Viral Video: ಬ್ರೆಜಿಲ್ ದೇಶದ ಮಾಡೆಲೊಬ್ಬಳನ್ನು ಸ್ಥೂಲದೇಹಿ ಎಂಬ ಕಾರಣಕ್ಕೆ ಕತಾರ್ ಏರ್ವೇಸ್ ವಿಮಾನದಿಂದ ಕೆಳಗಿಳಿಸಲಾಯಿತು!

‘ಕತಾರ್ ಏರ್ವೇಸ್ ನಂಥ ಒಂದು ಸಂಸ್ಥೆ ಮಾನವರ ನಡುವೆ ಹೀಗೆ ತಾರತಮ್ಯವೆಸಗುವುದು ನಾಚಿಕೆಗೇಡಿನ ಸಂಗತಿ. ನಾನು ದಪ್ಪ ಇರಬಹುದು ಆದರೆ ಬೇರೆಯವರಂತೆ ಮಾನವಳಲ್ಲವೇ?’ ಅಂತ ನೆಹ್ಮೆ ತಮ್ಮ ಫಾಲೋಯರ್ಸ್ ಗೆ ಹೇಳಿದ್ದಾರೆ.

Viral Video: ಬ್ರೆಜಿಲ್ ದೇಶದ ಮಾಡೆಲೊಬ್ಬಳನ್ನು ಸ್ಥೂಲದೇಹಿ ಎಂಬ ಕಾರಣಕ್ಕೆ ಕತಾರ್ ಏರ್ವೇಸ್ ವಿಮಾನದಿಂದ ಕೆಳಗಿಳಿಸಲಾಯಿತು!
ಜೂಲಿಯಾನ ನೆಹ್ಮೆ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 23, 2022 | 4:25 PM

ಬ್ರೆಜಿಲ್ ನ ಮಾಡೆಲ್ ಮತ್ತು ಮಾರ್ಕೆಟಿಂಗ್ ಪರಿಣಿತೆ (influencer) ಅಗಿರುವ ಮಹಿಳಿಯೊಬ್ಬರನ್ನು ಅವರ ಸ್ಥೂಲದೇಹದ ಕಾರಣ ಕತಾರ್ ಏರ್ವೇಸ್ (Qatar Airways) ಸಂಸ್ಥೆಯ ವಿಮಾನದಲ್ಲಿ ಪ್ರಯಾಣಿಸಲು ಸೀಟು ನಿರಾಕರಿಸಿದ ಸೋಜಿಗದ ಘಟನೆ ನಡೆದಿದೆ. ಘಟನೆಯ ಬಳಿಕ ಬ್ರೆಜಿಲ್ ನ ನ್ಯಾಯಾಧೀಶರೊಬ್ಬರು ಮಾಡೆಲ್ ಳ ಮಾನಸಿಕ ಚಿಕಿತ್ಸೆಯ ವೆಚ್ಚ ಭರಿಸುವಂತೆ ಕತಾರ ಏರ್ವೇಸ್ ಗೆ ಸೂಚಿಸಿದೆ. 38-ವರ್ಷ-ವಯಸ್ಸಿನ ಮಾಡೆಲ್ ಜೂಲಿಯಾನ ನೆಹ್ಮೆ (Juliana Nehme) ತಮ್ಮ ಕಹಿಘಟನೆಯ ವಿಡಿಯೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು ಅದು ವೈರಲ್ ಅಗಿದೆ. ತುಂಬಾ ‘ಸ್ಥೂಲದೇಹಿ’ ಎಂಬ ಕಾರಣಕ್ಕೆ ನವೆಂಬರ್ 22 ರಂದು ಬೈರೂತ್ ನಿಂದ ದೋಹಾಗೆ ಪ್ರಯಾಣಿಸಲು ಅನುಮತಿ ನಿರಾಕರಿಸಲಾಯಿತು ಎಂದು ಅವರು ತನ್ನ 1,68,000 ಫಾಲೋಯರ್ಸ್ ಗೆ ಹೇಳಿದ್ದಾರೆ.

