ಬೆಂಗಳೂರು, ಸೆ.09: ಸಂಚಾರ ನಿಯಮ ಉಲ್ಲಂಘನೆಗೆ ದಂಡ ಕಟ್ಟಲು ಮತ್ತೆ ಶೇಕಡಾ 50ರಷ್ಟು ರಿಯಾಯಿತಿ ನೀಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿತ್ತು. ಇಂದು ಟ್ರಾಫಿಕ್ ದಂಡ ರಿಯಾಯಿತಿ ಪಾವತಿಗೆ ಕೊನೆ ದಿನ. ಜುಲೈ 6 ರಿಂದ ಸೆ.9ರವರೆಗೆ ಟ್ರಾಫಿಕ್ ದಂಡ ಪಾವತಿಗೆ 2ನೇ ಬಾರಿ ಅವಕಾಶ ನೀಡಲಾಗಿತ್ತು. ಸದ್ಯ ಗಡವು ಮುಗಿದಿದ್ದು ಇಂದು ದಂಡ ಪಾವತಿಗೆ ಕೊನೆ ದಿನವಾಗಿದೆ. ಹೀಗಾಗಿ ಇಂದೇ ದಂಡ ಪಾವತಿ ಮಾಡಿದರೆ 50% ರಿಯಾಯಿತಿ ಸಿಗಲಿದೆ. ಜು.6ರಿಂದ ಈವರೆಗೂ 2,53,519 ಪ್ರಕರಣಗಳ ದಂಡ ವಸೂಲಿಯಾಗಿದೆ. ಈವರೆಗೂ ಅಂದರೆ ಕಳೆದ 64 ದಿನಗಳಲ್ಲಿ 8,07,73,190 ರೂ. ಬಾಕಿ ದಂಡ ವಸೂಲಿ ಸಂಗ್ರಹವಾಗಿದೆ. ಇಂದು ಕೊನೆ ದಿನ ಹೀಗಾಗಿ, ಯಾರಾದರೂ ಫೈನ್ ಬಾಕಿ ಉಳಿಸಿಕೊಂಡಿದ್ದರೆ ಕಟ್ಟುಬಿಡಿ.
ಇದೇ ವರ್ಷ ಫೆಬ್ರವರಿ 2ಕ್ಕಿಂತ ಹಿಂದೆ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿ ಇ-ಚಲನ್‌ನಲ್ಲಿ ದಾಖಲಾಗಿರುವ ಕೇಸ್‌ಗಳಿಗೆ ಮಾತ್ರವೇ ಅನ್ವಯಿಸುವಂತೆ ಜುಲೈ 5ರಂದು ಸರ್ಕಾರ ಆದೇಶ ಹೊರಡಿಸಿತ್ತು. ಬರೋಬ್ಬರಿ 64 ದಿನಗಳ ಡಿಸ್ಕೌಂಟ್ ಅವಧಿಯಲ್ಲಿ ಬೆಂಗಳೂರು ನಗರಕ್ಕೆ ಸಂಬಂಧಿಸಿದಂತೆ 2,53,519 ಕೇಸ್‌ಗಳನ್ನು ಇತ್ಯರ್ಥಪಡಿಸಿಕೊಂಡಿರುವ ವಾಹನ ಸವಾರರು, 8,07,73,190 ರೂ. ದಂಡ ಪಾವತಿಸಿದ್ದಾರೆ.
ಇದನ್ನೂ ಓದಿ: Traffic Fine Discount: ಟ್ರಾಫಿಕ್ ದಂಡ ಪಾವತಿಗೆ ಮತ್ತೆ ಶೇ 50ರಷ್ಟು ರಿಯಾಯಿತಿ
ಇನ್ನು ಇಡೀ ಕರ್ನಾಟಕದಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ವಾಹನ ಸವಾರರು ಹಲವು ವರ್ಷಗಳಿಂದ ದಂಡ ಪಾವತಿ ಮಾಡದೆ ಸುಮಾರು 259 ಕೋಟಿ ರೂ. ಉಳಿಸಿಕೊಂಡಿದ್ದರು. ಹೀಗಾಗಿ, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು, ಸಾರಿಗೆ ಹಾಗೂ ಸಂಚಾರ ಪೊಲೀಸರ ಜೊತೆ ಚರ್ಚಿಸಿ ಶೇ 50ರಷ್ಟು ದಂಡ ವಿನಾಯಿತಿ ಘೋಷಿಸುವಂತೆ ಸರಕಾರಕ್ಕೆ ಶಿಫಾರಸು ಮಾಡಿತ್ತು. ಈ ಪರಿಣಾಮ ಫೆಬ್ರವರಿ ಹಾಗೂ ಮಾರ್ಚ್‌ನಲ್ಲಿಎರಡು ಅವಧಿಯಲ್ಲಿ ವಿನಾಯಿತಿ ನೀಡಲಾಗಿತ್ತು. ಈ ವಿನಾಯಿತಿಯಿಂದ ವಾಹನ ಸವಾರರು ಫುಲ್ ಖುಷ್ ಆಗಿದ್ದು ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, 35.60 ಲಕ್ಷ ಬಾಕಿ ಕೇಸ್‌ಗಳು ಇತ್ಯರ್ಥಗೊಂಡು 120 ಕೋಟಿ ರೂ.ಗಳಿಗೆ ಹೆಚ್ಚು ಮೊತ್ತ ಸಂಗ್ರಹವಾಗಿತ್ತು. ಬಳಿಕ ಮೂರನೇ ಬಾರಿ ಜುಲೈ 5ರಂದು 60 ದಿನಗಳಿಗೂ ಹೆಚ್ಚು ಕಾಲಾವಕಾಶ ನೀಡಿದರೂ ವಾಹನ ಸವಾರರು ನಿರಾಸಕ್ತಿ ತೋರಿಸಿದ್ದಾರೆ ಎನ್ನಲಾಗಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 6:59 am, Sat, 9 September 23