
ಕೆಎಸ್ಆರ್, ಕಂಟೋನ್ಮೆಂಟ್ ಸೇರಿ ಬೆಂಗಳೂರಿನ ಇತರೆ ರೈಲು ನಿಲ್ದಾಣಗಳ ಅಭಿವೃದ್ಧಿಗೆ ಚಿಂತನೆ ನಡೆಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಕೆಂಪೇಗೌಡರ ಪ್ರಗತಿ ಪ್ರತಿಮೆ ಅನಾವರಣಗೊಳಿಸಿ ಬಳಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಬ್ರಾಡ್ಗೇಜ್ ಪರಿವರ್ತನೆಗೆ ವೇಗ ಕೊಟ್ಟಿದ್ದೇವೆ. ಹಲವು ಹೊಸ ಪ್ರದೇಶಗಳಿಗೆ ರೈಲು ಸಂಪರ್ಕ ಸಿಕ್ಕಿದೆ ಎಂದರು.
ನಮ್ಮ ರೈಲು ನಿಲ್ದಾನಗಳು ಆಧುನೀಕರಣಗೊಂಡಿವೆ. ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ರೈಲು ನಿಲ್ದಾಣ ಬೇರೆಯೇ ಅನುಭವ ಕೊಡುತ್ತದೆ. ದೇಶದ ಇತರ ರೈಲು ನಿಲ್ದಾಣಗಳನ್ನು ಇದೇ ರೀತಿ ಆಧುನೀಕರಣ ಮಾಡುತ್ತೇವೆ. ಬೆಂಗಳೂರು ನಗರ, ಯಶವಂತಪುರ ನಿಲ್ದಾಣಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಎಂದರು.
ಭಾರತ ಇನ್ನು ಕುಂಟುವುದಿಲ್ಲ. ಅತ್ಯಂತ ವೇಗವಾಗಿ ಓಡುತ್ತದೆ. ಭಾರತದಾದ್ಯಂತ ವಂದೇ ಭಾರತ್ ರೈಲು, ವಿಸ್ಟರ್ಡೊಮ್ ಬೋಗಿಗಳು ಇರುತ್ತವೆ. ಸಾರಿಗೆಯನ್ನು ನಾವು ಸುಧಾರಿಸುತ್ತೇವೆ. ಸಮಯ ಉಳಿಸುತ್ತೇವೆ.
ವಂದೇ ಭಾರತ್ ಎಕ್ಸ್ಪ್ರೆಸ್ ಕೇವಲ ಒಂದು ರೈಲು ಮಾತ್ರವೇ ಅಲ್ಲ. ಅದು ಹೊಸ ಭಾರತದ ಹೊಸ ಮೈಲಿಗಲ್ಲು ಮುಂದಿನ ದಿನಗಳಲ್ಲಿ ಭಾರತದ ರೈಲುಗಲು ಹೇಗಿರಲಿವೆ ಎಂಬುದರ ಒಂದು ಝಲಕ್ ಅಷ್ಟೇ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಸ್ಟಾರ್ಟ್ಅಪ್ ಎನ್ನುವುದು ಒಂದು ಕಂಪನಿಯಿಂದ ಆಗುವುದಿಲ್ಲ. ಅದೊಂದು ಮನೋಭಾವ, ಸಮಗ್ರ ಪ್ರಯತ್ನದ ಫಲ. ಬೆಂಗಳೂರು ಭಾರತದ ಭವಿಷ್ಯಕ್ಕೆ ಅತ್ಯಂತ ಮುಖ್ಯ ನಗರ. ಬೆಂಗಳೂರು ಭಾರತದ ಯುವಶಕ್ತಿಯ ಪ್ರತೀಕವಾಗಿದೆ. KIA ಟರ್ಮಿನಲ್ 2 ಫೋಟೋಗಳಲ್ಲಿ ಕಾಣುವುದಕ್ಕಿಂತ ಹೆಚ್ಚು ಆಧುನಿಕವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:59 pm, Fri, 11 November 22