Makar Sankranti 2023: ಮಕರ ಸಂಕ್ರಾಂತಿಗೆ ಜೋರಾದ ಖರೀದಿ ಭರಾಟೆ, ಮಾರುಕಟ್ಟೆಗಳಲ್ಲಿ ಜನವೋ ಜನ
ಕೆ.ಆರ್. ಮಾರ್ಕೆಟ್ ನಲ್ಲಿ ಖರೀದಿ ಶುರುವಾಗಿದ್ದು ಜನ ಖರೀದಿಗೆ ಮುಗಿಬಿದ್ದ ದೃಶ್ಯಗಳು ಕಂಡು ಬಂದಿವೆ. ಕಬ್ಬು, ಎಳ್ಳು-ಬೆಲ್ಲ, ಸಿಹಿ ಗೆಣಸು, ಕಡಲೇಕಾಯಿ, ಅವರೇಕಾಯಿ ಖರೀದಿ ಮಾಡುತ್ತಿದ್ದಾರೆ.
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವರ್ಷದ ಮೊದಲ ಸಂಕ್ರಾಂತಿ ಸುಗ್ಗಿ ಹಬ್ಬಕ್ಕೆ ಖರೀದಿ ಭರಾಟೆ ಜೋರಾಗಿದೆ. ಭಾನುವಾರ ಸಂಕ್ರಾಂತಿ ಹಬ್ಬ ಹಿನ್ನಲೆ ಇಂದಿನಿಂದಲೇ ಸಿಟಿ ಮಂದಿ ಖರೀದಿಗೆ ಮುಗಿಬಿದ್ದಿದ್ದಾರೆ. ಕೆ.ಆರ್. ಮಾರ್ಕೆಟ್ ನಲ್ಲಿ ಖರೀದಿ ಶುರುವಾಗಿದ್ದು ಜನ ಖರೀದಿಗೆ ಮುಗಿಬಿದ್ದ ದೃಶ್ಯಗಳು ಕಂಡು ಬಂದಿವೆ. ಕಬ್ಬು, ಎಳ್ಳು-ಬೆಲ್ಲ, ಸಿಹಿ ಗೆಣಸು, ಕಡಲೇಕಾಯಿ, ಅವರೇಕಾಯಿ ಖರೀದಿ ಮಾಡುತ್ತಿದ್ದಾರೆ.