Namma Metro:ಕೆಆರ್​ಪುರಂ-ವೈಟ್​ಫೀಲ್ಡ್ ಮೆಟ್ರೋ ಮಾರ್ಗಕ್ಕೆ CMRSನಿಂದ ಗ್ರೀನ್​ ಸಿಗ್ನಲ್​​: ಟ್ರಾಫಿಕ್​ ದಟ್ಟಣೆಗೆ ಸಿಗುತ್ತಾ ಮುಕ್ತಿ?

ಬಹು ನಿರೀಕ್ಷಿತ ನಗರದ, ಕೆಆರ್​ಪುರಂನಿಂದ ವೈಟ್​ಫೀಲ್ಡ್​​ ಮಧ್ಯೆ ಸಂಚರಿಸಲಿರುವ ಮೆಟ್ರೋ ಸುರಕ್ಷಿತವಾಗಿ ಸಂಚರಿಸಲು ಯೋಗ್ಯವಾಗಿದೆ ಎಂದು ಸಿಎಂಆರ್​ಎಸ್​ ಧೃಡಪಡಿಸಿದೆ ಎಂದು ಬಿಎಂಆರ್​​ಸಿಎಲ್​ ಹೇಳಿದೆ.

Namma Metro:ಕೆಆರ್​ಪುರಂ-ವೈಟ್​ಫೀಲ್ಡ್ ಮೆಟ್ರೋ ಮಾರ್ಗಕ್ಕೆ CMRSನಿಂದ ಗ್ರೀನ್​ ಸಿಗ್ನಲ್​​: ಟ್ರಾಫಿಕ್​ ದಟ್ಟಣೆಗೆ ಸಿಗುತ್ತಾ ಮುಕ್ತಿ?
ನಮ್ಮ ಮೆಟ್ರೋ
Follow us
|

Updated on:Mar 03, 2023 | 3:45 PM

ಬೆಂಗಳೂರು: ಕೆಆರ್​ಪುರಂ ಮತ್ತು ವೈಟ್​ಫೀಲ್ಡ್ ಸದಾ ಟ್ರಾಫಿಕ್​ ದಟ್ಟಣೆಯಿಂದ ಕೂಡಿರುತ್ತದೆ. ಇದನ್ನು ನಿವಾರಿಸಲು ಕೆಆರ್​ಪುರಂ-ವೈಟ್​ಫೀಲ್ಡ್ ಮಧ್ಯೆ ಮೆಟ್ರೋ ಸಂಚಾರ ಪ್ರಾರಂಭಿಸಲಾಗುತ್ತಿದೆ. ಈ ಮೆಟ್ರೋ ಲೈನ್​  ಸುರಕ್ಷಿತವಾಗಿ ಸಂಚರಿಸಲು ಯೋಗ್ಯವಾಗಿದೆ ಎಂದು ಮೆಟ್ರೋ ರೈಲ್​ ಸೇಫ್ಟಿ ಸಂಸ್ಥೆ (CMRS​) ಧೃಡಪಡಿಸಿದೆ ಎಂದು ಬೆಂಗಳೂರು ಮೆಟ್ರೋ ರೇಲ್​ ಕಾರ್ಪೋರೇಶನ್ (BMRCL)​ ಹೇಳಿದೆ. ರೈಲು ಸಂಚಾರಕ್ಕೆ ಚಾಲನೆ ನೀಡಲು ಶೀಘ್ರದಲ್ಲೇ ದಿನಾಂಕ ನಿಗದಿ ಮಾಡಲಾಗುವುದು ಎಂದು ಬಿಎಂಆರ್​​ಸಿಎಲ್ ತಿಳಿಸಿದೆ.

