ರಾಜ್ಯ ಪೊಲೀಸ್ ಇಲಾಖೆಯ ಸಬ್​ ಡಿವಿಷನ್​ನಲ್ಲಿ ಮಹತ್ವದ ಬದಲಾವಣೆ; ಠಾಣೆಗಳನ್ನು ಹೆಚ್ಚಿಸಿ ಸರ್ಕಾರ ಆದೇಶ

| Updated By: ಆಯೇಷಾ ಬಾನು

Updated on: Dec 27, 2022 | 7:07 AM

ಪಶ್ಚಿಮ ಸಂಚಾರ ಉಪವಿಭಾಗದ ಜತೆಗೆ ವಿಜಯನಗರ ಉಪವಿಭಾಗ ಸೇರ್ಪಡೆ ಮಾಡಲಾಗಿದೆ. ಬೆಂಗಳೂರು ಪೂರ್ವ ವಿಭಾಗದ ಆಗ್ನೇಯ ಸಬ್​ಡಿವಿಷನ್​ ಕೂಡ ವಿಂಗಡಣೆ ಮಾಡಲಾಗಿದೆ.

ರಾಜ್ಯ ಪೊಲೀಸ್ ಇಲಾಖೆಯ ಸಬ್​ ಡಿವಿಷನ್​ನಲ್ಲಿ ಮಹತ್ವದ ಬದಲಾವಣೆ; ಠಾಣೆಗಳನ್ನು ಹೆಚ್ಚಿಸಿ ಸರ್ಕಾರ ಆದೇಶ
ಕರ್ನಾಟಕ ರಾಜ್ಯ ಪೊಲೀಸ್​
Follow us on

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ಸಬ್​ ಡಿವಿಷನ್​ನಲ್ಲಿ(State Police Department Sub Division) ಮಹತ್ವದ ಬದಲಾವಣೆ ಮಾಡಲಾಗಿದೆ. ಸಂಚಾರ, ಕಾನೂನು ಸುವ್ಯವಸ್ಥೆ ಠಾಣೆಗಳ ಸಬ್ ಡಿವಿಷನ್​ಗಳನ್ನು ಹೆಚ್ಚಳ ಮಾಡಲಾಗಿದೆ. ಪೊಲೀಸ್ ಮಹಾ ನಿರ್ದೇಶಕರು ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಸದ್ಯ ಈಗ ಸಬ್​ ಡಿವಿಷನ್​ನಲ್ಲಿ ಬದಲಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು ಪಶ್ಚಿಮ ಸಂಚಾರ ಸಬ್​ ಡಿವಿಷನ್ ಮಾರ್ಪಡಿಸಿ ಆದೇಶ ನೀಡಿದೆ. ಪಶ್ಚಿಮ ಸಂಚಾರ ಉಪವಿಭಾಗದ ಜತೆಗೆ ವಿಜಯನಗರ ಉಪವಿಭಾಗ ಸೇರ್ಪಡೆ ಮಾಡಲಾಗಿದೆ. ಬೆಂಗಳೂರು ಪೂರ್ವ ವಿಭಾಗದ ಆಗ್ನೇಯ ಸಬ್​ಡಿವಿಷನ್​ ಕೂಡ ವಿಂಗಡಣೆ ಮಾಡಲಾಗಿದೆ. ಆಗ್ನೇಯ ಸಬ್​ ಡಿವಿಷನ್​ ಜತೆಗೆ ಆಡುಗೋಡಿ ಸಬ್​ ಡಿವಿಷನ್​ ರಚಿಸಲಾಗಿದೆ. ಹೊಸದಾಗಿ ಹೆಚ್​ಎಸ್​ಆರ್​ ಲೇಔಟ್​ ಸಬ್​ ಡಿವಿಷನ್​ ಸೇರ್ಪಡೆ ಮಾಡಲಾಗಿದೆ. ಉತ್ತರ ವಿಭಾಗದ ಯಶವಂತಪುರ ಸಬ್ ಡಿವಿಷನ್​ ವಿಂಗಡಿಸಿ ಯಶವಂತಪುರ, ಪೀಣ್ಯ ಸಬ್​ ಡಿವಿಷನ್​ಗಳಾಗಿ ಮಾರ್ಪಡಿಸಿ ಸರ್ಕಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಜಡೆ ಜಡೆ ಜಗಳ: ನಡು ರಸ್ತೆಯಲ್ಲಿ ಶಾಲಾ ವಿದ್ಯಾರ್ಥಿನಿಯರ ಬಡೆದಾಟ; ವಿಡಿಯೋ ವೈರಲ್​

