ಭಾರತದ ರಕ್ಷಣಾ ವಲಯದಲ್ಲಿ ಮೇಕ್​ ಇನ್​ ಇಂಡಿಯಾಕ್ಕೆ ಆದ್ಯತೆ; ಕೆಲವು ಆಮದು ಒಪ್ಪಂದಗಳನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರ

ಹೀಗೊಂದು ನಿರ್ಧಾರ ಕೈಗೊಳ್ಳುವ ಬಗ್ಗೆ ಸಿಡಿಎಸ್​ ಜನರಲ್​ ರಾವತ್ ಬದುಕಿದ್ದಾಗಲೇ ಚರ್ಚೆ ನಡೆದಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಕ್ಷಣಾ ಇಲಾಖೆ ಅಧಿಕಾರಿಗಳು ಮತ್ತು ಸಿಡಿಎಸ್ ಬಿಪಿನ್​ ರಾವತ್ ಜತೆ ಸಭೆ ನಡೆಸಿದ್ದರು.

ಭಾರತದ ರಕ್ಷಣಾ ವಲಯದಲ್ಲಿ ಮೇಕ್​ ಇನ್​ ಇಂಡಿಯಾಕ್ಕೆ ಆದ್ಯತೆ; ಕೆಲವು ಆಮದು ಒಪ್ಪಂದಗಳನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರ
ಪ್ರಧಾನಮಂತ್ರಿ ನರೇಂದ್ರ ಮೋದಿ

ದೆಹಲಿ: ಮೇಕ್​ ಇನ್​ ಇಂಡಿಯಾ(Make In India) ಧ್ಯೇಯವನ್ನು ಉತ್ತೇಜಿಸುವ ಸಲುವಾಗಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 14 ಹೆಲಿಕಾಪ್ಟರ್​​ಗಳು, ಕಡಿಮೆ ಶ್ರೇಣಿಯ ಮೇಲ್ಮೈಯಿಂದ ಗಾಳಿಗೆ ನೆಗೆಯುವ ಮಿಸೆಲ್​ಗಳ(ವಾಯು ಕ್ಷಿಪಣಿಗಳು)​ ಆಮದು ಸಂಬಂಧ ಟೆಂಡರ್​ಗಳನ್ನು ಹಿಂಪಡೆಯಲು ನಿರ್ಧರಿಸಿದೆ. ಬೈ ಗ್ಲೋಬಲ್​ ವರ್ಗದಡಿ ಬರುವ ಸುಮಾರು 50 ಸಾವಿರ ಕೋಟಿ ರೂಪಾಯಿ ಮೌಲ್ಯದ ಆಮದು ವ್ಯವಹಾರಗಳನ್ನು ಮರುಪರಿಶೀಲನೆ ಮಾಡಲು ಮುಂದಾಗಿದೆ.  ಶುಕ್ರವಾರ ದೆಹಲಿಯಲ್ಲಿ ನಡೆದ ರಕ್ಷಣಾ ಇಲಾಖೆ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 

