ಉಚಿತ ಬಸ್ ಪ್ರಯಾಣಕ್ಕೆ ಹೆಚ್ಚಿದ ಬೇಡಿಕೆ, ನಮಗೂ ಫ್ರೀ ಕೊಡಿ ಎಂದ ಸಾರಿಗೆ ನಿಗಮಗಳ ‌ನಿವೃತ್ತ ನೌಕರರು

|

Updated on: Jun 05, 2023 | 1:11 PM

ನಿವೃತ್ತಿ ಬಳಿಕ ವಾರ್ಷಿಕವಾಗಿ 500 ರೂ ನಿಗಮಗಳು ವಸೂಲಿ ಮಾಡುತ್ತಿವೆ. 35-40 ವರ್ಷ ಸಂಸ್ಥೆ ಏಳಿಗೆಗಾಗಿ ದುಡಿದ ನೌಕರರಿಂದ 500 ವಸೂಲಿ ಮಾಡಲಾಗುತ್ತಿದೆ. ಜೂನ್ 11 ರಂದು ಫ್ರೀ ಬಸ್ ಸ್ಕೀಂ ಚಾಲನೆ ವೇಳೆ ನಾಲ್ಕು ನಿಗಮಗಳ ನಿವೃತ್ತಿ ನೌಕರರ ಪತಿ/,ಪತ್ನಿಗೆ ಉಚಿತ ಪ್ರಯಾಣ ಘೋಷಣೆ ಮಾಡಬೇಕು ಎಂದು ಒತ್ತಾಯಿಸಲಾಗುತ್ತಿದೆ.

ಉಚಿತ ಬಸ್ ಪ್ರಯಾಣಕ್ಕೆ ಹೆಚ್ಚಿದ ಬೇಡಿಕೆ, ನಮಗೂ ಫ್ರೀ ಕೊಡಿ ಎಂದ ಸಾರಿಗೆ ನಿಗಮಗಳ ‌ನಿವೃತ್ತ ನೌಕರರು
ಕೆಎಸ್​ಆರ್​ಟಿಸಿ ಬಸ್​
Follow us on

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ನೀಡಿದ್ದ ಭರವಸೆಯಂತೆ ಎಲ್ಲ ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣವನ್ನು ಘೋಷಣೆ ಮಾಡಿದೆ. ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನವನ್ನು ತೆಗೆದುಕೊಳ್ಳಲಾಗಿತ್ತು. ಇನ್ನೇನು ಜೂನ್ 11ರಿಂದ ಈ ಯೋಜನೆ ಜಾರಿಯಾಗಲಿದೆ. ಇನ್ನು ರಾಜ್ಯದಲ್ಲಿ ಉಚಿತ ಬಸ್ ಪ್ರಯಾಣಕ್ಕೆ ಬೇಡಿಕೆ ಹೆಚ್ಚಿದ್ದು ಪುರುಷರು ಕೂಡ ತಮಗೂ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕೊಡಬೇಕು ಎನ್ನುತ್ತಿದ್ದಾರ. ಜೊತೆಗೆ ಸಾರಿಗೆ ನಿಗಮಗಳ ‌ನಿವೃತ್ತಿ ನೌಕರರ ಉಚಿತ ಪ್ರಯಾಣಕ್ಕೆ ಆಗ್ರಹ ಕೇಳಿ ಬಂದಿದೆ.

ನಿವೃತ್ತಿ ಆದ ನೌಕರರಿಗೆ ಅವರ ಪತಿ/ಪತ್ನಿಗೆ ಉಚಿತ ಪ್ರಯಾಣ ಸೌಲಭ್ಯಕ್ಕೆ ಒತ್ತಾಯ ಕೇಳಿ ಬಂದಿದೆ. ನಿವೃತ್ತಿ ಬಳಿಕ ವಾರ್ಷಿಕವಾಗಿ 500 ರೂ ನಿಗಮಗಳು ವಸೂಲಿ ಮಾಡುತ್ತಿವೆ. 35-40 ವರ್ಷ ಸಂಸ್ಥೆ ಏಳಿಗೆಗಾಗಿ ದುಡಿದ ನೌಕರರಿಂದ 500 ವಸೂಲಿ ಮಾಡಲಾಗುತ್ತಿದೆ. ಜೂನ್ 11 ರಂದು ಫ್ರೀ ಬಸ್ ಸ್ಕೀಂ ಚಾಲನೆ ವೇಳೆ ನಾಲ್ಕು ನಿಗಮಗಳ ನಿವೃತ್ತಿ ನೌಕರರ ಪತಿ/,ಪತ್ನಿಗೆ ಉಚಿತ ಪ್ರಯಾಣ ಘೋಷಣೆ ಮಾಡಬೇಕು ಎಂದು ಒತ್ತಾಯಿಸಲಾಗುತ್ತಿದೆ. ಈ ಬಗ್ಗೆ ಕೆಎಸ್ಆರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಶನ್ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಮಹಿಳೆಯರೇ ಗಮನಿಸಿ: ಉಚಿತ ಪ್ರಯಾಣಕ್ಕೂ ಟಿಕೆಟ್​ ಪಡೆಯಲೇಬೇಕು: ಫ್ರೀ ಬಸ್ ಟಿಕೆಟ್ ಹೇಗರಲಿದೆ ಗೊತ್ತಾ?

ಉಚಿತ ಪ್ರಯಾಣದ ಯೋಜನೆಯಡಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಅದಲ್ಲದೇ ಕರ್ನಾಟಕದಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಪ್ರಯಾಣಿಸಬಹುದಾಗಿದೆ.

ಯಾವೆಲ್ಲ ಬಸ್​ಗಳಲ್ಲಿ ಉಚಿತ ಪ್ರಯಾಣ?

  • ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ಗಳಲ್ಲಿ ಉಚಿತ ಪ್ರಯಾಣ
  • ಎಸಿ, ನಾನ್​ ಎಸಿ ಸ್ಲೀಪರ್​ ಬಸ್​ಗಳಲ್ಲಿ ಉಚಿತ ಪ್ರಯಾಣವಿಲ್ಲ
  • ಎಸಿ ಮತ್ತು ಐಷಾರಾಮಿ ಬಸ್​ಗಳಲ್ಲಿ ಉಚಿತ ಪ್ರಯಾಣವಿಲ್ಲ
  • ಅಂತಾರಾಜ್ಯ ಪ್ರಯಾಣಕ್ಕಿಲ್ಲ ಉಚಿತ ಸೌಲಭ್ಯ
  • KSRTC ಬಸ್​ಗಳಲ್ಲಿ ಶೇ 50ರಷ್ಟು ಸೀಟ್ ಪುರುಷರಿಗೆ ಮೀಸಲು
  • ಬಿಎಂಟಿಸಿ ಬಸ್​ಗಳಲ್ಲಿ ಯಾವುದೇ ಸೀಟ್ ಮೀಸಲು ಇರುವುದಿಲ್ಲ

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:04 pm, Mon, 5 June 23