ಇಕಾನಮಿ ಕ್ಲಾಸ್ ಟಿಕೆಟ್ ಗೆ ತೆತ್ತಿದ್ದ 947 ಡಾಲರ್ ಹಣ ಹಿಂತಿರುಗಿಸಲು ಕೂಡ ನಿರಾಕರಿಸಲಾಯಿತಲ್ಲದೆ, ವಿಶಾಲವಾದ ಆಸನಗಳಿದ್ದ ಪ್ರಥಮ ದರ್ಜೆ ಕ್ಲಾಸ್ ನಲ್ಲಿ ಪ್ರಯಾಣಿಸಲು 3,000 ಡಾಲರ್ ನೀಡಬೇಕೆಂದು ಒತ್ತಾಯಿಸಲಾಯಿತು ಎಂದು ನೆಹ್ಮೆ ಹೇಳಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಅವರು ತಮ್ಮ ಮಾತೃಭಾಷೆಯಲ್ಲಿ, ‘ಪ್ರಯಾಣಿಸುವ ನನ್ನ ಹಕ್ಕನ್ನು ಇವರು ಕಸಿದುಕೊಂಡಿದ್ದಾರೆ… ಹೆಲ್ಪ್! ನಾನು ದಪ್ಪಕ್ಕಿರುವ ಕಾರಣ ಪ್ರಯಾಣಿಸಲು ಅವರು ನನಗೆ ಅನುಮತಿ ನೀಡುತ್ತಿಲ್ಲ,’ ಎಂದು ಹೇಳಿರುವುದು ಕೇಳಿಸುತ್ತದೆ. ಅವರು ಅಂತಿಮವಾಗಿ ಲೆಬನಾನ್ ನಲ್ಲಿರುವ ತಮ್ಮ ತಾಯಿಯ ಮನೆಗೆ ಹೋಗಬೇಕಾಯಿತು ಮತ್ತು ಅವರ ಅಕ್ಕ ಮತ್ತು ಆಕೆಯ ಮಗ ಸ್ವದೇಶಕ್ಕೆ ಪ್ರಯಾಣಿದರು.

ಇದನ್ನೂ ಓದಿ: ವೈರಲ್ ವಿಡಿಯೋ: ವಿದ್ಯುತ್ ಕಂಬವೇರಿದ ಪಾಗಲ್ ಪ್ರೇಮಿಯೊಬ್ಬ ಪೂಜಾ ಐ ಲವ್ ಯೂ… ಎಂದು ಕೂಗಿದ!

‘ಕತಾರ್ ಏರ್ವೇಸ್ ನಂಥ ಒಂದು ಸಂಸ್ಥೆ ಮಾನವರ ನಡುವೆ ಹೀಗೆ ತಾರತಮ್ಯವೆಸಗುವುದು ನಾಚಿಕೆಗೇಡಿನ ಸಂಗತಿ. ನಾನು ದಪ್ಪ ಇರಬಹುದು ಆದರೆ ಬೇರೆಯವರಂತೆ ಮಾನವಳಲ್ಲವೇ?’ ಅಂತ ಅವರು ತಮ್ಮ ಫಾಲೋಯರ್ಸ್ ಗೆ ಹೇಳಿದ್ದಾರೆ.

ನ್ಯಾಯಾಧೀಶ ರಿನಾಟಾ ಮಾರ್ಟಿನ್ಸ್ ಡಿ ಕಾರ್ವಾಲೊ ಅವರು ನೆಹ್ಮೆ ಅವರಿಗಾದ ಅವಮಾನವನ್ನು ಗಂಭೀರವಾಗಿ ಪರಿಗಣಿಸಿ, ಘಟನೆಯಿಂದ ಮಾಡೆಲ್ ಗೆ ಮಾನಸಿಕ ಆಘಾತವಾಗಿರುತ್ತದೆ ಮತ್ತು ಮಾನಸಿಕ ಕೌನ್ಸೆಲಿಂಗ್ ವೆಚ್ಚವನ್ನು ಕತಾರ್ ಏರ್ವೇಸ್ ಭರಿಸಬೇಕೆಂದು ನ್ಯೂಸ್. ಕಾಮ್.ಎಯು ವರದಿ ಮಾಡಿದೆ. ವರ್ಷವಿಡೀ ನಡೆಯಬಹುದಾದ ಕೌನ್ಸೆಲಿಂಗ್ ಸೆಷನ್ ಗಳಿಗೆ ಪ್ರತಿ ಸೆಷನ್ ರಿಯಾಸ್ ಗೆ 400 ರಂತೆ (ರೂ. 6,389) ಒಟ್ಟು ರಿಯಾಸ್ 19,200 (ರೂ. 3,07,018) ಪಾವತಿಸುವಂತೆ ಸೂಚಿಸಿದೆ.

