ರಾಜ್ಯದ ಹಲವೆಡೆ ಏಕಕಾಲಕ್ಕೆ ಸಬ್​​​​ ರಿಜಿಸ್ಟ್ರಾರ್​ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಸಬ್​​​​ ರಿಜಿಸ್ಟ್ರಾರ್​ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಸ್ತಕ್ಷೇಪದ ಬಗ್ಗೆ ಸಾರ್ವಜನಿಕರಿಂದ ದೂರು ನೀಡಲಾಗಿದೆ. ಈ ಹಿನ್ನೆಲೆ ಬೆಂಗಳೂರು ನಗರದ 14, ಗ್ರಾಮಾಂತರ ಜಿಲ್ಲೆ 4 ಕಚೇರಿಗಳ ಮೇಲೆ ರೇಡ್​ ಮಾಡಿ ಪರಿಶೀಲನೆ ಮಾಡಲಾಗಿದೆ.

ರಾಜ್ಯದ ಹಲವೆಡೆ ಏಕಕಾಲಕ್ಕೆ ಸಬ್​​​​ ರಿಜಿಸ್ಟ್ರಾರ್​ ಕಚೇರಿ ಮೇಲೆ ಲೋಕಾಯುಕ್ತ ದಾಳಿ
ಲೋಕಾಯುಕ್ತ ದಾಳಿ
Updated By: ಗಂಗಾಧರ​ ಬ. ಸಾಬೋಜಿ

Updated on: Nov 03, 2022 | 7:12 PM

ಬೆಂಗಳೂರು: ವಿವಿಧೆಡೆ ಸಬ್​​​​ ರಿಜಿಸ್ಟ್ರಾರ್​ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ (Lokayukta raid) ಮಾಡಿದೆ. ಸಬ್​​​​ ರಿಜಿಸ್ಟ್ರಾರ್​ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಸ್ತಕ್ಷೇಪದ ಬಗ್ಗೆ ಸಾರ್ವಜನಿಕರಿಂದ ದೂರು ನೀಡಲಾಗಿದೆ. ಈ ಹಿನ್ನೆಲೆ ಬೆಂಗಳೂರು ನಗರದ 14, ಗ್ರಾಮಾಂತರ ಜಿಲ್ಲೆ 4 ಕಚೇರಿಗಳ ಮೇಲೆ ರೇಡ್​ ಮಾಡಿ ಪರಿಶೀಲನೆ ಮಾಡಲಾಗಿದೆ. ವರ್ತೂರು, ಬೇಗೂರು, ದೊಡ್ಡಬಳ್ಳಾಪುರ ಸಬ್​ ರಿಜಿಸ್ಟ್ರಾರ್​ ಕಚೇರಿ ಮೇಲೂ ದಾಳಿ ಮಾಡಿದ್ದು, ಲೋಕಾಯುಕ್ತ ಪೊಲೀಸರಿಂದ ಮಹತ್ವದ ದಾಖಲೆಗಳ ಸಂಗ್ರಹ ಮಾಡಲಾಗಿದೆ. ಇನ್ನು ನೆಲಮಂಗಲದಲ್ಲೂ ಸಬ್ ರಿಜಿಸ್ಟರ್ ಕಛೇರಿ ಮೇಲೂ ಡಿವೈ ಎಸ್ಪಿ ಟಿ. ಸಿ. ವೆಂಕಟೇಶ್ ನೇತೃತ್ವದಲ್ಲಿ ದಾಳಿ ಮಾಡಿದ್ದು, ಕಛೇರಿಯಲ್ಲಿ ಪರಿಶೀಲನೆ ಮಾಡಲಾಗಿದೆ. ಒಟ್ಟು 8 ಜನ ಸಿಬ್ಬಂದಿಯಿಂದ ಕಛೇರಿಯಲ್ಲಿ ದಾಖಲೆಗಳ ಪರಿಶೀಲನೆ ಮಾಡಿದ್ದಾರೆ.

ದೇವನಹಳ್ಳಿ ತಾಲೂಕು ಸಬ್ ರಿಜಿಸ್ಟ್ರಾರ್ ಕಛೇರಿ ಮೇಲೆ ಇನ್ಸ್​ಪೇಕ್ಟರ್ ಮಹಾದೇವಯ್ಯ ನೇತೃತ್ವದಲ್ಲಿ ಎಂಟು ಜನರ ತಂಡ ದಾಳಿ ಮಾಡಿದೆ. ಸಬ್ ರಿಜಿಸ್ಟಾರ್​ಗಳಾದ ಸುರೇಶ್ ಹಂದಿಗುಂದ, ರವಿಂದ್ರೇಗೌಡ ಕರ್ತವ್ಯದಲ್ಲಿದಾಗ ದಾಳಿ ಮಾಡಲಾಗಿದೆ. ಕಛೇರಿ ಒಳ ಭಾಗದಲ್ಲಿ ಅಧಿಕಾರಿಗಳಿಂದ ದಾಖಲೆಗಳ‌ ಪರಿಶೀಲನೆ ಮಾಡಲಾಗಿದೆ. ಇನ್ನು ಏಕಕಾಲದಲ್ಲಿ ರಾಮನಗರ ಮತ್ತು ಕನಕಪುರ ಸಬ್ ರಿಜಿಸ್ಟರ್ ಕಛೇರಿ ಮೇಲೂ ದಾಳಿ ಮಾಡಲಾಗಿದೆ. ಕಛೇರಿಯಲ್ಲಿ ಸಾಕಷ್ಟು ಭ್ರಷ್ಟಾಚಾರ, ಅವ್ಯವಹಾರ ಆರೋಪ ಕೇಳಿ ಬಂದ ಹಿನ್ನಲೆ ಲೋಕಾಯುಕ್ತ ಎಸ್ಪಿ ಪುಟ್ಟಮಾದಯ್ಯ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಕಳೆದ ಒಂದು ಘಂಟೆಯಿಂದ ಕಛೇರಿಯಲ್ಲಿನ ಕಡತಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.

ರಾಜ್ಯದ ಮತ್ತಷ್ಟ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:11 pm, Thu, 3 November 22