ಕೋಲಾರದಲ್ಲಿ ಪಶುವೈದ್ಯ ಆತ್ಮಹತ್ಯೆ ಮಾಡಿಕೊಂಡಿದ್ದು ಇದೇ ಕಾರಣಕ್ಕೆ..

ಕೋಲಾರದಲ್ಲಿ ಪಶುವೈದ್ಯ ಆತ್ಮಹತ್ಯೆ ಮಾಡಿಕೊಂಡಿದ್ದು ಇದೇ ಕಾರಣಕ್ಕೆ..

ಆತನದ್ದು ನೋಡೋಕ್ಕೆ‌ ಆಕರ್ಷಕ ಮುಖಚರ್ಯೆ, ಒಳ್ಳೆ‌ ಕಡೆ ಕೆಲಸ, ಕೈ ತುಂಭಾ ಸಂಬಳ, ನೆಮ್ಮದಿಯಾದ ಬದುಕು ಇತ್ತು. ಇಷ್ಟೆಲ್ಲಾ ಇದ್ರು ಆತನಿಗೊಂದು ಕೊರಗು ಪದೇ ಪದೇ ಕಾಡುತ್ತಲೇ ಇತ್ತು. ತನ್ನ ಪ್ರೀತಿ ತನಗೆ ಸಿಗಲಿಲ್ಲ, ಪ್ರೀತಿಸಿದವಳು ತನ್ನನ್ನು ಬಿಟ್ಟು ಹೋದಳು ಅನ್ನೋ ನೋವು ಆತನನ್ನು ಇನ್ನಿಲ್ಲದಂತೆ ಕಾಡಿತ್ತು. ಆ ನೋವಿನಲ್ಲೇ ಆ ಹುಡುಗ ತನ್ನ ಉಸಿರನ್ನೇ ಗಾಳಿಯಲ್ಲಿ ತೇಲಿಬಿಟ್ಟ.. ಪಶುವೈದ್ಯ ನಿಗೂಢ ಆತ್ಮಹತ್ಯೆ.. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಮೂಲದ ಡಾ. ದರ್ಶನ್ ಎಂಬಾತ ಕೋಲಾರ ನಗರದ ಅಂಜನಾದ್ರಿ […]

sadhu srinath

|

Jun 22, 2020 | 6:11 PM

ಆತನದ್ದು ನೋಡೋಕ್ಕೆ‌ ಆಕರ್ಷಕ ಮುಖಚರ್ಯೆ, ಒಳ್ಳೆ‌ ಕಡೆ ಕೆಲಸ, ಕೈ ತುಂಭಾ ಸಂಬಳ, ನೆಮ್ಮದಿಯಾದ ಬದುಕು ಇತ್ತು. ಇಷ್ಟೆಲ್ಲಾ ಇದ್ರು ಆತನಿಗೊಂದು ಕೊರಗು ಪದೇ ಪದೇ ಕಾಡುತ್ತಲೇ ಇತ್ತು. ತನ್ನ ಪ್ರೀತಿ ತನಗೆ ಸಿಗಲಿಲ್ಲ, ಪ್ರೀತಿಸಿದವಳು ತನ್ನನ್ನು ಬಿಟ್ಟು ಹೋದಳು ಅನ್ನೋ ನೋವು ಆತನನ್ನು ಇನ್ನಿಲ್ಲದಂತೆ ಕಾಡಿತ್ತು. ಆ ನೋವಿನಲ್ಲೇ ಆ ಹುಡುಗ ತನ್ನ ಉಸಿರನ್ನೇ ಗಾಳಿಯಲ್ಲಿ ತೇಲಿಬಿಟ್ಟ..

ಪಶುವೈದ್ಯ ನಿಗೂಢ ಆತ್ಮಹತ್ಯೆ.. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಮೂಲದ ಡಾ. ದರ್ಶನ್ ಎಂಬಾತ ಕೋಲಾರ ನಗರದ ಅಂಜನಾದ್ರಿ ಲಾಡ್ಜ್​ನ‌ ಕೋಣೆಯೊಂದರಲ್ಲಿ‌ ನೇಣಿಗೆ ಶರಣಾಗಿದ್ದ. ಕೋಲಾರ ಹಾಲು ಒಕ್ಕೂಟದಲ್ಲಿ ಪಶುವೈದ್ಯನಾಗಿ ಆತ ಕೆಲಸ ಮಾಡುತ್ತಿದ್ದ. ಎರಡು ದಿನಗಳ ಹಿಂದೆ ಅದೇನಾಯ್ತೋ ಏನೋ ಸೀದಾ ಕೋಲಾರದ ಅಂಜನಾದ್ರಿ ಲಾಡ್ಜ್ ಗೆ ಬಂದು ರೂಂ‌ ಒಂದನ್ನು ಪಡೆದು, ಸಂಜೆ ಹೊತ್ತಿಗೆ ನೇಣಿಗೆ ಶರಣಾಗಿದ್ದಾನೆ.