ಬ್ರೆಜಿಲ್ ಕೋರ್ಟ್ ನಿರ್ದೇಶನಕ್ಕೆ ಪ್ರತಿಕ್ರಿಯಿಸಿರುವ ಕತಾರ್ ಏರ್ವೇಸ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ‘ಕತಾರ್ ಏರ್ವೇಸ್ ಉಳಿದೆಲ್ಲ ವಾಯುಯಾನ ಸಂಸ್ಥೆಗಳ ಹಾಗೆ ಮತ್ತು ಉದ್ದಿಮೆಯ ಸ್ಟ್ಯಾಂಡರ್ಡ್ ಗಳಿಗೆ ಅನುಗುಣವಾಗಿ ಎಲ್ಲ ಪ್ರಯಾಣಿಕರನ್ನು ಘನತೆ ಮತ್ತು ಗೌರವಗಳಿಂದ ಟ್ರೀಟ್ ಮಾಡುತ್ತದೆ. ಪ್ರಯಾಣಿಕರೊಬ್ಬರು ವಿಮಾನದಲ್ಲಿ ತಮ್ಮ ಸೀಟಿನ ಜೊತೆ ಸಹ ಪ್ರಯಾಣಿಕ ಸೀಟಿನ ಭಾಗವನ್ನು ಆಕ್ರಮಿಸಿಕೊಂಡಿದ್ದರೆ ಮತ್ತು ಅವರಿಗೆ ಸೀಟ್ ಬೆಲ್ಟ್ ಬಿಗಿದುಕೊಳ್ಳುವುದು ಸಾಧ್ಯವಾಗದೆ ಹೋದರೆ ಹಾಗೂ ಆರ್ಮ್ರೆಸ್ಟ್ ಗಳನ್ನು ಕೆಳಗಿಳಿಸಲು ತೊಂದರೆಯಾಗುತ್ತಿದ್ದರೆ ಅವರು ತಮ್ಮ ಹಾಗೂ ಸಹಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲಕ್ಕೋಸ್ಕರ ಹೆಚ್ಚುವರಿ ಸೀಟ್ ಖರೀದಿಸಬೇಕಾಗುತ್ತದೆ,’ ಎಂದು ಹೇಳಿದೆ.

ಇದನ್ನೂ ಓದಿ:  India Covid Updates: ವಿದೇಶಗಳಿಂದ ಬರುವವರಿಗೆ RT-PCR ಪರೀಕ್ಷೆ ಆರಂಭ: ಮನ್ಸುಖ್ ಮಾಂಡವೀಯ

ಕತಾರ್ ಏರ್ವೇಸ್ ಸಂಸ್ಥೆಯು ಮುಂದುವರಿದು ಜೂಲಿಯಾನ ನೆಹ್ಮಾ ಅವರು ಬೈರೂತ್ ವಿಮಾನ ನಿಲ್ದಾಣದಲ್ಲಿ ಚೆಕ್-ಇನ್ ಸಿಬ್ಬಂದಿಯೊಂದಿಗೆ ಒರಟಾಗಿ ವರ್ತಿಸಿದರು ಮತ್ತು ಅವರೊಡನೆ ವಾದಕ್ಕಿಳಿದರು. ಅವರ ಜೊತೆ ಪ್ರಯಾಣಿಸುತ್ತಿದ್ದ ಕುಟುಂಬದ ಸದಸ್ಯರೊಬ್ಬರು ಬ್ರೆಜಿಲ್ ದೇಶ ಪ್ರವೇಶಿಸಲು ಅಗತ್ಯವಿರುವ ಪಿಸಿಆರ್ ದಾಖಲೆಗಳನ್ನು ಒದಗಿಸಲಿಲ್ಲ. ಈ ಕಾರಣಕ್ಕಾಗೇ ವಿಮಾನ ನಿಲ್ದಾಣದ ಸೆಕ್ಯುರಿಟಿ ಸಿಬ್ಬಂದಿ ಮಧ್ಯೆಪ್ರವೇಶಿಸಬೇಕಾಯಿತು, ಅವರ ವರ್ತನೆಯಯಿಂದ ನಮ್ಮ ನೌಕರರಲ್ಲದೆ, ಬೇರೆ ಪ್ರಯಾಣಿಕರು ಕೂಡ ಆತಂಕಗೊಂಡಿದ್ದರು ಎಂದು ಹೇಳಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