ಪಶ್ಚಿಮ ವಿಭಾಗದ ಕೆಂಗೇರಿ ಗೇಟ್, ವಿಜಯನಗರ ಸಬ್​ಡಿವಿಷನ್​ ಮಾರ್ಪಾಡು ಮಾಡಲಾಗಿದೆ. ಹೊಸದಾಗಿ ಕೆಂಗೇರಿ ಸಬ್​ಡಿವಿಷನ್​ ಸೇರ್ಪಡೆ ಮಾಡಲಾಗಿದೆ. ಮೈಸೂರಿನ ನರಸಿಂಹರಾಜ, ಕೃಷ್ಣರಾಜ ಸಬ್ ಡಿವಿಷನ್​ನಲ್ಲೂ ಮಾರ್ಪಾಡು ಮಾಡಲಾಗಿದೆ. ಹೊಸದಾಗಿ ವಿಜಯನಗರ ಸಬ್​ ಡಿವಿಷನ್​ ಸೇರ್ಪಡೆ ಮಾಡಿ ಆದೇಶಿಸಲಾಗಿದೆ. ಇನ್ನು ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ಸಬ್​ ಡಿವಿಷನ್​ನಲ್ಲೂ ಬದಲಾವಣೆ ಮಾಡಲಾಗಿದೆ. ಶಿವಮೊಗ್ಗ ಸಬ್ ಡಿವಿಷನ್ ಎ, ಬಿ ಸಬ್​ ಡಿವಿಷನ್​ ಆಗಿ ಮಾರ್ಪಾಡು ಮಾಡಲಾಗಿದೆ. ಹಾಗೂ ಹಾಸನ ಜಿಲ್ಲೆಯ ಹೊಳೆನರಸೀಪುರ ಸಬ್ ಡಿವಿಷನ್​ನಲ್ಲೂ ಬದಲಾವಣೆ ಮಾಡಲಾಗಿದ್ದು ಜಿಲ್ಲೆಯಲ್ಲಿ ಹೊಸದಾಗಿ ಚನ್ನರಾಯಪಟ್ಟಣ ಸಬ್​ ಡಿವಿಷನ್​ ಸೇರಿಸಲಾಗಿದೆ. ವಿಜಯಪುರ ಜಿಲ್ಲೆ 3 ಸಬ್​ ಡಿವಿಷನ್​ಗಳಿಂದ 4 ಸಬ್​ ಡಿವಿಷನ್​ಗೆ ಏರಿಸಲಾಗಿದೆ. ಹೊಸದಾಗಿ ವಿಜಯಪುರ ಗ್ರಾಮಾಂತರ ಸಬ್​ ಡಿವಿಷನ್​ ಸೇರಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಬ್​ ಡಿವಿಷನ್​ ಕೂಡ ಮಾರ್ಪಟ್ಟಿದ್ದು ಹೊಸದಾಗಿ ಬೆಳ್ತಂಗಡಿ ಸಬ್ ಡಿವಿಷನ್​ ಸೇರ್ಪಡೆ ಮಾಡಲಾಗಿದೆ. ಸಬ್​ ಡಿವಿಷನ್​ಗಳ ಪೊಲೀಸ್​ ಠಾಣೆಗಳನ್ನು ಅದಲು ಬದಲು ಮಾಡಿ ಸರ್ಕಾರ ಆದೇಶಿಸಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:07 am, Tue, 27 December 22