ಆನ್‌ಲೈನ್ ವ್ಯಸನದಿಂದ ಬಾಲಕ ಆತ್ಮಹತ್ಯೆ; ಆನ್‌ಲೈನ್ ಗೇಮ್‌ ನಿಯಂತ್ರಿಸಲು ಕಾನೂನು ರೂಪಿಸಿದ ಮಧ್ಯಪ್ರದೇಶ ಸರ್ಕಾರ

ಸೂರ್ಯಾಂಶ್ ತಂದೆ ನೇತ್ರ ತಜ್ಞರಾದ ಯೋಗೇಶ್ ಓಜಾ ಪ್ರಕಾರ ತನ್ನ ಮಗ ಫೈರ್ ಫಾಲ್ ಎಂಬ ಆನ್‌ಲೈನ್ ಗೇಮ್‌ಗೆ ವ್ಯಸನಿಯಾಗಿದ್ದ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಹೆಚ್ಚುವರಿ ಪೊಲೀಸ್ ಕಮಿಷನರ್ ಸಚಿನ್ ಅತುಲ್ಕರ್ ಪ್ರಕಾರ, ಸೂರ್ಯಾಂಶ್ ಮೊಬೈಲ್ ಫೋನ್‌ಗಳಲ್ಲಿ ನಿರಂತರವಾಗಿ ಆನ್‌ಲೈನ್ ಆಟಗಳನ್ನು ಆಡುತ್ತಿದ್ದ.

ಆನ್‌ಲೈನ್ ವ್ಯಸನದಿಂದ ಬಾಲಕ ಆತ್ಮಹತ್ಯೆ; ಆನ್‌ಲೈನ್ ಗೇಮ್‌ ನಿಯಂತ್ರಿಸಲು ಕಾನೂನು ರೂಪಿಸಿದ ಮಧ್ಯಪ್ರದೇಶ ಸರ್ಕಾರ
ನರೋತ್ತಮ್ ಮಿಶ್ರಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jan 13, 2022 | 9:09 PM

ಭೋಪಾಲ್: ಮಧ್ಯಪ್ರದೇಶದ (Madhya Pradesh) ಬಜಾರಿಯಾ ಪ್ರದೇಶದಲ್ಲಿ ಆನ್‌ಲೈನ್ ಗೇಮಿಂಗ್‌ಗೆ(online gaming) ವ್ಯಸನಿಯಾಗಿದ್ದ 11 ವರ್ಷದ ಬಾಲಕ ಆತ್ಮಹತ್ಯೆಯಿಂದ ಸಾವನ್ನಪ್ಪಿದ ಒಂದು ದಿನದ ನಂತರ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ (Narottam Mishra) ಅವರು ಆನ್‌ಲೈನ್ ಗೇಮಿಂಗ್ ಅನ್ನು ನಿಯಂತ್ರಿಸಲು ಸರ್ಕಾರವು ಕಾನೂನನ್ನು ತರುತ್ತಿದೆ ಎಂದು ಹೇಳಿದರು. ಇದು ತುಂಬಾ ಗಂಭೀರವಾದ ಸಮಸ್ಯೆಯಾಗಿದೆ, ಈ ಆತ್ಮಹತ್ಯೆಗಳು ಆನ್‌ಲೈನ್ ಗೇಮಿಂಗ್‌ಗೆ ಸಂಬಂಧಿಸಿವೆ. ಇಂತಹ ಘಟನೆಗಳನ್ನು ತಡೆಗಟ್ಟಲು, ನಾವು ಮಧ್ಯಪ್ರದೇಶದಲ್ಲಿ ಆನ್‌ಲೈನ್ ಗೇಮಿಂಗ್ ಅನ್ನು ನಿಯಂತ್ರಿಸುವ ಕಾಯಿದೆಯನ್ನು ತರುತ್ತಿದ್ದೇವೆ. ಕಾನೂನಿನ ಕರಡನ್ನು ಸಿದ್ಧಪಡಿಸಲಾಗಿದೆ ಮತ್ತು ನಾವು ಅದನ್ನು ಶೀಘ್ರದಲ್ಲೇ ಅಂತಿಮಗೊಳಿಸುತ್ತೇವೆ ಎಂದು ಮಿಶ್ರಾ ಗುರುವಾರ ಸುದ್ದಿಗಾರರಿಗೆ ತಿಳಿಸಿದರು. ಬುಧವಾರ ಮಧ್ಯಾಹ್ನ ಅವಧಪುರಿಯ ಸೇಂಟ್ ಕ್ಸೇವಿಯರ್ ಶಾಲೆಯ 5 ನೇ ತರಗತಿ ವಿದ್ಯಾರ್ಥಿ ಸೂರ್ಯಾಂಶ್ ಓಜಾ, ಶಾಕಾಚಾರ್ಯ ನಗರದಲ್ಲಿರುವ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬಾಲಕನನ್ನು ಉಳಿಸಲಾಗಲಿಲ್ಲ.

