ಅಷ್ಟೊಂದು ಹಣ ಪತ್ತೆಯಾಗಿದ್ದರೂ ಮಾಡಾಳ್ ವಿರೂಪಾಕ್ಷಪ್ಪಗೆ ಜಾಮೀನು ಸಿಕ್ಕಿದ್ದೇಕೆ? ಇಲ್ಲಿವೆ ಕಾರಣಗಳು
ಕೆಎಸ್‌ಡಿಎಲ್ ಮಾಜಿ ಅಧ್ಯಕ್ಷ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಗಂಭೀರ ಆರೋಪವಿದ್ದರೂ ಜಾಮೀನು ಸಿಕ್ಕಿರುವುದು ಅಚ್ಚರಿಗೆ ಕಾರಣವಾಗಿದೆ. ಹಾಗಾದ್ರೆ, ಬಂಧನದ ಭೀತಿಯಲ್ಲಿದ್ದ ಮಾಡಾಳ್ಗೆ ಮಧ್ಯಂತರ ಜಾಮೀನು ಸಿಗಲು ಕಾರಣಗಳು ಏನು? ಇಲ್ಲಿವೆ ನೋಡಿ
ಬೆಂಗಳೂರು: ಲೋಕಾಯುಕ್ತ ದಾಳಿ ವೇಳೆ ಪುತ್ರನ ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿ ಕಳೆದ ಆರು ದಿನಗಳಿಂದ ತಲೆಮರಿಸಿಕೊಂಡಿದ್ದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ( BJP MLA Madal Virupakshappa) ಕರ್ನಾಟಕ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ನ್ಯಾಯಮೂರ್ತಿ ಕೆ. ನಟರಾಜನ್ ಏಕಸದಸ್ಯತ್ವದ ಪೀಠ, 5 ಲಕ್ಷ ರೂ. ಮೌಲ್ಯದ ಬಾಂಡ್, ಇಬ್ಬರು ಶ್ಯೂರಿಟಿ ನೀಡುವಂತೆ ಆದೇಶಿಸಿದೆ. ಅಲ್ಲದೇ ಆದೇಶ ತಲುಪಿದ 48 ಗಂಟೆಯಲ್ಲಿ ತನಿಖೆಗೆ ಹಾಜರಾಗಬೇಕು ಎಂದು ಖಡಕ್ ಸೂಚನೆ ನೀಡಿ ಮುಂದಿನ ವಿಚಾರಣೆಯನ್ನು ಮಾರ್ಚ್ 17ಕ್ಕೆ ಮುಂದೂಡಿದೆ. ಹಾಗಾದ್ರೆ, ಗಂಭೀರ ಆರೋಪ ಇರುವ ಕೆಎಸ್‌ಡಿಎಲ್ ಮಾಜಿ ಅಧ್ಯಕ್ಷ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಜಾಮೀನು ಸಿಕ್ಕಿರುವುದು ಅಚ್ಚರಿಗೆ ಕಾರಣವಾಗಿದೆ. ಹಾಗಾದ್ರೆ, ಬಂಧನದ ಭೀತಿಯಲ್ಲಿದ್ದ ಮಾಡಾಳ್ಗೆ ಮಧ್ಯಂತರ ಜಾಮೀನು ಸಿಗಲು ಕಾರಣಗಳು ಏನು? ಎನ್ನುವುದು ಈ ಕೆಳಗಿನಂತಿವೆ ನೋಡಿ.
