ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ: ಇಡಿ ತನಿಖೆಯಲ್ಲಿ ಆರೋಪಿಗಳ ಕಳ್ಳಾಟ ಬಹಿರಂಗ

ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮದ ಬಗ್ಗೆ ಇಡಿ ತನಿಖೆಯಲ್ಲಿ ಸ್ಫೋಟಕ ಸತ್ಯಗಳು ಬಯಲಾಗಿವೆ. ಪ್ರಕರಣದ ಸಂಬಂಧ ಪ್ರಮುಖ ಆರೋಪಿ ಬಸವರಾಜ​​ ಕನ್ನಾಳೆ ಪಾತ್ರವೇನು ಮತ್ತು KPSCಯ ಅಂದಿನ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್​​ ಈತನಿಗೆ ಹೇಗೆ ನೆರವಾಗಿದ್ದ ಎಂಬುದು ತನಿಖೆಯಲ್ಲಿ ಬಹಿರಂಗಗೊಂಡಿದೆ. ಅಕ್ರಮದ ಇಂಚಿಂಚು ಮಾಹಿತಿಯನ್ನೂ ಇಡಿ ಬಹಿರಂಗಪಡಿಸಿದ್ದು, ಆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ: ಇಡಿ ತನಿಖೆಯಲ್ಲಿ ಆರೋಪಿಗಳ ಕಳ್ಳಾಟ ಬಹಿರಂಗ
ಆರೋಪಿಗಳ ಕಳ್ಳಾಟ ಇಡಿ ತನಿಖೆ ವೇಳೆ ಬಹಿರಂಗ
Image Credit source: kpsc.kar.nic.in
Edited By:

Updated on: Sep 30, 2026 | 4:19 PM

ಬೆಂಗಳೂರು, ಸೆಪ್ಟೆಂಬರ್​​ 30: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದೇಗೆ ಎಂಬ ಸ್ಫೋಟಕ ವಿಚಾರಗಳು ಜಾರಿ ನಿರ್ದೇಶನಾಲಯ (ಇಡಿ) ತನಿಖೆ ವೇಳೆ ಬಯಲಾಗಿವೆ. ಅಭ್ಯರ್ಥಿಗಳಿಂದ ಹಣ ಸಂಗ್ರಹಿಸಿದ್ದ ಆರೋಪಿ ಬಸವರಾಜ್ ಕನ್ನಾಳೆ ಬಳಿಕ ಲೀಕ್ ಆದ ಪ್ರಶ್ನೆಪತ್ರಿಕೆಯನ್ನು ಅಭ್ಯರ್ಥಿಗಳಿಗೆ ನೀಡಿದ್ದ. ಪ್ರಶ್ನೆಪತ್ರಿಕೆಯ ಸರಿಯಾದ ಉತ್ತರಗಳನ್ನು ನೀಡಲೂ ಹಣದ ಬೇಡಿಕೆ ಇಟ್ಟಿದ್ದ. ಈತನಿಗೆ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲು ಸಹಾಯಮಾಡಿದ್ದು, KPSCಯ ಅಂದಿನ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್​​. ಅಭ್ಯರ್ಥಿಗಳಿಂದ ಒಟ್ಟು 80 ಲಕ್ಷದವರೆಗೆ ಹಣಕ್ಕೆ ಬಸವರಾಜ್​​ ಬೇಡಿಕೆ ಇಟ್ಟಿದ್ದ. ನಂತರ ಅಭ್ಯರ್ಥಿಗೆ ಅನುಗುಣವಾಗಿ 30ರಿಂದ 40 ಲಕ್ಷಕ್ಕೆ ಹಣ ನಿಗದಿ ಮಾಡಲಾಗಿತ್ತು ಎಂದು ಇಡಿ ತಿಳಿಸಿದೆ.

ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು ಹೇಗೆ?

