ನನ್ನ ಮಗಳ ಶಾಲೆಯ ಮೇಲೂ ಕೇಸ್ ಹಾಕಿದ್ದಾರೆ, ಏನೇನು ತೊಂದರೆ ಕೊಡಬೇಕೋ ಕೊಡ್ತಾ ಇದಾರೆ: ಡಿ ಕೆ ಶಿ ಆಕ್ರೋಶ

| Updated By: ಸಾಧು ಶ್ರೀನಾಥ್​

Updated on: Jan 15, 2022 | 1:37 PM

ಇತ್ತೀಚಿನ ಪಾದಯಾತ್ರೆಯಲ್ಲಿ ತಮಿಳುನಾಡಿನಿಂದ ಬಂದ ಕಾರ್ಮಿಕರು ಕೆಲಸ ಮಾಡಿರುವ ವಿಚಾರವಾಗಿ ಸ್ಪಷ್ಟನೆ ರೂಪದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ಅವರು ತಮಿಳುನಾಡಿನವರು ನಮ್ಮ ಸೋದರರು. ಅವರು ನಮ್ಮ ಸ್ನೇಹಿತರು. ನಾವು ಭಾರತದಲ್ಲಿ ಬದುಕುತ್ತಿದ್ದೇವೆ ಎಂದು ಹೆಚ್​ಡಿ ಕುಮಾರಸ್ವಾಮಿಗೆ ತಿರಗೇಟು ನೀಡಿದರು. ಕುಮಾರಸ್ವಾಮಿ ಬಳಿ ಹೊರರಾಜ್ಯದವರು ಕೆಲಸ ಮಾಡುತ್ತಿಲ್ಲವೇ? ಏನೋ ಬಾಯಿ ಚಪಲಕ್ಕೆ ಮಾತನಾಡ್ತಾರೆ ಮಾತನಾಡಲಿ ಬಿಡಿ, ಅವರು ದೊಡ್ಡವರು ಎಂದು ಶಿವಕುಮಾರ್ ಹೇಳಿದರು.

ನನ್ನ ಮಗಳ ಶಾಲೆಯ ಮೇಲೂ ಕೇಸ್ ಹಾಕಿದ್ದಾರೆ, ಏನೇನು ತೊಂದರೆ ಕೊಡಬೇಕೋ ಕೊಡ್ತಾ ಇದಾರೆ: ಡಿ ಕೆ ಶಿ ಆಕ್ರೋಶ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
Follow us on

ಬೆಂಗಳೂರು: ಮೇಕೆದಾಟು ಯೋಜನೆ ಬೇಡ, ಅರಣ್ಯ ನಾಶ ಆಗುತ್ತದೆ ಎಂದು ಪರಿಸರವಾದಿ ಮೇಧಾ ಪಾಟ್ಕರ್ ಹೇಳಿರುವ ವಿಚಾರಕ್ಕೆ ಸಂಬಂಧಿಸಿ (KPCC president) ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು ಆ ಹೆಣ್ಣಮಗಳು ಅವರದ್ದೆ ಆದ ಹೋರಾಟ ಮಾಡುತ್ತಿದ್ದಾರೆ. ನಾವು ಜನರಿಗಾಗಿ ಹೋರಾಟ ಮಾಡುತ್ತಿದ್ದೇವೆ. ಜನರ ಬದುಕಿಗಾಗಿ‌ ಮಾಡುತ್ತಿದ್ದೇವೆ. ಅವರ ಅಭಿಪ್ರಾಯ ಅವರಿಗೆ; ಮೇಧಾ ಪಾಟ್ಕರ್ ಏನಾದ್ರು ಮಾಡ್ಕೊಳ್ಳಲಿ, ಸರ್ಕಾರದವರು ಅದಕ್ಕೆ ಉತ್ತರ ಕೊಡಲಿ. ಈ ಪ್ರೊಜೆಕ್ಟ್ ನಿಂದ ನಮ್ಮ ತಾಲ್ಲೂಕಿಗೆ ಎಷ್ಟು ಲಾಸ್ ಆಗ್ತಿದೆ ಗೊತ್ತಾ? ನಮ್ಮ ಜಮೀನು ಕಳೆದುಕೊಳ್ತೀವಿ. ದಮ್ ಕಟ್ಟಿಕೊಂಡು ಸುಮ್ಮನಿದ್ದೇವೆ. ನನ್ನ ಕ್ಷೇತ್ರದ ಜನರು ಭೂಮಿ ಕಳೆದುಕೊಳ್ಳತ್ತಾರೆ. ಆದರೆ ಕುಡಿಯುವ ನೀರು ಬೇಕು. ನನ್ನ ಕ್ಷೇತ್ರದ ಜನರಿಗೆ ಆ ಮೇಲೆ ಹಣ ಕೊಡಿಸುವುದಕ್ಕೆ ಪ್ರಯತ್ನ ಮಾಡ್ತೇವೆ ಎಂದಿದ್ದಾರೆ. ಇನ್ನು ಮೇಕೆದಾಟು ಯೋಜನೆ (mekedatu padayatre) ಬದಲು, ಬೆಂಗಳೂರಿನಲ್ಲಿ ಕೆರೆ ಅಭಿವೃದ್ಧಿ ಮಾಡುವ ವಿಚಾರವಾಗಿ ಸರ್ಕಾರವೇ ಒಂದು ಸಮಿತಿ ರಚನೆ ಮಾಡಲಿ ಎಂದೂ (dk shivakumar) ಹೇಳಿದ್ದಾರೆ.

