ರೈಲಿಗೆ ತಲೆ ಕೊಟ್ಟು ಯುವ ವೈದ್ಯನ ಆತ್ಮಹತ್ಯೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್: ಬ್ಲ್ಯಾಕ್ ಮೇಲ್​ ಕರಿನೆರಳು!

| Updated By: ಆಯೇಷಾ ಬಾನು

Updated on: Jan 18, 2022 | 12:58 PM

ಬ್ಲಾಕ್ ಮೇಲ್ನಿಂದಾಗಿ ವೈದ್ಯ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ. ಡೇಟಿಂಗ್ ಆಪ್ನಲ್ಲಿ ನಕಲಿ ಖಾತೆ ತೆರೆದು ವೈದ್ಯನ ಸಂಪರ್ಕ ಬೆಳೆಸಿದ್ದ ಸೈಬರ್ ಚೋರರು ವೈದ್ಯನ ಬೆತ್ತಲೆ ವಿಡಿಯೋ ಮಾಡಿಕೊಂಡು ಬ್ಲಾಕ್ ಮೇಲ್ ಮಾಡಿದ್ದರು.

ರೈಲಿಗೆ ತಲೆ ಕೊಟ್ಟು ಯುವ ವೈದ್ಯನ ಆತ್ಮಹತ್ಯೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್: ಬ್ಲ್ಯಾಕ್ ಮೇಲ್​ ಕರಿನೆರಳು!
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವೈದ್ಯ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಕೆಂಗೇರಿ ಹೆಜ್ಜಾಲದ ಮಾರ್ಗದ ರೈಲಿಗೆ ತಲೆ ಕೊಟ್ಟು ವೈದ್ಯ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದ ಬೆಂಗಳೂರು ಸಿಟಿ ರೈಲ್ವೆ ಪೊಲೀಸರಿಗೆ ಸ್ಪೋಟಕ ಮಾಹಿತಿ ಪತ್ತೆಯಾಗಿದೆ. ತನಿಖೆ ವೇಳೆ ಆತ್ಮಹತ್ಯೆಗೆ ಕಾರಣವೇನೆಂಬುದು ಬೆಳಕಿಗೆ ಬಂದಿದೆ.

ಬ್ಲಾಕ್ ಮೇಲ್ನಿಂದಾಗಿ ವೈದ್ಯ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ. ಡೇಟಿಂಗ್ ಆಪ್ನಲ್ಲಿ ನಕಲಿ ಖಾತೆ ತೆರೆದು ವೈದ್ಯನ ಸಂಪರ್ಕ ಬೆಳೆಸಿದ್ದ ಸೈಬರ್ ಚೋರರು ವೈದ್ಯನ ಬೆತ್ತಲೆ ವಿಡಿಯೋ ಮಾಡಿಕೊಂಡು ಬ್ಲಾಕ್ ಮೇಲ್ ಮಾಡಿದ್ದರು. ಹಣಕ್ಕಾಗಿ ಬೇಡಿಕೆ ಇಟ್ಟು ಹಣ ದೋಚಲು ಮುಂದಾಗಿದ್ದರು. ಮೊದಲಿಗೆ 70 ಸಾವಿರ ಹಣ ಪಡೆದಿದ್ದ ಗ್ಯಾಂಗ್ ಬಳಿಕ ಮತ್ತಷ್ಟು ಹಣಕ್ಕಾಗಿ ಡಿಮ್ಯಾಂಡ್ ಮಾಡಿತ್ತು. ಇದೇ ರೀತಿ ಬ್ಲಾಕ್ ಮೇಲ್ಗೆ ಬೇಸತ್ತು ವೈದ್ಯ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಸದ್ಯ ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಭೋಪಾಲ್ ಮೂಲದ ಓರ್ವ ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಕಳೆದ ವರ್ಷ ಆಗಸ್ಟ್ 13 ರಂದು ರೈಲಿಗೆ ತಲೆಕೊಟ್ಟು ವೈದ್ಯ ಆತ್ಮಹತ್ಯೆ ಮಾಡಿಕೊಂಡಿದ್ದರು.

ಇದನ್ನೂ ಓದಿ: RGV: ‘ಗರುಡ ಗಮನ ವೃಷಭ ವಾಹನ’ ನೋಡಿ ಫಿದಾ ಆದ ರಾಮ್ ಗೋಪಾಲ್ ವರ್ಮಾ; ನಿರ್ದೇಶಕ ರಾಜ್ ಬಿ ಶೆಟ್ಟಿಗೆ ಹೇಳಿದ್ದೇನು?

ಕೋಲಾರದಲ್ಲಿ ಪಶುವೈದ್ಯ ಆತ್ಮಹತ್ಯೆ ಮಾಡಿಕೊಂಡಿದ್ದು ಇದೇ ಕಾರಣಕ್ಕೆ..