ವೈರಲ್ ವಿಡಿಯೋ: ವಿದ್ಯುತ್ ಕಂಬವೇರಿದ ಪಾಗಲ್ ಪ್ರೇಮಿಯೊಬ್ಬ ಪೂಜಾ ಐ ಲವ್ ಯೂ… ಎಂದು ಕೂಗಿದ!

ಸಾಮಾಜಿಕ ಜಾಲತಾಣಗಳಲ್ಲಿ ಪಾಗಲ್ ಪ್ರೇಮಿಗಳ ವಿಡಿಯೋಗಳು ಸಿಗುತ್ತವೆ. ಇವರಿಗೆಲ್ಲ ‘ಶೋಲೆ’ಯ (Sholay) ವೀರು (ಧರ್ಮೇಂದ್ರ) ಸ್ಫೂರ್ತಿ ಅನಿಸುತ್ತದೆ.

ವೈರಲ್ ವಿಡಿಯೋ: ವಿದ್ಯುತ್ ಕಂಬವೇರಿದ ಪಾಗಲ್ ಪ್ರೇಮಿಯೊಬ್ಬ ಪೂಜಾ ಐ ಲವ್ ಯೂ... ಎಂದು ಕೂಗಿದ!
ವಿಡಿಯೋದ ಸ್ಕ್ರೀನ್​ಗ್ರ್ಯಾಬ್Image Credit source: _itz_sonu_beawar
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 23, 2022 | 11:42 AM

ಪಾಗಲ್ ಪ್ರೇಮಿಗಳ ಕತೆಗಳನ್ನು ನಿಮಗೆ ಆಗಾಗ್ಗೆ ಹೇಳುತ್ತಿರುತ್ತೇವೆ ಮತ್ತು ವಿಡಿಯೋಗಳನ್ನೂ ತೋರಿಸುತ್ತಿರುತ್ತೇವೆ. ತಾವು ಪ್ರೀತಿಸುವ ಹುಡುಗಿಯ ಒಲವು ಸಂಪಾದಿಸಲು ಇಂಥ ಪ್ರೇಮಿಗಳು ಯಾವುದೇ ಹಂತಕ್ಕೆ ಹೋಗಲು ಸಿದ್ಧರಿರುತ್ತಾರೆ. ಹಾಗೆ ಮಾಡುವ ಭರದಲ್ಲಿ ತಮ್ಮ ಜೀವವನ್ನು ಅಪಾಯಕ್ಕೆ ಒಡ್ಡಿದ ಉದಾಹರಣೆಗಳೂ ಬೇಕಾದಷ್ಟು ಸಿಗುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ (social media) ಪಾಗಲ್ ಪ್ರೇಮಿಗಳ ವಿಡಿಯೋಗಳು ಸಿಗುತ್ತವೆ. ಇವರಿಗೆಲ್ಲ ‘ಶೋಲೆ’ಯ (Sholay) ವೀರು (ಧರ್ಮೇಂದ್ರ) ಸ್ಫೂರ್ತಿ (inspiration) ಅನಿಸುತ್ತದೆ. ಯುವತಿಯನ್ನು ಒಪ್ಪಿಸಲು ಬಾವಿಗಳ ಕಟ್ಟೆಯೇರಿ ನೀರಿಗೆ ಧುಮುಕುವ ಧಮ್ಕಿ ಹಾಕೋದು, ವಿದ್ಯುತ್ ಕಂಬವೇರಿ, ನೀನು ಹೂಂ ಅನ್ನದಿದ್ದರೆ ಕೆಳಗೆ ಜಿಗಿಯುತ್ತೇನೆ ಇಲ್ಲವೇ ಲೈವ್ ವೈರ್ ಮುಟ್ಟುತ್ತೇನೆ ಅಂತ ಹೆದರಿಸುವ ವಿಡಿಯೋಗಳು ಆಗಾಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಆಗಿರುತ್ತವೆ. ಇಂಥದ್ದೇ ಒಂದು ವಿಡಿಯೋ ಈಗ ವೈರಲ್ ಆಗುತ್ತಿದೆ ಮಾರಾಯ್ರೇ.

ಈ ವಿಡಿಯೋದಲ್ಲಿ ಪ್ರೇಮಿಯೊಬ್ಬ ಎತ್ತರದ ವಿದ್ಯುತ್ ಕಂಬ ಹತ್ತಿರುವುದನ್ನು ನೀವು ನೋಡಬಹುದು. ಕಂಬದ ಮೇಲೆ ನಿಂತುಕೊಂಡು ಅವನು ತಾನು ಪ್ರೀತಿಸುತ್ತಿರುವ ಯುವತಿಗೆ ವಿಡಿಯೋ ಕಾಲ್ ಮಾಡಿ, ‘ಪೂಜಾ ಐ ಲವ್ ಯೂ… ಪೂಜಾ ಐ ಲವ್ ಯೂ…’ ಅಂತ ಜೋರಾಗಿ ಅರಚುತ್ತಿದ್ದಾನೆ.

ವೀಡಿಯೊವನ್ನು ಇನ್ ಸ್ಟಾಗ್ರಾಮ್ ನಲ್ಲಿ _itz_sonu_beawar ಹೆಸರಿನವರು ಶೇರ್ ಮಾಡಿದ್ದಾರೆ. ಇದುವರೆಗೆ ಸುಮಾರು 70 ಸಾವಿರ ಲೈಕ್ಸ್ ಇದಕ್ಕೆ ಸಿಕ್ಕಿದೆ. ವೀಡಿಯೊಗೆ ಸಾಕಷ್ಟು ಜನ ತಮಾಷೆಯ ಕಾಮೆಂಟ್‌ಗಳನ್ನೂ ಮಾಡುತ್ತಿದ್ದಾರೆ. ಒಬ್ಬ ಬಳಕೆದಾರ ಹೀಗೆ ಬರೆದಿದ್ದಾರೆ: ‘ಪೂಜಾ ಹೆಸರಿನ ಯುವತಿಯರೆಲ್ಲ ಇನ್ನು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ!’ ಮತ್ತೊಬ್ಬರು, ‘ಇವರಿಗೆ ಬೇರೆ ಹೆಸರುಗಳೇ ಸಿಗುವುದಿಲ್ಲವೇ?’ ಅಂತ ಕೇಳಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