ಆಯ್ಕೆಯಾದ ಅಭ್ಯರ್ಥಿಗಳನ್ನು ಬೆಂಗಳೂರಿನ ಹೊರವಲಯದಲ ರೆಸಾರ್ಟ್​​ಗೆ ಕರೆದೊಯ್ದು, ಅವರಿಗೆ ಸರಿಯಾದ ಉತ್ತರಗಳಿದ್ದ ಸೋರಿಕೆಯಾದ ಪ್ರಶ್ನೆ ಪತ್ರಿಕೆಯನ್ನು ನೀಡಲಾಗಿತ್ತು. ಬಸವರಾಜ್ ಕನ್ನಾಳೆ ಮತ್ತು ಅವರ ಸಹಚರು ಅಭ್ಯರ್ಥಿಗಳಿಗೆ ಉತ್ತರಗಳನ್ನು ನೆನಪಿಟ್ಟುಕೊಳ್ಳುವಂತೆ ಕಂಠಪಾಠ ಮಾಡಿಸಿದ್ದರು. ಪರೀಕ್ಷೆಯ ದಿನದಂದು ಅಭ್ಯರ್ಥಿಗಳನ್ನು ಬಸವರಾಜ್ ಕನ್ನಾಳೆ ಮತ್ತು ಅವರ ಸಹಚರರು ವ್ಯವಸ್ಥೆಗೊಳಿಸಿದ ವಾಹನಗಳಲ್ಲಿಯೇ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲಾಗಿತ್ತು. ಈ ಮೂಲಕ ಅಭ್ಯರ್ಥಿಗಳಿಂದ ಗಳಿಸಿದ ಹಣವನ್ನು ಆರೋಪಿಗಳು ಬ್ಯಾಂಕ್ ವರ್ಗಾವಣೆ, ಚಿನ್ನ ಖರೀದಿ, ವಿಮಾನ ಪ್ರಯಾಣ ಮತ್ತು ನಗದು ವಹಿವಾಟುಗಳ ಮೂಲಕ ಮರೆಮಾಚಲು ಯತ್ನಿಸಿರುವುದು ಕಂಡುಬಂದಿರೋದಾಗಿ ಇಡಿ ಮಾಹಿತಿ ನೀಡಿದೆ.

ಇದನ್ನೂ ಓದಿ:  ಕೆಪಿಎಸ್​ಸಿ ಆರ್​ಟಿಒ ಇನ್ಸ್‌ಪೆಕ್ಟರ್ ನೇಮಕಾತಿಯಲ್ಲೂ ಅಕ್ರಮದ ವಾಸನೆ: ಕನ್ನಾಳೆ ಡೈರಿಯಲ್ಲಿ ಸಿಕ್ತು ಸ್ಫೋಟಕ ಮಾಹಿತಿ, ಹಣದ ಲೆಕ್ಕ!

ಅಭ್ಯರ್ಥಿಗಳಿಂದ ಮುಂಗಡ ಹಣವನ್ನು ನಗದು ಹಾಗೂ ಬ್ಯಾಂಕ್ ಮೂಲಕ ಪಡೆತಲಾಗಿದ್ದು, ಉಳಿದ ಹಣವನ್ನು ಬಸವರಾಜ ಕನ್ನಾಳೆ ಚೆಕ್ ಮೂಲಕ ಪಡೆದಿದ್ದ. ಅದಕ್ಕೆ ಸಂಬಂಧಿಸಿ ಕೆಲ ಚೆಕ್​​ಗಳನ್ನೂ ಇಡಿ ವಶಕ್ಕೆ ಪಡೆದಿದೆ. ಪ್ರಕರಣ ಸಂಬಂಧ ಅಕ್ರಮ ಹಣದ ವಹಿವಾಟಿನ ಬಗ್ಗೆ ತನಿಖೆ ಮುಂದುವರಿದಿದ್ದು, ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಸಲಾಗ್ತಿದೆ. ಮತ್ತೊಂದೆಡೆ ಪ್ರಮುಖ ಆರೋಪಿ ಬಸವರಾಜ ಕನ್ನಾಳೆ ವಿಚಾರಣೆಯೂ ಮಂದುವರಿದಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 4:18 pm, Wed, 30 September 26

ಪ್ರಜ್ವಲ್​ ಕುಮಾರ್ ಎನ್​ ವೈ

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More
Loading...
Unable to load recommendations.
Follow Us