ಬೆಂಗಳೂರು: ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೆಂಗಳೂರಿನ ಕೆ.ಆರ್.ಪುರಂನಿಂದ ಱಲಿ ಆರಂಭವಾಗಿದೆ. ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ತಲೆಯ ಮೇಲೆ ಗೋಣಿಚೀಲ ಹಾಕಿಕೊಂಡು ಧರಣಿ ನಡೆಸುತ್ತಿದ್ದಾರೆ. ಆದ್ರೆ ಪ್ರತಿಭಟನೆ ನಡೆಸಲು ಮುಂದಾಗಿದ್ದ ಕುರುಬೂರು ಶಾಂತಕುಮಾರ್ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಮೌರ್ಯ ಸರ್ಕಲ್‌ನಲ್ಲಿ ಪ್ರತಿಭಟನೆಗೂ ಮುನ್ನವೇ ಕುರುಬೂರು ಶಾಂತಕುಮಾರ್ರನ್ನು ವಶಕ್ಕೆ ಪಡೆಯಲಾಗಿದೆ.
ವಶಕ್ಕೆ ಪಡೆಯುವ ವಿಚಾರವಾಗಿ ಪೊಲೀಸ್ ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ಶುರುವಾಗಿದೆ. ಸದ್ಯ ರಸ್ತೆ ತಡೆಯದೆ ಱಲಿ ಮಾಡುವುದಕ್ಕೆ ಪೊಲೀಸರು ಅನುಮತಿ ನೀಡಿದ್ದಾರೆ. ಮತ್ತೊಂದು ಕಡೆ ಟೌನ್ ಹಾಲ್ ಗೆ ದಲಿತ ಸಂಘರ್ಷ ಸಮಿತಿಯ ನೂರಕ್ಕೂ ಹೆಚ್ಚು ಕಾರ್ಯಕರ್ತರು ಆಗಮಿಸಿದ್ದು ಕನ್ನಡಪರ ಹೋರಾಟಗಾರರು ಕೊರಳಿಗೆ ಕ್ಯಾರೆಟ್ ಬೆಂಡೆಕಾಯಿ ಮೆಣಸಿನಕಾಯಿ ಬದನೆಕಾಯಿ ಹಾಕಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ.
ಇನ್ನು ಟೌನ್ ಹಾಲ್ ಬಳಿ ಪೊಲೀಸರಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ರ್ಯಾಲಿಗಳ ಮೂಲಕ ಟೌನ್ ಹಾಲ್ ಗೆ ಹೋರಾಟಗಾರರು ಆಗಮಿಸುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳು ಖಾಕಿ ಫುಲ್ ಅಲರ್ಟ್ ಮಾಡಿದೆ. 11 ಗಂಟೆಗೆ ಟೌನ್ ಹಾಲ್ ನಿಂದ ಮೈಸೂರು ಬ್ಯಾಂಕ್ ಸರ್ಕಲ್ ವರೆಗೆ ಬೃಹತ್ ರ್ಯಾಲಿ ನಡೆಯಲಿದೆ.
ಸೂಕ್ತ ಸ್ಥಳದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಬಸ್ ಆಟೋಗಳೆಲ್ಲ ಚಾಲನೆಯಲ್ಲಿದೆ ಯಾವುದೇ ಸಮಸ್ಯೆ ಆಗಿಲ್ಲ. ಟೌನ್ ಹಾಲ್ ನಿಂದ ಮೈಸೂರು ಬ್ಯಾಂಕ್ ವರೆಗೆ ಮೆರವಣಿಗೆ ನಡೆಯಲಿದೆ ಎಂದು ಮೆಸೆಜ್ ಇದೆ. ಈಗಾಗಲೆ ರೌಡಿ ಎಲಿಮೆಂಟ್ಸ್ ಗಳಿಗೆ ನೆನ್ನೆ ವಾರ್ನಿಂಗ್ ಕೊಟ್ಟಿದ್ದೇವೆ. 8 ಎಸಿಪಿ 10 ಇನ್ಸ್ಪೆಕ್ಟರ್ ಸೇರಿ 600 ಜನ ಪೊಲೀಸ್ ಸಿಬ್ಬಂದಿನ ನಿಯೋಜನೆ ಮಾಡಿದ್ದೇವೆ. ಯಾವುದೇ ಅಹಿತಕರ ಘಟನೆ ನಡೆದರೆ ಕ್ರಮ ಕೈಗೊಳ್ಳುತ್ತೆವೆ ಎಂದು ಡಿಸಿಪಿ ಅನುಚೇತ್ ತಿಳಿಸಿದ್ದಾರೆ.
Bengaloreನಲ್ಲಿ ಕೋಡಿಹಳ್ಳಿ ನೇತೃತ್ವದಲ್ಲಿ ರೈತರು ಗೋಣಿಚೀಲ ಹಾಕಿಕೊಂಡು ಱಲಿ | Kodihalli ChandraShekar |
ಇದನ್ನೂ ಓದಿ: Bharat Bandh: ದೆಹಲಿ ಗಡಿಗಳಲ್ಲಿ ರೈತರ ಪ್ರತಿಭಟನೆ ಶುರು; ಹೆದ್ದಾರಿಗಳೆಲ್ಲ ಬಂದ್
Published On - 9:31 am, Mon, 27 September 21