Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾತ್ರೋರಾತ್ರಿ ತಾಯಿ-ಮಗನನ್ನು ಮಲೆಮಹದೇಶ್ವರ ಬೆಟ್ಟದಲ್ಲಿನ ವಸತಿ ಗೃಹದಿಂದ ಹೊರಕ್ಕೆ ತಳ್ಳಿದ ಅಧಿಕಾರಿಗಳು, ಬೀದಿಗೆ ಬಿದ್ದ ಕುಟುಂಬ

3 ವರ್ಷಗಳ ಹಿಂದೆ ಕಿಡ್ನಿ ವೈಫಲ್ಯದಿಂದ ಪ್ರಾಧಿಕಾರದ ಖಾಯಂ ನೌಕರ ಜಯಸ್ವಾಮಿ ಮೃತಪಟ್ಟಿದ್ದರು. ಜೊತೆಗೆ ಮಗ ಶಾಂತಮಲ್ಲೇಶ್ ಹೊರಗುತ್ತಿಗೆ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದ. ಆದ್ರೆ ಒಂದು ವರ್ಷದ ಹಿಂದೆಯಿಂದ ಶಾಂತಮಲ್ಲೇಶ್‌ಗೆ ಹೊರಗುತ್ತಿಗೆ ನೌಕರಿಯೂ ಇಲ್ಲದಂತಾಗಿತ್ತು.

ರಾತ್ರೋರಾತ್ರಿ ತಾಯಿ-ಮಗನನ್ನು ಮಲೆಮಹದೇಶ್ವರ ಬೆಟ್ಟದಲ್ಲಿನ ವಸತಿ ಗೃಹದಿಂದ ಹೊರಕ್ಕೆ ತಳ್ಳಿದ ಅಧಿಕಾರಿಗಳು, ಬೀದಿಗೆ ಬಿದ್ದ ಕುಟುಂಬ
ಬೀದಿಗೆ ಬಿದ್ದ ಕುಟುಂಬ
Follow us
TV9 Web
| Updated By: ಆಯೇಷಾ ಬಾನು

Updated on: Jan 15, 2022 | 11:58 AM

ಚಾಮರಾಜನಗರ: ಅಧಿಕಾರಿಗಳು ಕುಟುಂಬವೊಂದರ ಜೊತೆ ಅಮಾನವೀಯವಾಗಿ ನಡೆದುಕೊಂಡ ಘಟನೆ ನಡೆದಿದೆ. ಅಧಿಕಾರಿಗಳು ಕುಟುಂಬವೊಂದನ್ನು ರಾತ್ರೋರಾತ್ರಿ ವಸತಿ ಗೃಹದಿಂದ ಹೊರಹಾಕಿದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಎಂ.ಎಂ.ಹಿಲ್ಸ್ನಲ್ಲಿ ನಡೆದಿದೆ.

3 ವರ್ಷಗಳ ಹಿಂದೆ ಕಿಡ್ನಿ ವೈಫಲ್ಯದಿಂದ ಪ್ರಾಧಿಕಾರದ ಖಾಯಂ ನೌಕರ ಜಯಸ್ವಾಮಿ ಮೃತಪಟ್ಟಿದ್ದರು. ಜೊತೆಗೆ ಮಗ ಶಾಂತಮಲ್ಲೇಶ್ ಹೊರಗುತ್ತಿಗೆ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದ. ಆದ್ರೆ ಒಂದು ವರ್ಷದ ಹಿಂದೆಯಿಂದ ಶಾಂತಮಲ್ಲೇಶ್‌ಗೆ ಹೊರಗುತ್ತಿಗೆ ನೌಕರಿಯೂ ಇಲ್ಲದಂತಾಗಿತ್ತು. ಈ ವೇಳೆ ಅನುಕಂಪ ಆಧಾರದ ನೌಕರಿ ಹಾಗು ಮರಣಾನಂತರದ ಸವಲತ್ತು ನೀಡುವಂತೆ ಆಗ್ರಹಿಸಿ ವಸತಿ ಗೃಹದಲ್ಲೇ ಮೃತ ನೌಕರನ ಪತ್ನಿ ಹಾಗು ಮಗ ಉಳಿದುಕೊಂಡಿದ್ದರು. ಆದ್ರೆ ಅಧಿಕಾರಿಗಳು ಮಲೆಮಹದೇಶ್ವರ ಬೆಟ್ಟದಲ್ಲಿನ ವಸತಿ ಗೃಹದಲ್ಲಿದ್ದ ಮೃತ ನೌಕರನ ಪತ್ನಿ ಹಾಗೂ ಮಗನನ್ನು ಹೊರಕ್ಕೆ ತಳ್ಳಿದ್ದಾರೆ. ರಾತ್ರೋರಾತ್ರಿ ಮನೆ ಸಾಮಾನುಗಳನ್ನು ಹೊರಗೆ ಹಾಕಿ ದರ್ಪ ಮೆರೆದಿದ್ದಾರೆ. ಇದೀಗ ಮನೆ ಇಲ್ಲದೆ ಕುಟುಂಬ ಬೀದಿಗೆ ಬಿದ್ದಿದೆ. ಅಧಿಕಾರಿಗಳ ನಡೆಯಿಂದ ಕುಟುಂಬ ಬೀದಿಗೆ ಬಂದಿದೆ.

Officials throw family on street in chamarajanagar 1

ರಾತ್ರೋರಾತ್ರಿ ತಾಯಿ-ಮಗನನ್ನು ಮಲೆಮಹದೇಶ್ವರ ಬೆಟ್ಟದಲ್ಲಿನ ವಸತಿ ಗೃಹದಿಂದ ಹೊರಕ್ಕೆ ತಳ್ಳಿದ ಅಧಿಕಾರಿಗಳು, ಬೀದಿಗೆ ಬಿದ್ದ ಕುಟುಂಬ

ಭತ್ತದ ಬಣವೆಗೆ ಬೆಂಕಿ ಇನ್ನು ಮತ್ತೊಂದೆಡೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕಪ್ಪಸೋಗೆ ಗ್ರಾಮದಲ್ಲಿ ಕಿಡಿಗೇಡಿಗಳಿಂದ ದುಷ್ಕೃತ್ಯ ನಡೆದಿದೆ. ಭತ್ತದ ಬಣವೆಗೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದಾರೆ. 3 ಎಕರೆಯಲ್ಲಿ ಬೆಳೆಯಲಾಗಿದ್ದ ಭತ್ತ ಬೆಂಕಿಗಾಹುತಿಯಾಗಿದೆ.

ಸಂಕ್ರಾಂತಿ ಹಬ್ಬದ ಹಿನ್ನೆಲೆ ಒಕ್ಕಣೆಗೆ ಸಿದ್ಧತೆ ಮಾಡಿಕೊಂಡಿದ್ದ ಭತ್ತದ ಬಣವೆಗೆ ತಡರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿದ್ದಾರೆ. 3 ದಿನಗಳ ಹಿಂದೆ ಗದ್ದೆಯಲ್ಲಿ ಭತ್ತದ ಕಟಾವು ಮಾಡಲಾಗಿತ್ತು. ಗದ್ದೆಯಲ್ಲಿ ಒಕ್ಕಣೆ ಮಾಡಲು ಶೇಖರಿಸಿಡಲಾಗಿತ್ತು. ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಭಾರತದ ರಕ್ಷಣಾ ವಲಯದಲ್ಲಿ ಮೇಕ್​ ಇನ್​ ಇಂಡಿಯಾಕ್ಕೆ ಆದ್ಯತೆ; ಕೆಲವು ಆಮದು ಒಪ್ಪಂದಗಳನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರ