ಬೆಂಗಳೂರು: ಲೊಕ್ಯಾಂಟೊ(Locanto) ಎನ್ನುವ ವೆಬ್ಸೈಟ್ನಲ್ಲಿ ಮಹಿಳೆಯರ ಪ್ರೊಫೈಲ್ ತೆರೆದು ಅಮಾಯಕ ಮಹಿಳೆಯರ ಫೋಟೊ ಮತ್ತು ಐಡಿ ಬಳಸಿ, ಮಹಿಳೆಯರಿಗೆ ಇಂತಿಷ್ಟು ಹಣ ಎಂದು ಫಿಕ್ಸ್ ಮಾಡಿ ಗ್ರಾಹಕರನ್ನ ಸೆಳೆಯುತ್ತಿದ್ದು, ಬಳಿಕ ಬಂದ ಗ್ರಾಹಕರರನ್ನು ಹೆದರಿಸಿ ಅವರಿಂದ ಹಣ ವಸೂಲಿ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಂಧಿತ ಅರೋಪಿಗಳಾದ ಮಂಜುನಾಥ್, ಮಲ್ಲಿಕಾರ್ಜುನಯ್ಯ, ಮಂಜುನಾಥ್, ಮೋಹನ್, ಹನುಮೇಶ್ ಮತ್ತು ರಾಜೇಶ್ ಎನ್ನುವವರು ಹಲವಾರು ಜನರಿಗೆ ಹೆದರಿಸಿ ಹಣ ವಸೂಲಿ ಮಾಡಿರುವುದು ಬೆಳಕಿಗೆ ಬಂದಿದೆ ಜೊತೆಗೆ ಮಹಿಳೆಯರ ಫೋಟೋ ಬಳಸಿರುವ ಬಗ್ಗೆಯು ಇದೀಗ ಪೊಲೀಸರು ತನಿಖೆ ನಡೆಸಲಿದ್ದಾರೆ.
ಬೆಂಗಳೂರಲ್ಲಿ ಅಕ್ರಮ ಸಂಬಂಧ ಒಪ್ಪದಿದ್ದಕ್ಕೆ ಮಹಿಳೆಗೆ ಚಾಕು ಇರಿತ
ಬೆಂಗಳೂರು: ಆರ್.ಟಿ.ನಗರದ ಶೇಖ್ ಮೆಹಬೂಬ್ ಎಂಬಾತನಿಂದ ಅಕ್ರಮ ಸಂಬಂಧ ಒಪ್ಪದಿದ್ದಕ್ಕೆ ಹಬೀಬಾತಾಜ್(30)ಎಂಬ ಮಹಿಳೆಗೆ ಚಾಕು ಇರಿದಿದ್ದಾನೆ. ಆರು ವರ್ಷದ ಹಿಂದೆ ಹಬೀಬಾ ತಾಜ್ ಪತಿ ಮೃತಪಟ್ಟಿದ್ದರು. ಸದ್ಯ ಇಬ್ಬರು ಮಕ್ಕಳ ಜೊತೆ ಜೀವನ ನಡೆಸುತ್ತಿದ್ದ ಹಬೀಬಾ ತಾಜ್ ಆಟೋ ಚಾಲಕ ಶೇಖ್ ಮೆಹಬೂಬ್ ಸ್ನೇಹ ಬೆಳೆಸಿದ್ದಳು. ನಂತರ ಅಟೋ ಚಾಲಕ ಶೇಖ್ ಮೆಹಬೂಬ್ಗೂ ಮದುವೆಯಾಗಿ ಮಕ್ಕಳಿದ್ದಾರೆ ಎಂಬ ವಿಷಯ ತಿಳಿದ ಮೇಲೆ ಹಬೀಬಾ ಶೇಖ್ ಮೆಹಬೂಬ್ನಿಂದ ದೂರವಾಗಲು ನಿರ್ಧರಿಸಿದ್ದಳು.
ಇದೇ ವಿಚಾರಕ್ಕೆ ನಿನ್ನೆ ರಾತ್ರಿ 12 ಗಂಟೆಗೆ ಮೆಹಬೂಬ್, ಹಬೀಬಾ ನಡುವೆ ಗಲಾಟೆ ಶುರುವಾಗಿದೆ. ಗಲಾಟೆ ವೇಳೆ ಶೇಖ್ ಮೆಹಬೂಬ್ ಹಬೀಬಾ ತಾಜ್ಗೆ ಚಾಕು ಇರಿದಿದ್ದಾನೆ. ಗಾಯಾಳು ಹಬೀಬಾ ತಾಜ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಆರೋಪಿ ಶೇಖ್ ಮೆಹಬೂಬ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