ಬೆಂಗಳೂರು: ಭ್ರಷ್ಟಾಚಾರದ ಆರೋಪಕ್ಕೆ ಸಿಕ್ಕಿರುವ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ( BJP MLA Madal Virupakshappa) ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ನಿನ್ನೆ (ಮಾ. 08) ಲೋಕಾಯುಕ್ತ ಪೊಲೀಸರಿಂದ ಕೆಎಸ್‌ಡಿಎಲ್ ಕಚೇರಿ ಮತ್ತು ಮನೆ ಮೇಲೆ ದಾಳಿ ಮಾಡಿದ್ದು, ಇಡಿ ಪ್ರಕರಣದಲ್ಲಿ ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಟೆಂಡರ್ ವಿಚಾರಕ್ಕೆ ಸಂಬಂಧಿಸಿದಂತೆ ಗೋಲ್ಮಾಲ್ ನಡೆದಿರುವುದಕ್ಕೆ ಮಹತ್ವದ ದಾಖಲೆಗಳು ಸಿಕ್ಕಿದ್ದು, ಅಧಿಕಾರಿಗಳಿಗೆ ಸಿಕ್ಕಿರುವ ದಾಖಲೆಯಲ್ಲಿ ಹಣದ ವ್ಯವಹಾರದ ಬಗ್ಗೆ ಮಾಹಿತಿ ಇದೆ ಎನ್ನಲಾಗುತ್ತಿದೆ. ಕೆಳದ 4 ದಿನಗಳಿಂದ ಅಧಿಕಾರಿಗಳು ಹುಡಕಾಟ ನಡೆಸಿದ್ದರು. ನಿನ್ನೆ ತಜ್ಞರ ಜೊತೆ ದಾಳಿ ಮಾಡಿದ್ದು, ಡಿವಿಆರ್‌ಗಳನ್ನ ಮತ್ತು ಸರ್ವರ್ ವಶಕ್ಕೆ ಪಡೆದಿದ್ದಾರೆ. ಇದೇ ದಾಖಲೆಗಳನ್ನ ಇಟ್ಟು ಎಂಡಿ ಮತ್ತು ಕೆಲ ಅಧಿಕಾರಿಗಳ ವಿಚಾರಣೆ ನಡೆಯಲಿದೆ.
ಇನ್ನು ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಮನೆಯಲ್ಲಿ ಕೂಡ ಕೋಟಿ ಕೋಟಿ ಹಣ ಸಿಕ್ಕಿದೆ. ಈ ಸಂಬಂಧಿಸಿದಂತೆ ಆರೋಪಿಯಾಗಿ ಕಳೆದ ಕೆಲ ದಿನಗಳಿಂದ ಮಾಡಾಳ್ ವಿರೂಪಾಕ್ಷಪ್ಪ ತಲೆಮರಿಸಿಕೊಂಡಿದ್ದಾರೆ. ಆದರೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ನ್ಯಾಯಮೂರ್ತಿ ಕೆ. ನಟರಾಜನ್ ಏಕಸದಸ್ಯತ್ವದ ಪೀಠ, 5 ಲಕ್ಷ ರೂ. ಮೌಲ್ಯದ ಬಾಂಡ್, ಇಬ್ಬರು ಶ್ಯೂರಿಟಿ ನೀಡುವಂತೆ ಆದೇಶಿಸಿದೆ.
ಇದನ್ನೂ ಓದಿ: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣದ ಇಬ್ಬರು ತನಿಖಾಧಿಕಾರಿಗಳ ಬದಲಾವಣೆ, ಅನುಮಾನ ಹುಟ್ಟುಹಾಕಿದ ಬದಲಾವಣೆ
ಅಲ್ಲದೇ ಆದೇಶ ತಲುಪಿದ 48 ಗಂಟೆಯಲ್ಲಿ ತನಿಖೆಗೆ ಹಾಜರಾಗಬೇಕು ಎಂದು ಖಡಕ್ ಸೂಚನೆ ನೀಡಿ ಮುಂದಿನ ವಿಚಾರಣೆಯನ್ನು ಮಾರ್ಚ್ 17ಕ್ಕೆ ಮುಂದೂಡಿದೆ. ಹಾಗಾದರೆ, ಗಂಭೀರ ಆರೋಪ ಇರುವ ಮಾಡಾಳ್ ವಿರೂಪಾಕ್ಷಪ್ಪ ಜಾಮೀನು ಸಿಕ್ಕಿರುವುದು ಅಚ್ಚರಿಗೆ ಕಾರಣವಾಗಿದೆ. ಬಂಧನದ ಭೀತಿಯಲ್ಲಿದ್ದ ಮಾಡಾಳ್ಗೆ ಮಧ್ಯಂತರ ಜಾಮೀನು ಸಿಗಲು ಕಾರಣಗಳು ಏನು? ಎನ್ನುವುದು ಈ ಕೆಳಗಿನಂತಿವೆ ನೋಡಿ.
ಇದನ್ನೂ ಓದಿ: ಉದ್ಯಮಿಯ ಸ್ಮಾರ್ಟ್ವಾಚ್ನಲ್ಲಿ ಸರೆಯಾಯ್ತು ಮಾಡಾಳ್ ಪ್ರಶಾಂತ್ ಲಂಚ ಪ್ರಕರಣ; ಬಿಜೆಪಿ ಶಾಸಕನ ಮಗ ಬಲೆಗೆ ಬಿದ್ದದ್ದು ಹೀಗೆ
ಲೋಕಾಯುಕ್ತ ದಾಳಿಯ ವೇಳೆ ಸಿಕ್ಕ ಹಣ ಅಕ್ರಮವಲ್ಲ, ತಾನೊಬ್ಬ ಅಡಕೆ ಬೆಳೆಗಾರ ಮತ್ತು ಉದ್ಯಮಿ. ಯಾವುದೇ ಅಡಕೆ ಬೆಳೆಗಾರನ ಮನೆಗೆ ಹೋದರೂ ಮನೆಯಲ್ಲಿ ಕನಿಷ್ಟವೆಂದರೂ 2-3 ಕೋಟಿ ರೂಪಾಯಿ ಸಿಗುತ್ತದೆ ಎಂದು ಜಾಮೀನು ಸಿಕ್ಕ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಮಾಡಾಳ್ ವಿರೂಪಾಕ್ಷಪ್ಪ ಹೇಳಿದ್ದಾರೆ. ಪತ್ರಕರ್ತರೊಂದಿಗೆ ದಾವಣಗೆರೆಯಲ್ಲಿ ಮಾತಾಡಿದ ಅವರು, ತಾನು ಎಲ್ಲೂ ಹೋಗಿರಲಿಲ್ಲ, ಆರೋಪ ಮೈಮೇಲೆ ಬಂದಿದ್ದರಿಂದ ಜನರೆದುರು ಬರಲಿಲ್ಲ ಎಂದು ಅವರು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.