ಬೆಂಗಳೂರು: ಕೆಎಸ್​ಆರ್​ಟಿಸಿ ಬಸ್​ಗೆ ಬೈಕ್​​ ಸವಾರ ಬಲಿ, ಸ್ಥಳದಲ್ಲಿ ಮದ್ಯದ ಬಾಟಲಿಗಳು ಪತ್ತೆ

| Updated By: ಆಯೇಷಾ ಬಾನು

Updated on: Nov 05, 2022 | 7:49 AM

ಸ್ಥಳ ಪರಿಶೀಲನೆ ವೇಳೆ ಮದ್ಯದ ಬಾಟಲ್​ಗಳು ಪತ್ತೆಯಾಗಿವೆ. ಈ ಹಿನ್ನೆಲೆ ಕುಡಿದ ಅಮಲಿನಲ್ಲಿ ಬೈಕ್ ಸವಾರ ಬೈಕ್ ಚಲಾಯಿಸುತ್ತಿದ್ದ ಎನ್ನಲಾಗಿದೆ. ಬೈಕ್​ ಸವಾರ ರಮೇಶ್​​ ತಲೆಗೆ ಗಾಯಗಳಾಗಿ ರಕ್ತ ಸ್ರಾವವಾಗಿದೆ. ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ. ಆದ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಮೇಶ್ ಮೃತಪಟ್ಟಿದ್ದಾರೆ.

ಬೆಂಗಳೂರು: ಕೆಎಸ್​ಆರ್​ಟಿಸಿ ಬಸ್​ಗೆ ಬೈಕ್​​ ಸವಾರ ಬಲಿ, ಸ್ಥಳದಲ್ಲಿ ಮದ್ಯದ ಬಾಟಲಿಗಳು ಪತ್ತೆ
ಮೃತ ರಮೇಶ್
Follow us on

ಬೆಂಗಳೂರು: ರಾಜಾಜಿನಗರ ಠಾಣಾ ವ್ಯಾಪ್ತಿಯಲ್ಲಿ ಕೆಎಸ್​ಆರ್​ಟಿಸಿ ಬಸ್​ಗೆ(KSRTC Bus Accident) ಬೈಕ್​​ ಸವಾರ ಬಲಿಯಾದ ಘಟನೆ ನಡೆದಿದೆ. ತಡರಾತ್ರಿ 12.30ರಲ್ಲಿ ರಾಜ್​ಕುಮಾರ್​ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು ಬೈಕ್ ಸವಾರ ರಮೇಶ್(39) ಮೃತಪಟ್ಟಿದ್ದಾರೆ. ಮೃತ ರಮೇಶ್ ಸ್ನೇಹಿತರು ಚಾಲಕ ಹಾಗೂ ಕಂಡಕ್ಟರ್​ಗೆ ಹಿಗ್ಗಾ ಮುಗ್ಗ ಥಳಿಸಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ಬರುತ್ತಿದ್ದ KSRTC ಬಸ್ ಪಕ್ಕದಲ್ಲಿ ಬಂದ ಬೈಕ್​ಗೆ ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್​ ಸವಾರ ರಮೇಶ್​​ ತಲೆಗೆ ಗಾಯಗಳಾಗಿ ರಕ್ತ ಸ್ರಾವವಾಗಿದೆ. ಸ್ಥಳೀಯರು ಕೂಡಲೇ ರಮೇಶ್​ನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಮೇಶ್ ಮೃತಪಟ್ಟಿದ್ದಾರೆ. ಅಲ್ಲದೆ ಬೈಕ್​ ಚಾಲಕನ ವಿರುದ್ಧ ಕೆಎಸ್​ಆರ್​ಟಿಸಿ ಬಸ್​ ಚಾಲಕ, ಕಂಡಕ್ಟರ್​ ಡ್ರಂಕ್​ ಌಂಡ್ ಡ್ರೈವ್ ಆರೋಪ ಮಾಡಿದ್ದಾರೆ. ರಾಜಾಜಿನಗರ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ.

