AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಬಿಎಂಪಿ ಕೆರೆಗಳನ್ನ ಮಾನಿಟರಿಂಗ್ ಮಾಡಲು ಹೊಸ ಐಡಿಯಾ; 10 ಲಕ್ಷ ವೆಚ್ಚದಲ್ಲಿ ರೆಡಿಯಾಗುತ್ತಿದೆ ಆ್ಯಪ್, ಕೆರೆ ತಜ್ಞರಿಂದ ವಿರೋಧ

ನಗರದ ಕೆರೆಗಳ‌ ಮೇಲೆ ಹದ್ದಿನ ಕಣ್ಣಿಡುವ ಸಲುವಾಗಿ ಬಿಬಿಎಂಪಿ ಆ್ಯಪ್ ರೆಡಿ ಮಾಡಲು ಮುಂದಾಗಿದೆ.‌ ಈ ಆ್ಯಪ್ ಕೆರೆಗಳನ್ನ ಮಾನಿಟರಿಂಗ್ ಮಾಡಲಿದ್ದು, ಈ ಆ್ಯಪ್ ರೆಡಿಮಾಡಲು ಬರೋಬ್ಬರಿ 10 ಲಕ್ಷ ವೆಚ್ಚ ಮಾಡಲಾಗುತ್ತಿದೆ.‌ ಆದರೆ ಈ ಆ್ಯಪ್ ರೆಡಿಯಾಗುವ ಮೊದಲೇ ಕೆರೆ ತಜ್ಞರಿಂದ ವಿರೋಧ ವ್ಯಕ್ತವಾಗುತ್ತಿದೆ. ಬೆಂಗಳೂರಿನಲ್ಲಿ ಆ್ಯಪ್ ಗಿಂತ ಹೆಚ್ಚಿನದಾಗಿ ಕೆರೆಗಳ ನಿರ್ವಹಣೆ ಸರಿಯಾಗಿ ಆಗಬೇಕಿದೆ ಎಂದಿದ್ದಾರೆ.

ಬಿಬಿಎಂಪಿ ಕೆರೆಗಳನ್ನ ಮಾನಿಟರಿಂಗ್ ಮಾಡಲು ಹೊಸ ಐಡಿಯಾ; 10 ಲಕ್ಷ ವೆಚ್ಚದಲ್ಲಿ ರೆಡಿಯಾಗುತ್ತಿದೆ ಆ್ಯಪ್, ಕೆರೆ ತಜ್ಞರಿಂದ ವಿರೋಧ
ಬೆಂಗಳೂರು ಕೆರೆ
Follow us
Poornima Agali Nagaraj
| Updated By: ಆಯೇಷಾ ಬಾನು

Updated on: Oct 09, 2023 | 1:58 PM

ಬೆಂಗಳೂರು, ಅ.09: ನಗರದಲ್ಲಿ ದಿನದಿಂದ ದಿನಕ್ಕೆ ಕೆರೆಗಳ ಸಂಖ್ಯೆ ಕಡಿಮೆಯಾಗುತ್ತಿದೆ‌ (Bengaluru Lakes).‌ ಈ ಕುರಿತಾಗಿ ಗಮನ ಕೊಡಬೇಕಾದ ಬಿಬಿಎಂಪಿ (BBMP) ದುಂದು ವೆಚ್ಚ ಮಾಡಿ ಆ್ಯಪ್ (App) ರೆಡಿ ಮಾಡಲು ಮುಂದಾಗಿದೆ. ರಾಜಾಧಾನಿ ಬೆಂಗಳೂರು ಸಾವಿರಾರು ಕೆರೆಗಳಿಗೆ ಹೆಸರುವಾಸಿಯಾಗಿದ್ದ ನಗರ.‌ ಇತ್ತೀಚೆಗೆ ಅಭಿವೃದ್ದಿಯ ನೆಪ ಒಡ್ಡಿ ಸಾವಿರಾರು ಕೆರೆಗಳ‌ ಪೈಕಿ ಸಧ್ಯ 210 ಕೆರೆಗಳು ಮಾತ್ರ ಇವೆ.‌ ಇವುಗಳನ್ನ ಸರಿಯಾಗಿ‌ ಬಿಬಿಎಂಪಿ ನಿರ್ವಹಣೆ ಮಾಡದ ಕಾರಣ ಕೆರೆಗಳು ಬತ್ತಿಹೋಗುತ್ತಿವೆ.‌ ಈ ಮಧ್ಯೆ ದುಂದು ವೆಚ್ಚಮಾಡಿಕೊಂಡು 10 ಲಕ್ಷ ಬಜೆಟ್​ನಲ್ಲಿ ಕೆರೆಗಳ ಮಾನಿಟರಿಂಗ್ ಗೆಂದೆ ಬಿಬಿಎಂಪಿ ಆ್ಯಪ್ ರೆಡಿಮಾಡಲು ಹೊರಟಿದೆ.

