AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬನ್ರೋ ನನ್ ಮಕ್ಳಾ ಯಾರು ಬರ್ತೀರೋ ಬನ್ನಿ; ಡಾ.ಜಿ.ಪರಮೇಶ್ವರ್ ಅಬ್ಬರದ ಭಾಷಣ

ಬನ್ರೋ ನನ್ ಮಕ್ಳಾ ಯಾರು ಬರ್ತೀರೋ ಬನ್ನಿ, ನಾನು ಹಠಕ್ಕೆ ಬಿದ್ದಿದ್ದೇನೆ, ನಿಮ್ಮಗಳ ಧೈರ್ಯ ನನಗೆ ಏನಾಗಲ್ಲ, ಯಾವ ಮೀಸೆಗೂ ನಾನು ಹೆದರೋಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಬಿಜೆಪಿ ಮುಖಂಡ ಅನಿಲ್ ಕುಮಾರ್​ಗೆ ಟಾಂಗ್​ ನೀಡಿದ ಡಾ.ಜಿ.ಪರಮೇಶ್ವರ್

ಬನ್ರೋ ನನ್ ಮಕ್ಳಾ ಯಾರು ಬರ್ತೀರೋ ಬನ್ನಿ;  ಡಾ.ಜಿ.ಪರಮೇಶ್ವರ್ ಅಬ್ಬರದ ಭಾಷಣ
ಡಾ.ಜಿ.ಪರಮೇಶ್ವರ್
Follow us
ಕಿರಣ್ ಹನುಮಂತ್​ ಮಾದಾರ್
|

Updated on:Mar 14, 2023 | 8:25 AM

ತುಮಕೂರು: ಬನ್ರೋ ನನ್ ಮಕ್ಳಾ ಯಾರು ಬರ್ತೀರೋ ಬನ್ನಿ, ನಾನು ಹಠಕ್ಕೆ ಬಿದ್ದಿದ್ದೇನೆ, ಮೊಂಡಿಗೆ ಬಿದ್ದಿದ್ದೇನೆ. ನಿಮ್ಮಗಳ ಧೈರ್ಯ ನನಗೆ ಏನಾಗಲ್ಲ, ಯಾವ ಮೀಸೆಗೂ ನಾನು ಹೆದರೋಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಬಿಜೆಪಿ ಮುಖಂಡ ಅನಿಲ್ ಕುಮಾರ್​ಗೆ ಡಾ.ಜಿ.ಪರಮೇಶ್ವರ್(G Parameshwara) ಟಾಂಗ್ ನೀಡಿದ್ದಾರೆ. ವಿಧಾನ ಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಹೇಗಾದರೂ ಮಾಡಿ ಈ ಬಾರಿ ಗೆಲ್ಲಲೇ ಬೇಕೇಂಬ ಆಸೆಯಿಂದ ಎಲ್ಲ ಪಕ್ಷದ ನಾಯಕರುಗಳು ಒಬ್ಬರ ಮೇಲೊಬ್ಬರು ಭಾಷಣದ ಮೂಲಕ ಕೇಸರೆರಚಾಟ ನಡೆಸಿದ್ದಾರೆ. ಅದರಂತೆ ಜಿಲ್ಲೆಯ ಕೊರಟಗೆರೆಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಬೆಂಬಲಿತ ಒಕ್ಕಲಿಗ ಮುಖಂಡರ ಸಮಾವೇಶದಲ್ಲಿ ಮಾಜಿ ಡಿಸಿಎಂ ಪರಮೇಶ್ವರ್ ಅಬ್ಬರದ ಭಾಷಣ ಮಾಡಿದ್ದಾರೆ. ಎಲ್ಲಾ ಸಮುದಾಯಗಳು ಪರಮೇಶ್ವರ್ ಬೇಕು ಎನ್ನುತ್ತಿದ್ದಾರೆ ಎಂದಿದ್ದಾರೆ.

ತುಮಕೂರು ಸಂಸದರೇ ಕೊರಟಗೆರೆ ಕ್ಷೇತ್ರಕ್ಕೆ ನಿಮ್ಮ ಅಭಿವೃದ್ದಿಯ ಕಾಣಿಕೆ ಏನು ಲೆಕ್ಕ ಕೊಡಿ. ಕೊರಟಗೆರೆ ಕ್ಷೇತ್ರದಲ್ಲಿ ನೀವು ಮಾಡಿರುವ ಒಂದು ಅಭಿವೃದ್ದಿಯ ಕಾಮಗಾರಿ ತೋರಿಸಿ. ಮೋದಿಯ ಹೆಸರಲ್ಲಿ ಮತ ಕೇಳುತ್ತಿರಾ, ಯಾಕೆ ನೀವು ನಿಮ್ಮ ಕ್ಷೇತ್ರದಲ್ಲಿ ಅಭಿವೃದ್ದಿಯ ಕೆಲಸವೇ ಮಾಡಿಲ್ಲವೇ ಎಂದು ಸಂಸದರಿಗೆ ಪ್ರಶ್ನೆ ಮಾಡಿದ್ದಾರೆ. ರಾಜ್ಯದಲ್ಲಿ ಅತ್ಯಂತ ಭ್ರಷ್ಟ ಸರ್ಕಾರ ಅಧಿಕಾರದಲ್ಲಿದೆ. ಇತಿಹಾಸದಲ್ಲಿ ಇಂತಹ ಸರ್ಕಾರ ನೋಡಿರಲಿಲ್ಲ ಎಂದು ಕೊರಟಗೆರೆ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ನಡೆದ ಒಕ್ಕಲಿಗರ ಸಮಾವೇಶದಲ್ಲಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:11 am, Tue, 14 March 23