ನಮ್ಮ ವಿರುದ್ದ ಮಾತ್ರ ಕೇಸ್ ಹಾಕಿದ್ದಾರೆ. ಬಿಜೆಪಿ ನಾಯಕರ ವಿರುದ್ದ ಏಕೆ ಕೇಸ್ ಹಾಕಿಲ್ಲ. ನಾವು ಕೋರ್ಟ್ ನಲ್ಲಿ ಈ ಬಗ್ಗೆಯೂ ಹೋರಾಡುತ್ತೇವೆ. ಕೇವಲ ಸರ್ಕಾರ ಅಲ್ಲ ಅಧಿಕಾರಿಗಳನ್ನ ಟಾರ್ಗೇಟ್ ಮಾಡ್ತೇವೆ. ಸರ್ಕಾರ ಎಚ್ಚೆತ್ತು ಎಲ್ಲರನ್ನೂ ಸಮಾನವಾಗಿ ನೋಡದೇ ಇದ್ರೆ ಸರಿ ಇಲ್ಲ. ಕಾಲ ಬರುತ್ತದೆ.. ಈಗ ಅದ್ಯಾವುದೋ ಹಳೇ ಹಳೇ ಕೇಸ್ ಓಪನ್ ಮಾಡಿದಾರೆ. ಆ ಕಾಲ ಬಂದೇ ಬರುತ್ತೆ.. ಆಗ…ನನ್ನ ಮೇಲೆ ಯಾವ ಯಾವ ಪ್ರಯೋಗ ಮಾಡಬೇಕೋ ಅದೆಲ್ಲವನ್ನ ಮಾಡ್ತಾ ಇದಾರೆ. ಎಲ್ಲವನ್ನು ಎದುರಿಸುತ್ತೇನೆ. ಏನೇನು ಬೇಕೋ ಎಲ್ಲವನ್ನ ಮಾಡ್ತಾ ಇದಾರೆ. ನಾನು ಮುಂದಿನ ದಿನಗಳಲ್ಲಿ ಐಟಿ ಇಡಿ ಸೇರಿದಂತೆ ಎಲ್ಲಾ ವಿಚಾರಗಳ ಬಗ್ಗೆ ಸಾಕ್ಷಿ ಸಮೇತ ಮಾತನಾಡ್ತಿನಿ. ಆ ಸಮಯ ಹತ್ತಿರ ಬರ್ತಾ ಇದೆ. ನನ್ನ ಮಗಳು ಶಾಲೆ ನಡೆಸುತ್ತಿದ್ದಾಳೆ. ಅದರ ಮೇಲೂ ಕೇಸ್ ಹಾಕಿದ್ದಾರೆ. ಹೀಗೆ ಏನೇನು ತೊಂದರೆ ಕೊಡಬೇಕೋ ಕೊಡ್ತಾ ಇದಾರೆ ಎಂದು ಡಿ ಕೆ ಶಿವಕುಮಾರ್ ಮಾರ್ಮಿಕವಾಗಿ ಹೇಳಿದರು.