ಹೌದು, ನಗರದ ಕೆರೆಗಳ‌ ಮೇಲೆ ಹದ್ದಿನ ಕಣ್ಣಿಡುವ ಸಲುವಾಗಿ ಬಿಬಿಎಂಪಿ ಆ್ಯಪ್ ರೆಡಿ ಮಾಡಲು ಮುಂದಾಗಿದೆ.‌ ಈ ಆ್ಯಪ್ ಕೆರೆಗಳನ್ನ ಮಾನಿಟರಿಂಗ್ ಮಾಡಲಿದ್ದು, ಈ ಆ್ಯಪ್ ರೆಡಿಮಾಡಲು ಬರೋಬ್ಬರಿ 10 ಲಕ್ಷ ವೆಚ್ಚ ಮಾಡಲಾಗುತ್ತಿದೆ.‌ ಇನ್ನು ಆ್ಯಪ್‌ನಲ್ಲಿ ನಗರದ ಎಲ್ಲಾ ಕೆರೆಗಳ ಮಾಹಿತಿ ಲಭ್ಯವಾಗಲಿದ್ದು, ಕೆರೆಗಳ ನೀರಿನ‌ ಪ್ರದೇಶ ಎಷ್ಟು ಇದೆ, ಕೆರೆ ಎಷ್ಟು ಎಕರೆಯ ವಿಸ್ತೀರ್ಣವಿದೆ ಎನ್ನುವುದರ ಕುರಿತಾಗಿ ಈ ಆ್ಯಪ್ ನಲ್ಲಿಯೇ ಮಾಹಿತಿ ಲಭ್ಯವಾಗಲಿದೆ. ಸಾರ್ವಜನಿಕರಿಗೆ ಕೆರೆಗಳ‌ ಬಗ್ಗೆ ಯಾವುದೇ ದೂರುಗಳಿದ್ರು, ಇದರಲ್ಲಿ ದಾಖಲಿಸಬಹುದಾಗಿದ್ಯಂತೆ.

ಇದನ್ನೂ ಓದಿ: 475 ಕೋಟಿ ರೂ. ನರೇಗಾ ಹಣವನ್ನ ಕೇಂದ್ರ ಸರ್ಕಾರ ಬಿಡುಗಡೆ ಮಾಡಲಿ: ಸಚಿವ ಕೃಷ್ಣ ಬೈರೇಗೌಡ

ಆದರೆ ಈ ಆ್ಯಪ್ ರೆಡಿಯಾಗುವ ಮೊದಲೇ ಕೆರೆ ತಜ್ಞರಿಂದ ವಿರೋಧ ವ್ಯಕ್ತವಾಗುತ್ತಿದೆ. ಬೆಂಗಳೂರಿನಲ್ಲಿ ಆ್ಯಪ್ ಗಿಂತ ಹೆಚ್ಚಿನದಾಗಿ ಕೆರೆಗಳ ನಿರ್ವಹಣೆ ಸರಿಯಾಗಿ ಆಗಬೇಕಿದೆ.‌ ಕೆರೆಗಳ‌ ಒತ್ತುವರಿಯಾಗಿ, ಕಲ್ಮಷ ನೀರುಗಳನ್ನ ಬಿಟ್ಟು ಕೆರೆಗಳ ನೀರೆ ಹಾಳಾಗಿ ಹೋಗಿದೆ.‌ ಅಲ್ಲದೇ ಆ್ಯಪ್ ಮಾಡುವ ಮೊದಲು ಸಿಲಿಕಾನ್ ಜನರ ಜೊತೆಗೆ ಚರ್ಚಿಸಬೇಕು.‌ ಅಲ್ಲದೇ ಕೆರೆಗಳ ನಿರ್ವಹಣೆಯು ಸರಿಯಾಗಿ ಆಗ್ತಿಲ್ಲ.‌ ಜೊತೆಗೆ ಲೇಕ್ ಬಗೆಗೆ ಸಿಟಿಜನ್ ಗ್ರೋಪ್ ನಿಂದಾ ಫ್ರೀಯಾಗಿ ಮಾಡಿಕೊಡುವುದಾಗಿ ಹೇಳಿದ್ವಿ.‌ ಆದ್ರೆ 10 ಲಕ್ಷ ದುಂದು ವೆಚ್ಚ ಮಾಡಿ ಆ್ಯಪ್ ಮಾಡುವ ಅಗತ್ಯತೆ ಇಲ್ಲ‌. ಈ ಹಿಂದೆ ಕೆರೆಗಳ ವೆಬ್ ಸೈಟ್ ಮಾಡಿ ಅದರ ನಿರ್ವಹಣೆಯೇ ಸರಿಯಾಗಿ ಆಗ್ತಿಲ್ಲ.‌ ಈ ಮಧ್ಯೆ ಹೊಸದಾಗಿ ಆ್ಯಪ್ ಮಾಡುವ ಅಗತ್ಯತೆ ಇಲ್ಲ ಅಂತ ಕೆರೆ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ನಲ್ಲಿ, ಕೆರೆಗಳಿಗೆ ಹೆಸರುವಾಸಿಯಾಗಿದ್ದ ಸಿಲಿಕಾನ್ ಸಿಟಿ ಸಧ್ಯ ಕಾಂಕ್ರೀಟ್ ಕಾಡಾಗುತ್ತಿದ್ದು, ಕೆರೆ- ಮರಗಳು ಇಲ್ಲದೇ ಬರಿದಾಗುತ್ತಿದೆ.‌ ಬಿಬಿಎಂಪಿ ಸಧ್ಯ ಕೆರೆಗಳ ಉಳಿಸುವ ಕುರಿತಾಗಿ ಹೆಚ್ಚಿನದಾಗಿ ಯೋಜನೆ ಮಾಡಬೇಕು.‌ ಈ ಮಾನಿಟರಿಂಗ್ ಆ್ಯಪ್‌ ಮಾಡಿದ್ದಾದರು ಅದರಿಂದ ಜನರಿಗೆ ಉಪಯೋಗಬೇಕಾಗಿದೆ.‌

