ಅಶೋಕ ಪಿಲ್ಲರ್​​ಗೆ ಅಂದು ಚಕ್ರವರ್ತಿ ರಾಜಾಜಿ ಬೆಳ್ಳಿ ಕರಣೆಯಿಂದ ಶಂಕುಸ್ಥಾಪನೆ ಮಾಡಿದ್ದರು! ಅದರ ಸುಯೋಗವೆಂಬಂತೆ ಜಯನಗರಕ್ಕೆ ಈಗ ವಜ್ರ ಮಹೋತ್ಸವ!

|

Updated on: Oct 09, 2023 | 12:11 PM

Jayanagar Ashoka Pillar: ದೇಶದ ಮೊದಲ ಯೋಜಿತ ಭಾಗವಾದ ರಾಜಧಾನಿ ಬೆಂಗಳೂರಿನ ವಿಶಾಲ ಜಯನಗರ ಪ್ರದೇಶವು ತನ್ನ 75ನೇ ವಾರ್ಷಿಕೋತ್ಸವ  ಆಚರಿಸಿಕೊಂಡಿದೆ. ಇದನ್ನು 1948 ರಲ್ಲಿ ಸಿಟಿ ಇಂಪ್ರೂವ್‌ಮೆಂಟ್ ಟ್ರಸ್ಟ್ ಬೋರ್ಡ್  ನಿರ್ಮಿಸಿದ್ದು, ಈಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಎಂದು ಕರೆಯಲಾಗುತ್ತದೆ. ಈಗ ಜಯನಗರದ ಪ್ರವೇಶ ಬಿಂದುವಾಗಿರುವ ಅಶೋಕ ಸ್ತಂಭವನ್ನು ಭಾರತದ ಮೊದಲ ಗವರ್ನರ್-ಜನರಲ್ ಚಕ್ರವರ್ತಿ ರಾಜಗೋಪಾಲಾಚಾರಿ ಅವರು ಸ್ಥಾಪಿಸಿದರು.

ಅಶೋಕ ಪಿಲ್ಲರ್​​ಗೆ ಅಂದು ಚಕ್ರವರ್ತಿ ರಾಜಾಜಿ ಬೆಳ್ಳಿ ಕರಣೆಯಿಂದ ಶಂಕುಸ್ಥಾಪನೆ ಮಾಡಿದ್ದರು! ಅದರ ಸುಯೋಗವೆಂಬಂತೆ ಜಯನಗರಕ್ಕೆ ಈಗ ವಜ್ರ ಮಹೋತ್ಸವ!
ಅಶೋಕ ಪಿಲ್ಲರ್​​ಗೆ ಅಂದು ಬೆಳ್ಳಿಯ ಕರಣೆಯಿಂದ ಶಂಕುಸ್ಥಾಪನೆ ಮಾಡಿದ್ದರು! ಅದರ ಸುಯೋಗವೆಂಬಂತೆ ಜಯನಗರಕ್ಕೆ ಈಗ ವಜ್ರ ಮಹೋತ್ಸವ!
Follow us on