ಮತ್ತೊಂದೆಡೆ ಸ್ಥಳ ಪರಿಶೀಲನೆ ವೇಳೆ ಮದ್ಯದ ಬಾಟಲ್​ಗಳು ಪತ್ತೆಯಾಗಿವೆ. ಈ ಹಿನ್ನೆಲೆ ಕುಡಿದ ಅಮಲಿನಲ್ಲಿ ಬೈಕ್ ಸವಾರ ಬೈಕ್ ಚಲಾಯಿಸುತ್ತಿದ್ದ ಎನ್ನಲಾಗಿದೆ. ಮೂರು ಬೈಕ್ ಹಾಗೂ ಒಂದು ಕಾರ್ ನಲ್ಲಿ ರಮೇಶ್ ಹಾಗೂ ಸ್ನೇಹಿತರು ಬರುತ್ತಿದ್ದರು. ಅಪಘಾತದ ನಂತರ ಬಸ್ ಡ್ರೈವರ್ ಹಾಗೂ ಕಂಡಕ್ಟರ್​ಗೆ ರಮೇಶ್ ಸ್ನೇಹಿತರು ಸುತ್ತುವರಿದು ಥಳಿಸಿದ್ದಾರೆ. ರಾಜಾಜಿನಗರ ಸಂಚಾರಿ ಠಾಣೆಯಲ್ಲಿ ಅಪಘಾತ ಸಂಬಂಧ ಮೃತನ ಕಡೆಯವರಿಂದ ದೂರು ದಾಖಲಾಗಿದ್ದು ಹಲ್ಲೆ ಸಂಬಂಧ ಕೆಎಸ್​ಆರ್​ಟಿಸಿ ಚಾಲಕ, ಕಂಟೆಕ್ಟರ್ ನಿಂದಲೂ ಪ್ರತಿದೂರು ದಾಖಲಾಗಿದೆ. ರಾಜಾಜಿನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: Bengaluru Power Cut ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಪವರ್ ಕಟ್; ಯಾವ ಪ್ರದೇಶದಲ್ಲಿ ಇರಲ್ಲ ವಿದ್ಯುತ್?

ಆರ್​ಡಿ ಇಂಟರ್​ನ್ಯಾಷನಲ್ ಶಾಲೆ ವಿರುದ್ಧ ದೂರು ದಾಖಲು

ಬೆಂಗಳೂರಿನಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿ ಆರ್​ಡಿ ಇಂಟರ್​ನ್ಯಾಷನಲ್ ಶಾಲೆ ವಿರುದ್ಧ ದೂರು ದಾಖಲಾಗಿದೆ. ಗಂಗಮ್ಮನ ಗುಡಿ ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಿದ್ದಾರೆ. ಗಲಾಟೆ ಮಾಡಿದ್ದಕ್ಕೆ ಮಕ್ಕಳಿಗೆ ಶಿಕ್ಷಕ ಹೊಡೆದಿದ್ದಾರೆ. ಮಕ್ಕಳನ್ನು ಶಿಕ್ಷಕ ಹೊಡೆಯುತ್ತಿದ್ದ ವೇಳೆ ಬಾಲಕಿ ಕುಸಿದು ಬಿದ್ದುದ್ದಾಳೆ. ಈ ವೇಳೆ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಬಾಲಕಿ ಮೃತಪಟ್ಟಿದ್ದಾಳೆ ಎಂದು ಮೃತ ಬಾಲಕಿ ತಂದೆ ನಾಗೇಂದ್ರ ಪೊಲೀಸರಿಗೆ ದೂರು ನೀಡಿದ್ದಾರೆ. ಸಿಆರ್​ಪಿಸಿ 174ಸಿ ಅಡಿ ಯುಡಿಆರ್​ ಪ್ರಕರಣ ದಾಖಲಾಗಿದೆ. ರಾಮಯ್ಯ ಆಸ್ಪತ್ರೆಯಲ್ಲಿಂದು ಬಾಲಕಿಯ ಮರಣೋತ್ತರ ಪರೀಕ್ಷೆ ನಡೆಯಲಿದೆ.

Published On - 7:49 am, Sat, 5 November 22