Updated on: Nov 12, 2022 | 7:30 AM
Nishvika Naidu looks bold and beautiful in Dil Pasand Kannada movie
‘ಗುರು ಶಿಷ್ಯರು’ ಬಳಿಕ ನಿಶ್ವಿಕಾ ನಟನೆಯ ‘ದಿಲ್ ಪಸಂದ್’ ಸಿನಿಮಾ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿಯೂ ಅವರಿಗೆ ಮುಖ್ಯವಾದ ಪಾತ್ರ ಇದೆ. ಡಾರ್ಲಿಂಗ್ ಕೃಷ್ಣಗೆ ಜೋಡಿಯಾಗಿ ನಿಶ್ವಿಕಾ ಅಭಿನಯಿಸಿದ್ದಾರೆ. ಇಬ್ಬರ ಕೆಮಿಸ್ಟ್ರಿ ಚೆನ್ನಾಗಿ ಮೂಡಿಬಂದಿದೆ.
‘ದಿಲ್ ಪಸಂದ್’ ಸಿನಿಮಾದಲ್ಲಿ ನಿಶ್ವಿಕಾ ನಾಯ್ಡು ಅವರು ಬೋಲ್ಡ್ ಹುಡುಗಿಯ ಪಾತ್ರ ಮಾಡಿದ್ದಾರೆ. ಗ್ಲಾಮರ್ ಮತ್ತು ನಟನೆ ಮೂಲಕ ಆ ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ. ಅಭಿಮಾನಿಗಳಿಂದ ನಿಶ್ವಿಕಾ ನಟನೆಗೆ ಮೆಚ್ಚುಗೆ ಸಿಕ್ಕಿದೆ.
ಈ ಸಿನಿಮಾದಲ್ಲಿನ ‘ರಾಮಾ ರಾಮಾ..’ ಹಾಡು ಸೂಪರ್ ಹಿಟ್ ಆಗಿದೆ. ಇದರಲ್ಲಿ ನಿಶ್ವಿಕಾ ನಾಯ್ಡು ಅವರು ಬಿಂದಾಸ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ರೀಲ್ಸ್ನಲ್ಲಿ ಈ ಗೀತೆ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಮಂಗ್ಲಿ ಧ್ವನಿಯಲ್ಲಿ ‘ರಾಮಾ ರಾಮಾ..’ ಹಾಡು ಮೂಡಿಬಂದಿದೆ.