AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಪೊಲೀಸರ ಸೋಗಿನಲ್ಲಿ ಬಂದು ನಗದು, ಚಿನ್ನಾಭರಣ ಹೊತ್ತೊಯ್ದಿದ್ದ ಗ್ಯಾಂಗ್ ಅರೆಸ್ಟ್

ಮನೆಗೆ ನುಗ್ಗಿದ್ದ ಆರೋಪಿಗಳು ನಾವು ತಿಪಟೂರು ಪೊಲೀಸರು ನಿಮ್ಮ ಮನೆ ಸರ್ಚ್ ಮಾಡ್ಬೆಕು ಎಂದಿದ್ದರು. ಮನೆಯವರಿಗೆ ಗನ್ ಹಾಗೂ ಚಾಕು ತೋರಿಸಿ ಸುಮ್ಮನೆ ಕೂರುವಂತೆ ವಾರ್ನ್ ಮಾಡಿದ್ರು. ಕಳ್ಳ ಎಂದು ಓರ್ವನನ್ನು ಕರೆದುಕೊಂಡು ಬಂದಿದ್ರು.

ಬೆಂಗಳೂರು: ಪೊಲೀಸರ ಸೋಗಿನಲ್ಲಿ ಬಂದು ನಗದು, ಚಿನ್ನಾಭರಣ ಹೊತ್ತೊಯ್ದಿದ್ದ ಗ್ಯಾಂಗ್ ಅರೆಸ್ಟ್
ಬಂಧಿತ ಆರೋಪಿಗಳು
TV9 Web
| Edited By: |

Updated on:Jan 15, 2022 | 1:07 PM

Share

ಬೆಂಗಳೂರು: ನಾವು ಪೊಲೀಸರು (Police) ಎಂದು ಹೇಳಿ ಮನೆಯಲ್ಲಿದ್ದ ಹಣ, ಒಡವೆ ತೆಗೆದುಕೊಂಡು ಪರಾರಿಯಾಗಿದ್ದ ಗ್ಯಾಂಗ್​ನ ಪೊಲೀಸರು ಬಂಧಿಸಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ. ಕಳೆದ ಡಿಸೆಂಬರ್ 31 ರಂದು ಮಹಾಲಕ್ಷ್ಮಿ ಲೇಔಟ್ (mahalakshmi layout) ಬಳಿಯ ಭೋವಿಪಾಳ್ಯದಲ್ಲಿ ಸಮಯ ನಾಯ್ಕ್ ಎಂಬುವವರ ಮನೆಗೆ ಪೊಲೀಸರ ನೆಪದಲ್ಲಿ ಗುಂಪೊಂದು ನುಗ್ಗಿತ್ತು. ಈ ವೇಳೆ ಪೊಲೀಸರು ಅಂತ ನಂಬಿಸಿ ಮನೆಯಲ್ಲಿದ್ದ 19 ಲಕ್ಷ ನಗದು ಹಣ, 500 ಗ್ರಾಂ ಚಿನ್ನಾಭರಣವನ್ನು ತೆಗೆದುಕೊಂಡು ಹೋಗಿದ್ದರು.

ಮನೆಗೆ ನುಗ್ಗಿದ್ದ ಆರೋಪಿಗಳು ನಾವು ತಿಪಟೂರು ಪೊಲೀಸರು ನಿಮ್ಮ ಮನೆ ಸರ್ಚ್ ಮಾಡ್ಬೆಕು ಎಂದಿದ್ದರು. ಮನೆಯವರಿಗೆ ಗನ್ ಹಾಗೂ ಚಾಕು ತೋರಿಸಿ ಸುಮ್ಮನೆ ಕೂರುವಂತೆ ವಾರ್ನ್ ಮಾಡಿದ್ರು. ಕಳ್ಳ ಎಂದು ಓರ್ವನನ್ನು ಕರೆದುಕೊಂಡು ಬಂದಿದ್ರು. ಆ ಕಳ್ಳ ಕಳ್ಳತನ ಮಾಡಿದ್ದ ಹಣ ಮತ್ತು ಬಂಗಾರ ಇಲ್ಲೆ ಕೊಟ್ಟಿದ್ದಾನೆ ಎಂದು ಹೇಳಿದ್ದ. ಬಳಿಕ ಫೋನ್ಗಳನ್ನ ಕಿತ್ತುಕೊಂಡು ಎರಡು ಘಂಟೆಗಳ ಕಾಲ ಮನೆ ಸರ್ಚ್ ಮಾಡಿದ್ದರು.

ಮನೆಯಲ್ಲಿದ್ದ 19 ಲಕ್ಷ ನಗದು ಹಣ, 500 ಗ್ರಾಂ ಚಿನ್ನಾಭರಣ ಪೊಲೀಸರಂತೆ ಜಪ್ತಿ ಮಾಡಿದ್ರು. ಠಾಣೆಗೆ ಕರೆದಾಗ ಬರಬೇಕು, ಜಫ್ತಿ ಮಾಡಿದ ಹಣ, ಒಡವೆ ಸ್ಟೇಷನ್ಗೆ ಬಂದು ಬಿಡಿಸಿಕೊಳ್ಳಿ ಎಂದಿದ್ದರು. ಪೊಲೀಸ್ ಠಾಣೆಗೆ ತೆರಳಿ ವಿಚಾರಿಸಿದಾಗ ನಕಲಿ ಪೊಲೀಸರು ಧರೋಡೆ ಮಾಡಿರುವುದು ಬೆಳಕಿಗೆ ಬಂದಿದೆ. ಕೃತ್ಯದಲ್ಲಿ ಭಾಗಿ ಅಗಿದ್ದ ಇಬ್ಬರು ರೌಡಿ ಶೀಟರ್ ಸೇರಿ ಒಟ್ಟು ಐವರು ಅರೋಪಿಗಳನ್ನ ಬಂಧಿಸಲಾಗಿದೆ.

ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ಆರೋಪಿಗಳನ್ನ ಅರೆಸ್ಟ್ ಮಾಡಿ 19 ಲಕ್ಷ ನಗದು ಹಣ, 500 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ

ಇದನ್ನೂ ಓದಿ

ತಂದೆಗೆ ವ್ಯಾಕ್ಸಿನ್​​ ಕೊಡಿಸಲು 6 ಗಂಟೆಗಳ ಕಾಲ ಬೆನ್ನಿನ ಮೇಲೆ ಹೊತ್ತೊಯ್ದ ಯುವಕ: ಆಧುನಿಕ ಶ್ರವಣಕುಮಾರ ಎಂದ ನೆಟ್ಟಿಗರು

ರಾತ್ರೋರಾತ್ರಿ ತಾಯಿ-ಮಗನನ್ನು ಮಲೆಮಹದೇಶ್ವರ ಬೆಟ್ಟದಲ್ಲಿನ ವಸತಿ ಗೃಹದಿಂದ ಹೊರಕ್ಕೆ ತಳ್ಳಿದ ಅಧಿಕಾರಿಗಳು, ಬೀದಿಗೆ ಬಿದ್ದ ಕುಟುಂಬ

Published On - 1:03 pm, Sat, 15 January 22