
ಬೆಂಗಳೂರು: ಚಾಮರಾಜಪೇಟೆಯಲ್ಲಿ ನಡೆದ ವೃದ್ಧನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ. ಯಾವಾಗಲೂ ಮೃತ ಜುಗರಾಜ್ ಜೊತೆ ಇರುತ್ತಿದ್ದ ಆರೋಪಿ ಬಿಜುರಾಮ್ ಮೇ 24ರ ರಾತ್ರಿ 10.30ರ ಸುಮಾರಿಗೆ ಜುಗರಾಜ್ ಕೊಲೆ ಮಾಡಿದ್ದಾಗಿ ಸುಳಿವು ಸಿಕ್ಕಿದೆ.
ಎರಡನೇ ಮಗ ಆನಂದ್, ಆತನ ಸೊಸೆ ಮತ್ತು ಜುಗರಾಜ್ ಮೂರು ಜನ ಒಂದೇ ಅಪಾರ್ಟ್ಮೆಂಟ್ ನಲ್ಲಿ ವಾಸ ಮಾಡ್ತಿದ್ರು. ಬ್ಯುಸಿನೆಸ್ನ ಎಲ್ಲಾ ವ್ಯವಹಾರ ಮೃತ ಜುಗರಾಜ್ ನೋಡಿಕೊಳ್ತಿದ್ದ. ಆತನ ಬಳಿಯೇ ಲಾಕರ್ ಗಳಿರ್ತಿದ್ವು. ಆರೋಪಿ ಬಿಜರಾಮ್ ವೃದ್ದನನ್ನ ಪ್ರತಿ ದಿನ ಅಂಗಡಿಗೆ ಕರೆದುಕೊಂಡು ಹೋಗೋದು, ಬರೋದು ಮಾಡ್ತಿದ್ದ. ಅದರಂತೆ ನಿನ್ನೆ ರಾತ್ರಿ 8.30ರ ಸುಮಾರಿಗೆ ಅಂಗಡಿಯಿಂದ ಅಪಾರ್ಟ್ಮೆಂಟ್ ಗೆ ಕರೆದುಕೊಂಡು ಬಂದಿದ್ದಾನೆ. ನಂತರ ಅಪಾರ್ಟ್ಮೆಂಟ್ ಗೆ ಬಿಡೋಕೆ ಹೋಗಿ ಕೃತ್ಯ ಎಸಗಿದ್ದಾನೆ. ವೃದ್ಧನ ಕೈ ಹಿಂದೆ ಕಟ್ಟಿ ಮುಖಕ್ಕೆ ಖಾರದ ಪುಡಿ ಹಾಕಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಮನೇಲಿರೋ ಚಿನ್ನಾಭರಣಗಳನ್ನ ಕದ್ದು ಎಸ್ಕೇಪ್ ಆಗಿದ್ದಾನೆ. ನಾಲ್ಕು ಬ್ಯಾಗ್ಗಳಲ್ಲಿ ಚಿನ್ನಾಭರಣಗಳನ್ನ ತುಂಬಿಕೊಂಡು ಆರೋಪಿ ಪರಾರಿಯಾಗಿದ್ದಾನೆ. ಚಿನ್ನಾಭರಣಗಳನ್ನ ತೆಗೆದುಕೊಂಡು ಹೋಗೋಕಾಗದೆ 25kg ಬೆಳ್ಳಿ ಅಪಾರ್ಟ್ಮೆಂಟ್ ನಲ್ಲೇ ಬಿಟ್ಟೋಗಿದ್ದಾನೆ. ಸದ್ಯ ಚಾಮರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸ್ತಿದ್ದಾರೆ. ಇದನ್ನೂ ಓದಿ: Bengaluru News: ಶಾಸಕರ ಕಚೇರಿ ಬಳಿ ವೃದ್ಧನ ಹತ್ಯೆ, ಮನೆಯಲ್ಲಿದ್ದ ಚಿನ್ನಾಭರಣ ದೋಚಿದ ಹಂತಕ!