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ದಿನೇದಿನೆ ಅತೀವ ಹಾನಿಗೊಳಗಾಗುತ್ತಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ
ದಿನೇದಿನೆ ಅತೀವ ಹಾನಿಗೊಳಗಾಗುತ್ತಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ
ಕಾಶ್ಮೀರ ಗಡಿಯಲ್ಲಿ ಉಗ್ರ ನೆಲೆಗಳು ಉಡೀಸ್: ಸೇನೆಯ ಅಧಿಕೃತ ವಿಡಿಯೋ ಇಲ್ಲಿದೆ
ಕಾಶ್ಮೀರ ಗಡಿಯಲ್ಲಿ ಉಗ್ರ ನೆಲೆಗಳು ಉಡೀಸ್: ಸೇನೆಯ ಅಧಿಕೃತ ವಿಡಿಯೋ ಇಲ್ಲಿದೆ
ಮನೆ ಹಾಳಾದರೂ ಪಾಕಿಸ್ತಾನಕ್ಕೆ ಸದ್ಬುದ್ಧಿ ಬರಲಿ ಎನ್ನುವ ಮನೆ ಯಜಮಾನಿ
ಮನೆ ಹಾಳಾದರೂ ಪಾಕಿಸ್ತಾನಕ್ಕೆ ಸದ್ಬುದ್ಧಿ ಬರಲಿ ಎನ್ನುವ ಮನೆ ಯಜಮಾನಿ
Live: ರಕ್ಷಣಾ, ವಿದೇಶಾಂಗ ಸಚಿವಾಲಯ ತುರ್ತು ಸುದ್ದಿಗೋಷ್ಠಿಯ ನೇರ ಪ್ರಸಾರ
Live: ರಕ್ಷಣಾ, ವಿದೇಶಾಂಗ ಸಚಿವಾಲಯ ತುರ್ತು ಸುದ್ದಿಗೋಷ್ಠಿಯ ನೇರ ಪ್ರಸಾರ
ಹೇಗಿದೆ ನೋಡಿ ‘ಭರ್ಜರಿ ಬ್ಯಾಚುಲರ್ಸ್​’ ಹಳ್ಳಿ ಜೀವನ; ಸಾರ್ಥಕತೆಯ ಭಾವನೆ
ಹೇಗಿದೆ ನೋಡಿ ‘ಭರ್ಜರಿ ಬ್ಯಾಚುಲರ್ಸ್​’ ಹಳ್ಳಿ ಜೀವನ; ಸಾರ್ಥಕತೆಯ ಭಾವನೆ
ಅಮೃತಸರ ಬಳಿ ಪಾಕಿಸ್ತಾನದ ಛಿದ್ರಗೊಂಡ ಡ್ರೋಣ್ ಪತ್ತೆ, ಪರಿಶೀಲನೆ
ಅಮೃತಸರ ಬಳಿ ಪಾಕಿಸ್ತಾನದ ಛಿದ್ರಗೊಂಡ ಡ್ರೋಣ್ ಪತ್ತೆ, ಪರಿಶೀಲನೆ
ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