PM Modi in Bengaluru: ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿಯ ವಿಶೇಷ ಫೋಟೋಗಳು ಇಲ್ಲಿವೆ

ರಾಜ್ಯ ರಾಜಧಾನಿ ಬೆಂಗಳೂರಿಗೆ ಭೇಟಿ ನೀಡಿದ ಪ್ರಧಾನಿ ಮೋದಿ ನಾಡಪ್ರಭು ಕೆಂಪೆಗೌಡ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದರು.

TV9 Web
| Updated By: ವಿವೇಕ ಬಿರಾದಾರ

Updated on: Nov 11, 2022 | 4:08 PM

ವಿವಿಧ ಕಾರ್ಯಕ್ರಮಗಳನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ನ.11) ರಾಜಧಾನಿ ಬೆಂಗಳೂರಿನ ಹೆಚ್​.ಎ.ಎಲ್​ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​, ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, ಸಂಸದ ತೇಜಸ್ವಿ ಸೂರ್ಯ ಸ್ವಾಗತಿಸಿದರು.

PM Modi in Bengaluru: Prime minister Narendra Modi Bangalore Visit 2022 Photos

1 / 10
ಬೆಂಗಳೂರಿನ ಕೆಎಸ್‌ಆರ್ ರೈಲು ನಿಲ್ದಾಣದ (ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ) ಪ್ಲಾಟ್​ಫಾರಂ ಸಂಖ್ಯೆ 7ರಲ್ಲಿ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಈ ರೈಲು ಮೈಸೂರಿನಿಂದ ಚೈನಕ್ಕೆ ಸಂಪರ್ಕ ಕಲ್ಪಿಸುತ್ತದೆ.

PM Modi in Bengaluru: Prime minister Narendra Modi Bangalore Visit 2022 Photos

2 / 10
PM Modi in Bengaluru: Prime minister Narendra Modi Bangalore Visit 2022 Photos

ಭಾರತ್ ಗೌರವ್ ಕಾಶಿ ಯಾತ್ರಾ ರೈಲು ಸಂಚಾರಕ್ಕೆ ಪ್ರಧಾನಿ ನರೇದ್ರ ಮೋದಿ ಅವರು ಹಸಿರು ನಿಶಾನೆ ತೋರಿಸಿದರು. ಈ ರೈಲು ಕಾಶಿ, ಅಯೋಧ್ಯೆ, ಕಾಶಿ, ಅಯೋಧ್ಯಾ ಹಾಗು ಪ್ರಯಾಗ್ ರಾಜ್​ಗೆ ಸೇರಿದಂತೆ ಹಲವು ಪ್ರಮುಖ ಯಾತ್ರಾ ಸ್ಥಳಗಳಿಗೆ ಕೊಂಡೊಯ್ಯಲಿದ್ದು, ಒಂದು ವಾರದಲ್ಲಿ ಮರಳಿ ಬರಲಿದೆ. ರೈಲಿಗೆ 20 ಸಾವಿರ ಶುಲ್ಕ ನಿಗದಿಪಡಿಸಲಾಗಿದ್ದು, ರಾಜ್ಯ ಸರ್ಕಾರವು 5 ಸಾವಿರ ಸಹಾಯನಧನ ಒದಗಿಸುತ್ತಿದೆ.

3 / 10
PM Modi in Bengaluru: Prime minister Narendra Modi Bangalore Visit 2022 Photos

ದೇಶದ ಏರಡನೇ ಅತಿ ದೊಡ್ಡ ವಿಮಾನ ನಿಲ್ದಾಣವಾದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ -2 ಅನ್ನು ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆಗೊಳಿಸಿದರು. ಏಷ್ಯಾ ಖಂಡದ ಮೊದಲ ಗಾರ್ಡನ್‌ ಟರ್ಮಿನಲ್‌-2 ಆಗಿದೆ. 2.55 ಲಕ್ಷ ಚದರ ಮೀಟರ್​​ ವಿಸ್ತೀರ್ಣದಲ್ಲಿರುವ ಟರ್ಮಿನಲ್ ನಿರ್ಮಾಣಕ್ಕೆ 5 ಸಾವಿರ ಕೋಟಿ ವೆಚ್ಚ ಮಾಡಲಾಗಿದೆ.

