AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಎಸ್​ಡಿಎಲ್​ನಲ್ಲಿ ಮತ್ತೊಂದು ಭ್ರಷ್ಟಾಚಾರ, ಸರ್ಕಾರದ ಡಾಕ್ಯುಮೆಂಟ್​ನಿಂದಲೇ 20 ಕೋಟಿ ರೂ. ಅಕ್ರಮ ಬಯಲಿಗೆ

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದಲ್ಲಿ ಮತ್ತೊಂದು ಭ್ರಷ್ಟಾಚಾರ ಪ್ರಕರಣ ಬಟಾಬಯಲಾಗಿದೆ. ಸರ್ಕಾರದ ಡಾಕ್ಯುಮೆಂಟ್​ನಿಂದಲೇ ಬಯಲಿಗೆ ಬಿದ್ದಿದೆ.

ಕೆಎಸ್​ಡಿಎಲ್​ನಲ್ಲಿ ಮತ್ತೊಂದು ಭ್ರಷ್ಟಾಚಾರ, ಸರ್ಕಾರದ ಡಾಕ್ಯುಮೆಂಟ್​ನಿಂದಲೇ 20 ಕೋಟಿ ರೂ. ಅಕ್ರಮ ಬಯಲಿಗೆ
ರಮೇಶ್ ಬಿ. ಜವಳಗೇರಾ
|

Updated on: Mar 08, 2023 | 8:09 AM

Share

ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದಲ್ಲಿ(Karnataka Soaps and Detergent Limited (KSDL) 20 ಕೋಟಿ ರೂ. ಅಕ್ರಮವಾಗಿರುವುದು ಬೆಳಕಿಗೆ ಬಂದಿದೆ. ಮೈಸೂರು ಸ್ಯಾಂಡಲ್ ಸೋಪ್ ಸೇರಿದಂತೆ ತನ್ನ ಉತ್ಪನ್ನಗಳಿಗೆ ಕಚ್ಚಾ ವಸ್ತುಗಳನ್ನು ಖರೀದಿಯಲ್ಲಿ 20 ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿರುವುದು ಸರ್ಕಾರದ ಡಾಕ್ಯುಮೆಂಟ್ ನಿಂದಲೇ ಬಹಿರಂಗವಾಗಿದೆ.

ಕೆಎಸ್​ಡಿಎಲ್​ಗೆನ ನಿರ್ದೇಶಕರಿಗೆ ಫೆ.28 ರಂದು ಪತ್ರ ಬರೆದಿದ್ದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ, 3 ವರ್ಷಗಳ ಹಿಂದೆ ಕಚ್ಚಾ ವಸ್ತುಗಳ ಖರೀದಿಯಲ್ಲಿ ನಡೆದಿದ್ದ 20 ಕೋಟಿ ರೂಪಾಯಿಗೂ ಹೆಚ್ಚಿನ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಕೆಎಸ್ ಡಿಎಲ್ ಅಧ್ಯಕ್ಷ ಹಾಗೂ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಅವರು ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಕಚ್ಚಾ ವಸ್ತುಗಳ ಟೆಂಡರ್​ ಸಂಬಂಧ ಲಂಚ ಸ್ವೀಕರಿಸುವಾಗ ಕೆಎಸ್​ಡಿಎಲ್ ಅಧ್ಯಕ್ಷ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್​ನನ್ನು ಲೋಕಾಯುಕ್ತ ದಾಳಿ ಮಾಡಿ ಬಂಧಿಸಿದೆ. ಮಾಡಾಳ್​ ಪರವಾಗಿ ಪುತ್ರ ಲಂಚ ಸ್ವೀಕರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಲೋಕಾಯುಕ್ತ ದಾಳಿಯಲ್ಲಿ ಮಾಡಾಳ್ ಕುಟುಂಬಕ್ಕೆ ಸೇರಿದ ಮನೆಯಲ್ಲಿ 8.23 ಕೋಟಿ ರೂಪಾಯಿ ನಗದು ಹಾಗೂ ಅಪಾರ ಪ್ರಮಾಣದ ಚಿನ್ನಾಭರಣ, ಆಸ್ತಿಪಾಸ್ತಿಗಳು ಪತ್ತೆಯಾಗಿವೆ. ಇನ್ನು ಈ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸಿದ್ದು, ಎಲ್ಲಿಗೆ ಬಂದು ನಿಲ್ಲುತ್ತದೆ ಎಂದು ಕಾದುನೋಡಬೇಕಿದೆ.