ಶ್ರೇಯಸ್ ಕಶ್ಯಪ್ ನೀಡಿದ್ದ ದೂರಿನಲ್ಲಿರುವ ಲೋಪ ದೋಷಗಳನ್ನೇ ಆಧಾರವಾಗಿಟ್ಟುಕೊಂಡು ಮಾಡಾಳ್ ವಿರೂಪಾಕ್ಷಪ್ಪ ಪರ ಹಿರಿಯ ವಕೀಲ ಕೆ. ಸುಮನ್ ಅವರು ವಾದ ಮಾಡಿದರು. ಎಫ್ಐಆರ್ನಲ್ಲಿ ಯಾವುದೇ ಆರೋಪಗಳಿಲ್ಲ. ಲೋಕಾಯುಕ್ತ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ. ಟೆಂಡರ್ ಹಾಗೂ ಖರೀದಿ ಆದೇಶ ನೀಡಲಾಗಿದೆ. ಆದ್ರೆ, ಟೆಂಡರ್ ಅಂತಿಮಗೊಳಿಸುವ ಅಧಿಕಾರ ವಿರೂಪಾಕ್ಷಪ್ಪನವರದ್ದಲ್ಲ. ಲಂಚಕ್ಕೆ ಯಾವುದೇ ಬೇಡಿಕೆ ಇಟ್ಟ ಬಗ್ಗೆ ದೂರಿನಲ್ಲಿ ಉಲ್ಲೇಖವಿಲ್ಲ. ಮಗನೊಂದಿಗೆ ಮಾತನಾಡುವಂತೆ ತಿಳಿಸಿರುವುದಾಗಿ ಆರೋಪಿಸಲಾಗಿದೆ. ಆದರೆ ಲಂಚಕ್ಕೆ ಬೇಡಿಕೆ ಇಟ್ಟ ಬಗ್ಗೆ ಆರೋಪವಿಲ್ಲ. ಹೀಗಾಗಿ ಮಧ್ಯಂತರ ಜಾಮೀನು ನೀಡುವಂತೆ ಮನವಿ ಮಾಡಿದ್ದರು.
ಕಾರಣಗಳು ಇಂತಿವೆ
- ದೂರಿನಲ್ಲಿ ಶಾಸಕ ಮಾಡಾಳ್ ಲಂಚಕ್ಕೆ ಡಿಮಾಂಡ್, ಲಂಚ ಪಡೆದ ಉಲ್ಲೇಖವಿಲ್ಲ
- ಮಾಡಾಳ್ ವಿರುದ್ಧದ ಎಫ್ಐಆರ್ ನಲ್ಲಿ ಅಪರಾಧವೆನ್ನಿಸುವಂತಹ ಯಾವುದೇ ಆರೋಪಗಳಿಲ್ಲ
- ಟೆಂಡರ್ ನೀಡುವ ಮೊದಲು ಲಂಚ ಕೇಳಿರುವ ಬಗ್ಗೆ ದೂರಿನಲ್ಲಿ ಉಲ್ಲೇಖವಿಲ್ಲ
- ಕಾನೂನು ಪ್ರಕಾರವೇ ಟೆಂಡರ್ ಕರೆದು ಖರೀದಿ ಆದೇಶ ನೀಡಲಾಗಿದೆ
- ಟೆಂಡರ್ ಅಂತಿಮಗೊಳಿಸುವ ಅಧಿಕಾರ ವಿರೂಪಾಕ್ಷಪ್ಪನವರದ್ದಲ್ಲ
- ಟೆಂಡರ್ ಅಂತಿಮಗೊಳಿಸುವುದಕ್ಕೆ ಅಧಿಕಾರಿಗಳ ಪ್ರತ್ಯೇಕ ಸಮಿತಿ ಇದೆ
- ಶಾಸಕ ಮಾಡಾಳ್ ಲಂಚಕ್ಕೆ ಬೇಡಿಕೆ ಇಟ್ಟ ಬಗ್ಗೆ ದೂರಿನಲ್ಲಿ ಉಲ್ಲೇಖವಿಲ್ಲ
- ಕೇವಲ ಮಗನೊಂದಿಗೆ ಮಾತನಾಡುವಂತೆ ತಿಳಿಸಿರುವುದಾಗಿ ಉಲ್ಲೇಖ
- ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ
- ಬಂಧಿಸಿದ ಆರೋಪಿಗಳ ಕಸ್ಟಡಿ ಕೋರಿಯೂ ಲೋಕಾಯುಕ್ತ ಪೊಲೀಸರು ಯಾವುದೇ ಅರ್ಜಿ ಸಲ್ಲಿಸಿಲ್ಲ.
- ರಿಮಾಂಡ್ ಅರ್ಜಿಯಲ್ಲಿ ಶಾಸಕರ ವಿರುದ್ಧ ದಾಖಲೆಗಳನ್ನು ನೀಡಿಲ್ಲ
- ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ರಾಜಕೀಯ ಪಿತೂರಿ ನಡೆಸಲಾಗಿದ್ದು, ಕೆಎಸ್‌ಡಿಎಲ್ ನ ಅಧ್ಯಕ್ಷರಿಗೆ ಟೆಂಡರ್ ನೀಡುವ ಅಧಿಕಾರವಿಲ್ಲ.