‘ಆನ್‌ಲೈನ್ ಕ್ಲಾಸ್‌ನಿಂದ ಶ್ರೀಮಂತರ ಮಕ್ಕಳು ಕಲಿಯುತ್ತಾರೆ, ಬಡವರ ಮಕ್ಕಳು ಕಲಿಕೆಯಿಂದ ದೂರ ಉಳಿಯುತ್ತಾರೆ’
ಈಗಿನ ಕೊರೊನಾ ವೈರಸ್ ಬಹಳ ಗಂಭೀರವಾಗಿಲ್ಲ. ಶಾಲೆಗಳಿಗೆ ಬಿಡುವು ಕೊಟ್ಟರೆ ಮಕ್ಕಳ ಬದುಕು ಹಾಳಾಗುತ್ತೆ ಎಂದು ಅಂತರ ಕಾಪಾಡಿಕೊಂಡು ಶಾಲೆ ನಡೆಸಲು ಹೊರಟ್ಟಿ ಸಲಹೆ ನೀಡಿದ್ದಾರೆ.
ಬೆಂಗಳೂರು: ಆನ್‌ಲೈನ್ ಶಿಕ್ಷಣ ಸರಿಯಲ್ಲ. ಆನ್‌ಲೈನ್ ಶಿಕ್ಷಣ ನಗರ ಪ್ರದೇಶಗಳಿಗೆ ಸೂಕ್ತವಾಗುತ್ತೆ. ಗ್ರಾಮೀಣ ಭಾಗದ ಮಕ್ಕಳಿಗೆ ಇದರಿಂದ ಅನುಕೂಲವಿಲ್ಲ. ನೆಟ್‌ವರ್ಕ್ ಸಮಸ್ಯೆ, ವಿದ್ಯುತ್ ಇರಲ್ಲ, ಮೊಬೈಲ್ ಇರಲ್ಲ. ಹೀಗೆ ಹಲವು ಸಮಸ್ಯೆಗಳು ಇರುವುದರಿಂದ ಸರಿಯಾಗಲ್ಲ. ಆನ್‌ಲೈನ್ ಕ್ಲಾಸ್‌ನಿಂದ ಶ್ರೀಮಂತ ಮಕ್ಕಳು ಕಲಿಯುತ್ತಾರೆ. ಬಡವರ ಮಕ್ಕಳು ಕಲಿಕೆಯಿಂದ ದೂರ ಉಳಿಯುತ್ತಾರೆ ಎಂದು ಬೆಂಗಳೂರಿನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಶನಿವಾರ ಹೇಳಿಕೆ ನೀಡಿದ್ದಾರೆ.
ಕೆಲ ಜಿಲ್ಲೆಗಳಲ್ಲಿ 1ರಿಂದ 9ನೇ ತರಗತಿವರೆಗೆ ರಜೆ ಹಿನ್ನೆಲೆ ರಜೆ ನೀಡಿರುವುದಕ್ಕೆ ಕೂಡ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ. ಈಗಿನ ಕೊರೊನಾ ವೈರಸ್ ಬಹಳ ಗಂಭೀರವಾಗಿಲ್ಲ. ಶಾಲೆಗಳಿಗೆ ಬಿಡುವು ಕೊಟ್ಟರೆ ಮಕ್ಕಳ ಬದುಕು ಹಾಳಾಗುತ್ತೆ ಎಂದು ಅಂತರ ಕಾಪಾಡಿಕೊಂಡು ಶಾಲೆ ನಡೆಸಲು ಹೊರಟ್ಟಿ ಸಲಹೆ ನೀಡಿದ್ದಾರೆ. 1ರಿಂದ 5ನೇ ತರಗತಿವರೆಗೆ ಬೇಕಾದರೆ ಶಾಲೆ ಬಂದ್ ಮಾಡಿ ಎಂದು 6ನೇ ತರಗತಿಯಿಂದ ಶಾಲೆ ಪ್ರಾರಂಭ ಮಾಡಲು ಸಲಹೆ ಕೊಟ್ಟಿದ್ದಾರೆ. ವಿದ್ಯಾಗಮ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಸಕಾಂಗ, ಕಾರ್ಯಾಂಗವನ್ನು ಬೇರೆ ಮಾಡಬೇಕು. ವಿಧಾನಸೌಧ ಇರುವುದು ಶಾಸಕಾಂಗಕ್ಕೆ ಮಾತ್ರ. ಕಾರ್ಯಾಂಗ ಎಂ.ಎಸ್. ಬಿಲ್ಡಿಂಗ್‌ಗೆ ಶಿಫ್ಟ್ ಮಾಡಲಿ ಎಂದು ಸಭಾಪತಿ ಹೊರಟ್ಟಿ ಆಗ್ರಹ ವ್ಯಕ್ತಪಡಿಸಿದ್ಧಾರೆ. ನಮಗೆ ಕೊಠಡಿ ನೀಡಿ ಎಂದು ಕೇಳುವ ಪರಿಸ್ಥಿತಿ ಇದೆ. ಡಿಪಿಎಆರ್‌ನವರಿಗೆ ನಾವು ಕೇಳಬೇಕಾಗಿದೆ. ಚಿಕ್ಕ ಕೊಠಡಿಯಲ್ಲಿ 30 ಜನ ಸಿಬ್ಬಂದಿ ಕೂರುತ್ತಾರೆ. ಕೊವಿಡ್ ಸಂದರ್ಭದಲ್ಲಿ ಇದು ಸರಿಯಾಗುತ್ತಾ? ರೂಂ ನೀಡಲು DPAR ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ. ಏನು ಮಾಡುತ್ತಾರೆಂದು ನೋಡಬೇಕಾಗಿದೆ ಎಂದು ಹೊರಟ್ಟಿ ಹೇಳಿದ್ದಾರೆ. ನಾವು ಆರ್ಡರ್ ಮಾಡಬೇಕು ಆದರೆ ಆ ಸ್ಥಿತಿ ಇಲ್ಲ. ನಾವು ಮನವಿ ಮಾಡುವ ಪರಿಸ್ಥಿತಿ ಇದೆ ಎಂದು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ: ಆನ್‌ಲೈನ್ ವ್ಯಸನದಿಂದ ಬಾಲಕ ಆತ್ಮಹತ್ಯೆ; ಆನ್‌ಲೈನ್ ಗೇಮ್ ನಿಯಂತ್ರಿಸಲು ಕಾನೂನು ರೂಪಿಸಿದ ಮಧ್ಯಪ್ರದೇಶ ಸರ್ಕಾರ
ಇದನ್ನೂ ಓದಿ: ಕೊರೊನಾ ಸೋಂಕು ಹೆಚ್ಚಳ: ಧಾರವಾಡ, ಹುಬ್ಬಳ್ಳಿ ತಾಲ್ಲೂಕಿನ ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