ಮನೆಯ ಬಾತ್ ರೂಂನಲ್ಲಿ ಪತ್ತೆಯಾದ ಶವ
ಆರೋಪಿ ಜುಗರಾಜ್ರನ್ನ ಕೊಂದು ಮನೆಯ ಬಾತ್ ರೂಂನಲ್ಲಿ ಶವವನ್ನು ಹಾಕಿದ್ದ ಎನ್ನಲಾಗಿದೆ. ಸಂಬಂಧಿಕರು ಹಲವು ಬಾರಿ ಫೋನ್ ಮಾಡಿದರು ವೃದ್ಧ ಜುಗರಾಜ್ ಕರೆ ಸ್ವೀಕರಿಸಿಲ್ಲ. ಹೀಗಾಗಿ ಮನೆ ಬಳಿ ಬಂದಿದ್ದ ಮೊಮ್ಮಗ ಮತ್ತು ಸಂಬಂಧಿಕರು ಮನೆ ಬೆಲ್ ಮಾಡಿದ್ದಾರೆ. ಆಗಲೂ ಮನೆ ತೆರೆದಿರಲಿಲ್ಲ. ಬಳಿಕ ನಕಲಿ ಕೀ ತಯಾರಕನ ಕರೆಸಿ ಮನೆ ಬಾಗಿಲು ತೆರೆಯಲಾಗಿದೆ. ಬಳಿಕ ಮನೆಯಲ್ಲಿ ಜುಗರಾಜ್ ಕಾಣಿಸಿಲ್ಲ. ಕೊನೆಗೆ ಬಾತ್ ರೂಂ ಬಳಿ ಹೊದಾಗ ಬಾಗಿಲು ಓಪನ್ ಆಗಿತ್ತು. ಒಳಗೆ ನೋಡಿದಾಗ ಬಾತ್ ರೂಂನಲ್ಲಿ ಶವ ಬಿದಿತ್ತು. ಬಾಯಿಗೆ ಬಟ್ಟೆ ತುರುಕಿ, ಕೈ ಬೆನ್ನ ಹಿಂದೆ ಕಟ್ಟಿ, ಕುತ್ತಿಗೆಗೆ ಪ್ಲಾಸ್ಟಿಕ್ ದಾರ ಬಿಗಿದು ಹತ್ಯೆ ಮಾಡಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಕಳ್ಳತನಕ್ಕೆ ಬಂದಿದ್ದ ವ್ಯಕ್ತಿ ಕಟ್ಟಡದಿಂದ ಬಿದ್ದು ಸಾವು
ದಾವಣಗೆರೆ: ಬೆಳಗಿನ ಜಾವ 3ಕ್ಕೆ ಕೆಟಿಜಿ ನಗರದ ಮನೆಯಲ್ಲಿ ಕಳ್ಳತನಕ್ಕೆ ಬಂದಿದ್ದ ವ್ಯಕ್ತಿ ಕಟ್ಟಡದಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಕೆಟಿಜೆ ನಗರದ ಮನೆಯೊಂದಕ್ಕೆ ಮೂವರು ಖದೀಮರು ಕಳ್ಳತನಕ್ಕೆ ಬಂದಿದ್ದರು. ಈ ವೇಳೆ ಮನೆ ಮಾಲೀಕನಿಗೆ ಎಚ್ಚರವಾಗಿದೆ. ಆಗ ಮನೆ ಮಾಲೀಕ ಕೂಗುತ್ತಿದ್ದಂತೆ ಮೇಲಿನಿಂದ ಹಾರಿ ಇಬ್ಬರು ಕಳ್ಳರು ಪರಾರಿಯಾಗಿದ್ದಾರೆ. ಮತ್ತೋರ್ವ ಪರಾರಿ ವೇಳೆ ಆಯತಪ್ಪಿ ಕಟ್ಟಡದಿಂದ ಬಿದ್ದು ಮೃತಪಟ್ಟಿದ್ದಾನೆ. ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 3:00 pm, Wed, 25 May 22