ಸಿಸಿಟಿವಿ ಇಲ್ಲದ ಜಾಗದಲ್ಲಿ ಅಭ್ಯರ್ಥಿಗಳ ಸಂದರ್ಶನ: ಕೆಪಿಎಸ್​​ಸಿ ನೇಮಕಾತಿ ವೇಳೆ ನಡೆದ ಮತ್ತಷ್ಟು ಕಳ್ಳಾಟಗಳು ಬಯಲು

KPSC Recruitment Scam: ಕೆಪಿಎಸ್ಸಿ ನೇಮಕಾತಿ ಹಗರಣದ ತನಿಖೆ ವೇಳೆ ಹಲವು ಸ್ಫೋಟಕ ವಿಚಾರಗಳು ಬಯಲಾಗಿವೆ. ಸಿಸಿಟಿವಿ ಇಲ್ಲದ ಜಾಗದಲ್ಲೇ ಅಭ್ಯರ್ಥಿಗಳ ಸಂದರ್ಶನ ನಡೆಸಿರುವುದು ಮತ್ತು ಮಾಜಿ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ ಕುಟುಂಬಸ್ಥರ ಖಾತೆಗಳಿಗೆ ಲಕ್ಷಾಂತರ ರೂಪಾಯಿ ಜಮೆಯಾಗಿರುವ ಬಗ್ಗೆ ಇಡಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.

ಸಿಸಿಟಿವಿ ಇಲ್ಲದ ಜಾಗದಲ್ಲಿ ಅಭ್ಯರ್ಥಿಗಳ ಸಂದರ್ಶನ: ಕೆಪಿಎಸ್​​ಸಿ ನೇಮಕಾತಿ ವೇಳೆ ನಡೆದ ಮತ್ತಷ್ಟು ಕಳ್ಳಾಟಗಳು ಬಯಲು
ಕೆಪಿಎಸ್​​ಸಿ ನೇಮಕಾತಿ ಅಕ್ರಮ
Edited By:

Updated on: Nov 19, 2026 | 6:00 PM

ಬೆಂಗಳೂರು, ನವೆಂಬರ್​​ 19: ಕೆಪಿಎಸ್ಸಿ ನೇಮಕಾತಿ ಹಗರಣ ಸಂಬಂಧ ತನಿಖೆಯಲ್ಲಿ ದಿನಕ್ಕೊಂದು ಸ್ಫೋಟಕ ವಿಚಾರ ಬಯಲಾಗ್ತಿದ್ದು, ಸಿಸಿ ಕ್ಯಾಮರಾ ಇಲ್ಲದ ಜಾಗದಲ್ಲೇ ಅಭ್ಯರ್ಥಿಗಳ ಸಂದರ್ಶನ ನಡೆಸಲಾಗತಿತ್ತು ಎಂಬುದೀಗ ಗೊತ್ತಾಗಿದೆ. ಪಶುವೈದ್ಯಾಧಿಕಾರಿ, ಜೆಇ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಸಂದರ್ಶನ ಇದೇ ರೀತಿ ನಡೆದಿತ್ತು. ಅಕ್ರಮ ನಡೆಸುವ ಉದ್ದೇಶದಿಂದಲೇ ಈ ರೀತಿಯ ಜಾಗವನ್ನು ಆಯ್ದುಕೊಳ್ಳಲಾಗುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ಇಡಿ ಅಧಿಕಾರಿಗಳು ಕೆಪಿಎಸ್​​ಸಿಯ ಮಾಜಿ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್​​ರನ್ನು ಪ್ರಶ್ನೆ ಮಾಡಿದ್ದು, ಅವರು ಸಿಸಿ ಕ್ಯಾಮರಾ ಬಗ್ಗೆ ತನಗೇನೂ ಗೊತ್ತಿಲ್ಲ. ಕೆಪಿಎಸ್ಸಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳನ್ನೇ ಆ ಬಗ್ಗೆ ಕೇಳಿ ಎಂದು ಉತ್ತರಿಸಿರುವುದಾಗಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಜ್ಞಾನೇಂದ್ರ ಕುಮಾರ್‌-ಬಸವರಾಜ್ ಕನ್ನಾಳೆ ಹೇಳಿಕೆಗಳಲ್ಲಿ ವ್ಯತ್ಯಾಸ

