ಬೆಂಗಳೂರು: ಖಾಸಗಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅಶೋಕ್ ಎನ್ನುವಾತ ಬೆಂಗಳೂರಿನ (Bengaluru) ಮಹದೇವಪುರ ಹೂಡಿಯಲ್ಲಿರುವ ಪಿಜಿನಲ್ಲಿ ವಾಸವಾಗಿದ್ದ. ಈತ ಸುತ್ತಮುತ್ತಲಿನ ಲೇಡಿಸ್ ಪಿಗಳನ್ನೇ ಹುಡುಕಿ ಯುವತಿಯರು ಸ್ನಾನ ಮಾಡುವುದನ್ನು ವಿಡಿಯೋ ಮಾಡುತ್ತಿದ್ದ. ಹೀಗೆ ಯುವತಿಯರ ಸ್ನಾನ ಮಾಡುವುದನ್ನು ವಿಡಿಯೋ ಮಾಡಿಕೊಂಡು ನೋಡುತ್ತ ತನ್ನ ಕಾಮದ ತೀಟೆ ತೀರಿಸಿಕೊಳ್ಳುತ್ತಿದ್ದ ಕಾಮಾಂಧ ಅಶೋಕ್ ಇದೀಗ ರೆಡ್ಹ್ಯಾಂಡ್ ಆಗಿ ತಗ್ಲಾಕೊಂಡಿದ್ದಾನೆ. ಹೌದು… ಪಿಜಿಯಲ್ಲಿ ಯುವತಿಯರು ಸ್ನಾನ ಮಾಡುತ್ತಿರುವನ್ನು ವಿಡಿಯೋ ಮಾಡುತ್ತಿದ್ದ ವಿಕೃತ ಕಾಮುಕ ಚಿಕ್ಕಬಳ್ಳಾಪುರ ಮೂಲದ ಅಶೋಕ್ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ: ಪಕ್ಕದ ಮನೆ ಮಹಿಳೆ ಸ್ನಾನ ಮಾಡುವುದನ್ನು ಇಣುಕಿ ನೋಡುತ್ತಿದ್ದಾಗ ಸಿಕ್ಕಿಬಿದ್ದ ಆಸಾಮಿ
ಖಾಸಗಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಿಭಾಗದಲ್ಲಿ ಕೆಲಸ ಮಾಡ್ತಿದ್ದ ಆರೋಪಿ ಅಶೋಕ್, ಮಹದೇವಪುರ ಹೂಡಿಯಲ್ಲಿರುವ ಪಿಜಿಯಲ್ಲಿ ವಾಸವಿದ್ದ. ಮುಂಭಾಗದಲ್ಲೇ ಇದ್ದ ಮಹಿಳಾ ಪಿಜಿಯ ಕಿಟಕಿಗಳ ಮೂಲಕ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ. ಸದ್ಯ ಕಾಮುಕನನ್ನು ಸ್ಥಳೀಯರು ಜೂನ್ 21ರಂದು ರೆಡ್ಹ್ಯಾಂಡ್ ಆಗಿ ಹಿಡಿದು ಮಹದೇವಪುರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಅಶೋಕ್ ವಾಸ ಮಾಡುತ್ತಿದ್ದ ಪಿಜಿ ಮುಂಭಾಗದಲ್ಲೇ ಒಂದು ಲೇಡಿಸ್ ಪಿಜಿ ಇದೆ. ಈ ಲೇಡಿಸ್ ಪಿಜಿ ಸ್ನಾನದ ರೂಮ್ ಅನ್ನೇ ನೋಡುತ್ತಾ ಕುಳಿತಿರುತ್ತಿದ್ದ ಅಶೋಕ್, ಯುವತಿಯತಿಯರು ಸ್ನಾನ ಮಾಡಲು ಬಾತ್ ರೂಮ್ಗೆ ಹೋಗುತ್ತಿದ್ದಂತೆಯೇ ಅಲರ್ಟ್ ಆಗುತ್ತಿದ್ದ. ವೆಂಟಿಲೇಷನ್ ಮೂಲಕ ಮೊಬೈಲ್ ನಲ್ಲಿ ಸ್ನಾನ ಮಾಡುತ್ತಿದ್ದ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದ. ಹೀಗೆ ತನ್ನ ವಿಕೃತನವನ್ನು ಮುಂದುವರಿಸಿದ್ದ ಆಶೋಕ್ ಜೂನ್ 21ರಂದು ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ. ಸದ್ಯ ಆರೋಪಿ ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ಮಾಡಿದಾಗ ಆತನ ಮೊಬೈಲ್ ನಲ್ಲಿ 7 ಯುವತಿಯರ ಸ್ನಾನದ ವಿಡಿಯೋಗಳು ಇರುವುದು ಪತ್ತೆಯಾಗಿವೆ.
ಈ ಹಿಂದೆಯೂ ಇಂಥದ್ದೇ ಒಂದು ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಲೇಡಿಸ್ ಪಿಜಿಯಲ್ಲಿ ವಾಸಿಸುವವರು ತುಂಬಾ ಎಚ್ಚರಿಕೆಯಿಂದ ಇರಬೇಕು. ಸ್ನಾನಕ್ಕೆ ಹೋಗುವಾಗ ಮುನ್ನ ಒಮ್ಮೆ ಬಾತ್ರೂಮ್ ಕಿಟಕಿ ಸೇರಿದಂತೆ ಸುತ್ತಮುತ್ತ ಪರಿಶೀಲಿಸಿಕೊಳ್ಳುವುದು ಉತ್ತಮ. ಕೊಂಚ ಮೈಮರೆತರೂ ನಿಮ್ಮ ಖಾಸಗಿ ವಿಡಿಯೋಗಳು ಕಾಮುಕರ ಕೈ ಸೇರುವ ಸಾಧ್ಯತೆಗಳಿರುತ್ತವೆ.
Published On - 11:54 am, Sun, 25 June 23