ಸಂಜೆ ವೇಳೆ ಲಾಡ್ಜ್ ಮಾಲೀಕರ ಗಮನಕ್ಕೆ ಬಂದ ಕೂಡಲೇ ಅವರು ಕೋಲಾರ ನಗರ ಠಾಣಾ ಪೊಲೀಸರಿಗೆ ಮಾಹಿತಿ‌ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಅವರ ಮನೆಯವರಿಗೆ ವಿಷಯ ತಿಳಿಸಿದರು, ಆದ್ರೆ ಅವರ ಕುಟುಂಬಸ್ಥರು ನಾವು ಬರುವವರೆಗೆ ಶವ ಕೆಳಗಿಳಿಸದಂತೆ ಸೂಚಿಸಿದ್ದರು. ಪರಿಣಾಮ ಇಂದು ಮುಂಜಾನೆ ‌ವೇಳೆಗೆ ಅವರ ಕುಟುಂಬಸ್ಥರು ಬಂದ ನಂತರ ಲಾಡ್ಜ್ ನ ಬಾಗಿಲು ಒಡೆದು ಶವ ಕೆಳಗಿಳಿಸಲಾಯಿತು. ಈ ವೇಳೆ ದರ್ಶನ್ ಬಳಿ ಡೆತ್ ನೋಟ್ ಪತ್ತೆಯಾಗಿತ್ತು. ಅದರಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿದ್ದಾನೆ.

ಅಷ್ಟಕ್ಕೂ ಪಶುವೈದ್ಯನ ಆತ್ಮಹತ್ಯೆಗೆ ಕಾರಣವಾದ್ರು ಏನು..? ಒಂದೂವರೆ ವರ್ಷದ ಹಿಂದೆ ಕೋಚಿಮುಲ್ ಹಾಲು ಒಕ್ಕೂಟಕ್ಕೆ ಸಹಾಯಕ ವ್ಯವಸ್ಥಾಪಕರಾಗಿ ಬಂದಂತಹ ಡಾ. ದರ್ಶನ್ ಸೌಮ್ಯ ಸ್ವಭಾವದ ಹುಡುಗ, ಎಲ್ಲರ ಜೊತೆ ಅತ್ಯಂತ‌ ಓಡಾನಾಟ ಹೊಂದಿದ್ದ. ಇದಕ್ಕೂ ಮೊದಲು‌ ಬೆಳಗಾಂ ಹಾಲು ಒಕ್ಕೂಟದಲ್ಲಿ ಕೆಲಸ ಮಾಡುತ್ತಿದ್ದರು. ಡಾ.ದರ್ಶನ್ ಕಳೆದ ಒಂದೂವರೆ ವರ್ಷದ ಹಿಂದೆ ಕೋಲಾರಕ್ಕೆ ಓಓಡಿ ಮೇಲೆ ಬಂದಿದ್ದ ಇವರು ಕೋಲಾರ ಹೊರ ವಲಯದಲ್ಲಿರುವ ಗದ್ದೆಕಣ್ಣೂರಿನಲ್ಲಿ ಸ್ನೇಹಿತನ ಜೊತೆ ರೂಂ ಮಾಡಿಕೊಂಡಿದ್ದರು.

ಇನ್ನು ದರ್ಶನ್, ವ್ಯಾಸಂಗದ ವೇಳೆ ಮಂಡ್ಯ ಮೂಲದ ಯುವತಿಯನ್ನು‌ ಗಾಢವಾಗಿ ಪ್ರೀತಿಸುತ್ತಿದ್ದ. ಸುಮಾರು ಎಂಟು ವರ್ಷಗಳ ಕಾಲ ಪ್ರೀತಿ ಮಾಡಿದ್ದರೆಂದು ತಿಳಿದು ಬಂದಿದೆ. ‌ಇತ್ತೀಚಿಗೆ ಆತನ ಲವ್ ಬ್ರೇಕ್ ಅಪ್ ಆದ ಮೇಲೆ ಸಾಕಷ್ಟು ಖಿನ್ನತೆಗೆ ಒಳಗಾಗಿದ್ದಾನೆ. ಶನಿವಾರ ರೂಂನಿಂದ ಹೊರಗೆ ಬಂದ ದರ್ಶನ್ ಭಾನುವಾರ ಗ್ರಹಣವಿದೆ, ನಾನು ಸೋಮವಾರ ಬರುತ್ತೇನೆ ಎಂದು ರೂಂನ ಸ್ನೇಹಿತನಿಗೆ ಹೇಳಿ ಹೋದವನು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಇದೀಗ ಲಾಡ್ಜ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಇನ್ನು ಒಂದು ವಾರದ ಹಿಂದೆಯಷ್ಟೇ ಊರಿಗೆ ಹೋಗಿ ಕಾಲ ಕಳೆದು ಬಂದ ದರ್ಶನ್, ಲವ್ ಬ್ರೇಕ್ ನಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪೋಷಕರಿಗೆ ಗರ ಬಡಿದಂತಾಗಿದೆ. ಒಟ್ಟಾರೆ ಸುಂದರ ಬದುಕು ಕಟ್ಟಿಕೊಂಡು, ನೆಮ್ಮದಿಯ ಸಂಸಾರದೊಂದಿಗೆ ನಮ್ಮ ಮಧ್ಯೆ ಇರಬೇಕಿದ್ದ ಯುವಕ ಪ್ರೀತಿ ಪ್ರೇಮ ಪಾಶಕ್ಕೆ ಬಿದ್ದು ಹೀಗೆ ಬದುಕನ್ನು ತಾನೆ ಅಂತ್ಯಗೊಳಿಸಿರುವುದು ಮಾತ್ರ ದುರಂತ ಕಥೆ.

Follow us on

Most Read Stories

Click on your DTH Provider to Add TV9 Kannada