ಆಗಸ್ಟ್ 20, 1948. ಅಂದು ಶುಕ್ರವಾರ. ಸ್ವಾತಂತ್ರ್ಯ ಬಂದು ಒಂದು ವರ್ಷ ಒಂದು ವಾರವಾಗಿತ್ತು. ಮತ್ತು ಅದೇ ಶುಕ್ರವಾರವಾಗಿತ್ತು. ಆಗ ಬೆಂಗಳೂರು (Bengaluru) ಎಂದು ಕರೆಯಲ್ಪಡುವ ಅಂದಿನ ಬೆಂಗಳೂರು (Bangalore), ದೇಶದ ಇತರ ಭಾಗಗಳಂತೆ, ಭರವಸೆ ಮತ್ತು ಸಾಧನೆಯ ಭಾವದಿಂದ ತುಂಬಿತ್ತು. ಅಂದು ಇಡೀ ವಾತಾವರಣದಲ್ಲಿ ತುಂಬಿದ್ದ ರಾಷ್ಟ್ರನಿರ್ಮಾಣದ ಉದಾತ್ತ ಉತ್ಸಾಹವನ್ನು ಸಾಂಕೇತಿಕವಾಗಿ, ಬೆಂಗಳೂರು ನಗರವನ್ನು ದೇಶದ ಮೊದಲ ಮತ್ತು ಅತಿದೊಡ್ಡ ಯೋಜಿತ ಪ್ರದೇಶವಾಗಿ ನಿರ್ಮಿಸುವ ಕಸರತ್ತಿನೊಂದಿಗೆ ಪ್ರಾರಂಭಬವಾಗಿತ್ತು. ಸ್ವತಂತ್ರ ಭಾರತದ ಮೊದಲ ಮತ್ತು ಕೊನೆಯ ಭಾರತೀಯ ಗವರ್ನರ್-ಜನರಲ್ ಚಕ್ರವರ್ತಿ ರಾಜಗೋಪಾಲಾಚಾರಿ (ರಾಜಾಜಿ ಎಂದು ಪ್ರಸಿದ್ಧರು) ಕನಕನಪಾಳ್ಯಕ್ಕೆ ಆಗಮಿಸಿದ್ದರು ಮತ್ತು ಜಯನಗರದ ಸಿವಿಲ್ ಕಾಮಗಾರಿಗಳ ಪ್ರಾರಂಭವನ್ನು ಗುರುತಿಸುವ ಭವ್ಯವಾದ ಸಮಾರಂಭದಲ್ಲಿ ಐಕಾನಿಕ್ ಅಶೋಕ ಸ್ತಂಭಕ್ಕೆ (Ashoka Pillar) ಶಂಕುಸ್ಥಾಪನೆ ಮಾಡಿದರು. ರಾಜಾಜಿ ಅವರು ಸಿಮೆಂಟ್‌ನೊಂದಿಗೆ ಅಡಿಪಾಯ ಹಾಕಲು ಆ ಸಂದರ್ಭದಲ್ಲಿ ಅವರ ಕೈಗೆ ಬೆಳ್ಳಿಯ ಕರಣೆ ನಿಡಲಾಗಿತ್ತು.

ದೇಶದ ಮೊದಲ ಯೋಜಿತ ಭಾಗವಾದ ರಾಜಧಾನಿ ಬೆಂಗಳೂರಿನ ವಿಶಾಲ ಜಯನಗರ ಪ್ರದೇಶವು (Bengaluru Jayanagar) ತನ್ನ 75ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದೆ. ಇದನ್ನು 1948 ರಲ್ಲಿ ಸಿಟಿ ಇಂಪ್ರೂವ್‌ಮೆಂಟ್ ಟ್ರಸ್ಟ್ ಬೋರ್ಡ್ (ಸಿಐಟಿಬಿ -City Improvement Trust Board -CITB) ನಿರ್ಮಿಸಿದ್ದು, ಈಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ – Bengaluru Development Authority -BDA) ಎಂದು ಕರೆಯಲಾಗುತ್ತದೆ. ಈಗ ಜಯನಗರದ ಪ್ರವೇಶ ಬಿಂದುವಾಗಿರುವ ಅಶೋಕ ಸ್ತಂಭವನ್ನು ಭಾರತದ ಮೊದಲ ಗವರ್ನರ್-ಜನರಲ್ ಚಕ್ರವರ್ತಿ ರಾಜಗೋಪಾಲಾಚಾರಿ ಅವರು (Chakravarti Rajagopalachari) ಸ್ಥಾಪಿಸಿದರು. ಕಾಲಾಂತರದಲ್ಲಿ, ಜಯನಗರವು ಬೆಂಗಳೂರಿನ ಪ್ರಮುಖ ಹೆಗ್ಗುರುತು ಪ್ರದೇಶವಾಗಿದೆ. ಇದು ಹೆಚ್ಚಿನ ಆಸ್ತಿ ಮೌಲ್ಯಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಹೆಸರುವಾಸಿಯಾಗಿದೆ.