4 / 10
PM Modi in Bengaluru: Prime minister Narendra Modi Bangalore Visit 2022 Photos

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಲಾಗಿರುವ ನಾಡಪ್ರಭು ಕೆಂಪೇಗೌಡರ 218 ಟನ್ ಭಾರ ಉಳ್ಳ 108 ಅಡಿ ಎತ್ತರದ ಕಂಚಿನ "ಪ್ರಗತಿ ಪ್ರತಿಮೆ"ಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದರು.

5 / 10
PM Modi in Bengaluru: Prime minister Narendra Modi Bangalore Visit 2022 Photos

ನಾಡಪ್ರಭು ಕೆಂಪೇಗೌಡರ ಕಂಚಿನ "ಪ್ರಗತಿ ಪ್ರತಿಮೆ" ಉದ್ಘಾಟನೆ ಬಳಿಕ ಪ್ರಧಾನಿ ಮೋದಿ ಅವರು ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾದರು. ಸಮಾವೇಶದಲ್ಲಿ ಮಾತನಾಡಿದ ಅವರು ಬೆಂಗಳೂರು ನಗರವನ್ನು ನಾಡಪ್ರಭು ಕೆಂಪೇಗೌಡರ ಪರಿಕಲ್ಪನೆಯಂತೆಯೇ ಅಭಿವೃದ್ಧಿಪಡಿಸುತ್ತೇವೆ. ಕೆಂಪೇಗೌಡರು ಬೆಂಗಳೂರನ್ನು ಆರ್ಥಿಕವಾಗಿ ಮಾತ್ರವಲ್ಲ ಸಾಂಸ್ಕೃತಿವಕಾಗಿಯೂ ಸದೃಢಗೊಳಿಸಬೇಕು ಎಂದು ಚಿಂತಿಸಿದ್ದರು. ಬೆಂಗಳೂರು ಇಂದು ಜಾಗತಿಕ ನಗರವಾಗಿ ಬೆಳೆದಿದೆ ಎಂದು ಹೇಳಿದರು

6 / 10
PM Modi in Bengaluru: Prime minister Narendra Modi Bangalore Visit 2022 Photos

ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು ರೈಲು ನಿಲ್ದಾಣಕ್ಕೆ ತೆರಳುವ ಮಾರ್ಗದಲ್ಲಿ ರಸ್ತೆಯ ಪಕ್ಕದಲ್ಲಿ ಭಾರೀ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿದ್ದರು. ಈ ವೇಳೆ ಪ್ರಧಾನಿ ಮೋದಿ ಕಾರಿನಿಂದ ಕೆಳಗೆ ಇಳಿದು ಕಾರ್ಯಕರ್ತರಿಗೆ ಕೈ ಮುಗಿದು, ಕೈ ಬೀಸಿದರು.

7 / 10
PM Modi in Bengaluru: Prime minister Narendra Modi Bangalore Visit 2022 Photos

ಶ್ರೀ ರಾಮಾಯಣ ಕತೃ ಮಹರ್ಷಿ ವಾಲ್ಮೀಕಿಯವರ ಜನ್ಮದಿನ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಮಹರ್ಷಿ ವಾಲ್ಮೀಕಿ ಮೂರ್ತಿ ಪುಷ್ಪಾರ್ಚನೆ ಮಾಡಿ ನಮಿಸಿದರು.

8 / 10
PM Modi in Bengaluru: Prime minister Narendra Modi Bangalore Visit 2022 Photos

ಮಹರ್ಷಿ ವಾಲ್ಮೀಕಿ ಮೂರ್ತಿಗೆ ಪುಷ್ಪಾರ್ಚನೆ ಮಾಡಲು ತೆರಳುವ ವೇಳೆ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, ಸಾರಿಗೆ ಸಚಿವ ಶ್ರೀರಾಮುಲು ಮತ್ತು ವಿವಿಧ ಮಠಾದೀಶರು ಸಾಥ್​ ನೀಡಿದರು.

9 / 10
PM Modi in Bengaluru: Prime minister Narendra Modi Bangalore Visit 2022 Photos

ಇಂದು ದಾಸಶ್ರೇಷ್ಠ ಕನಕದಾಸರ ಜನ್ಮದಿನ. ಈ ನಿಮಿತ್ತ ಶಾಸಕರ ಭವನದ ಆವರಣದಲ್ಲಿನ ಕನಕದಾಸರ ಮೂರ್ತಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪುಷ್ಪಾರ್ಚನೆ ಮಾಡಿದರು.

10 / 10
Follow us