ಬೆಂಗಳೂರು: ಕೃಷಿ ಕಾಯ್ದೆ ಹಾಗೂ ಬೆಲೆ ಏರಿಕೆ ವಿರೋಧಿಸಿ ಇಂದು ( ಸೆಪ್ಟೆಂಬರ್ 27) ರೈತರು ಬಂದ್ಗೆ ಮುಂದಾಗಿದ್ದು ಸಿಲಿಕಾನ್ ಸಿಟಿಯ 4 ಭಾಗಗಳಿಂದ ಇಂದು ಪ್ರತಿಭಟನಾ ಮೆರವಣಿಗೆ ಆರಂಭವಾಗಿತ್ತು. ಸದ್ಯ ಪ್ರತಿಭಟನೆ ಅಂತ್ಯವಾಗಿದೆ. ಪ್ರತಿಭಟನೆ ಬಳಿಕ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿದ್ದು, ಜನಸಾಮಾನ್ಯರು ಮನೆಯಲ್ಲೇ ಇದ್ದು ಬೆಂಬಲ ವ್ಯಕ್ತಪಡಿಸಿದ್ದಾರೆ. ಹೆದ್ದಾರಿಗಳು ಬಂದ್ ಆಗಿವೆ. ನವೆಂಬರ್ನಲ್ಲಿ ಬಹುದೊಡ್ಡ ಪ್ರತಿಭಟನೆ ನಡೆಯಲಿದೆ. ದೆಹಲಿಯಲ್ಲಿ ಮುಂದಿನ ಹೋರಾಟದ ಬಗ್ಗೆ ಸಂಯುಕ್ತ ಮೋರ್ಚಾ ತೀರ್ಮಾನಕ್ಕೆ ಬರಲಿದೆ. ಬಂದ್ ಯಶಸ್ವಿಯಾಗಿದೆ. ಆದರೆ ಸರ್ಕಾರ ಹಠಕ್ಕೆ ಬಿದ್ದು, ಬಸ್ ಓಡಿಸಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.