ಅಂದರೆ ಆತ್ಮನಿರ್ಭರ ಭಾರತ ಮತ್ತು ಮೇಕ್​ ಇನ್​ ಇಂಡಿಯಾದಡಿ ಸ್ವದೇಶಿ ರಕ್ಷಣಾ ಉಪಕರಣಗಳಿಗೆ ಉತ್ತೇಜನ ನೀಡುವ ದೃಷ್ಟಿಯಿಂದ, ಇತರ ದೇಶಗಳಿಂದ ರಕ್ಷಣಾ ಸಲಕರಣೆಗಳ ಆಮದು ಮಾಡಿಕೊಳ್ಳುವ ಒಪ್ಪಂದಗಳಲ್ಲಿ ಕೆಲವನ್ನುಈಗಾಗಲೇ ರಕ್ಷಣಾ ಇಲಾಖೆ ರದ್ದುಗೊಳಿಸಿದ್ದು, ಇನ್ನೂ ಸುಮಾರು 50 ಕೋಟಿ ರೂ.ಮೌಲ್ಯದ ಒಪ್ಪಂದಗಳನ್ನು ಮರುಪರಿಶೀಲನೆ ಮಾಡುವತ್ತ ಚಿಂತನೆ ಹರಿಸಿದೆ. ಅತಿ ಕಡಿಮೆ ಶ್ರೇಣಿಯ ಮೇಲ್ಮೈನಿಂದ ಗಾಳಿಗೆ ಹಾರುವ ವಾಯು ವ್ಯವಸ್ಥೆಗಳು, ಎಳೆದ ಫಿರಂಗಿ ಬಂದೂಕುಗಳು, ಲಂಬವಾಗಿ ಉಡಾವಣೆಯಾಗುವ ಕ್ಷಿಪಣಿಗಳು, ಹಡಗಿನ ಮೂಲಕ ಮಾಡಲಾಗುವ ಮಾನವ ರಹಿತ ವೈಮಾನಿಕ ವ್ಯವಸ್ಥೆಗಳು, ಹೆಚ್ಚುವರಿ P-8I ಕಣ್ಗಾವಲು ವಿಮಾನ, ಮಿಗ್​-29 ಯುದ್ಧ ವಿಮಾನಗಳ ಖರೀದಿ ಸಂಬಂಧಿತ ಒಪ್ಪಂದಗಳು ಪರಿಶೀಲನೆಯಡಿ ಇವೆ ಎಂದು ಹೇಳಲಾಗಿದೆ.  ಬರಿ ಇವಿಷ್ಟೇ ಅಲ್ಲ, ರಷ್ಯಾ ಸೇರಿ ಇನ್ನಿತರ ದೇಶಗಳೊಂದಿಗೆ ಮಾಡಿಕೊಳ್ಳಲಾದ ಒಪ್ಪಂದಗಳೂ ಸಹ ಪಟ್ಟಿಯಲ್ಲಿವೆ ಎಂದು ಹೇಳಲಾಗಿದೆ.

ಹೀಗೊಂದು ನಿರ್ಧಾರ ಕೈಗೊಳ್ಳುವ ಬಗ್ಗೆ ಸಿಡಿಎಸ್​ ಜನರಲ್​ ರಾವತ್ ಬದುಕಿದ್ದಾಗಲೇ ಚರ್ಚೆ ನಡೆದಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಕ್ಷಣಾ ಇಲಾಖೆ ಅಧಿಕಾರಿಗಳು ಮತ್ತು ಸಿಡಿಎಸ್ ಬಿಪಿನ್​ ರಾವತ್ ಜತೆ ಸಭೆ ನಡೆಸಿ, ಭಾರತದ ರಕ್ಷಣಾ ವಲಯವನ್ನು ಆತ್ಮ ನಿರ್ಭರದತ್ತ ಚಲಿಸುವಂತೆ ಮಾಡುವ ಬಗ್ಗೆ ಮಾತನಾಡಿದ್ದರು. ಭಾರತದ ರಕ್ಷಣಾ ವಲಯದಲ್ಲಿ ಮೇಕ್​ ಇನ್​ ಇಂಡಿಯಾಕ್ಕೆ ಉತ್ತೇಜನ ನೀಡುವ ಬಗ್ಗೆ ಪ್ರಧಾನಿ ಮೋದಿ ವೈಯಕ್ತಿಕವಾಗಿ ಆಸಕ್ತಿ ತೋರಿಸಿದ್ದಾರೆ. ಅದಕ್ಕೆ ತಕ್ಕಂತೆ ಇತ್ತೀಚೆಗೆ ಹಲವು ದೇಶೀಯವಾಗಿ ತಯಾರಿಸಲ್ಪಟ್ಟ ರಕ್ಷಣಾ ಉಪಕರಣಗಳನ್ನು ಭಾರತೀಯ ಸೇನೆಗೆ ಸೇರಿಸಲಾಗಿದೆ.

ಇದನ್ನೂ ಓದಿ: 10ನೇ ವರ್ಷಕ್ಕೆ ಎರಡು ಕಂಪನಿಗಳ ಒಡತಿಯಾದ ಈ ಬಾಲಕಿಗೆ 15ನೇ ವಯಸ್ಸಿಗೇ ನಿವೃತ್ತಿ

Click on your DTH Provider to Add TV9 Kannada