AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪರಾಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ವಾಹನಗಳನ್ನು ಶ್ಯೂರಿಟಿ ಬಾಂಡ್ ಪಡೆದು ತಕ್ಷಣ ಬಿಡುಗಡೆ ಮಾಡಿ: ರಾಜ್ಯ ಪೊಲೀಸರಿಗೆ ಹೈಕೋರ್ಟ್ ಸೂಚನೆ

ಅಪರಾಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ವಾಹನಗಳನ್ನು ವಿನಾಕಾರಣ ಠಾಣೆಯ ಮುಂದೆ ನಿಲ್ಲಿಸಿಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ. ಹಲವು ವರ್ಷಗಳ ಕಾಲ ಠಾಣೆಯ ಮುಂದೆ ನಿಲ್ಲುವ ವಾಹನಗಳು ನಿಧಾನವಾಗಿ ಹಾಳಾಗುತ್ತವೆ. ದಿನ ಕಳೆದಂತೆ ಅವುಗಳನ್ನು ಗುರುತಿಸುವುದಕ್ಕೂ ಸಾಧ್ಯವಾಗದು - ಹೈಕೋರ್ಟ್

ಅಪರಾಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ವಾಹನಗಳನ್ನು ಶ್ಯೂರಿಟಿ ಬಾಂಡ್ ಪಡೆದು ತಕ್ಷಣ ಬಿಡುಗಡೆ ಮಾಡಿ: ರಾಜ್ಯ ಪೊಲೀಸರಿಗೆ ಹೈಕೋರ್ಟ್ ಸೂಚನೆ
ಅಪರಾಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ವಾಹನಗಳನ್ನು ಶ್ಯೂರಿಟಿ ಬಾಂಡ್ ಪಡೆದು ತಕ್ಷಣ ಬಿಡುಗಡೆ ಮಾಡಿ
TV9 Web
| Edited By: |

Updated on: Nov 11, 2022 | 1:15 PM

Share

ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ  ವಶಪಡಿಸಿಕೊಂಡ ವಾಹನಗಳನ್ನು (Seized vehicles) ಅನಗತ್ಯವಾಗಿ ಪೊಲೀಸ್ ಠಾಣೆಯ ಮುಂದೆ ನಿಲ್ಲಿಸಿಕೊಳ್ಳಬೇಡಿ. ಬದಲಿಗೆ ಶ್ಯೂರಿಟಿ ಪಡೆದು ಬಿಡುಗಡೆ ಮಾಡಿ ಎಂದು ಹೈಕೋರ್ಟ್ ಸೂಚಿಸಿದೆ. ವಾಹನ ಬಿಡುಗಡೆ ಮಾಡಲು ನಿರಾಕರಿಸಿದ ವಿಚಾರಣಾ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಜವ್ವಾಜಿ ಧನತೇಜ (Javvaji Dhana Theja) ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕೆ. ನಟರಾಜನ್ (Justice K.Natarajan) ಅವರಿದ್ದ ಪೀಠ (High Court of Karnataka) ಈ ನಿರ್ದೇಶನ ನೀಡಿದೆ.

ಪೀಠ ತನ್ನ ಆದೇಶದಲ್ಲಿ, ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ವಶಪಡಿಸಿಕೊಂಡ ವಾಹನಗಳನ್ನು ವಿನಾಕಾರಣ ಪೊಲೀಸ್ ಠಾಣೆಯ ಮುಂದೆ ನಿಲ್ಲಿಸಿಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ. ಹಲವು ವರ್ಷಗಳ ಕಾಲ ಠಾಣೆಯ ಮುಂದೆ ನಿಲ್ಲುವ ವಾಹನಗಳು ನಿಧಾನವಾಗಿ ಹಾಳಾಗುತ್ತವೆ. ದಿನ ಕಳೆದಂತೆ ಅವುಗಳನ್ನು ಗುರುತಿಸುವುದಕ್ಕೂ ಸಾಧ್ಯವಾಗದು ಮತ್ತು ನ್ಯಾಯಾಲಯಕ್ಕೆ ತರಲಿಕ್ಕೂ ಆಗದ ಸ್ಥಿತಿ ತಲುಪುತ್ತವೆ.

