Nishvika Naidu: ‘ಗುರು ಶಿಷ್ಯರು’ ಬಳಿಕ ‘ದಿಲ್ ಪಸಂದ್’ ಚಿತ್ರದಲ್ಲಿ ನಿಶ್ವಿಕಾ ನಾಯ್ಡು ಮಿಂಚಿಂಗ್
Nishvika Naidu Photos: ‘ದಿಲ್ ಪಸಂದ್’ ಸಿನಿಮಾದಲ್ಲಿ ನಿಶ್ವಿಕಾ ನಾಯ್ಡು ಅವರು ಬೋಲ್ಡ್ ಹುಡುಗಿಯ ಪಾತ್ರ ಮಾಡಿದ್ದಾರೆ. ಅವರ ನಟನೆಗೆ ಅಭಿಮಾನಿಗಳಿಂದ ಮೆಚ್ಚುಗೆ ಸಿಕ್ಕಿದೆ.
Updated on: Nov 12, 2022 | 7:30 AM

Nishvika Naidu looks bold and beautiful in Dil Pasand Kannada movie

Nishvika Naidu looks bold and beautiful in Dil Pasand Kannada movie

‘ಗುರು ಶಿಷ್ಯರು’ ಬಳಿಕ ನಿಶ್ವಿಕಾ ನಟನೆಯ ‘ದಿಲ್ ಪಸಂದ್’ ಸಿನಿಮಾ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿಯೂ ಅವರಿಗೆ ಮುಖ್ಯವಾದ ಪಾತ್ರ ಇದೆ. ಡಾರ್ಲಿಂಗ್ ಕೃಷ್ಣಗೆ ಜೋಡಿಯಾಗಿ ನಿಶ್ವಿಕಾ ಅಭಿನಯಿಸಿದ್ದಾರೆ. ಇಬ್ಬರ ಕೆಮಿಸ್ಟ್ರಿ ಚೆನ್ನಾಗಿ ಮೂಡಿಬಂದಿದೆ.

‘ದಿಲ್ ಪಸಂದ್’ ಸಿನಿಮಾದಲ್ಲಿ ನಿಶ್ವಿಕಾ ನಾಯ್ಡು ಅವರು ಬೋಲ್ಡ್ ಹುಡುಗಿಯ ಪಾತ್ರ ಮಾಡಿದ್ದಾರೆ. ಗ್ಲಾಮರ್ ಮತ್ತು ನಟನೆ ಮೂಲಕ ಆ ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ. ಅಭಿಮಾನಿಗಳಿಂದ ನಿಶ್ವಿಕಾ ನಟನೆಗೆ ಮೆಚ್ಚುಗೆ ಸಿಕ್ಕಿದೆ.

ಈ ಸಿನಿಮಾದಲ್ಲಿನ ‘ರಾಮಾ ರಾಮಾ..’ ಹಾಡು ಸೂಪರ್ ಹಿಟ್ ಆಗಿದೆ. ಇದರಲ್ಲಿ ನಿಶ್ವಿಕಾ ನಾಯ್ಡು ಅವರು ಬಿಂದಾಸ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ರೀಲ್ಸ್ನಲ್ಲಿ ಈ ಗೀತೆ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಮಂಗ್ಲಿ ಧ್ವನಿಯಲ್ಲಿ ‘ರಾಮಾ ರಾಮಾ..’ ಹಾಡು ಮೂಡಿಬಂದಿದೆ.




