ಬೆಂಗಳೂರು, ಅಕ್ಟೋಬರ್ 12: ಒಂದೆಡೆ ಸರಿಯಾದ ಮಳೆ ಇಲ್ಲ. ಮತ್ತೊಂದೆಡೆ ಹಲವು ಜಿಲ್ಲೆಗಳಲ್ಲಿ ಭೀಕರ ಬರ ತಾಂಡವವಾಡುತ್ತಿದೆ. ಈ ನಡುವೆ ರಾಜ್ಯದ ಉದ್ದಗಲಕ್ಕೂ ಅಘೋಷಿತ ಲೋಡ್ ಶೆಡ್ಡಿಂಗ್ (load shedding) ಸಮಸ್ಯೆ ಉಂಟಾಗಿದೆ. ಸದ್ಯ ಈ ಸಮಸ್ಯೆಗೆ ಒಂದು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ದೆಹಲಿಯಲ್ಲಿ ಕೇಂದ್ರ ಇಂಧನ ಸಚಿವ ಆರ್.ಕೆ.ಸಿಂಗ್ ಅವರನ್ನು ಕರ್ನಾಟಕ ಇಂಧನ ಇಲಾಖೆಯ ಸಚಿವ ಕೆ.ಜೆ.ಜಾರ್ಜ್ (KJ George) ಭೇಟಿ ಮಾಡಿದ್ದಾರೆ. ಕರ್ನಾಟಕಕ್ಕೆ ಹೆಚ್ಚುವರಿ ಅಗತ್ಯ ವಿದ್ಯುತ್ ಪೂರೈಸುವಂತೆ ಸಚಿವ ಕೆ.ಜೆ.ಜಾರ್ಜ್ ಮನವಿ ಮಾಡಿದ್ದಾರೆ.
ಕರ್ನಾಟಕದ ಇಂಧನ ಪರಿಸ್ಥಿತಿ ಕುರಿತು ಮನವರಿಕೆ ಮಾಡಿಕೊಡಲು ಸಚಿವ ಕೆ.ಜೆ.ಜಾರ್ಜ್ ಭೇಟಿ ಮಾಡಿದ್ದು, ಕೇಂದ್ರೀಯ ವಿದ್ಯುತ್ ಉತ್ಪಾದನಾ ಕೇಂದ್ರಗಳಲ್ಲಿ ಹೆಚ್ಚಿನ ಪಾಲು ನೀಡುವಂತೆ ಕೇಂದ್ರ ಇಂಧನ ಸಚಿವ ಆರ್.ಕೆ.ಸಿಂಗ್‌ಗೆ ಮನವಿ ಸಲ್ಲಿದ್ದಾರೆ. ಭೇಟಿ ವೇಳೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಉಪಸ್ಥಿತರಿದ್ದರು.
ಇದನ್ನೂ ಓದಿ: ರಾಜ್ಯದಲ್ಲಿ ಕತ್ತಲೆ ಹರಡಿ ನಾಪತ್ತೆಯಾಗಿರುವ ಇಂಧನ ಸಚಿವ ಕೆಜೆ ಜಾರ್ಜ್ರನ್ನು ಹುಡುಕಿ ಕೊಡಿ: ಸರ್ಕಾರದ ವಿರುದ್ಧ ಬಿಜೆಪಿ ಕಿಡಿ
ಈ ಕುರಿತಾಗಿ ಸಚಿವ ಕೆ.ಜೆ.ಜಾರ್ಜ್ ಟ್ವೀಟ್ ಮಾಡಿದ್ದು, ನಾನು ಭಾರತ ಸರ್ಕಾರದ ಮಾನ್ಯ ವಿದ್ಯುತ್, ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಆರ್.ಕೆ.ಸಿಂಗ್ ಅವರನ್ನು ಕರ್ನಾಟಕದ ಇಂಧನ ಪರಿಸ್ಥಿತಿಯ ಕುರಿತು ಮನವರಿಕೆ ಮಾಡಿಕೊಡಲು ಭೇಟಿ ಮಾಡಿದೆ. ಕೇಂದ್ರೀಯ ಉತ್ಪಾದನಾ ಕೇಂದ್ರಗಳಲ್ಲಿ ನಮ್ಮ ರಾಜ್ಯಕ್ಕೆ ಹೆಚ್ಚಿನ ಪಾಲು ನೀಡುವ ಮೂಲಕ ಕರ್ನಾಟಕದ ಹೆಚ್ಚುವರಿ ವಿದ್ಯುತ್ ಅಗತ್ಯವನ್ನು ಪೂರೈಸಲು ಸಹಕಾರ ನೀಡಬೇಕೆಂದು ವಿನಂತಿಸಿದೆ.
Today I met with the Hon’ble Minister for Power, New & Renewable Energy, GOI Shri. @RajKSinghIndia this evening to apprise him of the energy situation in #Karnataka.
