ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಚಿರತೆ ಹಾವಳಿ ಎದುರಾಗಿದ್ದು, ಜನರ ಆತಂಕ ಪರಿಸ್ಥಿತಿ ಮತ್ತೆ ಮುಂದುವರಿದಿದೆ. ಬೆಂಗಳೂರಿನ ಗೊಂಗಡಿಪುರ ಗ್ರಾಮದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು, ಈ ಭಾಗದ ಜನ ಸಂಜೆಯಾದ್ರೆ ಮನೆ ಬಿಟ್ಟು ಆಚೆ ಬರಲು ಎದುರುವಂತಾಗಿದೆ.
ಕಳೆದು ನಾಲ್ಕೈದು ತಿಂಗಳಿಂದ ನಗರದ ಒಂದಲ್ಲ, ಒಂದು ಭಾಗದಲ್ಲಿ ಚಿರತೆ ಪ್ರತ್ಯಕ್ಷವಾಗ್ತಿದೆ. ಇದೀಗ, ಯಶವಂತಪುರ ಕ್ಷೇತ್ರ ವ್ಯಾಪ್ತಿಯ ಗೊಂಗಡಿಪುರದಲ್ಲಿ ಚಿರತೆ ಕಾಣಿಸಿಕೊಂಡಿದೆ. ಸೋಮವಾರ ರಾತ್ರಿ ನಾಯಿಯೊಂದನ್ನ ಬೇಟೆಯಾಡಿರುವ ಮೃಗ, ಹನುಮಂತಪ್ಪ ಅನ್ನೋರ ಜಮೀನಿನ ಬಳಿ ನಾಯಿ ತಿಂದು ಕೆಲ ದೇಹದ ಭಾಗವನ್ನು ಬಿಟ್ಟುಹೋಗಿದೆ. ನಾಯಿ ಸತ್ತಿರುವ ಜಾಗದಲ್ಲಿ ಚಿರತೆ ಹೆಜ್ಜೆ ಗುರುತು ಇನ್ನೂ ಹಸಿಹಸಿಯಾಗಿ ಪತ್ತೆಯಾಗಿದೆ. ಚಿರತೆ ಜೊತೆ ಎರಡು ಮರಿಗಳನ್ನೂ ಸ್ಥಳೀಯರು ನೋಡಿದ್ದು, ಆತಂಕಕ್ಕೆ ತುತ್ತಾಗಿದ್ದಾರೆ. ಸಂಜೆ 6ರ ಬಳಿಕ ಮನೆಯಿಂದ ಹೊರ ಬರೋಕೆ ಭಯ ಪಡ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಜನರ ನಿದ್ದೆಗೆಡಿಸಿದ ಚಿರತೆ ದಾಳಿ; ಶಾಲಾ ಕಾಲೇಜುಗಳಿಗಿಲ್ಲ ರಜೆ, ಇಂದು ಸಹ ಮುಂದುವರೆಯಲಿರುವ ಚೀತಾ ಕೂಂಬಿಂಗ್
ಚಿರತೆ ಬಗ್ಗೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ರು ಅಧಿಕಾರಿಗಳು ಏನೂ ಮಾಡ್ತಿಲ್ಲ. ಸ್ಥಳಕ್ಕೆ ಬಂದು ಜಸ್ಟ್ ಪಟಾಕಿ ಸಿಡಿಸಿ ತೆರಳಿದ್ದಾರೆ. ಅರಣ್ಯಾಧಿಕಾರಿಗಳ ನಡೆಗೂ ಜನರು ಕೆರಳಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಶವಂತಪುರ ವಿಧಾನಸಭಾ ವ್ಯಾಪ್ತಿಯಲ್ಲಿ ಚಿರತೆ ಇರೋದಂತೂ ಕನ್ಪರ್ಮ್ ಆಗಿದೆ. ಸದ್ಯ ಶ್ವಾನವನ್ನ ಬೇಟೆಯಾಡ್ತಿರುವ ಚಿರತೆ ಮುಂದೆ ಯಾವ ಹಂತಕ್ಕಾದ್ರೂ ಹೋಗಬಹುದು. ಹೀಗಾಗಿ, ಅಧಿಕಾರಿಗಳು ಈಗಲೇ ಎಚ್ಚೆತ್ತುಕೊಳ್ಳಬೇಕಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