ಬೆಂಗಳೂರು: ನಗರದಲ್ಲಿ ಭೂಕಂಪ ಆಗಿಲ್ಲ. ಭೂಕಂಪದ ಯಾವುದೇ ಲಕ್ಷಣಗಳು ದಾಖಲಾಗಿಲ್ಲ ಎಂದು ಬೆಂಗಳೂರಿನ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ (KSNDMC) ಯಿಂದ ಸ್ಪಷ್ಟನೆ ನೀಡಿದೆ. ಆದರೆ ಶಬ್ದ ಹೇಗೆ ಬಂತು ಎಂಬ ಬಗ್ಗೆ ಅಧಿಕಾರಿಗಳಿಗಳು, ತಜ್ಞರಿಗೂ ಸದ್ಯಕ್ಕೆ ಮಾಹಿತಿ ಇಲ್ಲ ಎನ್ನಲಾಗಿದ್ದು, ಈ ಕುರಿತು ಇನ್ನಷ್ಟೇ ಮಾಹಿತಿ ತಿಳಿದುಬರಬೇಕಿದೆ. ಈ ಹಿಂದೆ ಬೆಂಗಳೂರಿನ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ವರದಿಯಾಗಿತ್ತು. ರಾಜರಾಜೇಶ್ವರಿ ನಗರ, ಕೆಂಗೇರಿ, ಕಗ್ಗಲೀಪುರ, ಹೆಮ್ಮಿಗೆಪುರ, ಜ್ಞಾನಭಾರತಿನಗರ, ಮೈಸೂರು ರಸ್ತೆಯ ಕೆಲ ಏರಿಯಾದಲ್ಲಿ ಭೂಮಿ ಕಂಪಿಸಿರುವ ಅನುಭವವಾಗಿತ್ತು. ಎರಡು ಸಲ ಭೂಮಿ ಕಂಪಿಸಿದ ಅನುಭವವಾಗಿದ್ದು, ಮೊದಲ ಸಲ ಲಘುವಾಗಿ, ನಂತರ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿತ್ತು. ಆದರೆ ಇದೀಗ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಸ್ಪಷ್ಟನೆ ನೀಡಿದ್ದು, ಭೂಮಿ ಕಂಪಿಸಿಲ್ಲ ಎಂದು ಸ್ಪಷ್ಟನೆ ನೀಡಿದೆ.
‘‘ರಾಜರಾಜೇಶ್ವರಿ ನಗರ, ಕೆಂಗೇರಿ, ಕಗ್ಗಲೀಪುರ, ಹೆಮ್ಮಿಗೆಪುರ, ಜ್ಞಾನಭಾರತಿನಗರ ಮೊದಲಾದೆಡೆ 11.50 ರಿಂದ 12.15 ವರೆಗೆ ಭೂಮಿ ಕಂಪಿಸಿದ ವರದಿಗಳನ್ನು ಆಧರಿಸಿ, ಮಾಪಕದಲ್ಲಿ ಮಾಹಿತಿ ಇದೆಯೇ ಎಂದು ಪರಿಶೀಲಿಸಲಾಯಿತು. ಆದರೆ ಯಾವುದೇ ಕಂಪನದ ಅಲೆಗಳು ದಾಖಲಾಗಿಲ್ಲ’’ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ನೀಡಿರುವ ಮಾಹಿತಿ:
ಭೂಕಂಪದ ಕುರಿತು ಸಚಿವ ಬಿಸಿ ಪಾಟೀಲ್ ಹೇಳಿಕೆ:
ಇಲಾಖೆಯಿಂದ ಭೂಕಂಪದ ಬಗ್ಗೆ ಮಾಹಿತಿ ಇಲ್ಲ ಎಂದು ಸಚಿವ ಬಿಸಿ ಪಾಟೀಲ್ ಹೇಳಿದ್ದಾರೆ. ಕಳೆದ ಬಾರ ಕಲಬುರ್ಗಿ ಭಾಗದಲ್ಲಿ ಆದಾಗ ಕಂದಾಯ ಸಚಿವರು ಬಂದು ವಿಚಾರಣೆ ಮಾಡಿದ್ದಾರೆ. ಇಲಾಖೆಯಿಂದ ಅಗತ್ಯವಿದ್ದರೆ ಪರಿಶೀಲನೆ ಮಾಡಿಸುತ್ತೇವೆ. ಇವತ್ತಿನ ಸದ್ದಿನ ಬಗ್ಗೆ ಮಾಹಿತಿ ಬಂದಿಲ್ಲ. ನಮ್ಮ ಇಲಾಖೆಯ ಕಾರ್ಯದರ್ಶಿಗಳಿಂದ ಮಾಹಿತಿ ಪಡೆದುಕೊಳ್ಳುತ್ತೇವೆ ಎಂದು ಅವರು ನುಡಿದಿದ್ದಾರೆ.
ಇದನ್ನೂ ಓದಿ:
ಇದ್ದೂ ಇಲ್ಲದಂತಾದ ಸೋಲಾರ್ ಬೀದಿ ದೀಪಗಳು, ಅಳವಡಿಸುವಾಗ ಇದ್ದ ಜೋಷ್ ನಿರ್ವಹಣೆಯಲ್ಲಿ ಇಲ್ಲ
Published On - 1:45 pm, Fri, 26 November 21