
ಬೆಂಗಳೂರು, ಆಗಸ್ಟ್ 31: ಕರ್ನಾಟಕದ ಹೆಚ್ಚಿನ ಕಡೆ ಗಣೇಶೋತ್ಸವಗಳು ನಡೆಯುತ್ತವೆ. ಬೆಂಗಳೂರಿನಲ್ಲೂ ಗಲ್ಲಿ ಗಲ್ಲಿಗಳಲ್ಲಿ ಗಣೇಶನನ್ನು (Ganesha Chaturthi) ಕೂರಿಸಲಾಗುತ್ತದೆ. ಗಣೇಶನ ವಿಸರ್ಜನೆ ಮೆರವಣಿಗೆಯೂ ಅದ್ದೂರಿಯಾಗಿ ನಡೆಯುತ್ತದೆ. ಬೆಂಗಳೂರಿನಲ್ಲಿ ಲೆಕ್ಕವಿಲ್ಲದಷ್ಟು ಗಣೇಶ ಮೂರ್ತಿಗಳ ವಿಸರ್ಜನೆ ನಡೆಯುತ್ತದೆ. ಇಂದು ಕೂಡ ಹಲಸೂರು ಕೆರೆ ಸೇರಿದಂತೆ ನಗರದ ಪ್ರಮುಖ ಕೆರೆ, ಕಲ್ಯಾಣಿಗಳಲ್ಲಿ ಗಣೇಶನ ವಿಸರ್ಜನೆ ಮಾಡಲಾಗಿದೆ.
ಅಕ್ಟೋಬರ್ 27ರಿಂದ ಅಕ್ಟೋಬರ್ 30ರವರೆಗೆ 4.62 ಲಕ್ಷ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಗಿದೆ. ಇಂದು ಭಾನುವಾರ ಒಂದೇ ದಿನ ಒಂದೂವರೆ ಲಕ್ಷಕ್ಕೂ ಅಧಿಕ ಮೂರ್ತಿಗಳನ್ನು ನೀರಿಗೆ ಬಿಡಲಾಗುತ್ತಿದೆ. ಅಲ್ಲಿಗೆ ಕಳೆದ ಐದು ದಿನದಲ್ಲಿ ಆರು ಲಕ್ಷಕ್ಕೂ ಅಧಿಕ ಗಣೇಶ ಮೂರ್ತಿಗಳ ವಿಸರ್ಜನೆ ಬೆಂಗಳೂರಿನ ಕೆರೆ, ಕಲ್ಯಾಣಿಗಳಲ್ಲಿ ನಡೆದಿದೆ.
ಇದು ಕೆರೆ, ಕಲ್ಯಾಣಿಗಳಲ್ಲಿ ಆಗಿರುವ, ಆಗುತ್ತಿರುವ ಗಣೇಶ ಮೂರ್ತಿಗಳ ವಿಸರ್ಜನೆ ಲೆಕ್ಕ. ಮನೆ ಮನೆಗಳಲ್ಲಿ ಕೂರಿಸಲಾಗುವ ಗಣೇಶನನ್ನು ಬಕೆಟ್ಗಳಲ್ಲಿವ ವಿಸರ್ಜನೆ ಮಾಡುವ ಜನರ ಸಂಖ್ಯೆಯೂ ಬಹಳ ದೊಡ್ಡದು.
ಇದನ್ನೂ ಓದಿ: ಬೆಂಗಳೂರಿನ ಹಲಸೂರು ಸಿಖ್ ಗುರುದ್ವಾರಕ್ಕೆ ಬಾಂಬ್ ಬೆದರಿಕೆ ಸಂದೇಶ
ಗಣೇಶ ಮೆರವಣಿಗೆ ವೇಳೆ ಕೆಲ ಕಿಡಿಗೇಡಿಗಳ ಕಾರಣದಿಂದ ಕೋಮುಗಲಭೆ ಹುಟ್ಟುಹಾಕುವ ಸಾಧ್ಯತೆ ಇರುತ್ತದೆ. ಎಂದಿನಂತೆ ಈ ಬಾರಿಯೂ ಸೂಕ್ಷ್ಮ ಪ್ರದೇಶಗಳಲ್ಲಿ ಗಣೇಶನ ಮೆರವಣಿಗೆ ವೇಳೆ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. ಶಿವಾಜಿನಗರ ಸುತ್ತಮುತ್ತ ಪ್ರದೇಶಗಳಲ್ಲಿ ಎಚ್ಚರ ವಹಿಸಲಾಗಿದೆ. ಸೆಪ್ಪಿಂಗ್ ರಸ್ತೆ ಮೂಲಕ ಹಲಸೂರು ಕೆರೆ ಕಡೆಗೆ ಸಾಕಷ್ಟು ಗಣೇಶ ಮೂರ್ತಿಗಳ ಮೆರವಣಿಗೆ ಮೂರು ನಾಲ್ಕು ದಿನಗಳಿಂದ ನಡೆದಿದೆ.
ರಾಜಾಜಿನಗರದ ಮಿಲ್ಕ್ ಕಾಲೋನಿಯಲ್ಲಿ ಅದ್ಧೂರಿ ಗಣೇಶೋತ್ಸವ ನಡೆಸಲಾಗಿದೆ. ಇಲ್ಲಿ ಮಹಾರಾಷ್ಟ್ರದ ಸೊಲ್ಲಾಪುರ ಮತ್ತು ಮುಂಬೈನಿಂದ 12 ಲಕ್ಷ ರೂ ಮೌಲ್ಯದ ಅಮೆರಿಕನ್ ಡೈಮಂಡ್ ಮತ್ತು ನವರತ್ನ ಹರಳುಗಳಿಂದ ಅಲಂಕರಿಸಿದ ಗಣೇಶನನ್ನು ಕೂರಿಸಲಾಗಿದೆ.
ಇದನ್ನೂ ಓದಿ: ಕರಾವಳಿ ಕರ್ನಾಟಕ, ಬೆಂಗಳೂರಿನಲ್ಲಿ ಮುಂದಿನ 5 ದಿನ ಭಾರಿ ಮಳೆ – ಐಎಂಡಿ ಮುನ್ಸೂಚನೆ
ರಾಜಾಜಿನಗರದ ಸ್ವಸ್ತಿಕ್ ಯುವಕರ ಸಂಘದಿಂದ ವಿದ್ಯಾ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಕಾಶಿ ವಿಶ್ವನಾಥನ ದೇಗುಲದ ಮಾದರಿಯಲ್ಲಿ 16 ಲಕ್ಷ ರೂ ವೆಚ್ಚದಲ್ಲಿ ಭವ್ಯ ಮಂಟಪ ರಚಿಸಲಾಗಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