ಜಡೆ ಜಡೆ ಜಗಳ: ನಡು ರಸ್ತೆಯಲ್ಲಿ ಶಾಲಾ ವಿದ್ಯಾರ್ಥಿನಿಯರ ಬಡೆದಾಟ; ವಿಡಿಯೋ ವೈರಲ್​

ಉತ್ತರಾಖಂಡ್‌ನ ರೂರ್ಕಿಯ ಹೋಟೆಲ್​ನ ಪಾರ್ಕಿಂಗ್​ನಲ್ಲಿ ಹುಡಗಿಯರು ಒಬ್ಬರಿಗೊಬ್ಬರು ಬಡಿದಾಡಿಕೊಂಡಿರುವ ವಿಡಿಯೋ ವೈರಲ್​ ಆಗಿದೆ.

ಜಡೆ ಜಡೆ ಜಗಳ: ನಡು ರಸ್ತೆಯಲ್ಲಿ ಶಾಲಾ ವಿದ್ಯಾರ್ಥಿನಿಯರ ಬಡೆದಾಟ; ವಿಡಿಯೋ ವೈರಲ್​
ಬಡಿದಾಡಿಕೊಂಡ ವಿದ್ಯಾರ್ಥಿನಿಯರು
Follow us
TV9 Web
| Updated By: ವಿವೇಕ ಬಿರಾದಾರ

Updated on: Dec 26, 2022 | 10:36 PM

ಉತ್ತಾರಾಖಂಡ: ಉತ್ತರಾಖಂಡ್‌ನ (Uttarakhand) ರೂರ್ಕಿಯ ಹೋಟೆಲ್​ನ ಪಾರ್ಕಿಂಗ್​ನಲ್ಲಿ ಹುಡಗಿಯರು ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿರುವ ವಿಡಿಯೋ ವೈರಲ್ (Video Viral) ​ ಆಗಿದೆ. ಯಾವ ವಿಚಾರಕ್ಕೆ ಬಡಿದಾಡಿಕೊಂಡಿದ್ದಾರೆ ಎಂಬುವುದು ತಿಳಿದು ಬಂದಿಲ್ಲ. ಆದರೆ ಹುಡಗಿಯರ ಮಧ್ಯೆ ಮೊದಲು ವಾಗ್ವಾದ ಶುರುವಾಗಿದೆ. ಇದು ತಾರಕಕ್ಕೆ ಏರಿ ಒಬ್ಬರಿಗೊಬ್ಬರು ಬಡಿದಾಡಿಕೊಂಡಿದ್ದಾರೆ. ಹುಡಗೀರು ಶಾಲಾ ವಿದ್ಯಾರ್ಥಿನಿಯರು ಎಂದು ತಿಳಿದು ಬಂದಿದೆ. ಸದ್ಯ ಹುಡುಗಿಯರ ಕಾಳಗದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಈ ಘಟನೆ ಯಾವಗ ನಡೆದಿದೆ ಎಂದು ನಿಖರವಾದ ದಿನಾಂಕ ತಿಳಿದಿಲ್ಲ.

ಇನ್ನೂ ವಿಡಿಯೋದಲ್ಲಿ ನಲ್ವಾರಿಂದ ಐದು ಹುಡುಗಿಯರು ಬಡಿದಾಡಿಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ. ವಿಡಿಯೋದಲ್ಲಿ ಓರ್ವಳನ್ನು ನೆಲಕ್ಕೆ ಕೆಡವಿದ್ದಾರೆ. ನಂತರ ಆಕೆಯ ಕೂದಲನ್ನು ಹಿಡಿದು ಎಳೆದಾಡಿದ್ದಾರೆ. ಈ ವೇಳೆ ಓರ್ವ ಹುಡಿಗಿ ಅಲ್ಲೆ ಇದ್ದ ಬಡಿಗೆಯನ್ನು ತಂದು ಕೆಳೆಗೆ ಬಿದ್ದ ಹುಡುಗಿಗೆ ಥಳಿಸಿದ್ದಾಳೆ. ಬಳಿಕ ಮತ್ತೋರ್ವಳು ಕೆಳಗೆ ಬಿದ್ದ ಹುಡುಗಿಯ ಕೂದಲು, ಅಂಗಿ ಹಿಡಿದು ಎಳೆದಾಡಿದ್ದಾಳೆ. ನಂತರ ಇಬ್ಬರು ಕಳೆಗೆ ಬಿದ್ದು ಗುದ್ದಾಡಿದ್ದಾರೆ.

ಕೆಲವು ಸೆಕೆಂಡುಗಳ ನಂತರ, ಜಗಳವನ್ನು ನಿಲ್ಲಿಸಲು ಹಲವಾರು ಜನರು ಹುಡುಗಿಯರ ಗುಂಪಿನ ಕಡೆಗೆ ಹೋಗುವುದನ್ನು ಕಾಣಬಹುದು. ಈ ಬಗ್ಗೆ ಇದುವರೆಗೆ ಯಾವುದೇ ದೂರು ಬಂದಿಲ್ಲ ಎಂದು ಸಿವಿಲ್ ಲೈನ್ ಕೊತ್ವಾಲಿ ಉಸ್ತುವಾರಿ ದೇವೇಂದ್ರ ಚೌಹಾಣ್ ಹೇಳಿದ್ದಾರೆ ಎಂದು ಡಿಎನ್​ಎ ವರದಿ ಮಾಡಿದೆ. ಯಾರಾದರು ದೂರು ದಾಖಲಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಮತ್ತಷ್ಟು ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