ಇನ್ನು ಈ ಪ್ರಕರಣದಲ್ಲಿ ಬಸವರಾಜ್ ಕನ್ನಾಳೆ ಮಾಡಿರುವ ಆರೋಪವೂ ಇಡಿ ತನಿಖೆಯಲ್ಲಿ ಮಹತ್ವ ಪಡೆದುಕೊಂಡಿದೆ. ಅಭ್ಯರ್ಥಿಗಳಿಂದ ಸಂಗ್ರಹಿಸಿದ್ದ ಸುಮಾರು 15 ಕೋಟಿ ರೂಪಾಯಿ ಹಣವನ್ನ ಜ್ಞಾನೇಂದ್ರ ಕುಮಾರ್‌ಗೆ ಹಂತ ಹಂತವಾಗಿ ನೀಡಿದ್ದಾಗಿ ಕನ್ನಾಳೆ ಹೇಳಿಕೆ ನೀಡಿದ್ದಾರೆ. ಜಯಮಹಲ್‌ನಲ್ಲಿರುವ ಜ್ಞಾನೇಂದ್ರ ನಿವಾಸದಲ್ಲೇ ದುಡ್ಡು ಕೊಟ್ಟಿದ್ದಾಗಿ ಹೇಳಿದ್ದಾರೆ. ಆದ್ರೆ ಈ ಆರೋಪವನ್ನ ಜ್ಞಾನೇಂದ್ರ ಕುಮಾರ್ ಮಾತ್ರ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಬಸವರಾಜ್ ಕನ್ನಾಳೆ ಬಳಿ ತಾನು ಯಾವುದೇ ಹಣ ಪಡೆದಿಲ್ಲ ಎಂದು ಇಡಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ. ಹೀಗಾಗಿ ಇಬ್ಬರ ಹೇಳಿಕೆಗಳಲ್ಲಿನ ವ್ಯತ್ಯಾಸ ಇದೀಗ ತನಿಖೆಯ ಪ್ರಮುಖ ಅಂಶವಾಗಿದೆ.

Loading...

ಇದನ್ನೂ ಓದಿ:  ನೇಮಕಾತಿ ಅಕ್ರಮ ಪ್ರಕರಣ: ಕೆಪಿಎಸ್ಸಿ ಸದಸ್ಯೆ ಬಿ.ವಿ. ಗೀತಾ ನಿವಾಸದ ಮೇಲೆ ಎಸ್ಐಟಿ ದಾಳಿ

ಜ್ಞಾನೇಂದ್ರ ಕುಮಾರ್ ಕುಟುಂಬಸ್ಥರ ಬ್ಯಾಂಕ್ ಖಾತೆಗಳಿಗೂ ಹಣ ಜಮೆ

ಇದೇ ವೇಳೆ ಜ್ಞಾನೇಂದ್ರ ಕುಮಾರ್ ಕುಟುಂಬಸ್ಥರ ಬ್ಯಾಂಕ್ ಖಾತೆಗಳಿಗೆ ನಗದು ಜಮೆ ಮಾಡಿರುವ ವಿಚಾರವೂ ಇಡಿ ತನಿಖೆಯಲ್ಲಿ ಪತ್ತೆಯಾಗಿದೆ. ಜ್ಞಾನೇಂದ್ರ ಅತ್ತಿಗೆಯ ಬ್ಯಾಂಕ್ ಖಾತೆಗೆ 15 ಲಕ್ಷದ 39 ಸಾವಿರದ 500 ರೂಪಾಯಿ ನಗದು ಜಮೆ ಮಾಡಲಾಗಿದೆ. ತಮ್ಮನ ಬ್ಯಾಂಕ್ ಖಾತೆಗೆ 10 ಲಕ್ಷದ 94 ಸಾವಿರ ರೂಪಾಯಿ ಡೆಪಾಸಿಟ್ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಣದ ಬಗ್ಗೆ ಇಡಿ ಅಧಿಕಾರಿಗಳು ಪ್ರಶ್ನೆ ಮಾಡಿದಾಗ ಅತ್ತಿಗೆಯ ಖಾತೆಗೆ ಹಣ ಜಮೆ ಮಾಡಿರುವ ವಿಚಾರಕ್ಕೆ ಉತ್ತರ ನೀಡಲು ಜ್ಞಾನೇಂದ್ರ ಕುಮಾರ್ ನಿರಾಕರಿಸಿದ್ದಾರಂತೆ. ತಮ್ಮನ ಖಾತೆಗೆ ಹಣ ಜಮೆ ಮಾಡಿರುವ ಬಗ್ಗೆ ಕೇಳಿದಾಗಲೂ ಯಾವುದೇ ಸ್ಪಷ್ಟ ಉತ್ತರ ನೀಡದೆ ಮೌನಕ್ಕೆ ಶರಣಾಗಿದ್ದಾರೆ. ಈ ಎಲ್ಲ ವಿಚಾರಗಳನ್ನ ಇಡಿ ತನ್ನ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಪ್ರಜ್ವಲ್​ ಕುಮಾರ್ ಎನ್​ ವೈ

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More
Loading...
Unable to load recommendations.
Follow Us