Follow Us
ಐಪಿಎಲ್ ಪಂದ್ಯದ ಟಿಕೆಟ್‌ಗಳು ಮುಗಿದು ಮೂರು ದಿನಗಳಾಗಿವೆ
ಐಪಿಎಲ್ ಪಂದ್ಯದ ಟಿಕೆಟ್‌ಗಳು ಮುಗಿದು ಮೂರು ದಿನಗಳಾಗಿವೆ
ಸೌಂದರ್ಯ ಸ್ಪರ್ಧೆಯ ವೇದಿಕೆಯಲ್ಲೇ ಉದುರಿಬಿತ್ತು ಸುಂದರಿಯ ಹಲ್ಲು
ಸೌಂದರ್ಯ ಸ್ಪರ್ಧೆಯ ವೇದಿಕೆಯಲ್ಲೇ ಉದುರಿಬಿತ್ತು ಸುಂದರಿಯ ಹಲ್ಲು
ಜಮೀರ್​ ಪ್ರಚಾರಕ್ಕೆ ಬರುತ್ತಾರಾ ಎಂದಿದ್ದಕ್ಕೆ ಮಲ್ಲಿಕಾರ್ಜುನ ಏನಂದ್ರು ನೋಡಿ
ಜಮೀರ್​ ಪ್ರಚಾರಕ್ಕೆ ಬರುತ್ತಾರಾ ಎಂದಿದ್ದಕ್ಕೆ ಮಲ್ಲಿಕಾರ್ಜುನ ಏನಂದ್ರು ನೋಡಿ
ನನಗೆ ಯಶಸ್ವಿ ವ್ಯಕ್ತಿಗಳೆಂದರೆ ಇಷ್ಟವಿಲ್ಲ; ಅಮೆರಿಕ ಅಧ್ಯಕ್ಷ ಟ್ರಂಪ್
ನನಗೆ ಯಶಸ್ವಿ ವ್ಯಕ್ತಿಗಳೆಂದರೆ ಇಷ್ಟವಿಲ್ಲ; ಅಮೆರಿಕ ಅಧ್ಯಕ್ಷ ಟ್ರಂಪ್
ಇರಾನ್‌ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಬಗ್ಗೆ ಟ್ರಂಪ್ ಶಾಕಿಂಗ್ ಹೇಳಿಕೆ
ಇರಾನ್‌ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಬಗ್ಗೆ ಟ್ರಂಪ್ ಶಾಕಿಂಗ್ ಹೇಳಿಕೆ
ಕೊಹ್ಲಿ ನನಗೆ ಲವ್ ಬೈಟ್ ನೀಡಿದ್ದಾನೆ; ಯುವತಿಯ ಹೇಳಿಕೆ ವೈರಲ್
ಕೊಹ್ಲಿ ನನಗೆ ಲವ್ ಬೈಟ್ ನೀಡಿದ್ದಾನೆ; ಯುವತಿಯ ಹೇಳಿಕೆ ವೈರಲ್
ಬಿಜೆಪಿ ಕಚೇರಿ ಮುಂದೆನೇ ಬಂದು ತೊಡೆತಟ್ಟಿದ್ದೇವೆ: ಗುಡುಗಿದ ಪ್ರದೀಪ್ ಈಶ್ವರ್
ಬಿಜೆಪಿ ಕಚೇರಿ ಮುಂದೆನೇ ಬಂದು ತೊಡೆತಟ್ಟಿದ್ದೇವೆ: ಗುಡುಗಿದ ಪ್ರದೀಪ್ ಈಶ್ವರ್
ಜೆವಾರ್‌ನಲ್ಲಿ ಅಂತಾರಾಷ್ಟ್ರೀಯ ಏರ್​ಪೋರ್ಟ್​ ಉದ್ಘಾಟನೆ ಮಾಡಿದ ಮೋದಿ!
ಜೆವಾರ್‌ನಲ್ಲಿ ಅಂತಾರಾಷ್ಟ್ರೀಯ ಏರ್​ಪೋರ್ಟ್​ ಉದ್ಘಾಟನೆ ಮಾಡಿದ ಮೋದಿ!
ಕಾಫಿನಾಡಿನಲ್ಲಿ ವರುಣನ ಅಬ್ಬರ
ಕಾಫಿನಾಡಿನಲ್ಲಿ ವರುಣನ ಅಬ್ಬರ
ಚಿಕ್ಕೋಡಿ ಕಾಡಸಿದ್ದೇಶ್ವರ ಮಠಕ್ಕೆ ಮೋಹನ್ ಭಾಗವತ್​ ಭೇಟಿ: ತುಲಾಭಾರ
ಚಿಕ್ಕೋಡಿ ಕಾಡಸಿದ್ದೇಶ್ವರ ಮಠಕ್ಕೆ ಮೋಹನ್ ಭಾಗವತ್​ ಭೇಟಿ: ತುಲಾಭಾರ