ಸ್ವಕ್ಷೇತ್ರದಲ್ಲಿ ಸಿಟಿ ರವಿ ವಿರುದ್ಧ ಲಿಂಗಾಯತ ಮತದಾರರ ಆಕ್ರೋಶ, ಸಭೆ ನಡೆಸಲು ಬಂದ ಬಿಜೆಪಿ ಮುಖಂಡರಿಗೆ ಗ್ರಾಮಸ್ಥರ ಕ್ಲಾಸ್

ಚಿಕ್ಕಮಗಳೂರು ಜಿಲ್ಲೆ, ಚಿಕ್ಕಮಗಳೂರು ತಾಲೂಕಿನ ಉದ್ದೇಬೋರನಹಳ್ಳಿ ಗ್ರಾಮದ ಲಿಂಗಾಯತ ಮತದಾರರು ಶಾಸಕ‌ ಸಿ.ಟಿ ರವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ವಕ್ಷೇತ್ರದಲ್ಲಿ ಸಿಟಿ ರವಿ ವಿರುದ್ಧ ಲಿಂಗಾಯತ ಮತದಾರರ ಆಕ್ರೋಶ, ಸಭೆ ನಡೆಸಲು ಬಂದ ಬಿಜೆಪಿ ಮುಖಂಡರಿಗೆ ಗ್ರಾಮಸ್ಥರ ಕ್ಲಾಸ್
ಸಿಟಿ ರವಿ (ಎಡಚಿತ್ರ) ಗ್ರಾಮಸ್ಥರ ಆಕ್ರೋಶ (ಬಲಚಿತ್ರ)
Follow us
|

Updated on:Mar 14, 2023 | 8:24 AM

ಬೆಂಗಳೂರು: ಚುನಾವಣೆಗಳ ಸಮಯದಲ್ಲಿ ಮಾತ್ರ ಜನನಾಯಕರು ಗ್ರಾಮಗಳತ್ತ ಮತ್ತು ಮತದಾರರತ್ತ ಮುಖ ಮಾಡುತ್ತಾರೆ ಎಂಬ ಮಾತಿದೆ. ಈಗ ರಾಜ್ಯ ವಿಧಾನಸಭೆ ಚುನಾವಣೆಗೆ (Karnataka Assembly Election) ದಿನ ಎಣಿಕೆಯಲ್ಲಿದ್ದು, ಈಗ ರಾಜಕಾರಣಿಗಳು ತಮ್ಮ ಕ್ಷೇತ್ರಗಳ ಜನರತ್ತ ಹೋಗುತ್ತಿದ್ದಾರೆ ಎಂದು ಆಕ್ರೋಶ ಸಾರ್ವಜನಿಕರಲ್ಲಿ ಮೂಡಿದೆ. ಇನ್ನು ಬಿಜೆಪಿ (BJP) ಪಾಲಿಗೆ ಲಿಂಗಾಯತರ (Lingayat) ಮತಗಳೇ ಅತಿ ದೊಡ್ಡ ಬಲವಾಗಿದೆ. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ (Chikmagalur Assembly Constituency) ಲಿಂಗಯಾತ ಮತದಾರರೇ ಪ್ರಬಲವಾಗಿದ್ದು, ಲಿಂಗಾಯತ ಮತದಾರರೆ ನಿರ್ಣಾಯಕವಾಗಿದ್ದಾರೆ. ಈಗ ಲಿಂಗಾಯಾತರೇ ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (CT Ravi) ವಿರುದ್ಧ ತಿರುಗಿ ಬಿದ್ದಿದ್ದಾರೆಂಬುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಹೌದು ಚಿಕ್ಕಮಗಳೂರು (Chikkamagaluru) ಜಿಲ್ಲೆ, ಚಿಕ್ಕಮಗಳೂರು ತಾಲೂಕಿನ ಉದ್ದೇಬೋರನಹಳ್ಳಿ ಗ್ರಾಮದ ಲಿಂಗಾಯತ ಮತದಾರರು ಶಾಸಕ‌ ಸಿ.ಟಿ ರವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಿಂಗಾಯತರ ಅಭಿವೃದ್ಧಿಗೆ ಶಾಸಕ ಸಿ.ಟಿ ರವಿ ಕೊಡುಗೆ ಏನು? ಇಷ್ಟು ವರ್ಷ ಎಲ್ಲಿ ಹೋಗಿದ್ರಿ? ಇವಾಗ ಗ್ರಾಮಕ್ಕೆ ಬಂದಿದ್ದೀರಾ? ನಮ್ಮ ಊರನ್ನು ಅಭಿವೃದ್ಧಿ ಮಾಡಲು ಸಿ.ಟಿ ‌ರವಿಗೆ 15 ವರ್ಷ ಶಾಸಕರಾದರು ಇನ್ನು ಸಾಕಾಗಲ್ವಾ? ಎಂದು ಶಾಸಕ ಸಿಟಿ ರವಿ ಪರವಾಗಿ ಗ್ರಾಮಕ್ಕೆ ತೆರಳಿದ್ದ, ಸಿಟಿ ರವಿ ಭಾಮೈದ ಸುದರ್ಶನ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪನಿಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಸಿಟಿ ರವಿ ಬಾಮೈದ ಸುದರ್ಶನ್ ಶಾಸಕ‌ ಸಿ.ಟಿ‌ ಪರ ಪ್ರಚಾರಕ್ಕೆ ಇಳಿದಿದ್ದಾರೆ.

