AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 5,24,426 ಮನೆಗಳ ನಿರ್ಮಾಣ; ಸಚಿವ ವಿ.ಸೋಮಣ್ಣ

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಬರೊಬ್ಬರಿ 8,381 ಕೋಟಿ ಹಣದಲ್ಲಿ 5,24,426 ಮನೆಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ಕೊಟ್ಟಿದ್ದೇವೆ ಎಂದು ಬೆಂಗಳೂರಿನಲ್ಲಿ ವಸತಿ ಇಲಾಖೆ ಸಚಿವ ವಿ.ಸೋಮಣ್ಣ ಹೇಳಿದರು.

Bengaluru: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 5,24,426 ಮನೆಗಳ ನಿರ್ಮಾಣ; ಸಚಿವ ವಿ.ಸೋಮಣ್ಣ
ವಸತಿ ಇಲಾಖೆ ಸಚಿವ ವಿ. ಸೋಮಣ್ಣ
ಕಿರಣ್ ಹನುಮಂತ್​ ಮಾದಾರ್
|

Updated on:Mar 14, 2023 | 2:00 PM

Share

ಬೆಂಗಳೂರು: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ( Pradhan Mantri Gramin Awas Yojana) 5,24,426 ಮನೆಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ಕೊಟ್ಟಿದ್ದೇವೆ ಎಂದು ಬೆಂಗಳೂರಿನಲ್ಲಿ ವಸತಿ ಇಲಾಖೆ ಸಚಿವ ವಿ.ಸೋಮಣ್ಣ ಹೇಳಿದರು. ‘ಮನೆಗಳ ನಿರ್ಮಾಣಕ್ಕೆ ಬರೊಬ್ಬರಿ 8,381 ಕೋಟಿ ಖರ್ಚು ಮಾಡಲಾಗಿದೆ. ಬೊಮ್ಮಾಯಿ ಸಿಎಂ ಆದ ಬಳಿಕ 5 ಸಾವಿರ ಕೋಟಿ ಅನುದಾನ ಕೊಟ್ಟಿದ್ದು, 2 ಲಕ್ಷ ಫಲಾನುಭವಿಗಳನ್ನು ಗುರುತಿಸಿ ಮನೆಗಳನ್ನು ನೀಡಲಾಗಿದೆ. ಮಾರ್ಚ್​ ಒಳಗೆ 7 ಲಕ್ಷ ಫಲಾನುಭವಿಗಳನ್ನ ಗುರುತಿಸುವ ಕೆಲಸ ನಡೆಯುತ್ತಿದೆ ಎಂದರು.

5,000ಎಕರೆಗೂ ಹೆಚ್ಚು ಭೂಮಿಯನ್ನ ಗುರುತಿಸಿ, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಕಟ್ಟಲು ನಿರ್ಧಾರ ಮಾಡಲಾಗಿದೆ. ನೆರೆ ಸಂತ್ರಸ್ತರಿಗೆ 3,02,050 ಮನೆ ನಿರ್ಮಾಣಕ್ಕೆ 2,780 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಇನ್ನು 69,000 ಫಲಾನುಭವಿಗಳನ್ನು ದೇವರಾಜ ಅರಸು ಅಲೆಮಾರಿ ಯೋಜನೆಯಡಿ ಗುರುತಿಸಲಾಗಿದೆ. ವೃತ್ತಿ ಕುಶಲಕರ್ಮಿಗಳಿಗೆ ಮನೆಗಳ ನಿರ್ಮಾಣ ಕಾರ್ಯ ಈಗಾಗಲೇ ನಡಿಯುತ್ತಿದೆ. 2 BHK ನಿವಾಸ ಶೀಘ್ರವೇ ಪೂರ್ಣಗೊಳ್ಳಲಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.

ಇದನ್ನೂ ಓದಿ:ಸಂಧಾನ ಯಶಸ್ವಿ: ಅಂತಿಮವಾಗಿ ತಮ್ಮ ರಾಜಕೀಯ ನಿಲುವು ಪ್ರಕಟಿಸಿದ ಸೋಮಣ್ಣ, ಬಿಜೆಪಿ ನಾಯಕರಿಗಿದ್ದ ಆತಂಕ ದೂರ

ಮೂಲಭೂತ ಸೌಕರ್ಯ ವಿಚಾರವಾಗಿ ನಾನು ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮೊದಲು ಮನೆಗೆ 9ಲಕ್ಷ ವೆಚ್ಚ ತಗಲುತ್ತಿತ್ತು. SC, ST ಗ್ರಾಂಟ್ ಅಡಿಯಲ್ಲಿ ಕೆಲಸ ಮಾಡಲಾಗಿದ್ದು ಅವರಿಗೆ 6ಲಕ್ಷ ಹಾಗೂ ಇತರರಿಗೆ 6.5ಲಕ್ಷ ಆಗಲಿದೆ. ನಾವು ಯಾವುದೇ ಮೂಲಭೂತ ಸೌಕರ್ಯ ಇಲ್ಲದೆ ಮನೆ ಹಂಚುವುದಿಲ್ಲ. ಬಡವರಿಗೆ ಸೂರು ಕೊಡಲು ನಾವು ಮುಂದಾಗಿದ್ದೇವೆ ಎಂದರು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:00 pm, Tue, 14 March 23