ಆಡಲು ನಂಗೊಂದು ಮನೆ ಮಾಡಿಕೊಡು ಸಾಂತಾ; ತಂಗಿಯ ಆಸೆಯನ್ನು ಈಡೇರಿಸಿದ ಅಣ್ಣ
Christmas : 'ಸೀಕ್ರೇಟ್ ಸಾಂತಾ‘ ಮಕ್ಕಳಿಗಂತೂ ಇದು ಮುಗಿಯದ ಸಂಭ್ರಮ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಅಣ್ಣನೊಬ್ಬ ತಂಗಿಯ ಆಸೆಯನ್ನು ಹೇಗೆ ಪೂರೈಸಿದ್ದಾನೆ ನೋಡಿ.
Viral Video : ಸಾಂತಾನಲ್ಲಿ ಏನೇ ನಿವೇದಿಸಿಕೊಂಡರೂ ಅದನ್ನು ಹೇಗಾದರೂ ಆಗುಮಾಡಿಕೊಡುತ್ತಾನೆ ಎಂಬ ದೃಢವಾದ ನಂಬಿಕೆ ಮಕ್ಕಳದು. ಸಾಂತಾ ಕೂಡ ಮಕ್ಕಳ ಮನಸ್ಸನ್ನು ಎಂದೂ ನೋಯಿಸಲಾರ. ಪ್ರತೀ ವರ್ಷ ಮಕ್ಕಳಿಗೆ ಉಡುಗೊರೆಗಳನ್ನು ಬಂಡಿತುಂಬಾ ಹೊತ್ತುಕೊಂಡು ಬರುತ್ತಾನೆ. ಹೌದಾ, ಇದೆಲ್ಲ ನಿಜವಾ? ಇದಕ್ಕೆ ಉತ್ತರ ಮಕ್ಕಳ ಬಳಿಯೇ ಇದೆ! ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಈ ಪುಟ್ಟಿ ಸಾಂತಾನಲ್ಲಿ ತನಗೊಂದು ಆಟಿಕೆಯ ಮನೆ ಬೇಕು ಎಂದು ಕೇಳಿಕೊಂಡಿದ್ದಾಳೆ. ಇವಳ ಆಶಯ ಮತ್ತು ನಿರೀಕ್ಷೆಯನ್ನು ಈಕೆಯ ಅಣ್ಣ ಹೇಗೆ ಈಡೇರಿಸಿದ್ದಾನೆ ನೋಡಿ.
TEARS OF JOY: This little girl asked Santa Claus for a toy house where she could play. They are a family of limited means, so her brothers surprised her by building one for her. She loves it! (?:paoladelvalle16) pic.twitter.com/SZ3IS6Pfxu
ಇದನ್ನೂ ಓದಿ— GoodNewsCorrespondent (@GoodNewsCorres1) December 25, 2022
ಇದ್ದ ಹಳೆಯ ಸಾಮಾನುಗಳಲ್ಲಿಯೇ ಅಣ್ಣ ಚಿಕ್ಕದಾದ ಮತ್ತು ಚೊಕ್ಕದಾದ ಮನೆಯನ್ನು ಕಟ್ಟಿಕೊಟ್ಟಿದ್ದಾನೆ. ಈ ವಿಡಿಯೋ ಅನ್ನು ಗುಡ್ನ್ಯೂಸ್ ಮೂವ್ಮೆಂಟ್ ಖಾತೆಯು ಹಂಚಿಕೊಂಡಿದೆ. 1.7 ಲಕ್ಷಕ್ಕಿಂತಲೂ ಹೆಚ್ಚು ಜನರು ನೋಡಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಭಾವುಕರಾಗಿದ್ದಾರೆ. ಹಲವಾರು ಜನರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಎಂಥ ಒಳ್ಳೆಯ ಅಣ್ಣನನ್ನು ಈಕೆ ಪಡೆದಿದ್ದಾಳೆ ಎಂದಿದ್ದಾರೆ ಒಬ್ಬರು. ಹಿತ್ತಲಿನಲ್ಲಿಯ ಜಂಕ್ ಅನ್ನು ಕ್ಲೀನ್ ಮಾಡಲು ಒಳ್ಳೆಯ ಐಡಿಯಾ ಇದು ಮತ್ತೊಬ್ಬರು ಹೇಳಿದ್ದಾರೆ. ಇದೇ ನಿಜವಾದ ಪ್ರೀತಿ ಎಂದು ಅನೇಕರು ಹೇಳಿದ್ದಾರೆ. ನನಗೂ ಇಂಥ ಅಣ್ಣನಿನರಬೇಕಿತ್ತು ಎಂದಿದ್ದಾರೆ ಒಬ್ಬರು. ಭವಿಷ್ಯದಲ್ಲಿ ಇವನು ಅತ್ಯುತ್ತಮ ಗಂಡನಾಗುತ್ತಾನೆ ಎಂದಿದ್ಧಾರೆ ಮತ್ತೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅನಿಸಿಕೆ ಏನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 5:22 pm, Mon, 26 December 22