ಬೆಂಗಳೂರಿನ ಇತಿಹಾಸಕಾರ ಮತ್ತು ಲೇಖಕ ವೇಮಗಲ್ ಸೋಮಶೇಖರ್ ಅವರು 75 ವರ್ಷಗಳ ಹಿಂದೆ ರಾಜಾಜಿ ಅವರು ಆಗಮಿಸಿ ನೆರವೇರಿಸಿದ ಉದ್ಘಾಟನಾ ಸಮಾರಂಭವನ್ನು ಭಾವಪರವಶರಾಗಿ ಅಂದಿನ ಕೆಲವೇ ಮಂದಿ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಈ ಸಂದರ್ಭಕ್ಕಾಗಿ ಮರದ ಹಿಡಿಕೆಯೊಂದಿಗೆ ವಿಶೇಷವಾದ ಬೆಳ್ಳಿಯ ಕರಣೆಯನ್ನು ತಯಾರಿಸಲಾಯಿತು ಮತ್ತು ರಾಜಾಜಿ ಅದನ್ನು ನೋಡಿ ಆಶ್ಚರ್ಯಚಕಿತರಾಗಿದ್ದರು ಎಂದು 79 ವರ್ಷದ ಇತಿಹಾಸಕಾರ ವೇಮಗಲ್ ಸೋಮಶೇಖರ್ ನೆನಪಿಸಿಕೊಳ್ಳುತ್ತಾರೆ ಎಂದು The Times Of India ತನ್ನ ಸ್ಮರಣಾರ್ಥ ಲೇಖನದಲ್ಲಿ ಉಲ್ಲೇಖಿಸಿದೆ.

ಜಯನಗರ ಒಟ್ಟು 1,500 ಎಕರೆಗಳಲ್ಲಿ ಹರಡಿಕೊಂಡಿದೆ. ಕನಕನಪಾಳ್ಯ ಮತ್ತು ಅದರ ಸುತ್ತಮುತ್ತಲಿನ ಅನೇಕ ಹಳ್ಳಿಗಳನ್ನು ಒಟ್ಟುಗೂಡಿಸಿ, ಜಯನಗರ ಒಂದು ಮೂಲೆಯಲ್ಲಿ ಅಶೋಕ ಪಿಲ್ಲರ್‌ನಿಂದ ಇನ್ನೊಂದು ಮೂಲೆಯಲ್ಲಿ ಜಯದೇವ ಆಸ್ಪತ್ರೆಯವರೆಗೆ ವ್ಯಾಪಿಸಿದೆ. ಅಶೋಕ ಪಿಲ್ಲರ್‌ನಿಂದ ಮಾಧವನ್ ಪಾರ್ಕ್‌ವರೆಗಿನ ಪ್ರದೇಶವು ಆ ಸಮಯದಲ್ಲಿ ಅನೇಕ ಖ್ಯಾತ ನಾಮರು ವಾಸಿಸುತ್ತಿದ್ದರು.

ಪ್ರದೇಶವು ಕಾಲಂತರದಲ್ಲಿ ಭಾರೀ ಜನಪ್ರಿಯತೆ ಗಳಿಸಲು ಪ್ರಾರಂಭಿಸಿತು. ಜಯನಗರ 4ನೇ ಟಿ ಬ್ಲಾಕ್‌ನ ಕಥೆಯು ಅತ್ಯಂತ ಆಸಕ್ತಿದಾಯಕವಾಗಿದೆ. ಏಕೆಂದರೆ ಇದು ತಾಯಪ್ಪನಹಳ್ಳಿ ಎಂಬ ಹಳ್ಳಿಗಳಲ್ಲಿ ಒಂದಾಗಿತ್ತು. ಅದರ ಮುಖ್ಯಸ್ಥ ತಾಯಪ್ಪನ ನೆನಪಿನಲ್ಲಿದ್ದ ಅಲ್ಲಿನ ನಿವಾಸಿಗಳು, ತಮ್ಮ ಪ್ರದೇಶವನ್ನು ಬರೀ 4 ನೇ ಬ್ಲಾಕ್ ಎಂದು ಮರುನಾಮಕರಣ ಮಾಡಲು ತೀವ್ರವಾಗಿ ವಿರೋಧಿಸಿದರು. ಸಿಐಟಿಬಿ ಅಧಿಕಾರಿಗಳು ಹಾಗೂ ಸ್ಥಳೀಯ ರಾಜಕಾರಣಿಗಳು ಅವರಿಗೆ ಮನವರಿಕೆ ಮಾಡಿಕೊಡಲು ಭಾರೀ ಕಸರತ್ತು ಮಾಡಬೇಕಾಯಿತು.