I elaborated on the steps taken to augment power generation in the state in view of increase in power demand. I… pic.twitter.com/vcjWLWNUNe
— KJ George (@thekjgeorge) October 11, 2023
ನಮ್ಮ ಕರ್ನಾಟಕ ಇಂಧನ ಸಚಿವಾಲಯದ ವಿವಿಧ ನವೀನ ಯೋಜನೆಗಳ ವಿವರಗಳನ್ನು ಹಂಚಿಕೊಳ್ಳುತ್ತಾ ರಾಜ್ಯವು ವಾಯು ಮತ್ತು ಸೌರ ಶಕ್ತಿಯ ಮೂಲಗಳಿಂದ ಶಕ್ತಿ ಉತ್ಪಾದನೆಗೆ ಹೆಚ್ಚು ಒತ್ತು ನೀಡುತ್ತಿದ್ದು ಆ ಮೂಲಕ ನವೀಕರಿಸಲಾಗದ ಇಂಧನ ಉತ್ಪಾದನೆಯ ಮೂಲಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತಿರುವ ಬಗ್ಗೆ ತಿಳಿಸಲಾಗಿದೆ. ಈ ಮೂಲಕ ಶುದ್ಧ ಮತ್ತು ಸಮರ್ಥ ನವೀಕರಿಸಬಹುದಾದ ಇಂಧನ ಮೂಲಗಳತ್ತ ಸಾಗುತ್ತಿರುವ ಬಗ್ಗೆ ವಿವರಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯವನ್ನು ಕತ್ತಲೆಗೆ ದೂಡಿ ಸಚಿವ ಕೆಜೆ ಜಾರ್ಜ್ ಕಾಣೆಯಾಗಿದ್ದಾರೆ ಎಂಬ ಬಿಜೆಪಿ ಟ್ವೀಟ್ ಕಾಂಗ್ರೆಸ್ ತಿರುಗೇಟು ನೀಡಿದೆ. ಡಿಯರ್ ಬಿಜೆಪಿ, ಕಾಣೆಯಾಗಿರುವುದು ನಿಮ್ಮ ಪಕ್ಷದ ಅಧ್ಯಕ್ಷ, ಕಾಣೆಯಾಗಿರುವುದು ಬಿಜೆಪಿಯ 25 ಸಂಸದರು, ಕಾಣೆಯಾಗಿರುವುದು ವಿರೋಧ ಪಕ್ಷದ ನಾಯಕ!
ಡಿಯರ್ @BJP4Karnataka ,
ಕಾಣೆಯಾಗಿರುವುದು ನಿಮ್ಮ ಪಕ್ಷದ ಅಧ್ಯಕ್ಷ, ಕಾಣೆಯಾಗಿರುವುದು ಬಿಜೆಪಿಯ 25 ಸಂಸದರು, ಕಾಣೆಯಾಗಿರುವುದು ವಿರೋಧ ಪಕ್ಷದ ನಾಯಕ!ರಾಜ್ಯದಲ್ಲಿ ಬರದ ಕಾರಣ ವಿದ್ಯುತ್ ಉತ್ಪಾದನೆ ಇಳಿಕೆಯಾಗಿದೆ. ಹಾಗೂ ಬೇಡಿಕೆ ಹೆಚ್ಚಿದೆ, ಈ ಹಿನ್ನೆಲೆಯಲ್ಲಿ ಸಚಿವ ಕೆ ಜೆ ಜಾರ್ಜ್ ಅವರು ನಿಮ್ಮದೇ ಕೇಂದ್ರ ಸರ್ಕಾರದ ಸಚಿವರನ್ನು ಭೇಟಿಯಾಗಿ… https://t.co/q6FsHg14x6 pic.twitter.com/guoHEEvLNc
— Karnataka Congress (@INCKarnataka) October 12, 2023
ರಾಜ್ಯದಲ್ಲಿ ಬರದ ಕಾರಣ ವಿದ್ಯುತ್ ಉತ್ಪಾದನೆ ಇಳಿಕೆಯಾಗಿದೆ. ಹಾಗೂ ಬೇಡಿಕೆ ಹೆಚ್ಚಿದೆ, ಈ ಹಿನ್ನೆಲೆಯಲ್ಲಿ ಸಚಿವ ಕೆ.ಜೆ ಜಾರ್ಜ್ ಅವರು ನಿಮ್ಮದೇ ಕೇಂದ್ರ ಸರ್ಕಾರದ ಸಚಿವರನ್ನು ಭೇಟಿಯಾಗಿ ಚರ್ಚಿಸಲು ದೆಹಲಿಗೆ ಹೋಗಿದ್ದಾರೆ. ನಿಮ್ಮ ಕೇಂದ್ರ ಸಚಿವರ ಕಾರ್ಯಕ್ರಮಗಳ ಬಗ್ಗೆ ನಿಮಗೆ ಮಾಹಿತಿ ಇಲ್ಲವೆಂದರೆ ನಿಮ್ಮಲ್ಲಿ ನೈತಿಕತೆ ಕಾಣೆಯಾಗಿರುವುದು ಸ್ಪಷ್ಟವಾಗುತ್ತದೆ.
ನಮ್ಮ ಸಚಿವರು ಸದಾ ತಮ್ಮ ಹೊಣೆಗಾರಿಕೆಯ ಕೆಲಸಗಳಲ್ಲಿ ತೊಡಗಿರುತ್ತಾರೆ. ರಾಜ್ಯದಲ್ಲಿ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಬೇಕಾದ ಮಾರ್ಗಗಳನ್ನು ಹುಡುಕುತ್ತಾರೆ. ವಿರೋಧ ಪಕ್ಷದ ನಾಯಕನ ಆಯ್ಕೆ ಯಾವಾಗ ಎಂದು ಬಿಜೆಪಿ ಒಂದೇ ಒಂದು ಪ್ರಶ್ನೆಗೆ ಉತ್ತರಿಸಲಿ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಕಿಡಿಕಾರಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.