ಸೂರ್ಯಾಂಶ್ ತಂದೆ ನೇತ್ರ ತಜ್ಞರಾದ ಯೋಗೇಶ್ ಓಜಾ ಪ್ರಕಾರ ತನ್ನ ಮಗ ಫೈರ್ ಫಾಲ್ ಎಂಬ ಆನ್‌ಲೈನ್ ಗೇಮ್‌ಗೆ ವ್ಯಸನಿಯಾಗಿದ್ದ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಹೆಚ್ಚುವರಿ ಪೊಲೀಸ್ ಕಮಿಷನರ್ ಸಚಿನ್ ಅತುಲ್ಕರ್ ಪ್ರಕಾರ, ಸೂರ್ಯಾಂಶ್ ಮೊಬೈಲ್ ಫೋನ್‌ಗಳಲ್ಲಿ ನಿರಂತರವಾಗಿ ಆನ್‌ಲೈನ್ ಆಟಗಳನ್ನು ಆಡುತ್ತಿದ್ದ. ಕಲಿಕೆಗಿಂತ ಆನ್‌ಲೈನ್ ಗೇಮಿಂಗ್ ವ್ಯಸನ ಜಾಸ್ತಿ ಆದಾಗ ಅವರ ಪೋಷಕರು ಫೋನ್‌ನಿಂದ ಆಟವನ್ನು ಅಳಿಸಿದ್ದಾರೆ. “ಆದಾಗ್ಯೂ, ಸೂರ್ಯಾಂಶು ಅವರಿಗೆ ತಿಳಿಯದೆ ಅದೇ ಗೇಮ್​​ನ್ನು ಮತ್ತೊಂದು ಸೆಲ್ ಫೋನ್‌ನಲ್ಲಿ ಇನ್ ಸ್ಟಾಲ್ ಮಾಡಿ ಆಟ ಮುಂದುವರೆಸಿದ್ದಾನೆ.  ಗೇಮ್‌ನ ಆಡ್-ಆನ್ ವೈಶಿಷ್ಟ್ಯಗಳನ್ನು ಖರೀದಿಸಲು ಸೂರ್ಯಾಂಶ್ ಸುಮಾರು ರೂ6,000 ಅನ್ನು ತಮ್ಮ ಅರಿವಿಲ್ಲದೆ ತೆಗೆದುಕೊಂಡಿದ್ದಾನೆ ಎಂದು ಅವರ ಪೋಷಕರು ಹೇಳಿರುವುದಾಗಿ ಎಂದು ಅತುಲ್ಕರ್ ಹೇಳಿದ್ದಾರೆ.

ಸೂರ್ಯಾಂಶ್ ಅವರ ಸೋದರ ಸಂಬಂಧಿ ಆಯುಷ್ ಪ್ರಕಾರ, ಅವರು ತಮ್ಮ ಮನೆಯ ಎರಡನೇ ಮಹಡಿಯಲ್ಲಿ ಚಲನಚಿತ್ರವನ್ನು ವೀಕ್ಷಿಸುತ್ತಿದ್ದರು. ಕೆಲವು ನಿಮಿಷಗಳ ನಂತರ, ನಾನು  ಸೂರ್ಯಾಂಶ್​​ನನ್ನು ಬಿಟ್ಟು ಕೆಳಕ್ಕೆ ಹೋದೆ. ಆಯುಷ್ ಇತರ ಮಕ್ಕಳೊಂದಿಗೆ ಕಟ್ಟಡದ ಟೆರೇಸ್‌ಗೆ ಹಿಂತಿರುಗಿದಾಗ, ಪಂಚಿಂಗ್ ಬ್ಯಾಗ್‌ಗಳನ್ನು ನೇತುಹಾಕಲು ಬಳಸುವ ಹಗ್ಗದಿಂದ ಸೂರ್ಯಾಂಶ್ ನೇತಾಡುತ್ತಿರುವುದು ಕಂಡುಬಂದಿದೆ.  ಬಜಾರಿಯಾ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ, ಆದರೆ ಯಾವುದೇ ಆತ್ಮಹತ್ಯಾ ಟಿಪ್ಪಣಿ ಪತ್ತೆಯಾಗಿಲ್ಲ.

ಇದನ್ನೂ ಓದಿ: ಗಣರಾಜ್ಯೋತ್ಸವ ಪರೇಡ್​​ಗೆ ಕೇರಳದ ಜಟಾಯುಪಾರ ಮತ್ತು ಶ್ರೀ ನಾರಾಯಣ ಗುರು ಸ್ತಬ್ಧ ಚಿತ್ರ ತಿರಸ್ಕರಿಸಿದ ಕೇಂದ್ರ

Published On - 9:08 pm, Thu, 13 January 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