ಈ ಹಿನ್ನೆಲೆಯಲ್ಲಿ, ಈಗಿನ 4ನೇ ಟಿ ಬ್ಲಾಕ್‌ ಎಂಬ ಹೆಸರಿನಲ್ಲಿ ಟಿ ಎಂದರೆ ತಾಯಪ್ಪನಹಳ್ಳಿ ಎಂಬ ಕುತೂಹಲಕಾರಿ ಮಾಹಿತಿಯನ್ನು ಲೇಕಖ ಸೋಮಶೇಖರ್ ನೀಡಿದರು. 4 ನೇ ಟಿ ಬ್ಲಾಕ್‌ನ ಪಕ್ಕದ ಜಾಗ, 4 ನೇ ಬ್ಲಾಕ್ ನಲ್ಲಿ 1974 ರಲ್ಲಿ ಪ್ರಸಿದ್ಧ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಅನ್ನು ಸ್ಥಾಪಿಸಲಾಯಿತು. ನಂತರ ಅದು ಬಹು ಖ್ಯಾತಿಯ ವಾಣಿಜ್ಯ ಕೇಂದ್ರವಾಗಿ ಮಾರ್ಪಟ್ಟಿತು. ಇದು CBD ಯನ್ನು ದಾಟಿದ ಬೆಂಗಳೂರಿನ ಮೊದಲ ಶಾಪಿಂಗ್ ಹಬ್ ಆಗಿದೆ.

1980ರ ದಶಕದ ಆರಂಭದಲ್ಲಿ ಅಂದಿನ ಕರ್ನಾಟಕದ ಮುಖ್ಯಮಂತ್ರಿ ಆರ್‌ ಗುಂಡೂರಾವ್‌ ಅವರು ಪ್ರಸಿದ್ಧ ಕಾಸ್ಮೋಪಾಲಿಟನ್‌ ಕ್ಲಬ್‌ ಪಕ್ಕದ ಈಜುಕೊಳವನ್ನು ಉದ್ಘಾಟಿಸಲು ಬಂದಾಗ ಜಯನಗರ 3ನೇ ಬ್ಲಾಕ್‌ ಪಟ್ಟಣದಾದ್ಯಂತ ಚರ್ಚೆಯಾಗಿತ್ತು. ಎಲ್ಲರಿಗೂ ಆಶ್ಚರ್ಯವಾಗುವಂತೆ, ಗುಂಡೂರಾವ್ ಅವರು ಈಜು ಕೊಳಕ್ಕೆ ಕೆಳಗಿಳಿದು ನೀರಿನಲ್ಲಿ ಧುಮುಕುವ ಬದಲು ಮೇಲಿಂದ ಸ್ಪ್ರಿಂಗ್​​ ಬೋರ್ಡ್​ ಬಳಿಯಿಂದಲೇ ಏಕಾಏಕಿ ಕೊಳಕ್ಕೆ ಹಾರಿ, ಅನಾವರಣಗೊಳಿಸಿದ ಶಾಸ್ತ್ರವನ್ನು ವಿಶಿಷ್ಟವಾಗಿ ನೆರವೇರಿಸಿದ್ದರು.

ರಾಜಧಾನಿ ಬೆಂಗಳೂರು ಕುರಿತಾದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 11:46 am, Mon, 9 October 23