ಕಾಂಗ್ರೆಸ್​ ಸೇರಿದ ಚಿಕ್ಕಮಗಳೂರು ಪ್ರಬಲ ಲಿಂಗಾಯತ ಮುಖಂಡ

ಚಿಕ್ಕಮಗಳೂರು ಲಿಂಗಾಯತ​ ಮುಖಂಡ, ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅತ್ಯಾಪ್ತ, ಬಿಜೆಪಿ ಜಿಲ್ಲಾ ಪ್ರಕೋಷ್ಟಗಳ ಸಂಯೋಜಕ ಹೆಚ್​. ಡಿ ತಿಮ್ಮಯ್ಯ ಬಿಜೆಪಿಗೆ ಗುಡ್​ ಬೈ ಹೇಳಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಫೆಬ್ರವರಿ 19 ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ನೇತೃತ್ವದಲ್ಲಿ ಹೆಚ್​.ಡಿ.ತಮ್ಮಯ್ಯ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.

ಇದನ್ನೂ ಓದಿ: ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ಮಾತ್ರ ಮಾತನಾಡಿದ್ದಾರೆ, ಜೆಡಿಎಸ್ ಸುದ್ದಿಗೆ ಹೋಗಿಲ್ಲ: ಡಿಕೆ ಶಿವಕುಮಾರ್

ಇನ್ನು ಹೆಚ್ ಡಿ ತಮ್ಮಯ್ಯ ಚಿಕ್ಕಮಗಳೂರು ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಮುಖಂಡರಾಗಿದ್ದಾರೆ. ಇದರಿಂದ ಬಿಜೆಪಿಗೆ ವರದಾನವಾಗಿತ್ತು. ಆದರೆ ಈಗ ಕಾಂಗ್ರೆಸ್​ ಸೇರ್ಪಡೆಯಿಂದ ಬಿಜೆಪಿಗೆ ಭಾರೀ ಹೊಡೆತ ಬೀಳುವ ಸಾಧ್ಯತೆ ಇದೆ. ಚಿಕ್ಕಮಗಳೂರಲ್ಲಿ 15 ಸಾವಿರ ಒಕ್ಕಲಿಗ ಮತವಿದ್ದು, 40 ಸಾವಿರಕ್ಕೂ ಹೆಚ್ಚು ಲಿಂಗಾಯತ ಸಮುದಾಯ ಮತಗಳಿವೆ. ಆದರೆ ಈಗ ತಮ್ಮಯ್ಯ ಕಾಂಗ್ರೆಸ್​ ಸೇರ್ಪಡೆಯಿಂದ ಬಿಜೆಪಿ ಪಾಲಿನ ಲಿಂಗಾಯತ ಮತ ಒಡೆಯುವ ಸಾಧ್ಯತೆ ಇದೆ.

ಚಿಕ್ಕಮಗಳೂರಲ್ಲಿ ಬಿಜೆಪಿ ಅಂದ್ರೆ ಸಿ. ಟಿ. ರವಿ. ಸಿ. ಟಿ. ರವಿ ಅಂದ್ರೆ ಬಿಜೆಪಿ ಎಂಬಂತಿತ್ತು. ಆದರೆ, ಈ ಬಾರಿ ಶಿಸ್ತಿನ ಪಕ್ಷದಲ್ಲಿ ಎಲ್ಲವೂ ಸರಿ ಇಲ್ವಾ ಎಂಬ ಪ್ರಶ್ನೆ ಮೂಡಿದೆ. 15 ವರ್ಷಗಳಿಂದ ಸಿ.ಟಿ.ರವಿಯ ಜೊತೆಗೆ ಇರುವ ಹೆಚ್. ಡಿ. ತಮ್ಮಯ್ಯ ಕಾಂಗ್ರೆಸ್ ಸೇರಿದ್ದು ಬಿಜೆಪಿಗರಿಗೆ ಚಕಿತ ಮೂಡಿಸಿದೆ. ಒಟ್ಟಾರೆ, ಚಿಕ್ಕಮಗಳೂರಲ್ಲಿ 20 ವರ್ಷದಿಂದ ನಾಲ್ಕು ಬಾರಿ ಗೆದ್ದು 5ನೇ ಬಾರಿಗೆ ಸಿಎಂ ಆಕಾಂಕ್ಷಿಯಾಗಿ ಚುನಾವಣೆ ಎದುರಿಸಲು ಸನ್ನದ್ಧರಾಗಿರುವ ಸಿ. ಟಿ. ರವಿಗೆ ಈಗ ಎದುರಾಳಿ ಹುಟ್ಟಿಕೊಂಡಿರೋದು ಬಿಜೆಪಿ ವಲಯದಲ್ಲಿ ತೀವ್ರ ಸಂಚಲನದ ಜೊತೆ ಆತಂಕ ಕೂಡ ಮೂಡಿಸಿದೆ.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:20 am, Tue, 14 March 23