ಈ ಬಗ್ಗೆ ಇಂದು (ಮಾ.3) ಸಿಎಂಆರ್​ಎಸ್​ ಅಭಯ ಕುಮಾರ್​ ರೈ ಅವರು ಮಾತನಾಡಿ ಕೆಆರ್​ ಪುರಂ-ವೈಟ್​ಫೀಲ್ಡ್ ಮೆಟ್ರೋ ಲೈನ್​​ ಮತ್ತು ಈ ಲೈನ್​ ಎಲ್ಲ ರೈಲು ನಿಲ್ದಾಣಗಳ ಮೂಲಸೌಕರ್ಯಗಳನ್ನು ಪರಿಶೀಲಿಸಲಾಯಿತು. ವಿಶೇಷವಾಗಿ ಅಗ್ನಿ ಸುರಕ್ಷತೆ, ಪ್ರಯಾಣಿಕ ಸೂಚನಾ ಫಲಕಗಳನ್ನು ಪರಿಶೀಲಿಸಲಾಯಿತು ಎಂದು ಹೇಳಿದ್ದಾರೆ.

ಇನ್ನು ಬಿಎಂಆರ್​ಸಿಎಲ್​​ ಮತ್ತು ಸಿಎಂಆರ್​ಎಸ್​​ ಅಧಿಕಾರಿಗಳು ಜಂಟಿಯಾಗಿ ಕೆಆರ್​ ಪುರಂ-ವೈಟ್​ಫೀಲ್ಡ್​​​ವರೆಗಿನ 12 ಮೆಟ್ರೋ ನಿಲ್ದಾಣಗಳನ್ನು ಪರಿಶೀಲಿಸಿದ್ದಾರೆ. ಕೆಆರ್ ಪುರಂ ನಿಲ್ದಾಣದಿಂದ 1.5 ಕಿಮೀ ದೂರದಲ್ಲಿರುವ ಬೈಯಪ್ಪನಹಳ್ಳಿ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಕಾಮಗಾರಿ ನಡೆಯುತ್ತಿದೆ ಎಂದರು.

ಈ 13 ಕಿಲೋಮೀಟರ್ ಮೆಟ್ರೋ ಮಾರ್ಗದ 12 ನಿಲ್ದಾಣಗಳು ವೈಟ್‌ಫೀಲ್ಡ್, ಚನ್ನಸಂದ್ರ, ಕಾಡುಗೋಡಿ, ಪಟ್ಟಂದೂರು ಅಗ್ರಹಾರ, ಶ್ರೀ ಸತ್ಯ ಸಾಯಿ ಆಸ್ಪತ್ರೆ, ನಲ್ಲೂರು ಹಳ್ಳಿ, ಕುಂದನಹಳ್ಳಿ, ಸೀತಾರಾಮ ಪಾಳ್ಯ, ಹೂಡಿ ಜಂಕ್ಷನ್, ಗರುಡಾಚಾರ್ಪಾಳ್ಯ, ಮಹದೇವಪುರ ಮತ್ತು ಕೆಆರ್ ಪುರಂ. ವೈಟ್‌ಫೀಲ್ಡ್ ಬಳಿ ಇರುವ ಟೆಕ್ ಪಾರ್ಕ್‌ನಿಂದ ಮೆಟ್ರೋ ಮಾರ್ಗಕ್ಕೆ ನೇರ ಪ್ರವೇಶಕ್ಕಾಗಿ ಬಿಎಂಆರ್‌ಸಿಎಲ್ ಮತ್ತು ಇನ್‌ಫರ್ಮೇಷನ್ ಟೆಕ್ನಾಲಜಿ ಪಾರ್ಕ್ ಲಿಮಿಟೆಡ್ (ITPL) ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಹೊಸ ಮಾರ್ಗದಲ್ಲಿ ಮೆಟ್ರೋ ಕಾರ್ಯಾಚರಣೆ ಪ್ರಾರಂಭವಾದಾಗ ಪಟ್ಟಂದೂರು ಅಗ್ರಹಾರ ಮೆಟ್ರೋ ನಿಲ್ದಾಣ ಮತ್ತು ಟೆಕ್ ಪಾರ್ಕ್ ಎರಡನ್ನೂ ಸಂಪರ್ಕಿಸುವ ವಾಕ್‌ವೇ ಅನ್ನು ನಿರ್ಮಿಸಲಾಗುವುದು ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:28 pm, Fri, 3 March 23

ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​