ಆದ್ದರಿಂದ ಸುಪ್ರೀಂ ಕೋರ್ಟ್ ಸುಂದರ್ ಬಾಯ್ ಅಂಬಲಾಲ್ ವರ್ಸಸ್ ಗುಜರಾತ್ ಸರ್ಕಾರ ಪ್ರಕರಣದಲ್ಲಿ ನೀಡಿರುವ ನಿರ್ದೇಶನಗಳ ಅನ್ವಯ ವಾಹನಗಳನ್ನು ಅವುಗಳ ಮಾಲಿಕರಿಗೆ ಬಾಂಡ್ ಪಡೆದುಕೊಳ್ಳುವುದು ಸೇರಿದಂತೆ ಅಗತ್ಯ ಷರತ್ತುಗಳನ್ನು ವಿಧಿಸುವ ಮೂಲಕ ಹಿಂದಿರುಗಿಸಬೇಕು. ಅಲ್ಲದೇ, ವಾಹನ ಬಿಡುಗಡೆಗೂ ಮುನ್ನ ಪಂಚರ ಸಮಕ್ಷಮದಲ್ಲಿ ವಿವಿಧ ಕೋನಗಳಲ್ಲಿ ವಾಹನದ ಫೋಟೋಗಳನ್ನು ಚಿತ್ರಿಸಿಕೊಳ್ಳಬೇಕು. ಈ ಫೋಟೋಗಳನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ: ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಂಡಾ ಸಿಟಿ ಕಾರು, ಬೈಕ್ ಹಾಗೂ ಆಟೋ ವಶಕ್ಕೆ ಪಡೆದಿದ್ದರು. ಈ ವಾಹನಗಳ ಬಿಡುಗಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ಮಾನ್ಯ ಮಾಡಿರಲಿಲ್ಲ.

ಈ ಹಿನ್ನೆಲೆಯಲ್ಲಿ ವಾಹನಗಳ ಮಾಲಿಕರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಸ್ತುತ ಪ್ರಕರಣದಲ್ಲಿ ವಾಹನಗಳ ಮಾಲಿಕರು ಅಪರಾಧಿಗಳಲ್ಲ. ವಾಹನಗಳನ್ನಷ್ಟೇ ಅಪರಾಧ ಪ್ರಕರಣದಲ್ಲಿ ಬಳಸಿರುವ ಆರೋಪವಿದೆ. ಹೀಗಾಗಿ ವಾಹನಗಳ ಬಿಡುಗಡೆಗೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸದೇ ಇರುವುದು ಸರಿ ಕಾಣುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಅಲ್ಲದೇ, ಹೋಂಡಾ ಸಿಟಿ ಕಾರಿಗೆ 3 ಲಕ್ಷ, ಹೋಂಡಾ ಡಿಯೋ ಬೈಕ್ ಗೆ 30 ಸಾವಿರ ಹಾಗೂ ಆಟೋ ರಿಕ್ಷಾಗೆ 75 ಸಾವಿರ ರೂಪಾಯಿ ಮೊತ್ತದ ಬಾಂಡ್ ಪಡೆದು (indemnity bonds with surety) ವಾಹನಗಳನ್ನು ಅವುಗಳ ಮಾಲಿಕರಿಗೆ ಬಿಡುಗಡೆ ಮಾಡುವಂತೆ ಹೈಕೋರ್ಟ್ ನಿರ್ದೇಶಿಸಿದೆ. (ಮೂಲ: lawtime.in)

ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ನಮ್ಮ ಉದ್ದೇಶ ಈಡೇರುವವರೆಗೆ ಇರಾನ್ ವಿರುದ್ಧದ ಕಾರ್ಯಾಚರಣೆ ನಿಲ್ಲುವುದಿಲ್ಲ
ನಮ್ಮ ಉದ್ದೇಶ ಈಡೇರುವವರೆಗೆ ಇರಾನ್ ವಿರುದ್ಧದ ಕಾರ್ಯಾಚರಣೆ ನಿಲ್ಲುವುದಿಲ್ಲ
ಇಂದು ಈ ರಾಶಿಯವರು ಅನುಮಾನಗಳಿಗೆ ಆಸ್ಪದ ನೀಡಬೇಡಿ
ಇಂದು ಈ ರಾಶಿಯವರು ಅನುಮಾನಗಳಿಗೆ ಆಸ್ಪದ ನೀಡಬೇಡಿ
ಇಂದು ಕೇತುಗ್ರಸ್ತ ಚಂದ್ರಗ್ರಹಣ ಏನೇನು ಮಾಡಬೇಕು ಗೊತ್ತಾ?
ಇಂದು ಕೇತುಗ್ರಸ್ತ ಚಂದ್ರಗ್ರಹಣ ಏನೇನು ಮಾಡಬೇಕು ಗೊತ್ತಾ?
‘ಜೂನ್, ಜುಲೈ ಒಳಗೆ ದರ್ಶನ್ ರಿಲೀಸ್’: ಭವಿಷ್ಯ ನುಡಿದ ಓಂ ಪ್ರಕಾಶ್ ರಾವ್
‘ಜೂನ್, ಜುಲೈ ಒಳಗೆ ದರ್ಶನ್ ರಿಲೀಸ್’: ಭವಿಷ್ಯ ನುಡಿದ ಓಂ ಪ್ರಕಾಶ್ ರಾವ್
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​