ಇತ್ತೀಚಿನ ಪಾದಯಾತ್ರೆಯಲ್ಲಿ ತಮಿಳುನಾಡಿನಿಂದ ಬಂದ ಕಾರ್ಮಿಕರು ಕೆಲಸ ಮಾಡಿರುವ ವಿಚಾರವಾಗಿ ಸ್ಪಷ್ಟನೆ ರೂಪದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ಅವರು ತಮಿಳುನಾಡಿನವರು ನಮ್ಮ ಸೋದರರು. ಅವರು ನಮ್ಮ ಸ್ನೇಹಿತರು. ನಾವು ಭಾರತದಲ್ಲಿ ಬದುಕುತ್ತಿದ್ದೇವೆ ಎಂದು ಹೆಚ್​ಡಿ ಕುಮಾರಸ್ವಾಮಿಗೆ ತಿರಗೇಟು ನೀಡಿದರು. ಕುಮಾರಸ್ವಾಮಿ ಬಳಿ ಹೊರರಾಜ್ಯದವರು ಕೆಲಸ ಮಾಡುತ್ತಿಲ್ಲವೇ? ಏನೋ ಬಾಯಿ ಚಪಲಕ್ಕೆ ಮಾತನಾಡ್ತಾರೆ ಮಾತನಾಡಲಿ ಬಿಡಿ, ಅವರು ದೊಡ್ಡವರು ಎಂದು ಶಿವಕುಮಾರ್ ಹೇಳಿದರು. ಶಿವಕುಮಾರ್ ಬೇಲ್ ಮೇಲೆ ಹೊರಗಿದ್ದಾರೆ ಎಂಬ ವಿಚಾರ ಪ್ರಸ್ತಾಪಿಸಿದಾಗ ಯಡಿಯೂರಪ್ಪ ಯಾವುದರ ಮೇಲೆ ಇದ್ದಿದ್ದರಂತೆ ಎಂದು ಡಿಕೆಶಿ ಚಾಟಿ ಬೀಸಿದ್ದಾರೆ.

ಮೇಕೆದಾಟು ಪಾದಯಾತ್ರೆ ಮುಂದುವರಿಸುವ ವಿಚಾರವಾಗಿ ಸರ್ಕಾರ ಸ್ವಲ್ಪ ನಿಯಮ ಸಡಿಲಿಸಲಿ, 50 ಜನಕ್ಕೆ ಅನುಮತಿ ಕೊಟ್ಟರೂ ಸರಿಯೇ. 100 ಜನಕ್ಕಾದರೂ ಸರಿಯೇ. ನಾವು ಪಾದಯಾತ್ರೆ ಮತ್ತೆ ಮಾಡ್ತೇವೆ ಎಂದರು.

ಅಧಿಕಾರಿಗಳ ಕಾರ್ಯವೈಖರಿಗೆ ಎಚ್ಚರಿಕೆ ನೀಡಿದ ಡಿ.ಕೆ. ಶಿವಕುಮಾರ್ ನಮ್ಮ ವಿರುದ್ಧ ಮಾತ್ರ ಪ್ರಕರಣ ದಾಖಲು ಮಾಡಿದ್ದಾರೆ. ಬಿಜೆಪಿ ನಾಯಕರ ವಿರುದ್ಧ ಏಕೆ ಪ್ರಕರಣ ದಾಖಲು ಮಾಡಿಲ್ಲ. ನಾವು ಕೋರ್ಟ್​ನಲ್ಲಿ ಈ ಬಗ್ಗೆಯೂ ಹೋರಾಡುತ್ತೇವೆ. ಕೇವಲ ಸರ್ಕಾರ ಅಲ್ಲ ಅಧಿಕಾರಿಗಳನ್ನ ಟಾರ್ಗೆಟ್ ಮಾಡ್ತೇವೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎಚ್ಚರಿಸಿದರು.

ಸರ್​.. 5 ದಿನ ಪಾದಯಾತ್ರೆಯಲ್ಲಿ ನಡೆದು ನಡೆದು ಸುಸ್ತಾಗ್ಬುಟ್ರಾ ಅಂದ್ರೆ.. | DKS|Tv9kannada

ಇದನ್ನೂ ಓದಿ:

Anitha Kumaraswamy: ಶಾಸಕಿ ಅನಿತಾ ಕುಮಾರಸ್ವಾಮಿಗೆ ಕೊರೊನಾ ಪಾಸಿಟಿವ್

Published On - 1:08 pm, Sat, 15 January 22