ ನಂತರ ಜೆಡಿಎಸ್​ ಪಕ್ಷಕ್ಕೆ ರಾಜಿನಾಮೆ ನೀಡಿ ಹೊರನಡೆದಿದ್ದರು. ಆದರೆ ಯಾವ ಪಕ್ಷಕ್ಕೆ ಸೇರುತ್ತಾರೆ ಎಂದು ತಿಳಿಸಿರಲಿಲ್ಲ.

ಇದನ್ನೂ ಓದಿ: ಬನ್ರೋ ನನ್ ಮಕ್ಳಾ ಯಾರು ಬರ್ತೀರೋ ಬನ್ನಿ; ಡಾ.ಜಿ.ಪರಮೇಶ್ವರ್ ಅಬ್ಬರದ ಭಾಷಣ

ಇದಾದ ಬಳಿಕ ಜೆಡಿಎಸ್​ ನಾಯಕ ಸಾ ರಾ ಮಹೇಶ್​ ಶ್ರೀನಿವಾಸ್​ ಮನೆಗೆ ತೆರಳಿ ಅವರ ಮನವೊಲಿಸಲು ಪ್ರಯತ್ನಪಟ್ಟಿದ್ದರು, ಅದು ಸಫಲವಾಗಲಿಲ್ಲ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ್ದ ಅವರು ಶ್ರೀನಿವಾಸ್ ಜೆಡಿಎಸ್‌ಗೆ ವಾಪಸ್ ಹೋಗಲ್ಲ, ನನ್ನ ಫೇಸ್ ಮಾಡೋ ಧೈರ್ಯ ಕುಮಾರಸ್ವಾಮಿಗಿಲ್ಲ ಎಂಬ ಹೇಳಿಕೆ ನೀಡಿದ್ದರು. ನನಗೇನು ತೋಚುತ್ತೊ ಅದನ್ನೇ ಮಾಡುತ್ತೇನೆ. ಅವರು ಹೇಳಿದ ಹಾಗೇ ಅಥವಾ ಇವರು ಹೇಳಿದ ಹಾಗೆ ಕೇಳುವುದಿಲ್ಲ. ಅವರು ಹೇಳಿದ್ರು ಅಂತ ಇನ್ನೊಬ್ಬರಿಗೆ ತೊಂದರೆ ಕೊಡಲ್ಲ ಎಂದಿದ್ದರು.

ಶ್ರೀನಿವಾಸ ಕಾಂಗ್ರೆಸ್​ ಸೇರ್ಪಡೆಗೆ ಕೈ ಕಾರ್ಯಕರ್ತರ ವಿರೋಧ

ಎಸ್.ಆರ್ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆಗೆ ಗುಬ್ಬಿ ಕ್ಷೇತ್ರದ ಕಾಂಗ್ರೆಸ್​ನಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಶ್ರೀನಿವಾಸ್ ಕಾಂಗ್ರೆಸ್ ಸೇರುವುದನ್ನು ವಿರೋಧಿಸಿ ಕಾರ್ಯಕರ್ತರು ಪೋಸ್ಟರ್ ಬಿಡುಗಡೆ ಮಾಡಿದ್ದರು. 10 ತಲೆ ಇರುವ ರಾವಣನ ವಾಲ್ ಪೋಸ್ಟರ್​ಅನ್ನು ಬಿಡುಗಡೆ ಮಾಡುವ ಮೂಲಕ ಶಾಸಕ ಗುಬ್ಬಿ ಶ್ರೀನಿವಾಸ್ ಅವರನ್ನು ರಾವಣನಿಗೆ ಹೋಲಿಸಿದ್ದರು. ಅಲ್ಲದೇ ಒಂದು ವೇಳೆ ಶ್ರೀನಿವಾಸ್​ ಅವರಿಗೆ ಕಾಂಗ್ರೆಸ್​ ಟಿಕೆಟ್​ ನೀಡಿದರೆ ಅವರನ್ನು ಸೋಲಿಸುವ ಪಣತೊಟ್ಟಿದ್ದವೇ ಎಂದು ಹೇಳುವ ಮೂಲಕ ಶ್ರೀನಿವಾಸ್​ ಕಾಂಗ್ರೆಸ್​ ಸೇರ್ಪಡೆಗೆ ವಿರೋಧ ವ್ಯಕ್ತವಾಗಿದೆ.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:34 am, Tue, 14 March 23